ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Star Dog 2025: ಇದೇ ನೋಡಿ ಪ್ರಪಂಚದ ಅತ್ಯಂತ ಸ್ಟೈಲಿಶ್‌ ಡಾಗ್‌!

World Most Stylish Dog: ಈಡನ್‌ಬರ್ಗ್‌ನ ಶ್ವಾನವೊಂದು ಪ್ರಪಂಚದ ಸ್ಟೈಲಿಶ್‌ ಡಾಗ್ ಎಂದೇ ಖ್ಯಾತಿ ಗಳಿಸಿದೆ ಎಂಬುದು ನಿಮಗೆ ಗೊತ್ತೇ! ಈ ಫ್ಯಾಷನೆಬಲ್‌ ಡಾಗ್‌ ಇನ್ಸ್ಟಾಗ್ರಾಮ್‌ನಲ್ಲೂ ಸಾಕಷ್ಟು ಫಾಲೋವರ್ಸ್ ಹೊಂದಿದೆ. ಈ ಶ್ವಾನದ ಕುರಿತಂತೆ ಇಲ್ಲಿದೆ ಸಂಕ್ಷಿಪ್ತ ವರದಿ.

ಸ್ಟೈಲಿಶ್‌ ಡಾಗ್‌ ಸಮಂತಾ, ಚಿತ್ರಕೃಪೆ: ಆಫ್ಘಾನ್‌ ಹೌಂಡ್‌ ಇನ್‌ ಸಿಟಿ ಇನ್ಸ್ಟಾಗ್ರಾಮ್‌ ಖಾತೆ
1/5

ಪ್ರಪಂಚದ ಸ್ಟೈಲಿಶ್‌ ಡಾಗ್ ಇನ್ಸ್ಟಾಗ್ರಾಮ್‌ನಲ್ಲಿದೆ ಎಂಬುದು ನಿಮಗೆ ಗೊತ್ತೇ! ಹೌದು, ಸಮಂತಾ ಹೆಸರಿನ ಈ ಫ್ಯಾಷನೆಬಲ್‌ ಡಾಗ್‌ ತನ್ನದೇ ಆದ ಸೋಷಿಯಲ್‌ ಮೀಡಿಯಾ ಅಕೌಂಟ್‌ ಹೊಂದಿದೆ. ಈ ಖಾತೆಯನ್ನು ಈ ಶ್ವಾನದ ಮಾಲೀಕರು ಹ್ಯಾಂಡಲ್‌ ಮಾಡುತ್ತಿದ್ದಾರೆನ್ನಲಾಗಿದೆ. ಸದ್ಯ ಈ ಶ್ವಾನ ಮಾಡೆಲ್‌ ಡಾಗ್‌ ಎಂದೇ ಗುರುತಿಸಿಕೊಂಡಿದೆ.

2/5

ಸ್ಟೈಲಿಶ್‌ ಡಾಗ್‌ ಸಮಂತಾ ಕಥೆ

ಅಂದ ಹಾಗೆ, ಈ ಸ್ಟೈಲಿಶ್‌ ಡಾಗ್‌ ಸಮಂತಾ ಆಫ್ಘಾನ್‌ ಹೌಂಡ್‌ ಇನ್‌ ದಿ ಸಿಟಿ ಎಂಬ ತನ್ನದೇ ಆದ ಇನ್ಸ್ಟಾಗ್ರಾಮ್‌ ಖಾತೆ ಹೊಂದಿದೆ. ಸದ್ಯ ಈಡನ್‌ಬರ್ಗ್‌ನಲ್ಲಿರುವ ಈ ನಾಯಿ ಇತ್ತೀಚೆಗೆ ಫ್ಯಾಷನ್‌ ಐಕಾನ್‌ ಎಂಬ ಖ್ಯಾತಿ ಗಳಿಸಿದೆ. ಆಗಾಗ್ಗೆ ನಾನಾ ಬಗೆಯ ಫ್ಯಾಷನೆಬಲ್‌ ಔಟ್‌ಫಿಟ್ಸ್ ಧರಿಸಿ, ಸ್ಟೈಲಿಶ್‌ ಆಗಿ ಕಾಣಿಸಿಕೊಳ್ಳುತ್ತಿರುತ್ತದೆ. ಇದರ ಮಾಲೀಕರು ಈ ಶ್ವಾನದ ಸಖತ್‌ ಆಗಿ ಕಾಣಿಸುವ ಫ್ಯಾಷೆನಬಲ್‌ ಫೋಟೋಗಳನ್ನು ರೆಗ್ಯುಲರ್‌ ಆಗಿ ಅಪ್‌ಡೇಟ್‌ ಮಾಡುತ್ತಲೇ ಇರುತ್ತಾರೆ.

