India Couture Week 2025: ಇಂಡಿಯಾ ಕೌಚರ್ ವೀಕ್ನಲ್ಲಿ ನಟಿ ತಮನ್ನಾ ಧಮಾಕ
Actress Tamannaah: ಎಫ್ಡಿಸಿಐ ಸಂಯುಕ್ತಾಶ್ರಯದಲ್ಲಿ ದಿಲ್ಲಿಯಲ್ಲಿ ನಡೆಯುತ್ತಿರುವ ಇಂಡಿಯಾ ಕೌಚುರ್ ವೀಕ್ನ ಫ್ಯಾಷನ್ ಶೋನಲ್ಲಿ ನಟಿ ತಮನ್ನಾ, ಡಿಸೈನರ್ ರಾಹುಲ್ ಮಿಶ್ರಾ ಅವರ ಡಿಸೈನರ್ವೇರ್ ಧರಿಸಿ ಎಲ್ಲರ ಗಮನ ಸೆಳೆದರು. ಈ ಕುರಿತಂತೆ ಇಲ್ಲಿದೆ ವರದಿ.

ಚಿತ್ರಗಳು: ಇಂಡಿಯಾ ಕೌಚರ್ ವೀಕ್ನ ಚಿತ್ರಗಳು., ರಾಹುಲ್ ಮಿಶ್ರಾ ಡಿಸೈನರ್ವೇರ್ನಲ್ಲಿ ನಟಿ ತಮನ್ನಾ ಬಾಟಿಯಾ ಹಾಗೂ ಮಾಡೆಲ್ಸ್., ಚಿತ್ರಕೃಪೆ: ಎಫ್ಡಿಸಿಐ & ರಾಹುಲ್ ಮಿಶ್ರಾ ಇನ್ಸ್ಟಾ ಪೇಜ್


ಎಫ್ಡಿಸಿಐ ಸಂಯುಕ್ತಾಶ್ರಯದಲ್ಲಿ ದಿಲ್ಲಿಯಲ್ಲಿ ನಡೆಯುತ್ತಿರುವ ಇಂಡಿಯಾ ಕೌಚುರ್ ವೀಕ್ನ ಫ್ಯಾಷನ್ ಶೋನಲ್ಲಿ ನಟಿ ತಮನ್ನಾ, ಡಿಸೈನರ್ ರಾಹುಲ್ ಮಿಶ್ರಾ ಅವರ ಡಿಸೈನರ್ವೇರ್ ಧರಿಸಿ ಎಲ್ಲರ ಗಮನ ಸೆಳೆದರು.

ಭಾರತೀಯ ಕಲಾತ್ಮಕ ವಿನ್ಯಾಸವನ್ನೊಳಗೊಂಡ ಎಥ್ನಿಕ್ ಡಿಸೈನರ್ವೇರ್ಗಳೊಂದಿಗೆ ಆರಂಭಗೊಂಡ ಈ ಫ್ಯಾಷನ್ ವೀಕ್ 18 ನೇ ಎಡಿಷನದ್ದಾಗಿದ್ದು ಜುಲೈ 30ರವರೆಗೆ ಮುಂದುವರೆಯಲಿದೆ. ಈಗಾಗಲೇ ರಾಷ್ಟ್ರದ ಪ್ರಸಿದ್ಧ ಸೆಲೆಬ್ರೆಟಿ ಡಿಸೈನರ್ಗಳು ಪಾಲ್ಗೊಂಡು ತಂತಮ್ಮ ಕಲೆಕ್ಷನ್ಗಳನ್ನು ಪ್ರದರ್ಶಿಸುತ್ತಿದ್ದಾರೆ.

ರಾಹುಲ್ ಮಿಶ್ರಾರ ಅತ್ಯಾಕರ್ಷಕ ಕಲೆಕ್ಷನ್
7 ಸ್ಟೇಜಸ್ ಆಫ್ ಲವ್ ಥೀಮ್ ಆಧಾರಿತ ಡಿಸೈನರ್ವೇರ್ಗಳನ್ನು ರಾಹುಲ್ ಮಿಶ್ರಾ ಅನಾವರಣಗೊಳಿಸಿದರು. ಅವುಗಳಲ್ಲಿ ಅತ್ಯಾಕರ್ಷಕ ಡಿಸೈನ್ ಹೊಂದಿರುವ ಸೀರೆಗಳು, ಲೆಹೆಂಗಾಗಳು, ಪುರುಷರ ಶೆರ್ವಾನಿ, ಬಂದಗಾಲ ಸೇರಿದಂತೆ ನಾನಾ ಡಿಸೈನರ್ವೇರ್ಗಳು ಫ್ಯಾಷನ್ ಪ್ರಿಯರನ್ನು ಸಮ್ಮೋಹನಗೊಳಿಸಿದ್ದವು. ಇವೆಲ್ಲವೂ ಇಂಡಿಯನ್ ರಾಯಲ್ ಔಟ್ಫಿಟ್ಗಳನ್ನು ನೆನಪಿಗೆ ತಂದವು ಎನ್ನುತ್ತಾರೆ ಫ್ಯಾಷನ್ ವಿಮರ್ಶಕರು.

ನಟಿ ತಮನ್ನಾ ಶೋ ಸ್ಟಾಪರ್ ವಾಕ್
ಇನ್ನು, ಡಿಸೈನರ್ ರಾಹುಲ್ ಮಿಶ್ರಾ ಅವರ ಎಕ್ಸ್ಕ್ಲೂಸಿವ್ ಫ್ಲೋರಲ್ ಡಿಸೈನರ್ವೇರ್ ಧರಿಸಿದ ನಟಿ ತಮನ್ನಾ ಅವರು ಶೋ ಸ್ಟಾಪರ್ ಆಗಿ ರ್ಯಾಂಪ್ ವಾಕ್ ಮಾಡಿದರು. ಕೊನೆಗೆ ಟೀಮ್ ಜತೆಗೂ ವಾಕ್ ಮಾಡಿದರು.

ಡಿಸೈನರ್ ರಾಹುಲ್ ಮಿಶ್ರಾ ಅವರ ಕಲೆಕ್ಷನ್ನಲ್ಲಿ ಪ್ರಸ್ತುತಪಡಿಸಿದ ವೈವಿಧ್ಯಮಯ ಬ್ರೈಡಲ್ ಡಿಸೈನರ್ವೇರ್ಗಳು, ಮುಂಬರುವ ವೆಡ್ಡಿಂಗ್ ಸೀಸನ್ನ ಬ್ರೈಡಲ್ ಕಲೆಕ್ಷನ್ಗೆ ಸ್ಪೂರ್ತಿ ನೀಡುವಂತಿದ್ದು, ಈ ಶೋ ಆರಂಭದಲ್ಲೆ ಎಲ್ಲರ ಮನಸೂರೆಗೊಂಡವು ಎಂದು ಪ್ರಶಂಸಿಸಿರುವ ಫ್ಯಾಷನ್ ಎಕ್ಸ್ಪರ್ಟ್ಸ್, ತಮನ್ನಾ ಬೊಂಬೆಯಂತೆ ಎಲ್ಲರ ಗಮನ ಸೆಳೆದರು ಎಂದು ಶ್ಲಾಘಿಸಿದ್ದಾರೆ.