ಕಾರವಾರದಲ್ಲಿ ಸಬ್‌ಮರೀನ್‌ನಲ್ಲಿ ಪ್ರಯಾಣಿಸಿ ಇತಿಹಾಸ ಬರೆದ ದ್ರೌಪದಿ ಮುರ್ಮು; ಜಲಾಂತರ್ಗಾಮಿ ಯಾನ ಮಾಡಿದ ಮೊದಲ ಮಹಿಳಾ ರಾಷ್ಟ್ರಪತಿ
ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕದಂಬ ನೌಕಾನೆಲೆಗೆ ಭಾನುವಾರ (ಡಿಸೆಂಬರ್ 28) ರಾಷ್ಟ್ರಪತಿ ದ್ರೌಪದಿ ಮುರ್ಮು ಆಗಮಿಸಿದರು. ನಂತರ ಅವರು ಕಲ್ವರಿ ಸಬ್‌ಮರೀನ್ (ಜಲಾಂತರ್ಗಾಮಿ) ಐ.ಎನ್.ಎಸ್. ವಾಗ್ಶೀರ್‌ನಲ್ಲಿ ಪ್ರಯಾಣಿಸಿದರು. ರಾಷ್ಟ್ರಪತಿ ಸಶಸ್ತ್ರ ಪಡೆಗಳ ಸರ್ವೋಚ್ಚ ದಂಡನಾಯಕರೂ ಹೌದು. ವಿಶೇಷ ಎಂದರೆ ಜಲಾಂತರ್ಗಾಮಿಯದಲ್ಲಿ ಪ್ರಯಾಣಿಸಿದ 2ನೇ ರಾಷ್ಟ್ರಪತಿ ದ್ರೌಪದಿ ಮುರ್ಮು. ಈ ಮೊದಲು ಎ.ಪಿ.ಜೆ. ಅಬ್ದುಲ್ ಕಲಾಂ ಜಲಾಂತರ್ಗಾಮಿ ಸಬ್‌ಮರೀಬ್‌ನಲ್ಲಿ ತೆರಳಿದ್ದರು.
ರಾಜ್ಯಪಾಲರಿಂದ ಸ್ವಾಗತ
ಕಾರವಾರದ ಕದಂಬ ನೌಕಾನೆಲೆಗೆ ಆಗಮಿಸಿದ ಗೌರವಾನ್ವಿತ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ರಾಜ್ಯಪಾಲ ಥಾವರ್ ಚಂದ್ ಗೆಹಲೋಟ್ ಸ್ವಾಗತಿಸಿದರು. ಈ ವೇಳೆ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲ ಸಾರಿಗೆ ಸಚಿವರೂ ಆದ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ಎಸ್. ವೈದ್ಯ, ಪ್ರಾದೇಶಿಕ ಆಯುಕ್ತೆ ಜಯಂತಿ, ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ, ಎಡಿಜಿಪಿ ಹಿತೇಂದ್ರ, ಐಜಿಪಿ ಅಮಿತ್ ಸಿಂಗ್, ಎಸ್‌ಪಿ ದೀಪನ್ ಎಂ. ಎನ್., ದಿನೇಶ್ ಕುಮಾರ್ ತ್ರಿಪಾಠಿ, ಕಾರವಾರ ನೌಕಾನೆಲೆಯ ಫ್ಲಾಗ್ ಆಫೀಸರ್ ಕಮಾಂಡಿಂಗ್ ರಿಯರ್ ಅಡ್ಮಿರಲ್ ವಿಕ್ರಂ ಮೆನನ್ ಮತ್ತಿತರರು ಉಪಸ್ಥಿತರಿದ್ದರು.
ಗೋವಾದಿಂದ ಹೆಲಿಕಾಪ್ಟರ್ ಮೂಲಕ ಆಗಮನ
ಗೋವಾದಿಂದ ಹೆಲಿಕಾಪ್ಟರ್ ಮೂಲಕ ಕಾರವಾರಕ್ಕೆ ಮುರ್ಮು ಆಗಮಿಸಿದರು. 2006ರಲ್ಲಿ ಅಬ್ದುಲ್ ಕಲಾಂ ಜಲಾಂತಗಾರ್ಮಿಯಲ್ಲಿ ಪ್ರಯಾನ ಮಾಡಿ ಇತಿಹಾಸ ಬರೆದಿದ್ದರು. ರಾಷ್ಟ್ರಪತಿ ಈ ತಿಂಗಳು ರಾಜುಕ್ಕೆ ಆಗಮಿಸುತ್ತಿರುವುದು ಇದು 2ನೇ ಬಾರಿ.
ಮೊದಲ ಮಹಿಳಾ ರಾಷ್ಟ್ರಪತಿ
ಜಲಾಂತರ್ಗಾಮಿ ಯಾನ ಮಾಡಿದ ಮೊದಲ ರಾಷ್ಟ್ರಪತಿ ಎನ್ನುವ ಹೆಗ್ಗಳಿಕೆಗೆ ಇದೀಗ ದ್ರೌಪದಿ ಮುರ್ಮು ಪಾತ್ರರಾಗಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ವೈರಲ್
ತಾವು ಜಲಾಂತರ್ಗಾಮಿಯಲ್ಲಿ ಪ್ರಯಾಣಿಯುತ್ತಿರುವ ಫೋಟೊಗಳನ್ನು ದ್ರೌಪದಿ ಮುರ್ಮು ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದು, ವೈರಲ್ ಆಗಿದೆ.
ಮೀನಿಗಾರಿಕೆಗೆ ನಿರ್ಬಂಧ
ಬೆಳಗ್ಗೆ ಕದಂಬ ನೌಕಾನೆಲೆಗೆ ಆಗಮಿಸಿದ ದ್ರೌಪದಿ ಮುರ್ಮು ಆರಂಭದಲ್ಲಿ ವಿಕ್ರಾಂತ್ ಯುದ್ಧ ನೌಕೆ ವೀಕ್ಷಿಸಿ ಬಳಿಕ ಜಲಾಂತರ್ಗಾಮಿ ನೌಕೆ ಏರಿದರು. ಸುರಕ್ಷತೆಯ ಕಾರಣದಿಂದ ಹಾರವಾಡದಿಂದ ಮಾಜಾಳಿಯವರೆಗಿನ ಸಮುದ್ರ ತೀರದಲ್ಲಿ ಮೀನುಗಾರಿಕೆಯನ್ನು ಅರ್ಧ ದಿನ ನಿರ್ಬಂಧಿಸಲಾಗಿತ್ತು.