ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ನರೇಂದ್ರ ಮೋದಿ ಜತೆ ಆಟವಾಡಿದ ಈ ಪುಟಾಣಿ ಫ್ರೆಂಡ್ಸ್‌ ಯಾರು? ಪ್ರಧಾನಿ ಹಂಚಿಕೊಂಡ ಕ್ಯೂಟ್‌ ಪೋಟೊ ಇಲ್ಲಿದೆ

ಪ್ರಧಾನ ಮಂತ್ರಿ ನರೇಂದ್ರ ಮೋದಿ ಚಿಕ್ಕ ಮಕ್ಕಳ ಜತೆ ಚೆನ್ನಾಗಿ ಬೆರೆಯುತ್ತಾರೆ. ಸಮಯ ಸಿಕ್ಕಾಗಲೆಲ್ಲ ಅವರೊಂದಿಗೆ ಮಕ್ಕಳಾಗಿ ಬಿಡುತ್ತಾರೆ. ಯಾವುದಾದರೂ ಕಾರ್ಯಕ್ರಮಕ್ಕೆ ಹೋದಾಗ ಮಕ್ಕಳು ಕಂಡರೆ ಅಥವಾ ಕಚೇರಿಗೆ ಮಕ್ಕಳು ಆಗಮಿಸಿದರೆ ಅವರೊಂದಿಗೆ ತಮಾಷೆ ಮಾಡುತ್ತಾರೆ. ಈಗಾಗಲೇ ಅಂತಹ ಹಲವು ಸಂದರ್ಭ ಕಂಡಿದ್ದೇವೆ. ಇದೀಗ ಮೋದಿ ಅವರ ಅಂತಹದ್ದೇ ಮತ್ತೊಂದು ಕ್ಷಣದ ಫೋಟೊ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ತಮ್ಮ ಕಚೇರಿಗೆ ಆಗಮಿಸಿದ ಇಬ್ಬರು ಪುಟಾಣಿಗಳೊಂದಿಗೆ ಮೋದಿ ಸಮಯ ಕಳೆದಿದ್ದಾರೆ. ಈ ಸುಂದರ ಕ್ಷಣದ ಫೋಟೊವನ್ನು ಅವರು ಹಂಚಿಕೊಂಡಿದ್ದಾರೆ. ಇಂಟರ್‌ನೆಟ್‌ನಲ್ಲಿ ಸೆನ್ಸೇಷನ್‌ ಸೃಷ್ಟಿಸಿದ, ಮೋದಿ ಮನಗೆದ್ದ ಈ ಪುಟಾಣಿಗಳು ಯಾರು?

ಮಕ್ಕಳ ಜತೆ ಪ್ರಧಾನಿ ನರೇಂದ್ರ ಮೋದಿ
1/5

ಪುಟಾಣಿ ಫ್ರೆಂಡ್ಸ್‌ ಪರಿಚಯಿಸಿದ ಮೋದಿ

ಇಬ್ಬರು ಪುಟ್ಟ ಮಕ್ಕಳು ತಮ್ಮ ಕಚೇರಿಗೆ ಆಗಮಿಸಿದ ಫೋಟೊಗಳನ್ನು ಮೋದಿ ಹಂಚಿಕೊಂಡಿದ್ದಾರೆ. ಇಬ್ಬರೊಂದಿಗೂ ಮೋದಿ ಮೋಜಿನ ಕ್ಷಣಗಳನ್ನು ಕಳೆದಿದ್ದಾರೆ. ಅವರನ್ನು ಎತ್ತಿ ಮುದ್ದಾಡಿದ್ದಾರೆ. ಜತೆಗೆ ರಾಜಕೀಯ ಮರೆತು ಕೆಲ ಹೊತ್ತು ಮಕ್ಕಳೊಂದಿಗೆ ಮಕ್ಕಳಾಗಿ ಆಟವಾಡಿದ್ದಾರೆ.

