ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Vishwavani Pustaka: ವಿಶ್ವವಾಣಿ ಪುಸ್ತಕ ಪ್ರಕಾಶನದ 9 ಕೃತಿಗಳ ಲೋಕಾರ್ಪಣೆ; ಹಿರಿಯ ನಟ ಅನಂತನಾಗ್‌, ಚಕ್ರವರ್ತಿ ಸೂಲಿಬೆಲೆ ಸೇರಿ ಗಣ್ಯರು ಭಾಗಿ- ಇಲ್ಲಿವೆ Photos

Vishweshwar Bhat's Book Release: ʼವಿಶ್ವವಾಣಿ ಪುಸ್ತಕʼ ಪ್ರಕಾಶನ ಸಂಸ್ಥೆಯಿಂದ ಪ್ರಕಟಿಸಲಾಗಿರುವ ಒಂಬತ್ತು ಪುಸ್ತಕಗಳು ಬೆಂಗಳೂರಿನಲ್ಲಿ ಭಾನುವಾರ ಲೋಕಾರ್ಪಣೆಗೊಂಡಿವೆ. ಈ ಪೈಕಿ ವಿಶ್ವೇಶ್ವರ ಭಟ್‌ ಅವರ ನಾಲ್ಕು ಪುಸ್ತಕಗಳು, ಲೇಖಕರಾದ ಕಿರಣ್ ಉಪಾಧ್ಯಾಯ, ರೂಪಾ ಗುರುರಾಜ, ರಾಜು ಅಡಕಳ್ಳಿ, ಮೋಹನ ವಿಶ್ವ ಹಾಗೂ ಶಿಶಿರ ಹೆಗಡೆ ಅವರ ತಲಾ ಒಂದು ಪುಸ್ತಕ ಬಿಡುಗಡೆ ಆಗಿವೆ.

1/25

ವಿಶ್ವವಾಣಿ ಪುಸ್ತಕ ಪ್ರಕಾಶನ ವತಿಯಿಂದ ಪ್ರಕಟವಾಗಿರುವ 9 ಪುಸ್ತಕಗಳ ಬಿಡುಗಡೆ ಕಾರ್ಯಕ್ರಮವು ಬೆಂಗಳೂರಿನ ಎಫ್‌ಕೆಸಿಸಿಐ ಸಭಾಂಗಣದಲ್ಲಿ ಭಾನುವಾರ ನೆರವೇರಿತು. ಹಿರಿಯ ನಟ ಅನಂತನಾಗ್‌, ವಾಗ್ಮಿ ಚಕ್ರವರ್ತಿ ಸೂಲಿಬೆಲೆ, ವಿಶ್ವವಾಣಿ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್, ಖ್ಯಾತ ವಿದ್ವಾಂಸ ಹಾಗೂ ವಿಮರ್ಶಕ ಗ.ನಾ. ಭಟ್ಟ ಸೇರಿ ವಿವಿಧ ಗಣ್ಯರು ಪುಸ್ತಕಗಳನ್ನು ಲೋಕಾರ್ಪಣೆ ಮಾಡಿದರು.

2/25

ʼವಿಶ್ವವಾಣಿʼ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್ ಅವರ ʼಅಂತರಂಗದ ಬ್ಲೂಟಿಕ್ʼ, ʼಸಂಪಾದಕರ ಸದ್ಯಶೋಧನೆʼ ಭಾಗ 8, 9, ʼಆಸ್ಕ್ ದಿ ಎಡಿಟರ್ʼ 4, ಅಂಕಣಕಾರ ಕಿರಣ್ ಉಪಾಧ್ಯಾಯ ಅವರ ʼಬಹುದೇಶವಾಸಿʼ, ರೂಪ ಗುರುರಾಜ್ ಅವರ ʼಒಂದೊಳ್ಳೆ ಮಾತುʼ ಭಾಗ 5, ರಾಜು ಅಡಕಳ್ಳಿ ಅವರ ʼಸಕ್ಸಸ್ ಸೂತ್ರಧಾರರುʼ, ಶಿಶಿರ ಹೆಗಡೆ ಅವರ ʼಹ್ಯಾಷ್‌ಟ್ಯಾಗ್‌ ಶಿಶಿರ ಕಾಲʼ ಹಾಗೂ ಮೋಹನ್ ವಿಶ್ವ ಅವರ ʼಕಾಲದ ಕನ್ನಡಿʼ ಪುಸ್ತಕ ಬಿಡುಗಡೆಗೊಂಡವು.

3/25

ಕಾರ್ಯಕ್ರಮದಲ್ಲಿ ಅಂಕಣಕಾರರಾದ ಕಿರಣ್ ಉಪಾಧ್ಯಾಯ, ರಾಜು ಅಡಕಳ್ಳಿ, ರೂಪಾ ಗುರುರಾಜ, ಮೋಹನ್ ವಿಶ್ವ ಹಾಗೂ ಶಿಶಿರ ಹೆಗಡೆ, ʼವಿಶ್ವವಾಣಿʼ ಸಮೂಹ ಸಂಸ್ಥೆಯ ಸಿಇಒ ಚಿದಾನಂದ ಕಡಲಾಸ್ಕರ ಹಾಗೂ ವಿಶ್ವವಾಣಿ ಪುಸ್ತಕ ಸಂಸ್ಥೆಯ ಮುಖ್ಯಸ್ಥರಾದ ಸುಷ್ಮಾ ಭಟ್ ಸೇರಿ ನೂರಾರು ಮಂದಿ ಉಪಸ್ಥಿತರಿದ್ದರು.

4/25
5/25
6/25
7/25
8/25
9/25
10/25
11/25
12/25
13/25
14/25
15/25
16/25
17/25
18/25
19/25
20/25
21/25
22/25
23/25
24/25
25/25