ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಪರ್ಯಾಯ ಮಹೋತ್ಸವದಲ್ಲಿ ಮಿಂದೆದ್ದ ಉಡುಪಿ; ಸರ್ವಜ್ಞ ಪೀಠ ಏರಿದ ಶ್ರೀ ವೇದವರ್ಧನ ತೀರ್ಥರು

ದೇಗುಲನಗರಿ ಉಡುಪಿ ಪರ್ಯಾಯ ಸಂಭ್ರಮದಲ್ಲಿ ಮಿಂದೆದ್ದಿದೆ. ಜನವರಿ 18ರಂದು ಬೆಳಗಿನ ಜಾವ ಉಡುಪಿಯ ನೂತನ ಪರ್ಯಾಯ ಪೀಠಾಧೀಶ ಶಿರೂರು ಮಠದ ಶ್ರೀ ವೇದವರ್ಧನ ತೀರ್ಥರು ಸರ್ವಜ್ಞಪೀಠವನ್ನು ಏರುವ ಮೂಲಕ ಶಿರೂರು ಮಠದ ಶ್ರೀ ವೇದವರ್ಧನ ತೀರ್ಥರು ಮುಂದಿನ 2 ವರ್ಷಗಳ ತನಕ ಉಡುಪಿಯಲ್ಲಿ ಶ್ರೀಕೃಷ್ಣನ ಪೂಜೆಯ ಜವಾಬ್ದಾರಿ ವಹಿಸಿಕೊಂಡಿದ್ದಾರೆ.

ಸರ್ವಜ್ಞ ಪೀಠ ಏರಿದ ಶ್ರೀ ವೇದವರ್ಧನ ತೀರ್ಥರಿಂದ ಕೃಷ್ಣ ದರ್ಶನ
1/6

ಅದ್ಧೂರಿ ಮೆರವಣಿಗೆ

ಶ್ರೀ ವೇದವರ್ಧನ ತೀರ್ಥರು ಅದ್ಧೂರಿ ಮೆರವಣಿಗೆ ಮೂಲಕ ಪುರ ಪ್ರವೇಶ ಮಾಡಿದರು. ಭಾನುವಾರ (ಜನವರಿ 18) ಬೆಳಗ್ಗೆ ಉಡುಪಿಯ ರಾಜಾಂಗಣದಲ್ಲಿ ಪರ್ಯಾಯ ದರ್ಬಾರ್‌ ನಡೆಸಿ ಅಷ್ಟ ಮಠದ ಸ್ವಾಮೀಜಿಗಳ ಜತೆಯಲ್ಲಿ ಅಶೀರ್ವಚನ ನೀಡಿದರು.

2/6

ಸರ್ವಜ್ಞ ಪೀಠ ಏರಿದ ಶ್ರೀ ವೇದವರ್ಧನ ತೀರ್ಥರು

ಸರ್ವಜ್ಞ ಪೀಠ ಏರಿದ ಶ್ರೀವೇದವರ್ಧನ ತೀರ್ಥ ಅವರಿಗೆ ಈ ಹಿಂದಿನ ಪರ್ಯಾಯ ಪೀಠಾಧೀಶ ಪುತ್ತಿಗೆ ಮಠದ ಶ್ರೀ ಅಧಿಕಾರ ಹಸ್ತಾಂತರಿಸಿದರು.

3/6

21 ವರ್ಷದ ಶ್ರೀ ವೇದವರ್ಧನ ತೀರ್ಥರು

21 ವರ್ಷದ ಶ್ರೀ ವೇದವರ್ಧನ ತೀರ್ಥರಿಗೆ ಇದು ಮೊದಲ ಪರ್ಯಾಯ. ಶ್ರೀ ಲಕ್ಷ್ಮೀವರತೀರ್ಥ ಶ್ರೀಪಾದರ ಬಳಿಕ ಶಿರೂರು ಮಠದ 31ನೇ ಯತಿಯಾಗಿ ನಿಯುಕ್ತಿಗೊಂಡ ಅವರು 2005ರ ಸೆಪ್ಟೆಂಬರ್‌ 30ರಂದು ಉಡುಪಿಯಲ್ಲಿ ಜನಿಸಿದರು.

4/6

ಕನಕನ ಕಿಂಡಿ ಮೂಲಕ ದರ್ಶನ

ಸರ್ವಜ್ಞ ಪೀಠ ಏರಿದ ಶ್ರೀ ವೇದವರ್ಧನ ತೀರ್ಥರು ಕನಕನ ಕಿಂಡಿ ಮೂಲಕ ಕೃಷ್ಣನ ದರ್ಶನ ಪಡೆದರು. ಶ್ರೀ ವೇದವರ್ಧನ ತೀರ್ಥರಿಗೆ ದ್ವಂದ್ವಮಠ ಸೋದೆಮಠದ ಶ್ರೀ ವಿಶ್ವ ವಲ್ಲಭತೀರ್ಥ ಶ್ರೀಪಾದರು ಪ್ರಣವೋಪದೇಶವನ್ನು ಕೊಟ್ಟು ಪೀಠಾಧಿಪತ್ಯ ಅನುಗ್ರಹಿಸಿದ್ದರು.

5/6

ಅ‍ದ್ಭುತ ಸ್ತಬ್ಧ ಚಿತ್ರ

ಪರ್ಯಾಯ ಮಹೋತ್ಸವ ಪ್ರಯುಕ್ತ ಶನಿವಾರ ರಾತ್ರಿ ಆಯೋಜಿಸಿದ್ದ ಅದ್ಧೂರಿ ಮೆರವಣಿಗೆ ಗಮನ ಸೆಳೆಯಿತು. ಇದರಲ್ಲಿ ವಿವಿಧ ರೀತಿಯ ಸ್ತಬ್ಧ ಚಿತ್ರ ನೋಡುಗರ ಮನ ಗೆದ್ದಿತು.

6/6

ಆಕರ್ಷಕ ಸ್ವಾಗತ ಗೋಪುರ

ಪರ್ಯಾಯಕ್ಕೆ ಆಗಮಿಸುವ ಭಕ್ತರಿಗೆ ಸ್ವಾಗತ ಕೋರಿ ಉಡುಪಿಯಲ್ಲಿ ಅಳವಡಿಸಿದ್ದ ಗೋಪುರ ಗಮನ ಸೆಳೆಯಿತು.