ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IPL 2025: 4 ವಿಕೆಟ್‌ ಕಿತ್ತು ಲಸಿತ್‌ ಮಾಲಿಂಗರ ಎರಡು ದಾಖಲೆ ಮುರಿದ ಜಸ್‌ಪ್ರೀತ್‌ ಬುಮ್ರಾ!

ಲಖನೌ ಸೂಪರ್‌ ಜಯಂಟ್ಸ್‌ ವಿರುದ್ದದ ಮಂಬೈ ಇಂಡಿಯನ್ಸ್‌ ತಂಡದ ಹಿರಿಯ ವೇಗಿ ಜಸ್‌ಪ್ರೀತ್‌ ಬುಮ್ರಾ 4 ವಿಕೆಟ್‌ಗಳನ್ನು ಕಬಳಿಸಿದರು. ಆ ಮೂಲಕ ಮುಂಬೈ ಪರ ಬುಮ್ರಾ 174 ವಿಕೆಟ್‌ಗಳನ್ನು ಪೂರ್ಣಗೊಳಿಸಿದರು. ಆ ಮೂಲಕ ಐಪಿಎಲ್‌ ಇತಿಹಾಸದಲ್ಲಿ ಏಕೈಕ ತಂಡದ ಪರ ಅತಿ ಹೆಚ್ಚು ವಿಕೆಟ್‌ಗಳನ್ನು ಪಡೆದ ವೇಗದ ಬೌಲರ್‌ ಎಂಬ ದಾಖಲೆಯನ್ನು ಬರೆಯುವ ಮೂಲಕ 170 ವಿಕೆಟ್‌ ಪಡೆದಿರುವ ಲಸಿತ್‌ ಮಾಲಿಂಗ ಅವರನ್ನು ಹಿಂದಿಕ್ಕಿದ್ದಾರೆ.

1/6

ಮುಂಬೈ ಇಂಡಿಯನ್ಸ್‌ಗೆ 54 ರನ್‌ ಜಯ

ಭಾನುವಾರ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದಿದ್ದ 2025ರ ಐಪಿಎಲ್‌ ಟೂರ್ನಿಯ 45ನೇ ಪಂದ್ಯದಲ್ಲಿ ಲಖನೌ ಸೂಪರ್‌ ಜಯಂಟ್ಸ್‌ ವಿರುದ್ಧ ಮುಂಬೈ ಇಂಡಿಯನ್ಸ್‌ ತಂಡ 54 ರನ್‌ಗಳ ಭರ್ಜರಿ ಗೆಲುವು ಪಡೆಯಿತು. ಆ ಮೂಲಕ ಟೂರ್ನಿಯ ಪಾಯಿಂಟ್ಸ್‌ ಟೇಬಲ್‌ನಲ್ಲಿ ಮುಂಬೈ ಎರಡನೇ ಸ್ಥಾನಕ್ಕೆ ಲಗ್ಗೆ ಇಟ್ಟಿದೆ.

2/6

4 ವಿಕೆಟ್‌ ಕಿತ್ತ ಜಸ್‌ಪ್ರೀತ್‌ ಬುಮ್ರಾ

216 ರನ್‌ಗಳ ಗುರಿ ಹಿಂಬಾಲಿಸಿದ ಲಖನೌ ಸೂಪರ್‌ ಜಯಂಟ್ಸ್‌ ತಂಡ, ಜಸ್‌ಪ್ರೀತ್‌ ಬುಮ್ರಾ ಬೌಲಿಂಗ್‌ ದಾಳಿಗೆ ನಲುಗಿ 161 ರನ್‌ಗಳಿಗೆ ಆಲ್‌ಔಟ್‌ ಆಗಿತ್ತು. ಮುಂಬೈ ಪರ ಮಾರಕ ಬೌಲಿಂಗ್‌ ದಾಳಿ ನಡೆಸಿದ್ದ ಬುಮ್ರಾ 4 ಓವರ್‌ಗಳಿಗೆ ಕೇವಲ 22 ರನ್‌ ನೀಡಿ 4 ವಿಕೆಟ್‌ಗಳನ್ನು ಕಬಳಿಸಿದರು.

