ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

IPL 2026: ʻಒಂದು ವಿಕೆಟ್‌ಗೆ 4.50 ಕೋಟಿ ರು!ʼ- ಐಪಿಎಲ್‌ ಓನರ್ಸ್‌ಗೆ ನಷ್ಟ ಉಂಟುಮಾಡಿದ ಬೌಲರ್ಸ್‌!

2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯು ನಿರ್ಣಾಯಕ ಹಂತಕ್ಕೆ ಬಂದಿದ್ದು, ಪ್ಲೇಆಫ್ಸ್‌ ಪಂದ್ಯಗಳು ಸೇರಿದಂತೆ ಇನ್ನು ಉಳಿದಿರುವುದು ಕೇವಲ ನಾಲ್ಕು ಪಂದ್ಯಗಳು ಮಾತ್ರ. ಪ್ರಶಸ್ತಿ ರೇಸ್‌ನಲ್ಲಿ ಕೇವಲ ನಾಲ್ಕು ತಂಡಗಳು ಮಾತ್ರ ಉಳಿದಿವೆ. ಅಂದ ಹಾಗೆ ಈ ಬಾರಿ ಟೂರ್ನಿಯಲ್ಲಿ ಕೋಟಿ ಕೋಟಿ ರು. ಗಳನ್ನು ಜೇಬಿಗಿಳಿಸಿಕೊಂಡ ಕೆಲ ಸ್ಟಾರ್‌ ಬೌಲರ್‌ಗಳು, ನಿರೀಕ್ಷಿತ ಪ್ರದರ್ಶನವನ್ನು ತೋರುವಲ್ಲಿ ವಿಫಲರಾಗಿದ್ದಾರೆ. ಅವರು ಪಡೆದ ಒಂದೊಂದು ವಿಕೆಟ್‌ಗೆ ಒಂದರಿಂದ ನಾಲ್ಕು ಕೋಟಿ ರು.ಗಳನ್ನು ಪಡೆದು ಐಪಿಎಲ್‌ ಫ್ರಾಂಚೈಸಿ ಓನರ್‌ಗಳಿಗೆ ನಷ್ಟವನ್ನುಂಟು ಮಾಡಿದ್ದಾರೆ.ಅಂಥಾ ಬೌಲರ್‌ಗಳನ್ನು ಇಲ್ಲಿ ವಿವರಿಸಲಾಗಿದೆ.

2026ರ ಐಪಿಎಲ್‌ ಟೂರ್ನಿಯ ದಬಾರಿ ಬೌಲರ್‌ಗಳು.
1/7

ಜಸ್‌ಪ್ರೀತ್‌ ಬುಮ್ರಾ ಅವರಿಗೆ ನೀಡಲಾದ 18 ಕೋಟಿ ರು ಸಂಭಾವನೆಗೆ ಪ್ರತಿಯಾಗಿ ಕೇವಲ 4 ವಿಕೆಟ್‌ಗಳನ್ನು ಮಾತ್ರ ಪಡೆದಿದ್ದಾರೆ. ಪ್ರತಿ ವಿಕೆಟ್‌ಗೆ ಸುಮಾರು 4.50 ಕೋಟಿ ವೆಚ್ಚವಾದಂತಾಗಿದೆ. ಇದು ಫ್ರಾಂಚೈಸಿಗೆ ಭಾರೀ ನಷ್ಟವಾಗಿ ಪರಿಣಮಿಸಿದೆ.

2/7

ಹಾರ್ದಿಕ್‌ ಪಾಂಡ್ಯ ಅವರನ್ನು 16.35 ಕೋಟಿ ರು.ಗೆ ಖರೀದಿಸಲಾಗಿತ್ತು. ಆದರೆ ಅವರು ಮುಂಬೈ ಇಂಡಿಯನ್ಸ್‌ ಪರ ಕೇವಲ 4 ವಿಕೆಟ್‌ಗಳನ್ನು ಮಾತ್ರ ಪಡೆಯಲು ಸಾಧ್ಯವಾಯಿತು. ಇದರೊಂದಿಗೆ ಪ್ರತಿ ವಿಕೆಟ್‌ಗೆ ಸುಮಾರು ₹4.09 ಕೋಟಿ ರು ಪಡೆದಂತಾಗಿದೆ.

