ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IPL 2025: ಮುಂಬೈ ಇಂಡಿಯನ್ಸ್‌ ಪರ ವಿಶೇಷ ದಾಖಲೆ ಬರೆದ ರೋಹಿತ್‌ ಶರ್ಮಾ!

ರಾಜಸ್ಥಾನ್‌ ರಾಯಲ್ಸ್‌ ವಿರುದ್ಧ 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ ಪಂದ್ಯದಲ್ಲಿ ಅರ್ಧಶತಕ ಸಿಡಿಸುವ ಮೂಲಕ ರೋಹಿತ್‌ ಶರ್ಮಾ, ಮುಂಬೈ ಇಂಡಿಯನ್ಸ್‌ ಪರ 6000 ರನ್‌ಗಳನ್ನು ಪೂರ್ಣಗೊಳಿಸಿದ್ದಾರೆ. ಮುಂಬೈ ಪರ ಈ ಸಾಧನೆ ಮಾಡಿದ ಮೊದಲ ಬ್ಯಾಟ್ಸ್‌ಮನ್‌ ಎನಿಸಿಕೊಂಡಿದ್ದಾರೆ.

1/6

ಅರ್ಧಶತಕ ಸಿಡಿಸಿದ ರೋಹಿತ್‌ ಶರ್ಮಾ

ಗುರುವಾರ ಜೈಪುರದ ಸವಾಯ್‌ ಮಾನ್‌ಸಿಂಗ್‌ ಕ್ರೀಡಾಂಗಣದಲ್ಲಿ ನಡೆದ ರಾಜಸ್ಥಾನ್‌ ರಾಯಲ್ಸ್‌ ವಿರುದ್ಧದ ಐಪಿಎಲ್‌ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಮುಂಬೈ ಇಂಡಿಯನ್ಸ್‌ ಮಾಜಿ ನಾಯಕ ರೋಹಿತ್‌ ಶರ್ಮಾ 36 ಎಸೆತಗಳಲ್ಲಿ 53 ರನ್‌ಗಳನ್ನು ಸಿಡಿಸಿದರು.

2/6

ರಯಾನ್‌ ರಿಕೆಲ್ಟನ್‌ ಅರ್ಧಶತಕ

ರೋಹಿತ್‌ ಶರ್ಮಾ ಜೊತೆ ಮತ್ತೊಂದು ತುದಿಯಲ್ಲಿ ಸ್ಪೋಟಕ ಬ್ಯಾಟ್‌ ಮಾಡಿದ್ದ ರಯಾನ್‌ ರಿಕೆಲ್ಟನ್‌ 38 ಎಸೆತಗಳಲ್ಲಿ 61 ರನ್‌ಗಳನ್ನು ಸಿಡಿಸಿದರು. ಇವರು ಮೂರು ಸಿಕ್ಸರ್‌ ಹಾಗೂ 7 ಬೌಂಡರಿಗಳನ್ನು ಕೂಡ ಸಿಡಿಸಿದರು.

3/6

ಇತಿಹಾಸ ಬರೆದ ರೋಹಿತ್‌ ಶರ್ಮಾ

ಅರ್ಧಶತಕ ಸಿಡಿಸುವ ಮೂಲಕ ರೋಹಿತ್‌ ಶರ್ಮಾ ಐಪಿಎಲ್‌ ಟೂರ್ನಿಯಲ್ಲಿ ವಿಶೇಷ ದಾಖಲೆ ಬರೆದಿದ್ದಾರೆ. ಅವರು ಮುಂಬೈ ಇಂಡಿಯನ್ಸ್‌ ಪರ 6000 ರನ್‌ ಗಳಿಸಿದ ಮೊದಲ ಬ್ಯಾಟ್ಸ್‌ಮನ್‌ ಎನಿಸಿಕೊಂಡಿದ್ದಾರೆ ರೋಹಿತ್‌ ಶರ್ಮಾ.

4/6

2011ರಲ್ಲಿ ಮುಂಬೈ ಸೇರಿದ್ದ ಹಿಟ್‌ಮ್ಯಾನ್‌

ರೋಹಿತ್‌ ಶರ್ಮಾ 2011ರಲ್ಲಿ ಮುಂಬೈ ಇಂಡಿಯನ್ಸ್‌ಗೆ ಸೇರ್ಪಡೆಯಾಗಿದ್ದರು. ನಂತರ 2013ರಲ್ಲಿ ಮುಂಬೈ ಇಂಡಿಯನ್ಸ್‌ ನಾಯಕತ್ವವನ್ನು ಪಡೆದಿದ್ದ ಹಿಟ್‌ಮ್ಯಾನ್‌, ಐದು ಬಾರಿ ಚಾಂಪಿಯನ್‌ ಮಾಡಿದ್ದಾರೆ. ಮುಂಬೈ ಇಂಡಿಯನ್ಸ್‌ ಪರ 5751 ಐಪಿಎಲ್‌ ರನ್‌ ಹಾಗೂ ಚಾಂಪಿಯನ್ಸ್‌ ಲೀಗ್‌ನಲ್ಲಿಯೂ ಆಡಿದ್ದಾರೆ.

5/6

ಅಗ್ರ ಸ್ಥಾನದಲ್ಲಿ ಕೊಹ್ಲಿ

ಐಪಿಎಲ್‌ ಟೂರ್ನಿಯಲ್ಲಿ ಏಕೈಕ ಫ್ರಾಂಚೈಸಿ ಪರ ಅತಿ ಹೆಚ್ಚು ರನ್‌ ಗಳಿಸಿದ ಬ್ಯಾಟ್ಸ್‌ಮನ್‌ ಎಂಬ ದಾಖಲೆ ವಿರಾಟ್‌ ಕೊಹ್ಲಿ ಹೆಸರಿನಲ್ಲಿದೆ. ಕೊಹ್ಲಿ ಆರ್‌ಸಿಬಿ ಪರ 8871 ರನ್‌ ಗಳಿಸಿದ್ದಾರೆ. ಇದೀಗ ರೋಹಿತ್‌ ಶರ್ಮಾ ಎರಡನೇ ಬ್ಯಾಟ್ಸ್‌ಮನ್‌ ಆಗಿದ್ದಾರೆ.

6/6

ನಾಲ್ಕನೇ ಸ್ಥಾನದಲ್ಲಿ ರೈನಾ

ಜೇಮ್ಸ್‌ ವಿನ್ಸ್‌ 5934 ರನ್‌ಗಳ ಮೂಲಕ ಮೂರನೇ ಸ್ಥಾನದಲ್ಲಿದ್ದಾರೆ. ಇವರು ಹ್ಯಾಂಪ್‌ಶೈರ್‌ ಪರ 5934 ರನ್‌ ಗಳಿಸಿದ್ದಾರೆ. ಸಿಎಸ್‌ಕೆ ಪರ ಸುರೇಶ್‌ ರೈನಾ 5529 ರನ್‌ ಗಳಿಸಿದ್ದು ನಾಲ್ಕನೇ ಸ್ಥಾನದಲ್ಲಿದ್ದಾರೆ. ಎಂಎಸ್‌ ಧೋನಿ 5269 ರನ್‌ಗಳ ಮೂಲಕ ನಂತರದ ಸ್ಥಾನದಲ್ಲಿದ್ದಾರೆ.