Vladimir Putin India Visit: ಹ್ಯಾಂಡ್ ಶೇಕ್, ಬೆಚ್ಚನೆಯ ಅಪ್ಪುಗೆ, ಒಂದೇ ಕಾರಿನಲ್ಲಿ ಪಯಣ; ಗೆಳೆಯ ವ್ಲಾಡಿಮಿರ್ ಪುಟಿನ್‌ನನ್ನು ಆತ್ಮೀಯವಾಗಿ ಸ್ವಾಗತಿಸಿದ ಮೋದಿ
ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ 2 ದಿನಗಳ ಪ್ರವಾಸಕ್ಕಾಗಿ ಡಿಸೆಂಬರ್ 4ರ ಸಂಜೆ ದೆಹಲಿಗೆ ಬಂದಿಳಿದರು. ಸಂಜೆ 6:35ರ ವೇಳೆಗೆ ಅವರು ದೆಹಲಿಯ ಪಾಲಮ್ ವಿಮಾನ ನಿಲ್ದಾಣಕ್ಕೆ ಆಗಮಿಸಿದರು. ಖುದ್ದು ಪ್ರಧಾನಿ ನರೇಂದ್ರ ಮೋದಿ ಆಗಮಿಸಿ ಆತ್ಮೀಯ ಗೆಳೆಯನನ್ನು ಸ್ವಾಗತಿಸಿದರು. ಮೋದಿ ಇಂದು ರಾತ್ರಿ ಪುಟಿನ್ ಅವರಿಗಾಗಿ ವಿಶೇಷ ಔತಣ ಕೂಟ ಆಯೋಜಿಸಿದ್ದಾರೆ. ಮೋದಿ ಮತ್ತು ಪುಟಿನ್ ಅವರ ಆತ್ಮೀಯ ಕ್ಷಣ ಫೋಟೊ ಗ್ಯಾಲರಿ ಇಲ್ಲಿದೆ.
ಪುಟಿನ್‌ಗೆ ಆತ್ಮೀಯ ಸ್ವಾಗತ
ರಷ್ಯಾ ಮತ್ತು ಭಾರತ ಮಧ್ಯೆ ಹಲವು ವರ್ಷಗಳಿಂದಲೂ ಆತ್ಮೀಯ ಸಂಬಂಧವಿದೆ. ಅದರಲ್ಲಿಯೂ ಮೋದಿ ಮತ್ತು ವ್ಲಾಡಿಮಿರ್ ಪುಟಿನ್ ಉತ್ತಮ ಸ್ನೇಹಿತರು. ಹೀಗಾಗಿ ಮೋದಿ ಪುಟಿನ್ ಅವರನ್ನು ತಬ್ಬಿಕೊಂಡು ಸ್ವಾಗತಿಸಿದರು.
ಫೋಟೊ ವೈರಲ್
ಪುಟಿನ್ ವಿಮಾನದಿಂದ ಇಳಿಯುತ್ತಿದ್ದಂತೆ ಮೋದಿ ಮುಂದೆ ಸಾಗಿ ಶೇಕ್ ಹ್ಯಾಂಡ್ ಕೊಟ್ಟು, ಆತ್ಮೀಯವಾಗಿ ತಬ್ಬಿಕೊಂಡರು. ಸದ್ಯ ಈ ಇಬ್ಬರು ನಾಯಕರು ಜತೆಯಾಗಿ ನಿಂತಿರುವ ಫೋಟೊ ವೈರಲ್ ಆಗಿದೆ.
ಒಂದೇ ಕಾರಿನಲ್ಲಿ ಪಯಣ
ವಿಮಾನ ನಿಲ್ದಾಣದಿಂದ ಮೋದಿ ಮತ್ತು ಪುಟಿನ್ ಒಂದೇ ಕಾರಿನಲ್ಲಿ ತೆರಳಿದರು. ಕೆಲವು ದಿನಗಳ ಹಿಂದೆ ಚೀನಾದಲ್ಲಿ ನಡೆದ ಶಾಂಘೈ ಸಹಕಾರ ಸಂಘಟನೆಯ ಶೃಂಗಸಭೆಯ ಸಂದರ್ಭದಲ್ಲಿ ನರೇಂದ್ರ ಮೋದಿ ಪುಟಿನ್ ಒಂದೇ ಕಾರಿನಲ್ಲಿ ಪ್ರಯಾಣ ಬೆಳೆಸಿದ್ದರು.
ಹಲವು ಒಪ್ಪಂದಗಳಿಗೆ ಸಹಿ
ಪುಟಿನ್ ಅವರ ಈ ಪ್ರವಾಸ ವೇಳೆ ಎರಡೂ ದೇಶಗಳು ಹಲವು ಒಪ್ಪಂದಗಳಿಗೆ ಸಹಿ ಹಾಕಲಿವೆ. ಮುಖ್ಯವಾಗಿ ರಕ್ಷಣೆ, ಇಂಧನ ಮತ್ತು ವ್ಯಾಪಾರ ಈ ಮೂರು ವಲಯಗಳಿಗೆ ಸಂಬಂಧಿಸಿದಂತೆ ಚರ್ಚೆ ನಡೆಯಲಿದೆ.
ಬಿಗಿ ಭದ್ರತೆ
ಪುಟಿನ್ ಭೇಟಿ ಹಿನ್ನೆಲೆಯಲ್ಲಿ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ರಷ್ಯಾದಿಂದ ಸುಮಾರು ಕಮ್ಯಾಂಡೊಗಳು ಆಗಮಿಸಿ ಭದ್ರತಾ ವ್ಯವಸ್ಥೆಯ ಮೇಲ್ವಿಚಾರಣೆ ನಡೆಸಿದ್ದಾರೆ.