Star Fashion 2025: ವಿಂಟರ್ ಜಾಕೆಟ್ ಸೀರೆಗೆ ಸೈ ಎಂದ ನಟಿ ಸ್ವರ ಭಾಸ್ಕರ್
Actress Swara Bhaskar: ಪ್ರತಿ ಬಾರಿ ವಿಂಟರ್ ಸೀಸನ್‌ನಲ್ಲಿ ಟ್ರೆಂಡಿಯಾಗುವ ಜಾಕೆಟ್ ಸೀರೆಯಲ್ಲಿ ಬಾಲಿವುಡ್ ನಟಿ ಸ್ವರ ಭಾಸ್ಕರ್ ಕಾಣಿಸಿಕೊಂಡಿದ್ದು, ಈ ಫ್ಯಾಷನ್ ಮರಳಿ ಟ್ರೆಂಡಿಯಾಗಿದೆ. ಹಾಗಾದಲ್ಲಿ, ಏನಿದು ಜಾಕೆಟ್ ಸೀರೆ? ಈ ಕುರಿತಂತೆ ಫ್ಯಾಷನಿಸ್ಟಾಗಳು ವಿವರಿಸಿದ್ದಾರೆ.
ನಟಿ ಸ್ವರ ಭಾಸ್ಕರ್ ಮೂಲಕ ಮತ್ತೊಮ್ಮೆ ಜಾಕೆಟ್ ಸೀರೆ ಫ್ಯಾಷನ್ ಮರಳಿದೆ. ಹೌದು, ಪ್ರತಿ ಬಾರಿಯೂ ವಿಂಟರ್ ಸೀಸನ್‌ನಲ್ಲಿ ಮರಳಿ, ಟ್ರೆಂಡಿಯಾಗುವ ಈ ಜಾಕೆಟ್ ಸೀರೆ ಫ್ಯಾಷನ್ ಸದ್ಯ ಮಾನಿನಿಯರನ್ನು ಸವಾರಿ ಮಾಡತೊಡಗಿದೆ.
ಸ್ವರ ಭಾಸ್ಕರ್ ಉಟ್ಟಿರುವ ವೆಲ್ವೆಟ್ ಜಾಕೆಟ್ ಸೀರೆ
ಇವೆಂಟ್‌ವೊಂದರಲ್ಲಿ, ಬಾಲಿವುಡ್ ನಟಿ ಸ್ವರ ಭಾಸ್ಕರ್ ಈ ಅಟೈರ್‌ನಲ್ಲಿ ಕಾಣಿಸಿಕೊಳ್ಳುವ ಮೂಲಕ ಮತ್ತೊಮ್ಮೆ ಟ್ರೆಂಡ್ ಸೆಟ್‌ಗೆ ನಾಂದಿ ಹಾಡಿದ್ದಾರೆ. ಎನ್‌ಎಂ ಡಿಸೈನ್ ಸ್ಟುಡಿಯೋನ ರೆಡ್ ವೆಲ್ವೆಟ್‌ನ ಬ್ಲೇಜರ್/ಜಾಕೆಟ್ ಅನ್ನು ಸ್ವರ ಜೆಎಡಿಇ ಬ್ರಾಂಡ್‌ನ ಬ್ರೋಕೆಡ್ ಸೀರೆಯೊಂದಿಗೆ ಮ್ಯಾಚ್ ಮಾಡಿದ್ದಾರೆ. ಜತೆಗೆ ಕಮರ್‌ಬಾಂದ್ ಧರಿಸಿ, ಸೀರೆಗೆ ಇಂಡೋ-ವೆಸ್ಟರ್ನ್ ಲುಕ್ ನೀಡಿದ್ದಾರೆ. ಇದು ಈ ಸೀಸನ್‌ನ ಸ್ಟಾರ್ ಸ್ಟೈಲಿಂಗ್ ಟ್ರೆಂಡ್‌ಗೆ ಸೇರಿದೆ ಎನ್ನುತ್ತಾರೆ ಫ್ಯಾಷನ್ ವಿಮರ್ಶಕರು.
ಏನಿದು ಜಾಕೆಟ್ ಸೀರೆ?
ಯಾವುದೇ ಸೀರೆಯೊಂದಿಗೆ ಬ್ಲೌಸ್ ಧರಿಸುವ ಬದಲು ಜಾಕೆಟ್ ಅಥವಾ ಬ್ಲೇಜರ್ ಇಲ್ಲವೇ ಕೋಟ್ ಶೈಲಿಯ ಬ್ಲೌಸ್ ಧರಿಸುವುದನ್ನು ಜಾಕೆಟ್ ಸೀರೆಯೆಂದು ಕರೆಯಲಾಗುತ್ತದೆ. ಬ್ಲೌಸ್‌ನ ಪರ್ಯಾಯವಾಗಿ ಧರಿಸುವ ಇವು ಸೀರೆಗೆ ವಿಂಟರ್ ಲುಕ್ ನೀಡುತ್ತವೆ. ಈ ಶೈಲಿಯ ಜಾಕೆಟ್ ಸೀರೆಗಳು ಪ್ರತಿ ಚಳಿಗಾಲದಲ್ಲಿ ಎಂಟ್ರಿ ನೀಡುತ್ತವೆ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.
ವೈವಿಧ್ಯಮಯ ಡಿಸೈನ್‌ನಲ್ಲಿ ಜಾಕೆಟ್ ಸೀರೆಗಳು
ಸ್ವರರಂತಹ ಲುಕ್ ಬಯಸುವವರು, ಸೀರೆಗಳಿಗೆ ಧರಿಸುವ ಜಾಕೆಟ್‌ಗಳು ಬ್ಲೌಸ್‌ನಂತೆಯೇ ಇರಬೇಕಾಗಿಲ್ಲ! ವೆಸ್ಟರ್ನ್‌ವೇರ್‌ನ ಯಾವುದೇ ಕ್ರಾಪ್ ಜಾಕೆಟ್ ಅಥವಾ ಕ್ರಾಪ್ ಬ್ಲೇಜರನ್ನುಇದಕ್ಕಾಗಿ ಬಳಸಬಹುದು ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.
ನೀವೂ ಟ್ರೈ ಮಾಡಬಹುದು
ನಿಮ್ಮ ಬಳಿ ಏನಾದರೂ ಕ್ರಾಪ್ ಜಾಕೆಟ್ ಅಥವಾ ಬ್ಲೇಜರ್ ಇದ್ದಲ್ಲಿ ಈ ರೀತಿಯ ಪ್ರಯೋಗಾತ್ಮಕ ಸೀರೆ ಡ್ರೇಪಿಂಗ್ ಮಾಡಿ, ಡಿಫರೆಂಟ್ ಲುಕ್ ನೀಡಬಹುದು ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.