ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Mahashivratri 2026: ಮಲೆ ಮಹದೇಶ್ವರ ದೇವಾಲಯಕ್ಕೆ ಸಿಎಂ ಭೇಟಿ, ತಂದೆ ಎಚ್.ಡಿ. ದೇವೇಗೌಡರ ಜತೆ ಶಿವನ ದರ್ಶನ ಪಡೆದ ಎಚ್‌ಡಿಕೆ

ಮಹಾ ಶಿವರಾತ್ರಿ ಹಬ್ಬದ ಹಿನ್ನೆಲೆಯಲ್ಲಿ ರಾಜ್ಯದ ಶಿವದೇವಾಲಯಗಳು ಭಕ್ತರಿಂದ ತುಂಬಿತುಳುಕಿದವು. ಬೆಳಗ್ಗೆಯಿಂದಲೇ ಭಕ್ತರು ದೇಗುಲಗಳಿಗೆ ತೆರಳಿಗೆ ದರ್ಶನ ಪಡೆದರು. ಅದೇ ರೀತಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರು ಕೂಡ ಹಬ್ಬದ ಹಿನ್ನೆಲೆಯಲ್ಲಿ ಮಹಾಶಿವನ ದರ್ಶನ ಪಡೆದಿದ್ದಾರೆ.

ಶಿವರಾತ್ರಿ ಹಿನ್ನೆಲೆ ಸಿಎಂ ಸಿದ್ದರಾಮಯ್ಯ ಮತ್ತು ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಶಿವನ ದೇಗುಲಕ್ಕೆ ಭೇಟಿ.
1/6

ರಾಜ್ಯಾದ್ಯಂತ ಮಹಾ ಶಿವರಾತ್ರಿ ಹಬ್ಬವನ್ನು ಭಾನುವಾರ ಸಂಭ್ರಮದಿಂದ ಆಚರಿಸಲಾಗಿದೆ. ಶಿವಾಲಯಗಳಲ್ಲಿ ವಿಶೇಷ ಪೂಜೆ, ಅಭಿಷೇಕ ನೆರವೇರಿದ್ದು, ಬೆಳಗ್ಗೆಯಿಂದಲೇ ಭಕ್ತರು ದೇಗುಲಗಳಿಗೆ ತೆರಳಿಗೆ ದರ್ಶನ ಪಡೆದರು. ಅದೇ ರೀತಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರು ಕೂಡ ಹಬ್ಬದ ಹಿನ್ನೆಲೆಯಲ್ಲಿ ಮಹಾದೇವನ ದರ್ಶನ ಪಡೆದರು.

2/6

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಹಾ ಶಿವರಾತ್ರಿ ಅಂಗವಾಗಿ ಚಾಮರಾಜಪೇಟೆಯ ಶ್ರೀ‌ ಮಲೆ ಮಹದೇಶ್ವರ ದೇವಾಲಯಕ್ಕೆ ಭೇಟಿ ನೀಡಿ, ಭಾನುವಾರ ಪೂಜೆ ಸಲ್ಲಿಸಿದರು. ಈ ವೇಳೆ ಸಚಿವ ವೆಂಕಟೇಶ್ ಅವರು ಉಪಸ್ಥಿತರಿದ್ದರು.

3/6

ಇನ್ನು ನಾಡಿನ ಜನತೆಗೆ ಮಹಾ ಶಿವರಾತ್ರಿಯ ಹಾರ್ದಿಕ ಶುಭಾಶಯಗಳನ್ನು ತಿಳಿಸಿರುವ ಸಿಎಂ, ಅಜ್ಞಾನ - ಅಂಧಕಾರ ಕಳೆದು ಜ್ಞಾನದ ಬೆಳಕು ಲೋಕವನ್ನು ಬೆಳಗಿದ ಈ ಶುಭ ದಿನದಂದು ತಮ್ಮೆಲ್ಲರ ಮೇಲೆ ಭಗವಂತನ ಆಶೀರ್ವಾದವಿರಲಿ ಎಂದು ಪ್ರಾರ್ಥಿಸುತ್ತೇನೆ ಎಂದು ತಿಳಿಸಿದ್ದಾರೆ.

4/6

ತಿರುಮಲಗಿರಿ ವೆಂಕಟೇಶ್ವರ ದೇಗುಲಕ್ಕೆ ಎಚ್‌.ಡಿ. ಕುಮಾರಸ್ವಾಮಿ ಭೇಟಿ

ಹಾಗೆಯೇ ಶಿವರಾತ್ರಿ ಅಂಗವಾಗಿ ತಂದೆ ಹಾಗೂ ಮಾಜಿ ಪ್ರಧಾನಿಗಳಾದ ಎಚ್.ಡಿ. ದೇವೇಗೌಡ ಅವರೊಂದಿಗೆ ಬೆಂಗಳೂರಿನ ಜೆ.ಪಿ. ನಗರದ ಶ್ರೀ ತಿರುಮಲಗಿರಿ ವೆಂಕಟೇಶ್ವರ ದೇವಾಲಯದಲ್ಲಿ ಸರ್ವಶಕ್ತನಾದ ಆ ಪರಮಶಿವನಿಗೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಪೂಜೆ ಸಲ್ಲಿಸಿದರು.

5/6

ಹಬ್ಬದ ಹಿನ್ನೆಲೆ ಎಕ್ಸ್‌ ಪೋಸ್ಟ್‌ ಮಾಡಿರುವ ಎಚ್‌ಡಿಕೆ ಅವರು, ಸಮಸ್ತ ಜನರಿಗೆ ಮಹಾ ಶಿವರಾತ್ರಿ ಹಾರ್ದಿಕ ಶುಭಾಶಯಗಳು. ಸರ್ವಶಕ್ತನಾದ ಪರಮೇಶ್ವರನು ಸರ್ವರಿಗೂ ಒಳ್ಳೆಯದನ್ನೇ ಮಾಡಲಿ ಹಾಗೂ ಎಲ್ಲರ ಮನೆ ಮನಗಳಲ್ಲಿ ಸುಖ ಶಾಂತಿ, ನೆಮ್ಮದಿ ಸಮೃದ್ಧಿ ನೆಲೆಸುವಂತೆ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ ಎಂದು ತಿಳಿಸಿದ್ದಾರೆ.

6/6

ಶಿವರಾತ್ರಿ ಹಿನ್ನೆಲೆಯಲ್ಲಿ ದೇವಾಲಯಗಳು ಸೇರಿ ಹಲವೆಡೆ ಜಾಗರಣೆ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಭಜನೆ, ಸಂಗೀತ, ಹಾಸ್ಯ ಮುಂತಾದ ಕಾರ್ಯಕ್ರಮಗಳ ಮೂಲಕ ಭಕ್ತರು ಜಾಗರಣೆಯಲ್ಲಿ ತೊಡಗಿದ್ದರು.