Halle Berry: ಬಿಕಿನಿಯಲ್ಲೇ ಬರ್ತ್ ಡೇ ಸೆಲೆಬ್ರೇಷನ್; ಖ್ಯಾತ ನಟಿಯ ಸೆಕ್ಸಿ ಲುಕ್ಗೆ ಫ್ಯಾನ್ಸ್ ಫುಲ್ ಫಿದಾ!
ಮಾಜಿ ಬಾಂಡ್ ಗರ್ಲ್ ಮತ್ತು ಆಸ್ಕರ್ ವಿಜೇತ ನಟಿ ಹಾಲಿ ಬೆರ್ರಿ ಅವರು ತಮ್ಮ 59ನೇ ಹುಟ್ಟುಹಬ್ಬವನ್ನು ಇತ್ತೀಚೆಗೆ ವಿಭಿನ್ನ ರೀತಿಯಲ್ಲಿ ಆಚರಿಸಿಕೊಂಡಿದ್ದಾರೆ. ಬಿಕಿನಿಗಳಲ್ಲಿ ಕಾಣಿಸಿಕೊಂಡಿರುವ ಅವರು ಫೋಟೋಗಳನ್ನು ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ.



ಹಾಲಿವುಡ್ ನಟಿ ಮತ್ತು ಮಾಜಿ ಬಾಂಡ್ ಗರ್ಲ್ ಹಾಲಿ ಬೆರ್ರಿ ತಮ್ಮ 59ನೇ ಹುಟ್ಟುಹಬ್ಬವನ್ನು ಸ್ಪೆಷಲ್ ಆಗಿ ಆಚರಿಸಿಕೊಂಡಿದ್ದು ಅವರ ಬೋಲ್ಡ್ ಫೋಟೋಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿವೆ.

2002ರಲ್ಲಿ ಬಿಡುಗಡೆಯಾದ ' ಡೈ ಅನದರ ಡೇ ಬಾಂಡ್' ಸಿನಿಮಾದಲ್ಲಿ ಕಿತ್ತಳೆ ಬಣ್ಣದ ಬಿಕಿನಿ ಧರಿಸಿದ್ದ ಹಾಲಿ ಬೆರ್ರಿಯ ದೃಶ್ಯ ಅಭಿಮಾನಿಗಳ ನೆನಪಿನಲ್ಲಿ ಇನ್ನೂ ತಾಜಾವಾಗಿ ಉಳಿದಿದೆ. ಈಗ, 59ರ ವಯಸ್ಸಿನಲ್ಲೂ ಅದೇ ಗ್ಲಾಮರ್ ಮತ್ತು ಫಿಟ್ನೆಸ್ನೊಂದಿಗೆ ಗಮನ ಸೆಳೆದಿದ್ದಾರೆ.

ಹಸಿರು ಬಿಕಿನಿ ಧರಿಸಿ ಬಹಳ ಆಕರ್ಷಕವಾಗಿ ಕಾಣಿಸಿಕೊಂಡ ನಟಿ ಒಂದು ಫೋಟೋದಲ್ಲಿ, ಅವರು ತಮ್ಮ ಬಾಯ್ಫ್ರೆಂಡ್ ವ್ಯಾನ್ ಹಂಟ್ ಜೊತೆ ವಿಶ್ರಾಂತಿ ಪಡೆಯುತ್ತಿರುವ ದೃಶ್ಯವಿದೆ.

ಅವರು ಹಂಚಿಕೊಂಡ ಫೋಟೋಗಳಲ್ಲಿ ಹಾಲಿ ಹಸಿರು ಬಣ್ಣದ ಸ್ಟ್ರೈಪ್ ಬಿಕಿನಿ ಧರಿಸಿ ಕಾಣಿಸಿ ಕೊಂಡಿದ್ದಾರೆ. ಮತ್ತೊಂದು ಚಿತ್ರದಲ್ಲಿ, ತಮ್ಮ ಗೆಳೆಯ ವಾನ್ ಹಂಟ್ ಜೊತೆಗೆ ಹಾಸಿಗೆಯಲ್ಲೇ ವೈಟ್ ಬಿಕಿನಿಯಲ್ಲಿ ಪೋಸ್ ನೀಡಿದ್ದಾರೆ.

ಕಪ್ಪು ಬಿಕಿನಿ ಮತ್ತು ಹ್ಯಾಟ್ ಧರಿಸಿ ಬಾಯಲ್ಲಿ ಹೂ ಹಿಡಿದ ಲುಕ್ ಮತ್ತಷ್ಟು ನೆಟ್ಟಿಗರ ಗಮನ ಸೆಳೆದಿದೆ. ಹಾಲಿ ತಮ್ಮ ಪೋಸ್ಟ್ಗೆ ಶೀರ್ಷಿಕೆ "ಅಬ್ಬಾ..! ಅಡುಗೆ, ಸ್ವಚ್ಛತೆ ಮತ್ತು ಮದರಿಂಗ್" ಎಂದು ಬರೆದಿದ್ದು, ಇದು ಅವರ ಮಾಜಿ ಪತಿ ಡೇವಿಡ್ ಜಸ್ಟಿಸ್ ಅವರಿಗೆ ತಿರುಗೇಟು ನೀಡಿದೆ ಎಂದು ಹಲವರು ವ್ಯಾಖ್ಯಾ ನಿಸಿದ್ದಾರೆ.. ಡೇವಿಡ್ “ಅವರು ಅಡುಗೆ ಮಾಡುವುದಿಲ್ಲ, ಸ್ವಚ್ಛತೆ ನೋಡಿಕೊಳ್ಳುವುದಿಲ್ಲ, ತಾಯಿ ಪಾತ್ರದಲ್ಲಿ ಕಾಣುವುದಿಲ್ಲ” ಎಂದು ಈ ಹಿಂದೆ ಹೇಳಿದ್ದರು.