ಬಿಗ್​ಬಾಸ್ ಬಿಹಾರ ರಿಸಲ್ಟ್​ ಫೋಟೋ ಗ್ಯಾಲರಿ ಫ್ಯಾಷನ್​ ವಿಶ್ವವಾಣಿ ಪ್ರಾಪರ್ಟಿ ವಿದೇಶ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Fashion News 2025: ಫ್ಯಾಷನ್‌ ಪ್ರಿಯರ ಪವರ್‌ ಡ್ರೆಸ್ಸಿಂಗ್‌ಗೆ ಮನೆಕಿನ್‌ ಸಾಥ್‌

Actress Manvitha Kamath: ಪವರ್‌ ಡ್ರೆಸ್ಸಿಂಗ್‌ ಕಾನ್ಸೆಪ್ಟ್‌ಗೆ ಹೆಸರಾದ ನಟಿ ಮಾನ್ವಿತಾ ಕಾಮತ್‌ರ ಫ್ಯಾಷನ್‌ ಬ್ರ್ಯಾಂಡ್‌ ಮನೆಕಿನ್‌ ಫ್ಯಾಷನ್‌ವೇರ್‌ಗಳ ಅನಾವರಣವು ಉದ್ಯಾನನಗರಿಯ ಬ್ಯಾಸ್ಟಿಯನ್‌ ಗಾರ್ಡನ್‌ ಸಿಟಿಯಲ್ಲಿ ನಡೆಯಿತು. ಸಾಕಷ್ಟು ಫ್ಯಾಷನ್‌ ಪ್ರಿಯರು ಭಾಗವಹಿಸಿದ್ದರು. ಈ ಕುರಿತಂತೆ ಇಲ್ಲಿದೆ ವರದಿ.

ನಟಿ ಮಾನ್ವಿತಾ ಕಾಮತ್‌
1/5

ಸ್ಯಾಂಡಲ್‌ವುಡ್‌ ನಟಿ ಮಾನ್ವಿತಾ ಕಾಮತ್‌ರ ಬ್ರ್ಯಾಂಡ್‌ ಮನೆಕಿನ್‌ನ ನಾನಾ ವಿನ್ಯಾಸದ ಪವರ್‌ ಸೂಟ್‌ಗಳ ಅನಾವರಣವು ಉದ್ಯಾನನಗರಿಯ ಬ್ಯಾಸ್ಟಿಯನ್‌ ಗಾರ್ಡನ್‌ ಸಿಟಿಯಲ್ಲಿ ನಡೆಯಿತು.

2/5

ಮಾನ್ವಿತಾ ಪವರ್‌ ಡ್ರೆಸ್ಸಿಂಗ್ ಫ್ಯಾಷನ್‌ವೇರ್ಸ್

ಸ್ಯಾಂಡಲ್‌ವುಡ್‌ ನಟಿ ಮಾನ್ವಿತಾ ಕಾಮತ್‌ ಫ್ಯಾಷನ್‌ ಇಂಡಸ್ಟ್ರಿಗೆ ಎಂಟ್ರಿ ನೀಡಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಪವರ್‌ ಡ್ರೆಸ್ಸಿಂಗ್‌ಗೆ ಹೆಸರಾದ ಅವರ ಈ ಬ್ರಾಂಡ್‌ನ ಫ್ಯಾಷನ್‌ವೇರ್‌ಗಳು ಇದೀಗ ಕಾರ್ಪೋರೇಟ್‌ ಕ್ಷೇತ್ರದ ಮಾನಿನಿಯರನ್ನು ಮಾತ್ರವಲ್ಲ, ಎಲ್ಲಾ ಕ್ಷೇತ್ರದವರನ್ನು ಸೆಳೆದಿದೆ. ಇದಕ್ಕೆ ಕಾರಣ, ಸಿಲ್ಕ್‌ ಫ್ಯಾಬ್ರಿಕ್‌ ಹಾಗೂ ಡಿಸೈನ್ಸ್.

3/5

ಏನಿದು ಮನೆಕಿನ್‌ ಫ್ಯಾಷನ್‌ವೇರ್‌

ಇನ್ನು, ನಟಿ ಮಾನ್ವಿತಾ ಅವರೇ ಹೇಳುವಂತೆ, ಪರಿಶುದ್ಧ ಸಿಲ್ಕ್‌ ಬ್ಲೇಜರ್‌ಗಳಿವು. ಪ್ರೊಫೆಷನಲ್‌ ಹುಡುಗಿಯರಿಗೆ ಮಾತ್ರವಲ್ಲ ಹಾಗೂ ಯೂನಿಕ್‌ ಆಗಿ ಜತೆಜತೆಗೆ ಕ್ಲಾಸಿಕ್‌ ಆಗಿಯೂ ಕಾಣ ಬಯಸುವವರಿಗೆ ಬೆಸ್ಟ್ ಔಟ್‌ಫಿಟ್‌ ಎನ್ನಬಹುದು. ಪವರ್‌ ಡ್ರೆಸ್ಸಿಂಗ್‌ ನೀಡುವ ಫ್ಯಾಷನ್‌ವೇರ್‌ಗಳಿವು ಎನ್ನುತ್ತಾರೆ.

4/5

ಪವರ್‌ ಡ್ರೆಸ್ಸಿಂಗ್‌ ಪ್ರಿಯರಿಗೆ ಬೆಸ್ಟ್ ಫ್ಯಾಷನ್‌ವೇರ್‌

ಇಂತಹ ಬ್ಲೇಜರ್‌ ಸೂಟ್‌ ಹಾಗೂ ಸೆಟ್‌ಗಳನ್ನು ಈಗಾಗಲೇ ತಮ್ಮ ಮನೆಕಿನ್‌ ಬ್ರ್ಯಾಂಡ್‌ ಆಯ್ಕೆಗೆ ತಕ್ಕಂತೆ ಡಿಸೈನ್‌ ಮಾಡುತ್ತಿದೆ. ಇವು ಆನ್‌ಲೈನ್‌ನಲ್ಲಿಯೂ ಕೂಡ ಲಭ್ಯ ಎಂದು ಮಾನ್ವಿತಾ ವಿಶ್ವವಾಣಿ ನ್ಯೂಸ್‌ಗೆ ತಿಳಿಸಿದರು.

5/5

ಫ್ಯಾಷನ್‌ ಪ್ರೇಮಿಗಳ ವಿಸಿಟ್‌

ಈ ಫ್ಯಾಷನ್‌ ಪಾಪ್‌ ಅಪ್‌ನಲ್ಲಿ ಡಿಸೈನರ್‌ ಹಾಗೂ ಸ್ಟೈಲಿಸ್ಟ್ ನಿಧಿ ಸೌಮ್ಯ ಸೇರಿದಂತೆ ಸಾಕಷ್ಟು ಫ್ಯಾಷನ್‌ ಪ್ರೇಮಿಗಳು ಭಾಗವಹಿಸಿದ್ದರು.

ಶೀಲಾ ಸಿ ಶೆಟ್ಟಿ

View all posts by this author