ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Bengaluru Rains: ಬೆಂಗಳೂರಿನಲ್ಲಿ ಮುಂದುವರಿದ ಮಳೆಯ ಆರ್ಭಟ; ಹಲವೆಡೆ ಕೆರೆಯಂತಾದ ರಸ್ತೆಗಳು, ಭಾರಿ ಸಂಚಾರ ದಟ್ಟಣೆ!

Karnataka Weather: ಮೇ 2ರಂದು ಉತ್ತರ ಕನ್ನಡ, ಧಾರವಾಡ, ಹಾವೇರಿ, ಶಿವಮೊಗ್ಗ, ಉಡುಪಿ, ದಕ್ಷಿಣ ಕನ್ನಡ, ಚಿಕ್ಕಮಗಳೂರು, ತುಮಕೂರು, ಕೊಡಗು, ಮೈಸೂರು, ಮಂಡ್ಯ, ಚಾಮರಾಜನಗರ, ರಾಮನಗರ, ಬೆಂಗಳೂರು ನಗರ ಮತ್ತು ಗ್ರಾಮಾಂತರ, ಕೋಲಾರ ಸೇರಿ 16 ಜಿಲ್ಲೆಗಳಿಗೆ ಹವಾಮಾನ ಇಲಾಖೆಯು ಯೆಲ್ಲೋ ಅಲರ್ಟ್‌ ನೀಡಿದ್ದು, ಗುಡುಗು ಸಹಿತ ಮಳೆ ಸಾಧ್ಯತೆ ಇದೆ.

ಬನ್ನೇರುಘಟ್ಟ ರಸ್ತೆ ಸಾಗರ ಜಂಕ್ಷನ್‌ನಲ್ಲಿ ಮಳೆ ನೀರು ನಿಂತಿರುವುದು ಮತ್ತು ಜಯನಗರದ ಕಾರ್ಮೆಲ್ ಕಾನ್ವೆಂಟ್ ಬಸ್ ನಿಲ್ದಾಣದ ಬಳಿ ಮರ ಬಿದ್ದಿರುವುದು.
1/6

ಬೆಂಗಳೂರು: ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ ಮಳೆಯ ಅಬ್ಬರ ಮುಂದುವರಿದಿದೆ. ಮೊನ್ನೆ ಸುರಿದ ಮಳೆಗೆ ರಾಜಧಾನಿಯಲ್ಲಿ ಜನಜೀವನ ಅಸ್ತವ್ಯಸ್ತವಾಗಿತ್ತು. ಇದೀಗ ನಗರದಾದ್ಯಂತ ಶುಕ್ರವಾರ ಸಂಜೆ ವರುಣ (Bengaluru Rains) ಆರ್ಭಟಿಸಿದ್ದಾನೆ. ಇದರಿಂದ ಪ್ರಮುಖ ರಸ್ತೆಗಳು ಜಲಾವೃತವಾಗಿ ವಾಹನ ಸವಾರರು ಪರದಾಡುವಂತಾಗಿದೆ.

2/6

ನಗರದ ಅರವಿಂದ ಜಂಕ್ಷನ್‌ನಲ್ಲಿ ಮರ ಬಿದ್ದ ಕಾರಣ ಶಾಲಿನಿ ಜಂಕ್ಷನ್‌ ಕಡೆಗೆ ನಿಧಾನಗತಿಯ ಸಂಚಾರವಿದೆ. ಆರ್‌ವಿ ಜಂಕ್ಷನ್‌ನಲ್ಲಿ ಮಳೆ ನೀರು ನಿಂತಿರುವುದರಿಂದ ಲಾಲ್‌ಭಾಗ್ ವೆಸ್ಟ್ ಗೇಟ್ ಕಡೆಗೆ ಸಾಗಲು ಸಾಹನ ಸವಾರರು ಪರದಾಡಿದರು.

