ವಿಜಯ್ ದೇವರಕೊಂಡ ತಾಳಿ ಕಟ್ಟುವ ವೇಳೆ ಕಣ್ತುಂಬಿಕೊಂಡ ರಶ್ಮಿಕಾ ಮಂದಣ್ಣ; ಇಲ್ಲಿದೆ ವಿರೋಶ್ ವಿವಾಹದ ಫೋಟೊಗಳು
ಕೊಡಗಿನ ಕುವರಿ, ನ್ಯಾಶನಲ್ ಕ್ರಶ್ ರಶ್ಮಿಕಾ ಮಂದಣ್ಣ ಇದೀಗ ಅಧಿಕೃತವಾಗಿ ಹೈದರಾಬಾದ್‌ನ ಸೊಸೆಯಾಗಿದ್ದಾರೆ. ರಾಜಸ್ಥಾನದ ಉದಯಪುರದಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ ರಶ್ಮಿಕಾ ತೆಲುಗು ನಟ ವಿಜಯ್ ದೇವರಕೊಂಡ ಅವರನ್ನು ವರಿಸಿದರು. ಅ ಮೂಲಕ ಇಬ್ಬರ ಹಲವು ವರ್ಷಗಳ ಪ್ರೀತಿಗೆ ಮದುವೆಯೆಂಬ ಮುದ್ರೆ ಬಿದ್ದಿದೆ. ಆಪ್ತರ ಸಮ್ಮುಖದಲ್ಲಿ ಈ ಸ್ಟಾರ್ ಜೋಡಿ ಸಪ್ತಪದಿ ತುಳಿಯಿತು. ಗುರುವಾರ (ಫೆಬ್ರವರಿ 26) ತೆಲುಗು ಸಂಪ್ರದಾಯದಂತೆ ಮದುವೆ ನಡೆದರೆ ಸಂಜೆ ಕೊಡುಗು ರೀತಿಯ ಆಚರಣೆ ನಡೆಯಿತು.
ಮದುವೆಯ ಫೋಟೊ ಹಂಚಿಕೊಂಡ ಜೋಡಿ
ಸದ್ಯ ವಿಜಯ ದೇವಕೊಂಡ ಮತ್ತು ರಶ್ಮಿಕಾ ಮಂದಣ್ಣ ಮದುವೆಯ ಕ್ಷಣಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದೆ. ರಶ್ಮಿಕಾ ಕಿತ್ತಳೆ ಬಣ್ಣದ ಸೀರೆಯಲ್ಲಿ, ಮೈತುಂಬ ಆಭರಣ ತೊಟ್ಟು ಅಪ್ಸರೆಯಂತೆ ಕಂಡರೆ, ವಿಜಯ್ ದೇವರಕೊಂಡ ಬಿಳಿ ಪಂಚೆ ಮತ್ತು ಕೆಂಪು ಶಾಲು ತೊಟ್ಟು ರಾಜನಂತೆ ಮಿಂಚಿದರು.
ಸಂಪ್ರದಾಯಬದ್ಧ ಮದುವೆ
ಬೆಳಗ್ಗೆ ತೆಲುಗು ಸಂಪ್ರದಾಯದಂತೆ ವಿವಾಹ ಸಮಾರಂಭ ನಡೆಯಿತು. ʼʼಬೆಸ್ಟ್ ಫ್ರೆಂಡ್ ಈಗ ನನ್ನ ಪತ್ನಿʼʼ ಎಂದು ವಿಜಯ್ ದೇವರಕೊಂಡ ಹೇಳಿದ್ದಾರೆ.
ಕಣ್ತುಂಬಿಕೊಂಡ ರಶ್ಮಿಕಾ
ವಿಜಯ್ ದೇವರಕೊಂಡ ತಾಳಿ ಕಟ್ಟುವ ವೇಳೆ ರಶ್ಮಿಕಾ ಭಾವುಕರಾಗಿದ್ದು, ಕಣ್ತುಂಬಿಕೊಂಡರು.
ವಿಜಯ್ ಹೇಳಿದ್ದೇನು?
ʼʼಅವಳು ನನ್ನ ಜತೆ ಇದ್ದಿದ್ದರೆ ನನ್ನ ದಿನ ಚೆನ್ನಾಗಿರುತ್ತಿತ್ತು ಅಂತ ಅನಿಸುವಷ್ಟು ಅವಳನ್ನು ಮಿಸ್ ಮಾಡಿಕೊಂಡೆ. ಅವಳು ನನ್ನ ಎದುರು ಕುಳಿತಿದ್ದರೆ ನಾನು ಸೇವಿಸುವ ಆಹಾರ ಇನ್ನಷ್ಟು ಆರೋಗ್ಯಕರವಾಗಿರುತ್ತಿದ್ದವುʼʼ ಎಂದು ವಿಜಯ್ ಬರೆದುಕೊಂಡಿದ್ದಾರೆ.
ಅವಳು ಬೇಕಾಗಿದ್ದಳು
ʼʼಅವಳು ನನ್ನ ಜತೆ ಇದ್ದರೆ ವ್ಯಾಯಾಮ ಕೂಡ ಹೆಚ್ಚು ಮೋಜಿನಿಂದ ಕೂಡಿರುತ್ತಿದ್ದವು. ನಾನು ಎಲ್ಲೇ ಇದ್ದರೂ ಮನೆಯ ವಾತಾವರಣವನ್ನು ಅನುಭವಿಸಲು ಅವಳು ಬೇಕಾಗಿದ್ದಳು. ಹೀಗಾಗಿ ಅವಳನ್ನು ಮದುವೆಯಾದೆʼʼ ಎಂದಿದ್ದಾರೆ.