ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಅಪರೂಪದ ಕ್ಷಣಗಳಿಗೆ ಸಾಕ್ಷಿಯಾದ 100 ದಿನಗಳ ದೃಢ ಕರ್ನಾಟಕದ ಸಂಕಲ್ಪ ಸಮಾರಂಭ; ಗ್ಯಾರಂಟಿ ಫಲಾನುಭವಿಗಳೊಂದಿಗೆ ಭೋಜನ ಸವಿದ ಸಿಎಂ ಡಿಕೆಶಿ

DK Shivakumar govt marks 100 days: ನಾಡಿನ ಜನರ ಬೆಂಬಲವೇ ನಮ್ಮ ಶಕ್ತಿ, ಜನರ ವಿಶ್ವಾಸವೇ ನಮ್ಮ ಬೆನ್ನೆಲುಬು. ಜನರ ಬದುಕಿನಲ್ಲಿ ಬದಲಾವಣೆ ತಂದು, ಕರ್ನಾಟಕವನ್ನು ಅಭಿವೃದ್ಧಿಯ ಉತ್ತುಂಗಕ್ಕೆ ಕೊಂಡೊಯ್ಯುವುದೇ ನಮ್ಮ ಧ್ಯೇಯ. ಪ್ರಜಾಸೇವಕನಾಗಿ ‘ಟೀಮ್‌ ಕರ್ನಾಟಕ’ದೊಂದಿಗೆ ನಿಮ್ಮ ಮುಂದಿದ್ದೇನೆ. ಕೃಷಿ, ಶಿಕ್ಷಣ, ಉದ್ಯೋಗ, ತಂತ್ರಜ್ಞಾನ, ಮೂಲಸೌಕರ್ಯ ಹಾಗೂ ಜೀವನಮಟ್ಟ ಸುಧಾರಣೆ ಸೇರಿದಂತೆ ಪ್ರತಿಯೊಂದು ಕ್ಷೇತ್ರದಲ್ಲೂ ಕರ್ನಾಟಕವನ್ನು ಅಭಿವೃದ್ಧಿಯತ್ತ ಕೊಂಡೊಯ್ಯಲು ನಾವು ನಿರಂತರವಾಗಿ ಕಾರ್ಯನಿರ್ವಹಿಸುತ್ತಿದ್ದೇವೆ ಎಂದು ಸಿಎಂ ಡಿ.ಕೆ.ಶಿವಕುಮಾರ್‌ ತಿಳಿಸಿದ್ದಾರೆ.

ವಿಧಾನಸೌಧದಲ್ಲಿ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳೊಂದಿಗೆ ಕುಳಿತು ಸಿಎಂ ಡಿ.ಕೆ.ಶಿವಕುಮಾರ್‌ ಅವರು ಬಾಳೆ‌ ಎಲೆ‌ ಭೋಜನ ಸೇವಿಸಿದರು.
1/9

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ಸರ್ಕಾರ ನೂರು ದಿನಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ಬೆಂಗಳೂರಿನ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಗುರುವಾರ ಆಯೋಜಿಸಲಾಗಿದ್ದ 'ದೃಢ ಕರ್ನಾಟಕದ ಸಂಕಲ್ಪ' ಕಾರ್ಯಕ್ರಮ ಅಪರೂಪದ ಕ್ಷಣಗಳಿಗೆ ಸಾಕ್ಷಿಯಾಯಿತು. ಇದು ಕೇವಲ ನೂರುದಿನಗಳ ಸಂಭ್ರವಾಗಿರಲಿಲ್ಲ. ಈ ಅವಧಿಯಲ್ಲಿ ಸರ್ಕಾರ ಇಟ್ಟ ಜನಪರ ಹೆಜ್ಜೆ ಗುರುತುಗಳ ಪುನರ್ ಅವಲೋಕನವಾಗಿತ್ತು. ಸದೃಢ ಕರ್ನಾಟಕ ನಿರ್ಮಾಣದ ಸಂಕಲ್ಪವಾಗಿತ್ತು.

