ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಸ್ವತಃ ಕಾರು ಡ್ರೈವ್‌ ಮಾಡಿಕೊಂಡು ಮೋದಿಯನ್ನು ವಿಮಾನ ನಿಲ್ದಾಣಕ್ಕೆ ಕರೆದೊಯ್ದ ಇಥಿಯೋಪಿಯಾ ಪ್ರಧಾನಿ ಅಬಿ ಅಹ್ಮದ್ ಅಲಿ

4 ದಿನಗಳ 3 ರಾಷ್ಟ್ರಗಳ ಪ್ರವಾಸದ ಭಾಗವಾಗಿ ಪ್ರಧಾನಿ ನರೇಂದ್ರ ಮೋದಿ ಮಂಗಳವಾರ (ಡಿ. 16) ಜೋರ್ಡನ್‌ನಿಂದ ಇಥಿಯೋಪಿಯಾಗೆ ಬಂದಿಳಿದರು. ಈ ವೇಳೆ ಅವರಿಗೆ ಭರ್ಜರಿ ಸ್ವಾಗತ ಲಭಿಸಿತು. ಇಥಿಯೋಪಿಯಾದ ತಮ್ಮ ಮೊದಲ ಭೇಟಿಯಲ್ಲೇ ಛಾಪು ಮೂಡಿಸಿದ ಮೋದಿ ಅಲ್ಲಿನ ಸಂಸತ್ತಿನ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿದರು. 2 ದಿನಗಳ ಪ್ರವಾಸ ಯಶಸ್ವಿಯಾಗಿ ಮುಗಿಸಿ ಮೋದಿ ಬುಧವಾರ ಅಲ್ಲಿಂದ ಓಮನ್‌ನತ್ತ ಪ್ರಯಾಣ ಬೆಳೆಸಿದರು.

ಪ್ರಧಾನಿ ಮೋದಿ ಮತ್ತು ಇಥಿಯೋಪಿಯಾ ಪ್ರಧಾನಿ ಅಬಿ ಅಹ್ಮದ್ ಅಲಿ
1/5

ಇಥಿಯೋಪಿಯಾ ಪ್ರಧಾನಿಯೊಂದಿಗೆ ಮಾತುಕತೆ

ಇಥಿಯೋಪಿಯಾಗೆ ಬಂದಿಳಿದ ಪ್ರಧಾನಿ ಮೋದಿ ಅಲ್ಲಿನ ಪ್ರಧಾನಿ ಅಬಿ ಅಹ್ಮದ್ ಅಲಿ ಅವರೊಂದಿಗೆ ಮಹತ್ವದ ಮಾತುಕತೆ ನಡೆಸಿದರು. ಭಾರತ ಮತ್ತು ಇಥಿಯೋಪಿಯಾ ಸಂಬಂಧ ವೃದ್ಧಿಸುವ ನಿಟ್ಟಿನಲ್ಲಿ ಎರಡೂ ರಾಷ್ಟ್ರಗಳ ನಡುವೆ ಸಮಾಲೋಚನೆ ನಡೆದಿದೆ. ವಿಶೇಷ ಎಂದರೆ ಅಬಿ ಅಹ್ಮದ್ ಅಲಿ ಸ್ವತಃ ಕಾರು ಡ್ರೈವ್‌ ಮಾಡಿಕೊಂಡು ವಿಮಾನ ನಿಲ್ದಾಣಕ್ಕೆ ಬಂದು ಮೋದಿ ಅವರನ್ನು ಬೀಳ್ಕೊಟ್ಟರು.

2/5

ವಿಮಾನ ನಿಲ್ದಾಣಕ್ಕೆ ಬಂದಿದ್ದ ಅಬಿ ಅಹ್ಮದ್ ಅಲಿ

ಮಂಗಳವಾರ ಅಬಿ ಅಹ್ಮದ್ ಅಲಿ ವಿಮಾನ ನಿಲ್ದಾಣಕ್ಕೆ ಆಗಮಿಸಿ ಖುದ್ದಾಗಿ ಮೋದಿ ಅವರನ್ನು ಸ್ವಾಗತಿಸಿದ್ದರು. ಅಲ್ಲಿಂದ ಅವರೇ ಕಾರು ಡ್ರೈವ್‌ ಮಾಡಿಕೊಂಡು ಮೋದಿ ಅವರನ್ನು ಹೊಟೇಲ್‌ಗೆ ಕರೆದೊಯ್ದಿದ್ದರು.

3/5

ʼವಂದೇ ಮಾತರಂʼ ಪ್ರಸ್ತಾವ

ಪ್ರಧಾನಿ ಮೋದಿ ಇಥಿಯೋಪಿಯನ್ ಸಂಸತ್ತಿನ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿ 'ವಂದೇ ಮಾತರಂ' ಮತ್ತು ಅಲ್ಲಿನ ರಾಷ್ಟ್ರಗೀತೆ 'ಮಾರ್ಚ್ ಫಾರ್ವರ್ಡ್, ಡಿಯರ್ ಮದರ್ ಇಥಿಯೋಪಿಯಾ'ವನ್ನು ಪರಸ್ಪರ ಹೋಲಿಸಿ ಗಮನ ಸೆಳೆದರು. ಎರಡೂ ದೇಶಗಳು ತಮ್ಮ ಭೂಮಿಯನ್ನು ತಾಯಿ ಎಂದು ಕರೆಯುತ್ತವೆ ಎಂದು ಸಾಮ್ಯತೆಯನ್ನು ಎತ್ತಿ ತೋರಿಸಿದರು.

4/5

ಸಂಬಂಧ ವೃದ್ಧಿಗೆ ಬದ್ಧ

"ಇಥಿಯೋಪಿಯನ್ ಸಂಸತ್ತನ್ನು ಉದ್ದೇಶಿಸಿ ಮಾತನಾಡಲು ಸಿಕ್ಕ ಅವಕಾಶ ಒಂದು ದೊಡ್ಡ ಗೌರವ ಎಂದು ಭಾವಿಸುತ್ತೇನೆ. ಇಥಿಯೋಪಿಯಾದ ಶ್ರೀಮಂತ ಇತಿಹಾಸ, ಸಂಸ್ಕೃತಿಗೆ ಗೌರವ ಸಲ್ಲಿಸುತ್ತೇನೆ. ಇಥಿಯೋಪಿಯಾದೊಂದಿಗಿನ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸಲು ನಾವು ಬದ್ಧ" ಎಂದು ಪ್ರಧಾನಿ ಮೋದಿ ಒಮಾನ್‌ಗೆ ತೆರಳುವ ಮೊದಲು ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ.

5/5

ಗಿಡ ನೆಟ್ಟ ಪ್ರಧಾನಿ

ವಿಶೇಷ ಎಂದರೆ ಮೋದಿ ಅಡಿಸ್ ಅಬಾಬಾದಲ್ಲಿ ಅಬಿ ಅಹ್ಮದ್ ಅಲಿ ಅವರೊಂದಿಗೆ ಸೇರಿ ಗಿಡ ನೆಟ್ಟಿದ್ದಾರೆ. ಒಟ್ಟಿನಲ್ಲಿ ಮೋದಿ ಅವರ ಇಥಿಯೋಪಿಯಾದ ಭೇಟಿ ಜಗತ್ತಿನ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ.