ಬಿಗ್​ಬಾಸ್ ಬಿಹಾರ ರಿಸಲ್ಟ್​ ಫೋಟೋ ಗ್ಯಾಲರಿ ಫ್ಯಾಷನ್​ ವಿಶ್ವವಾಣಿ ಪ್ರಾಪರ್ಟಿ ವಿದೇಶ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Star Fashion 2025: ಧರೆಗಿಳಿದ ದೇವಕನ್ಯೆಯಂತೆ ಕಂಗೊಳಿಸಿದ ಆಶಿಕಾ ರಂಗನಾಥ್‌

Actress Ashika Ranganath: ಸ್ಯಾಂಡಲ್‌ವುಡ್‌ ನಟಿ ಆಶಿಕಾ ರಂಗನಾಥ್‌ ಧರೆಗಿಳಿದ ದೇವಕನ್ಯೆಯಂತೆ ಕಾಣಿಸಿಕೊಂಡಿದ್ದಾರೆ. ಅವರ ಈ ಲುಕ್‌ ಗತವೈಭವವನ್ನು ನೆನಪಿಸುತ್ತಿದೆ. ಅವರ ಇಮೇಜ್‌ ಬಗ್ಗೆ ಫ್ಯಾಷನ್‌ ವಿಮರ್ಶಕರು ಹೇಳುವುದೇನು? ಈ ಕುರಿತ ವರದಿ ಇಲ್ಲಿದೆ.

ನಟಿ ಆಶಿಕಾ ರಂಗನಾಥ್‌ (ಫೋಟೋಗ್ರಾಫರ್‌: ಸುಜನಾ ಜಿಪ್‌)
1/5

ನಟಿ ಆಶಿಕಾ ರಂಗನಾಥ್‌ ಧರೆಗಿಳಿದ ದೇವಕನ್ಯೆಯಂತೆ ಕಾಣಿಸಿಕೊಂಡಿದ್ದಾರೆ.

2/5

ದೇವಕನ್ಯೆ ಇಮೇಜ್‌ನಲ್ಲಿ ಆಶಿಕಾ

ಅರೆರೆ, ಇದ್ಯಾಕೆ? ಎಂದು ಯೋಚಿಸುತ್ತಿದ್ದೀರಾ? ಅವರ ಮುಂಬರುವ ಸಿನಿಮಾ ಪ್ರಮೋಷನ್‌ಗಾಗಿ ಆಶಿಕಾ ಈ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಅವರು ಧರಿಸಿರುವ ಡಿಸೈನರ್‌ವೇರ್‌ನ ಫೋಟೋಗಳು ಈಗಾಗಲೇ ಸೋಷಿಯಲ್‌ ಮೀಡಿಯಾದಲ್ಲಿ ಅಭಿಮಾನಿಗಳ ಮೆಚ್ಚುಗೆ ಗಳಿಸಿದ್ದು, ಜತೆಗೆ ರಾಯಲ್‌ ಇಮೇಜ್‌ ನೀಡುವ ಫ್ಯಾಷನ್‌ಗೆ ನಾಂದಿ ಹಾಡಿದೆ ಎನ್ನುತ್ತಾರೆ ಫ್ಯಾಷನ್‌ ವಿಮರ್ಶಕರಾದ ಮಿಂಚು.

3/5

ಆಶಿಕಾ ರಂಗನಾಥ್ ಫ್ಯಾಷನ್‌ ಲವ್‌

ಆಶಿಕಾ ರಂಗನಾಥ್‌ ತಮ್ಮದೇ ಆದ ನಾನಾ ಫ್ಯಾಷನ್‌ ಸ್ಟೇಟ್‌ಮೆಂಟ್‌ಗಳ ಮೂಲಕ ಅಭಿಮಾನಿಗಳನ್ನು ಈಗಾಗಲೇ ಗಳಿಸಿದ್ದಾರೆ. ತಮ್ಮ ಸಹೋದರಿಯೊಂದಿಗೆ ಸಾಕಷ್ಟು ಫ್ಯಾಷನ್‌ ಶೂಟ್‌ಗಳನ್ನು ಮಾಡುತ್ತಿರುತ್ತಾರೆ. ಅಲ್ಲದೇ ಗೆಳತಿಯರೊಂದಿಗೆ ಟ್ರಾವೆಲ್‌ ಮಾಡುತ್ತಾ ಸಾಕಷ್ಟು ಟ್ರಾವೆಲ್‌ ಫೋಟೋಗಳನ್ನು ಕೂಡ ತಮ್ಮ ಸೋಷಿಯಲ್‌ ಮೀಡಿಯಾದಲ್ಲಿ ಅಪ್‌ಲೋಡ್‌ ಮಾಡುತ್ತಿರುತ್ತಾರೆ. ಇದೀಗ ತಮ್ಮ ಸಿನಿಮಾ ಗತವೈಭವದ ಪ್ರಮೋಷನ್‌ ಸಮಯದಲ್ಲಿ ಧರಿಸಿದ್ದ, ದೇವಕನ್ಯೆ ಅಥವಾ ರಾಜಕುಮಾರಿ ಲುಕ್‌ನ ಫೋಟೋಗಳನ್ನು ಅಪ್‌ಲೋಡ್‌ ಮಾಡಿರುವುದು ಪ್ರಿನ್ಸೆಸ್‌ ಲುಕ್‌ ಬಯಸುವ ಫ್ಯಾಷನ್‌ ಪ್ರೇಮಿಗಳನ್ನು ಬರಸೆಳೆದಿದೆ.

4/5

ಡಿಸೈನರ್‌ವೇರ್‌ ಡಿಟೇಲ್ಸ್

ಅಂದಹಾಗೆ, ಮಹಿತಾ ಪ್ರಸಾದ್‌ ಡಿಸೈನ್‌ನ ಲೈಟ್‌ ಗ್ರೀನ್‌ನ ಫಿಶ್‌ ಕಟ್‌ ಸ್ಕರ್ಟ್‌ನಂತೆ ಹೋಲುವ ಪರ್ಲ್‌ ಡಿಸೈನರ್‌ ಬ್ಲೌಸ್‌ ಇರುವ ಪ್ರೀ ಡ್ರೇಪ್‌ ಸೀರೆಯಂತೆ ಕಾಣಿಸುವ ಲೆಹೆಂಗಾ ಶೈಲಿಯ ಡಿಸೈನರ್‌ವೇರ್‌ ಇದು. ಅಶಿಕಾಗೆ ಖುಷಿ ಜಗದೀಶ್‌ ಸ್ಟೈಲಿಂಗ್‌ ಮಾಡಿದ್ದಾರೆ.

5/5

ಆಶಿಕಾ ಸಖತ್‌ ಲುಕ್‌

ಆಶಿಕಾರ ದೇವಕನ್ಯೆಯ ಈ ಲುಕ್‌ಗೆ ಅವರ ಕಂಪ್ಲೀಟ್‌ ಮೇಕೋವರ್‌ ಕೂಡ ಸಾಥ್‌ ನೀಡಿದೆ. ಸೆಪ್ಟಮ್‌ ರಿಂಗ್‌ ಅವರನ್ನು ಮತ್ತಷ್ಟು ಮನಮೋಹಕವಾಗಿ ಬಿಂಬಿಸಿದೆ ಎನ್ನುತ್ತಾರೆ ಫ್ಯಾಷನ್‌ ವಿಮರ್ಶಕರು.

ಶೀಲಾ ಸಿ ಶೆಟ್ಟಿ

View all posts by this author