ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Budget 2026: ಬಜೆಟ್‌ ಮಂಡನೆಗೂ ಮುನ್ನ ರಾಷ್ಟ್ರಪತಿ ಭೇಟಿಯಾದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌

2026-27ನೇ ಸಾಲಿನ ಕೇಂದ್ರ ಬಜೆಟ್‌ಗೆ ಕ್ಷಣಗಣನೆ ಆರಂಭವಾಗಿದೆ. ವಿತ್ತ ಸಚಿವೆ ಸತತ 9ನೇ ಬಾರಿಗೆ ಬಜೆಟ್‌ ಮಂಡಿಸಲು ಸಜ್ಜಾಗಿದ್ದಾರೆ. ಆ ಮೂಲಕ ಸತತವಾಗಿ 9 ಬಾರಿ ಬಜೆಟ್‌ ಮಂಡಿಸಿದ ದೇಶದ ಮೊದಲ ಕೇಂದ್ರ ವಿತ್ತ ಮಂತ್ರಿ ಎನ್ನುವ ಹೆಗ್ಗಳಿಕೆ ಪಾತ್ರರಾಗಲಿದ್ದಾರೆ. ಬಜೆಟ್‌ ಮಂಡನೆಗೂ ಮುನ್ನ ರಾಷ್ಟ್ರಪತಿ ಭವನಕ್ಕೆ ಆಗಮಿಸಿದ ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರೊಂದಿಗೆ ಮಾತುಕತೆ ನಡೆಸಿದರು.

ರಾಷ್ಟ್ರಪತಿ ದ್ರೌಪದಿ ಮರ್ಮು ಮತ್ತು ಸಚಿವೆ ನಿರ್ಮಲಾ ಸೀತಾರಾಮನ್‌
1/5

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಮ್ಮ ತಂಡದೊಂದಿಗೆ ರಾಷ್ಟ್ರಪರಿ ಭವನಕ್ಕೆ ಆಗಮಿಸಿದರು. ಈ ವೇಳೆ ರಾಷ್ಟ್ರಪತಿ ದ್ರೌಪದಿ ಮುರ್ಮು ಸಂಪ್ರದಾಯದಂತೆ ಮೊಸರು ಸಕ್ಕರೆಯನ್ನು ತಿನಿಸಿದರು.

2/5

ತಮಿಳುನಾಡು ಮೂಲದ, ಕರ್ನಾಟಕದಿಂದ ರಾಜುಸಭೆ ಸದಸ್ಯೆಯಾಗಿರುವ ನಿರ್ಮಲಾ ಸೀತಾರಾಮನ್‌ ಮಂಡಿಸುತ್ತಿರುವ 9ನೇ ಬಜೆಟ್‌ ಮೇಲೆ ಜನ ಸಾಮಾನ್ಯರ ನಿರೀಕ್ಷೆ ಗರಿಗೆದರಿದೆ.

3/5

ಕೇಂದ್ರ ಬಜೆಟ್‌ ತಯಾರಿ ಹಿಂದೆ 6 ತಿಂಗಳ ಶ್ರಮವಿದೆ. ಅನಿರಾಧಾ ಠಾಕೂರ್‌, ಅಉಣೀಶ್‌ ಚಾವ್ಲಾ, ವಿ. ಅನಂತ ನಾಗೇಶ್ವರನ್‌, ಅರವಿಂದ್‌ ಶ್ರೀವಾಸ್ತವ, ಕೆ. ಮೋಸಸ್‌ ಚಲಾಯ್‌, ಎಂ. ನಾಗರಾಜು ಮತ್ತು ವುಮ್ಲುನ್ಮಾಂಗ್‌ ವುವಾಲ್ನಮ್‌ ಮತ್ತಿತರ ಅದಿಕಾರಿಗಳು ಬಜೆಟ್‌ ಸಿದ್ಧಪಡಿಸಲು ನೆರವಾಗಿದ್ದಾರೆ.

4/5

ಕಳೆದ ಬಾರಿಯ ಬಜೆಟ್‌ನಲ್ಲಿ ನಿರ್ಮಲಾ ಸೀತಾರಾಮನ್‌ ತೆರಿಗೆದಾರರಿಗೆ 12 ಲಕ್ಷ ರುಪಾಯಿಬೆಗೆ ಶೂನ್ಯ ತೆರಿಗೆ ಕೊಡುಗೆ ನೀಡಿದ್ದರು. ಹೀಗಾಗಿ ಮಧ್ಯಮ ವರ್ಗದವರ ನಿರೀಕ್ಷೆ ಈ ಬಾರಿ ಹೆಚ್ಚಾಗಿದೆ.

5/5

ಇನ್ನು ಕಿಸಾನ್‌ ಸಮ್ಮಾನ್‌ ನಿಧಿಯ ಸಹಾಯಧನ ಹೆಚ್ಚಾಗುವ ಸಾಧ್ಯತೆ ಇದೆ. ಈ ಘೋಷಣೆಗೂ ರೈತರು ಕಾಯುತ್ತಿದ್ದಾರೆ.

Ramesh Ballamoole

View all posts by this author