2/9

ಸಿಎಂ ಡಿಕೆ ಶಿವಕುಮಾರ್ ಅವರು ವೇದಿಕೆ ಏರುವ ಮುನ್ನ, ಸಮಾರಂಭಕ್ಕೆ ಆಗಮಿಸಿದ್ದ ವಿವಿಧ ಯೋಜನೆಗಳ ಫಲಾನುಭವಿಗಳ ಬಳಿಗೆ ತಾವೇ ತೆರಳಿ ಉಭಯ ಕುಶಲೋಪರಿ ವಿಚಾರಿಸಿ ಎಲ್ಲರ ಮನ ಗೆದ್ದರು.

3/9

ಸಿಎಂ ಬ್ಯಾಂಕ್ವೆಟ್ ಹಾಲ್ ಮುಂಭಾಗದಲ್ಲಿ ತೆರೆದಿದ್ದ ಅಕ್ಕಾ ಕೆಫೆ, ಅರಿವು ಕೇಂದ್ರಗಳಿಗೆ ಭೇಟಿ ಕೊಟ್ಟು, ಅಲ್ಲಿನ ಸಿಬ್ಬಂದಿಗಳ ಜೊತೆಗೆ ಮಾತುಕತೆ ನಡೆಸಿದರು.

4/9

ನಂತರ ವೇದಿಕೆ ಮುಂಭಾಗದಲ್ಲಿ ಕುಳಿತಿದ್ದ ರಾಜ್ಯದ ಎಲ್ಲಾ ಸಚಿವ ಸಂಪುಟ ಸಚಿವರು, ಶಾಸಕ ಮಿತ್ರರ ಬಳಿಗೆ ತಾವೇ ಖುದ್ದಾಗಿ ಹೋಗಿ ಪ್ರತಿಯೊಬ್ಬರಿಗೂ ಹಸ್ತಲಾಘವ ನೀಡುವ ಮೂಲಕ ಸ್ವಾಗತಕೋರಿದ್ದು ಇಡೀ ಸಮಾರಂಭಕ್ಕೆ ವಿಶೇಷ ಮೆರುಗು ನೀಡಿತು.

5/9

ಕಾರ್ಯಕ್ರಮ ಉದ್ಘಾಟನೆ ವೇಳೆ ಗ್ಯಾರಂಟಿ ಫಲಾನುಭವಿಗಳು, ರೈತರು, ವಿದ್ಯಾರ್ಥಿಗಳು, ಪೌರಕಾರ್ಮಿಕರನ್ನು ವೇದಿಕೆಗೆ ಕರೆದು ಅವರೊಂದಿಗೆ ದೀಪಬೆಳಗಿಸಿದರು. ಗೃಹಲಕ್ಷ್ಮೀ ಹಣವನ್ನು ಬಳಸಿ ಸ್ವ ಉದ್ಯೋಗ ಆರಂಭಿಸಿದ ಮಹಿಳೆಯರು ತಾವು ತಯಾರಿಸಿದ್ದ ಖಾದ್ಯವನ್ನು ಸಮಾರಂಭಕ್ಕೆ ತೆಗೆದುಕೊಂಡು ಬಂದಿದ್ದರು. ಮುಖ್ಯಮಂತ್ರಿಗಳು, ಸಚಿವರು, ಶಾಸಕರೆಲ್ಲಾ ಗೃಹಲಕ್ಷ್ಮಿ ಫಲಾನುಭವಿಗಳು ತಯಾರಿಸಿದ ಖಾದ್ಯವನ್ನು ಸವಿಯುವಂತೆ ಮನವಿ ಮಾಡಿದರು.