3/5

ಹೀಗಿದೆ ಶ್ವಾನದ ಸ್ಟೈಲಿಶ್‌ ಲುಕ್‌

ಸೀಸನ್‌ಗೆ ತಕ್ಕಂತೆ ಶ್ವಾನದ ಸ್ಟೈಲಿಶ್‌ ಲುಕ್‌ ಬದಲಾಗುತ್ತಿರುತ್ತದೆ. ಉದಾಹರಣೆಗೆ., ಸಿಲ್ಕ್‌ ಸ್ಕಾರ್ಫ್‌, ಸನ್‌ಗ್ಲಾಸ್‌, ಆಕರ್ಷಕ ಡಿಸೈನರ್‌ವೇರ್‌ಗಳಲ್ಲಿ ಈ ಶ್ವಾನದ ಫೋಟೋಗಳನ್ನು ನೋಡುತ್ತಿರಬಹುದು.

4/5

ಡಾಗ್‌ನ ಲಕ್ಷುರಿ ಲುಕ್‌

ಅಷ್ಟು ಮಾತ್ರವಲ್ಲ, ಈ ಡಾಗ್‌ ಸಾಕಷ್ಟು ಲಕ್ಷುರಿ ಪೆಟ್‌ ಬ್ರ್ಯಾಂಡ್‌ಗಳಲ್ಲೂ ಕಾಣಿಸಿಕೊಂಡಿದೆಯಂತೆ. ಮಾಡೆಲ್‌ ಡಾಗ್‌ ಎಂದೇ ಹೆಸರು ಮಾಡಿದೆಯಂತೆ. ಆ ಮಟ್ಟಿಗೆ ಫ್ಯಾಷೆನಬಲ್‌ ಶ್ವಾನ ಎಂದು ಗುರುತಿಸಿಕೊಂಡಿದೆ ಎನ್ನುತ್ತಾರೆ ಇಂಟರ್‌ನ್ಯಾಷನಲ್‌ ಫ್ಯಾಷನ್‌ ವಿಮರ್ಶಕರು.

5/5

ಸೋಷಿಯಲ್‌ ಮೀಡಿಯಾ ಡಾಗ್‌

ಫ್ಯಾಷನ್‌ ಮನುಷ್ಯರಿಗಷ್ಟೇ ಅಲ್ಲ! ಪ್ರಾಣಿಗಳು ಕೂಡ ಅಷ್ಟೇ ಆಕರ್ಷಕವಾಗಿ ಕಾಣಿಸಬಹುದು. ಆ ಮಟ್ಟಿಗೆ ಸೋಷಿಯಲ್‌ ಮೀಡಿಯಾದಲ್ಲಿ ಫಾಲೋವರ್ಸ್ ಹೊಂದಬಹುದು. ಅಲ್ಲದೇ ಶ್ವಾನಗಳ ಫ್ಯಾಷನ್‌ ಇನ್‌ಫ್ಲೂಯೆನ್ಸರ್‌ ಆಗಬಹುದು ಎಂಬುದನ್ನು ಈ ಡಾಗ್‌ ತೋರಿಸಿಕೊಟ್ಟಿದೆ ಎನ್ನುತ್ತಾರೆ ಫ್ಯಾಷನ್‌ ವಿಮರ್ಶಕರು.

ಶೀಲಾ ಸಿ ಶೆಟ್ಟಿ

View all posts by this author