3/6

ಮಹಾರಾಣಿ ಅಂಡರ್‌ಪಾಸ್‌ನಲ್ಲಿ ಮಳೆ ನೀರು ನಿಂತಿರುವದರಿಂದ ಸಿಐಡಿ ಜಂಕ್ಷನ್ ಕಡೆಗೆ ನಿಧಾನಗತಿಯ ಸಂಚಾರವಿತ್ತು. 24 ನೇ ಮುಖ್ಯ ರಸ್ತೆ ಜೆಪಿ ನಗರದಲ್ಲಿ ಮಳೆ ನೀರು ನಿಂತಿರುವದರಿಂದ 33 ಮುಖ್ಯ ರಸ್ತೆ ಮತ್ತು 14 ಮುಖ್ಯ ರಸ್ತೆ ಜೆಪಿ ನಗರದ ಕಡೆಗೆ ಟ್ರಾಫಿಕ್‌ ಜಾಮ್‌ ಉಂಟಾಗಿತ್ತು.

4/6

ರೂಬಿ 2 ಜಂಕ್ಷನ್‌ನಲ್ಲಿ ಮಳೆ ನೀರು ನಿಂತಿರುವದರಿಂದ ಜಿಡಿ ಮಾರ ಕಡೆಗೆ ನಿಧಾನಗತಿಯ ಸಂಚಾರವಿತ್ತು. ಕೋರಮಂಗಲದ ಎನ್‌ಜಿವಿ ರಸ್ತೆಯಲ್ಲಿ ಮಳೆ ನೀರು ನಿಂತಿರುವದರಿಂದ ಪಾಸ್ ಪೋರ್ಟ್ ರಸ್ತೆಯ ಕಡೆಗೆ ನಿಧಾನಗತಿಯ ಸಂಚಾರವಿತ್ತು.

5/6

ಸಂಜೆ ಕೆಲಸ ಮುಗಿಸಿ ಮನೆಗೆ ಮರಳುವ ಹೊತ್ತಿನಲ್ಲೇ ಮಳೆ ಸುರಿದ ಹಿನ್ನೆಲೆಯಲ್ಲಿ ಹಲವೆಡೆ ಭಾರಿ ಸಂಚಾರ ದಟ್ಟಣೆ ಉಂಟಾಯಿತು. ನಗರದ ವಸಂತನಗರ, ಸಿಟಿ ಮಾರ್ಕೆಟ್, ಮೆಜೆಸ್ಟಿಕ್, ಶಾಂತಿನಗರ, ಜಯನಗರ, ಜೆಪಿ ನಗರ, ಬನಶಂಕರಿ, ಹೆಬ್ಬಾಳ, ಯಲಹಂಕ, ಸದಾಶಿವನಗರ, ರಾಜಾಜಿನಗರ, ವಿಜಯನಗರ, ಚಂದ್ರಲೇಔಟ್, ಇಂದಿರಾನಗರ, ಲಗ್ಗೆರೆ, ನಂದಿನಿಲೇಔಟ್, ಆಡುಗೋಡಿ, ಕೋರಮಂಗಲ, ನಾಗರಬಾವಿ, ಆರ್‌ಆರ್‌ ನಗರ, ಮೂಡಲಪಾಳ್ಯ, ಬಸವನಗುಡಿ, ಮಲ್ಲೇಶ್ವರಂನಲ್ಲಿ ಜೋರು ಮಳೆ ಸುರಿದಿದೆ.

6/6

ವರುಣನ ಅಬ್ಬರದಿಂದಾಗಿ ಫ್ರೀಡಂ ಪಾರ್ಕ್ ಬಳಿಯ ಶೇಷಾದ್ರಿ ರೋಡ್ ಜಲಾವೃತಗೊಂಡಿದೆ. ಹೀಗಾಗಿ ಮಳೆ ನೀರಿನಲ್ಲಿಯೇ ವಾಹನಗಳು ಸಂಚರಿಸುತ್ತಿವೆ. ಕೆಆರ್​ ಮಾರುಕಟ್ಟೆ ರಸ್ತೆ ಕೂಡ ಮಳೆಗೆ ಮಿನಿ ಕೆರೆಯಾಗಿದ್ದು, ರಸ್ತೆ ತುಂಬಾ ಮಳೆ ನೀರು ತುಂಬಿಕೊಂಡಿದೆ. ಅದೇ ರೀತಿಯಾಗಿ ಎಸ್​​ಪಿ ರಸ್ತೆ ಸುತ್ತ ಕೂಡ ರಸ್ತೆಯಲ್ಲಿ ಮಳೆ ನೀರು ನಿಂತುಕೊಂಡಿದ್ದು, ಸಂಚಾರ ಅಸ್ತವ್ಯಸ್ತ ಉಂಟಾಗಿದೆ.