6/9

ಸರ್ಕಾರದ ನೂರುದಿನಗಳ ನೆನಪಿಗಾಗಿ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು, ಉಪ ಮುಖ್ಯಮಂತ್ರಿ ಡಾ. ಜಿ ಪರಮೇಶ್ವರ, ನಿಕಟಪೂರ್ವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಮಕ್ಷಮದಲ್ಲಿ ನೂತನ ಜನಪರ ಯೋಜನೆಗಳನ್ನು ಘೋಷಿಸಿ ಅಭಿವೃದ್ಧಿಯ ಮೈಲುಗಲ್ಲು ನೆಟ್ಟರು.

7/9

ಸೇವಾಒನ್, ಮುಖ್ಯಮಂತ್ರಿ ರೈತ ಚೈತನ್ಯ ಯೋಜನೆ, ಶಾಲೆಗಳಿಗೆ ಸಿಎಸ್‌ಆರ್ ಪೋರ್ಟಲ್, ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್, ಬಿಎಂಟಿಸಿ 2.0 ಆ್ಯಪ್, ಒನ್ ಕರ್ನಾಟಕ ಮೊಬಿಲಿಟಿ ಆ್ಯಪ್ ಅವತಾರ್ 2.0, ಮಾಲಿನ್ಯ ನಿಯಂತ್ರಣ ಸಾಧನ (Retrofit emission Control Device RECD) ಅಳವಡಿಕೆ ಯೋಜನೆಗಳಿಗೆ ಸಿಎಂ ಚಾಲನೆ ನೀಡಿ ರಾಜ್ಯದ ಜನರಿಗೆ ಉಡುಗೊರೆ ನೀಡಿದರು.

8/9

ರಾಜ್ಯದಲ್ಲಿರುವ ಬಡವರು ಮುಖ್ಯವಾಗಿ ಗ್ರಾಮೀಣ ಭಾಗದ ನಿವೇಶನ ರಹಿತರಿಗಾಗಿ ಸೂರು ಒದಗಿಸಲು 5 ಲಕ್ಷ ನಿವೇಶನ ಹಂಚಿಕೆ ಯೋಜನೆ ಹಾಗೂ ಸೈನಿಕ ಸಮ್ಮಾನ ಯೋಜನೆ ಆದೇಶಕ್ಕೆ ಸಿಎಂ ಸಹಿ ಮಾಡಿದರು. ಈ ಐತಿಹಾಸಿಕ ಕ್ಷಣಗಳಿಗೆ ಇಡೀ ಸಮಾರಂಭ ಸಾಕ್ಷಿಯಾಯಿತು.

9/9

ಸಮಾರಂಭ ಪೂರ್ಣಗೊಂಡ ನಂತರ ರಾಜ್ಯದ ವಿವಿಧೆಡೆಯಿಂದ ಆಗಮಿಸಿದ್ದ ಸರ್ಕಾರದ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳೊಂದಿಗೆ ಕುಳಿತು ಮುಖ್ಯಮಂತ್ರಿಗಳು ಬಾಳೆ‌ ಎಲೆ‌ ಭೋಜನ ಸೇವಿಸಿದರು. ಈ ವೇಳೆ, ಪಕ್ಕದಲ್ಲಿ ಕುಳಿತ ರೈತನೊಂದಿಗೆ, ‘ಯಾವೂರು, ಏನು ಬೇಳೆ ಹಾಕಿದೆಯಾ, ಮಳೆ ಏನಾದ್ರು ಬಿತ್ತಾ, ಏನು ಭಯ ಬೀಳಬೇಡ, ನಮ್ಮ ಸರ್ಕಾರ ಇದೆ ’ ಎಂದು ಊಟದ ಜೊತೆ ಅಭಯ ತುಂಬಿದರು. ನೂರು ದಿನಗಳ ಸಮಾರಂಭದಲ್ಲಿ ಪ್ರಗತಿಯ ರಥ ಎಳೆಯುವ ಒಕ್ಕೊರಲಿನ ಸಂಕಲ್ಪ ಮಾಡಲಾಯಿತು.