3/6

174 ವಿಕೆಟ್‌ ಕಿತ್ತ ಬುಮ್ರಾ

ಲಖನೌ ಸೂಪರ್‌ ಜಯಂಟ್ಸ್‌ ತಂಡದ ನಾಲ್ವರು ಬ್ಯಾಟ್ಸ್‌ಮನ್‌ಗಳನ್ನು ಔಟ್‌ ಮಾಡುವ ಮೂಲಕ ಜಸ್‌ಪ್ರೀತ್‌ ಬುಮ್ರಾ ಮುಂಬೈ ಇಂಡಿಯನ್ಸ್‌ ಪರ 174 ವಿಕೆಟ್‌ಗಳನ್ನು ಪೂರ್ಣಗೊಳಿಸಿದರು. ಆ ಮೂಲಕ ಮುಂಬೈ ಪರ ಅತಿ ಹೆಚ್ಚು ವಿಕೆಟ್‌ಗಳನ್ನು ಕಬಳಿಸಿದ ಬೌಲರ್‌ ಎನಿಸಿಕೊಳ್ಳುವ ಮೂಲಕ ಲಸಿತ್‌ ಮಾಲಿಂಗ ದಾಖಲೆಯನ್ನು ಬುಮ್ರಾ ಮುರಿದಿದ್ದಾರೆ.

4/6

ಮುಂಬೈ ಪರ 170 ವಿಕೆಟ್‌ ಪಡೆದಿರುವ ಮಾಲಿಂಗ

ಲಸಿತ್‌ ಮಾಲಿಂಗ ಅವರು ಮುಂಬೈ ಇಂಡಿಯನ್ಸ್‌ ಪರ ಆಡಿದ 122 ಪಂದ್ಯಗಳಲ್ಲಿ ಶ್ರೀಲಂಕಾ ಮಾಜಿ ವೇಗಿ ಲಸಿತ್‌ ಮಾಲಿಂಗ 170 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಮುಂಬೈ ಇಂಡಿಯನ್ಸ್‌ ಪರ ಎರಡನೇ ಅತಿ ಹೆಚ್ಚು ವಿಕೆಟ್‌ ಕಬಳಿಸಿದ ಬೌಲರ್‌ ಆಗಿದ್ದಾರೆ.

5/6

ಮತ್ತೊಂದು ದಾಖಲೆ ಬರೆದ ಬುಮ್ರಾ

ಐಪಿಎಲ್‌ ಟೂರ್ನಿಯ ಇತಿಹಾಸದಲ್ಲಿ ಏಕೈಕ ತಂಡದ ಪರ ಅತಿ ಹೆಚ್ಚು ವಿಕೆಟ್‌ಗಳನ್ನು ಪಡೆದ ವೇಗದ ಬೌಲರ್‌ ಎಂಬ ದಾಖಲೆಯನ್ನು ಕೂಡ ಜಸ್‌ಪ್ರೀತ್‌ ಬುಮ್ರಾ (174) ಬರೆದಿದ್ದಾರೆ. ಆ ಮೂಲಕ ಲಸಿತ್‌ ಮಾಲಿಂಗ (170) ಅವರನ್ನು ಹಿಂದಿಕ್ಕಿದ್ದಾರೆ.

6/6

ಏಕೈಕ ತಂಡದ ಪರ ಅತಿ ಹೆಚ್ಚು ವಿಕೆಟ್‌ ಪಡೆದವರು

ಜಸ್‌ಪ್ರೀತ್‌ ಬುಮ್ರಾ (ಮುಂಬೈ ಇಂಡಿಯನ್ಸ್)- 174

ಲಸಿತ್ ಮಾಲಿಂಗ (ಮುಂಬೈ ಇಂಡಿಯನ್ಸ್)- 170

ಭುವನೇಶ್ವರ್ ಕುಮಾರ್ (ಸನ್‌ರೈಸರ್ಸ್ ಹೈದರಾಬಾದ್)- 157

ಡ್ವೇನ್ ಬ್ರಾವೋ (ಚೆನ್ನೈ ಸೂಪರ್ ಕಿಂಗ್ಸ್)- 154

ಆಂಡ್ರೆ ರಸೆಲ್ (ಕೋಲ್ಕತ್ತಾ ನೈಟ್ ರೈಡರ್ಸ್)- 121