2/5

ಪ್ರಧಾನಿ ಕಚೇರಿಗೆ ವಿಶೇಷ ಅತಿಥಿಗಳ ಆಗಮನ

ಮಕ್ಕಳೊಂದಿಗಿನ ಪೋಟೊ ಹಂಚಿಕೊಂಡ ಮೋದಿ, ʼʼಇಬ್ಬರು ಪುಟಾಣಿ ಸ್ನೇಹಿತರು ನಿನ್ನೆ ಸೇವಾ ತೀರ್ಥಕ್ಕೆ (ಪ್ರಧಾನಿ ಕಚೇರಿ) ಆಗಮಿಸಿದ್ದರುʼʼ ಎಂದು ಬರೆದುಕೊಂಡಿದ್ದಾರೆ. ಸದ್ಯ ಈ ಫೋಟೊ ನೆಟ್ಟಿಗರ ಗಮನ ಸೆಳೆದಿದ್ದು, ಪ್ರಧಾನಿ ಅವರ ಸರಳತೆಯನ್ನು ಮೆಚ್ಚಿಕೊಂಡಿದ್ದಾರೆ. ಯಾರು ಈ ಮಕ್ಕಳು? ಎನ್ನುವ ಹಲವರ ಕುತೂಹಲಕ್ಕೆ ಇದೀಗ ಉತ್ತರ ಸಿಕ್ಕಿದೆ.

3/5

ಯಾರು ಈ ಮಕ್ಕಳು?

ಇವರು ಕೇಂದ್ರ ನಾಗರಿಕ ವಿಮಾನಯಾನ ಸಚಿವ ರಾಮ್‌ ಮೋಹನ್‌ ನಾಯ್ಡು ಅವರ ಮಕ್ಕಳು ಎನ್ನುವುದು ಇದೀಗ ತಿಳಿದು ಬಂದಿದೆ. ಕುಟುಂಬ ಸಮೇತ ಪ್ರಧಾನಿ ಅವರನ್ನು ಭೇಟಿಯಾಗಿರುವ ಫೋಟೊವನ್ನು ರಾಮ್‌ ಮೋಹನ್‌ ನಾಯ್ಡು ತಮ್ಮ ಸೋಷಿಯಲ್‌ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

4/5

ರಾಮ್‌ ಮೋಹನ್‌ ನಾಯ್ಡು ಹೇಳಿದ್ದೇನು?

ʼʼಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿದ್ದು ನನಗೂ, ನಮ್ಮ ಕುಟುಂಬಕ್ಕೂ ಸ್ಮರಣೀಯ ಕ್ಷಣ. ಅವರ ಅಸಾಧಾರಣ ವರ್ಚಸ್ಸು ನಮ್ಮ ಕುಟುಂಬದ 3 ತಲೆಮಾರುಗಳನ್ನು ಸಮಾನವಾಗಿ ತಟ್ಟಿದೆ. ಅವರು ನಿಜವಾಗಿಯೂ ಅಪ್ರತಿಮ ಜನಸಾಮಾನ್ಯ ನಾಯಕರಾಗಿ ಏಕೆ ಉಳಿದಿದ್ದಾರೆ ಎಂಬುದು ಮತ್ತೊಮ್ಮೆ ಮನವರಿಕೆಯಾಗಿದೆ. 'ಏಕ್ ಪೆಡ್ ಮಾ ಕೆ ನಾಮ್'ನಿಂದ ಪ್ರೇರಿತರಾಗಿ ನನ್ನ ತಾಯಿ ಪ್ರಧಾನಿಗೆ ಮಾವಿನ ಸಸಿಯನ್ನು ಉಡುಗೊರೆಯಾಗಿ ನೀಡಿದ್ದಾರೆʼʼ ಎಂದು ರಾಮ್‌ ಮೋಹನ್‌ ನಾಯ್ಡು ತಿಳಿಸಿದ್ದಾರೆ.

5/5

ಯಾರೆಲ್ಲ ಇದ್ದರು?

ಈ ಭೇಟಿಯ ವೇಳೆ ರಾಮ್‌ ಮೋಹನ್‌ ನಾಯ್ಡು ಅವರ ತಾಯಿ, ಪತ್ನಿ ಮತ್ತು ಇಬ್ಬರು ಮಕ್ಕಳಿದ್ದರು. ಆಂಧ್ರ ಪ್ರದೇಶದ ಶ್ರೀಕಾಕುಳಂ ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾಗಿರುವ‌ ಟಿಡಿಪಿ ನಾಯಕ ರಾಮ್‌ ಮೋಹನ್‌ ನಾಯ್ಡು ನರೇಂದ್ರ ಮೋದಿ ಸರ್ಕಾರದಲ್ಲಿ 2024ರಿಂದ ಕೇಂದ್ರ ನಾಗರಿಕ ವಿಮಾನಯಾನ ಸಚಿವರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

Ramesh Ballamoole

View all posts by this author