3/7

ಕ್ಯಾಮೆರಾನ್‌ ಗ್ರೀನ್‌ ಅವರನ್ನು ಕೋಲ್ಕತಾ ಫ್ರಾಂಚೈಸಿ 25.20 ಕೋಟಿ ರು. ಗಳಿಗೆ ಖರೀದಿಸಲಾಗಿತ್ತು. ಆದರೆ ಅವರು ಕೇವಲ 7 ವಿಕೆಟ್‌ಗಳನ್ನು ಮಾತ್ರ ಪಡೆದು ನಿರೀಕ್ಷಿತ ಪ್ರದರ್ಶನ ನೀಡಲು ವಿಫಲರಾದರು. ಇದರೊಂದಿಗೆ ಪ್ರತಿ ವಿಕೆಟ್‌ಗೆ ಸುಮಾರು ₹3.60 ಕೋಟಿ ವೆಚ್ಚ ಪಡೆದಂತಾಗಿದೆ.

4/7

ಯುಜ್ವೇಂದ್ರ ಚಹಲ್‌ ಅವರನ್ನು 18 ಕೋಟಿ ರು ಮೊತ್ತಕ್ಕೆ ಪಂಜಾಬ್‌ ಕಿಂಗ್ಸ್‌ ಉಳಿಸಿಕೊಂಡಿದ್ದರೂ, ಅವರು ಕೇವಲ 12 ವಿಕೆಟ್‌ಗಳನ್ನು ಮಾತ್ರ ಪಡೆದರು. ಇದರೊಂದಿಗೆ ಪ್ರತಿ ವಿಕೆಟ್‌ಗೆ ಸುಮಾರು ₹1.50 ಕೋಟಿ ವೆಚ್ಚ ಮಾಡಿದಂತಾಗಿದೆ.

5/7

ಅಕ್ಷರ್‌ ಪಟೇಲ್‌ ಅವರಿಗೆ ಡೆಲ್ಲಿ ಕ್ಯಾಪಿಟಲ್ಸ್‌ 16.50 ಕೋಟಿ ಮೊತ್ತ ನೀಡಲಾಗಿದ್ದರೂ, ಅವರು ಕೇವಲ 11 ವಿಕೆಟ್‌ಗಳನ್ನು ಮಾತ್ರ ಪಡೆದರು. ಇದರೊಂದಿಗೆ ಪ್ರತಿ ವಿಕೆಟ್‌ಗೆ ಸುಮಾರು ₹1.50 ಕೋಟಿ ಪಡೆದಂತಾಗಿದೆ.

6/7

ಕುಲ್ದೀಪ್‌ ಯಾದವ್‌ ಅವರನ್ನು 13.25 ಕೋಟಿ ರು.ಗೆ ತಂಡದಲ್ಲಿ ಸೇರಿಸಿಕೊಳ್ಳಲಾಗಿತ್ತು. ಆದರೆ ಅವರು ಕೇವಲ 10 ವಿಕೆಟ್‌ಗಳನ್ನು ಮಾತ್ರ ಪಡೆದರು. ಇದರೊಂದಿಗೆ ಪ್ರತಿ ವಿಕೆಟ್‌ಗೆ ಸುಮಾರು ₹1.33 ಕೋಟಿ ವೆಚ್ಚ ಮಾಡಿದಂತಾಗಿದೆ.

7/7

ಅರ್ಷದೀಪ್‌ ಸಿಂಗ್‌ ಅವರನ್ನು ಪಂಜಾಬ್‌ ಕಿಂಗ್ಸ್‌ 18 ಕೋಟಿ ರು ಮೊತ್ತಕ್ಕೆ ತಂಡದಲ್ಲಿ ಉಳಿಸಿಕೊಂಡಿದ್ದರೂ, ಅವರು 14 ವಿಕೆಟ್‌ಗಳನ್ನು ಮಾತ್ರ ಪಡೆಯಲು ಸಾಧ್ಯವಾಯಿತು. ಇದರೊಂದಿಗೆ ಪ್ರತಿ ವಿಕೆಟ್‌ಗೆ ಸುಮಾರು 1.29 ಕೋಟಿ ಪಡೆದಂತಾಗಿದೆ.