Halloween Makeup 2025: ಹ್ಯಾಲೋವೀನ್ ಮೇಕಪ್ ಆಯ್ಕೆ ಹಾಗೂ ತೆಗೆಯುವುದು ಹೇಗೆ?
Halloween Makeup: ಹ್ಯಾಲೋವೀನ್ ಪಾರ್ಟಿಗೆ ಸೂಕ್ತ ಮೇಕಪ್ ಆಯ್ಕೆ ಹಾಗೂ ನಂತರ ತ್ವಚೆಗೆ ಧಕ್ಕೆಯಾಗದಂತೆ ತೆಗೆಯುವುದು ಹೇಗೆ ? ಎಂಬುದನ್ನು ಮೇಕಪ್ ತಜ್ಞರು ಸಿಂಪಲ್ಲಾಗಿ ಸಂಕ್ಷಿಪ್ತವಾಗಿ ತಿಳಿಸಿದ್ದಾರೆ. ಈ ಎಲ್ಲದರ ಕುರಿತ ವಿವರ ಇಲ್ಲಿದೆ.
ಹ್ಯಾಲೋವೀನ್‌ಗೆ ಸೂಕ್ತ ಮೇಕಪ್ ಆಯ್ಕೆ ಮಾಡುವುದು ಮಾತ್ರ ಜಾಣತನವಲ್ಲ, ನಂತರ ಅದನ್ನು ಕ್ರಮವಾಗಿ ತ್ವಚೆಗೆ ಧಕ್ಕೆಯಾಗದಂತೆ ತೆಗೆಯುವುದು ಕೂಡ ಅವಶ್ಯ ಎನ್ನುತ್ತಾರೆ ಮೇಕಪ್ ಎಕ್ಸ್‌ಪರ್ಟ್ಸ್.
ಸ್ಕಿನ್ ಟೋನ್‌ಗೆ ಹೊಂದುವ ಮೇಕಪ್
ನಿಮ್ಮ ತ್ವಚೆ ಸೆನ್ಸಿಟೀವ್, ಜಿಡ್ಡಿನಂಶ, ಒರಟು ಹಾಗೂ ಮಿಕ್ಸ್ ತ್ವಚೆಯೇ ಎಂಬುದನ್ನು ಮೊದಲು ಕಂಡುಕೊಳ್ಳಿ. ಸೆನ್ಸಿಟೀವ್ ತ್ವಚೆಯಾದಲ್ಲಿ ಆದಷ್ಟೂ ಫೇಸ್ ಪೇಂಟ್ ಮಾಡುವುದು ಬೇಡ. ಗಾಢ ಮೇಕಪ್ ಅವಾಯ್ಡ್ ಮಾಡಿ. ಇಲ್ಲವಾದಲ್ಲಿ ಮುಂದೊಮ್ಮೆ ತ್ವಚೆಯ ಸಮಸ್ಯೆಯುಂಟಾಗಬಹುದು.
ಚಿಣ್ಣರ ಸುಕೋಮಲ ತ್ವಚೆಯ ಕಾಳಜಿ
ಮಕ್ಕಳ ಮುಖಕ್ಕೆ ಪೇಂಟ್ ಆವಾಯ್ಡ್ ಮಾಡಿ. ಹಚ್ಚಿದರೂ ಕೆಮಿಕಲ್ ರಹಿತ ಪೇಂಟ್ ಬಳಸಿ. ಹೋಗಲಾಡಿಸಲು ಬೇಬಿ ಆಯಿಲ್ ಬಳಸಬಹುದು. ಮೈಲ್ಡ್ ಫೇಸ್ ವಾಶ್‌ನಿಂದ ತೊಳೆಯಬಹುದು. ನಂತರ ಕೋಲ್ಡ್ ಕ್ರೀಮ್ ಹಚ್ಚಿ.
ಕೊಬ್ಬರಿ ಎಣ್ಣೆ ಬಳಕೆ
ಕೊಬ್ಬರಿ ಎಣ್ಣೆಯು ಮುಖದ ಗಾಢ ಮೇಕಪ್ ಹಾಗೂ ಪೇಂಟ್ ತೆಗೆಯಲು ಬಳಸಬಹುದು. ಹತ್ತಿಯನ್ನು ಬಳಸಿ, ಮುಖಕ್ಕೆ ಲೇಪಿಸಿ, ತೆಗೆಯಬಹುದು. ನಂತರ ಮುಖವನ್ನು, ಉಗುರು ಬೆಚ್ಚಗಿನ ನೀರಿನಿಂದ ವಾಶ್ ಮಾಡಬಹುದು.
ಗುಣ ಮಟ್ಟದ ಮೇಕಪ್ ಉತ್ಪನ್ನ ಬಳಸಿ
ನೀವು ಫೇಸ್ ಪೇಂಟ್ ಬದಲು, ಬಳಿಯಿರುವ ಮೇಕಪ್ ಪ್ರಾಡಕ್ಟ್‌ಗಳನ್ನು ಬಳಸಿದಲ್ಲಿ ಹೆಚ್ಚು ತಲೆ ಬಿಸಿಯಿರದು. ತ್ವಚೆ ಹಾಳಾಗದು ಹಾಗೂ ತೆಗೆಯಲು ಸುಲಭ. ಆಯಾ ಬ್ರಾಂಡ್ನ ಮೇಕಪ್ ರಿಮೂವರ್‌ನಿಂದ ಸುಲಭವಾಗಿ ತೆಗೆಯಬಹುದು.
ತ್ವಚೆಯನ್ನು ಕ್ಲೆನ್ಸ್ ಮಾಡಿ
ಕೆಲವರು ಮುಖಕ್ಕೆ ಆಯಿಲ್ ಫೇಸ್ ಪೇಂಟ್ ಮಾಡಿಸುತ್ತಾರೆ. ಕೆಲವರು ಮೇಕಪ್ ಪ್ರಾಡಕ್ಟ್ ಬಳಸುತ್ತಾರೆ. ಫೇಸ್ ಪೇಂಟ್ ಆದಲ್ಲಿ ವಾಟರ್ ಬೇಸ್ಡ್ ಕ್ಲೆನ್ಸರ್ ಬಳಸಬಹುದು. ಆಯಿಲ್ ಬೇಸ್ಡ್ ಆದಲ್ಲಿ ಕ್ಲೆನ್ಸಿಂಗ್ ಆಯಿಲ್ ಅಥವಾ ಮೇಕಪ್ ರಿಮೂವರ್‌ನಿಂದಲೇ ತೆಗೆಯಬಹುದು.
ಪೆಟ್ರೊಲಿಯಂ ಜೆಲ್ಲಿ ಅಥವಾ ವ್ಯಾಸಲೀನ್
ತ್ವಚೆಯ ಸೂಕ್ಷ್ಮ ಜಾಗದಲ್ಲಿಅಂದರೆ, ಐಬ್ರೋ ಸುತ್ತಮುತ್ತಲಿನ ಜಾಗದ ಗಾಢವಾದ ಮೇಕಪ್ ತೆಗೆಯಲು ವ್ಯಾಸಲೀನ್ ಬಳಸಿ. ಹತ್ತಿಯಿಂದ ಒರೆಸಬಹುದು ಎನ್ನುತ್ತಾರೆ ಮೇಕಪ್ ಎಕ್ಸ್‌ಪರ್ಟ್ಸ್ .