ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

IPL 2026ರ ಟೂರ್ನಿಯ ಟಾಪ್‌ 5 ಕ್ಯಾಚ್‌ಗಳನ್ನು ಪಡೆದ ಐವರು ಆಟಗಾರರು!

2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯು ಅಂತ್ಯವಾಗಿದೆ. ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ, ಫೈನಲ್‌ ಪಂದ್ಯದಲ್ಲಿ ಗುಜರಾತ್‌ ಟೈಟನ್ಸ್‌ ತಂಡವನ್ನು 5 ವಿಕೆಟ್‌ಳಿಂದ ಮಣಿಸುವ ಮೂಲಕ ಸತತ ಎರಡನೇ ಬಾರಿ ಟ್ರೋಫಿಯನ್ನು ಮುಡಿಗೇರಿಸಿಕೊಂಡಿದೆ. ಈ ಟೂರ್ನಿಯಲ್ಲಿ ಆರ್‌ಸಿಬಿ ಎದುರಿನ ಪಂದ್ಯದಲ್ಲಿ ಸ್ಟನಿಂಗ್‌ ಕ್ಯಾಚ್‌ ಪಡೆದ ಕೋಲ್ಕತಾ ನೈಟ್‌ ರೈಡರ್ಸ್‌ ತಂಡದ ಮನೀಷ್‌ ಪಾಂಡ್ಯ, ಕ್ಯಾಚ್‌ ಆಫ್‌ ದಿ ಸೀಸನ್‌ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ಅಂದ ಹಾಗೆ 2026ರ ಟೂರ್ನಿಯಲ್ಲಿ ಟಾಪ್‌ 5 ಕ್ಯಾಚ್‌ಗಳ ಬಗ್ಗೆ ಇಲ್ಲಿ ವಿವರಿಸಲಾಗಿದೆ.

2026ರ ಐಪಿಎಲ್‌ ಟೂರ್ನಿಯ ಟಾಪ್‌ 5 ಕ್ಯಾಚ್‌ಗಳು.
1/5

ಮನೀಷ್‌ ಪಾಂಡೆ

ಕೋಲ್ಕತಾ ನೈಟ್‌ ರೈಡರ್ಸ್‌ ತಂಡದ ಮನೀಷ್‌ ಪಾಂಡ್ಯ 2026ರ ಟೂರ್ನಿಯಲ್ಲಿ ಕ್ಯಾಚ್‌ ಆಫ್‌ ದಿ ಸೀಸನ್‌ ಪ್ರಶಸ್ತಿಯನ್ನು ಪಡೆದಿದ್ದಾರೆ. ಅವರು ಆರ್‌ಸಿಬಿ ವಿರುದ್ಧದ ಪಂದ್ಯದಲ್ಲಿ ಟಿಮ್‌ ಡೇವಿಡ್‌ ಅವರ ಸ್ಟನಿಂಗ್‌ ಕ್ಯಾಚ್‌ ಅನ್ನು ಪಾಯಿಂಟ್‌ನಲ್ಲಿ ಪಡೆದಿದ್ದರು.

2/5

ಫಿಲ್‌ ಸಾಲ್ಟ್‌

ಇನ್ನು ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ಫಿಲ್‌ ಸಾಲ್ಟ್‌ ಅವರು ಸನ್‌ರೈಸರ್ಸ್‌ ಹೈದರಾಬಾದ್‌ ಎದುರಿನ ಪಂದ್ಯದಲ್ಲಿ ಬೌಂಡರಿ ಲೈನ್‌ನಲ್ಲಿ ಅದ್ಭುತ ಕ್ಯಾಚ್‌ ಪಡೆದಿದ್ದರು. ಇದು ಟೂರ್ನಿಯಲ್ಲಿ ಎರಡನೇ ಶ್ರೇಷ್ಠ ಕ್ಯಾಚ್‌ ಆಗಿದೆ.

3/5

ಧ್ರುವ್‌ ಜುರೆಲ್‌

ರಾಜಸ್ಥಾನ್‌ ರಾಯಲ್ಸ್‌ ತಂಡದ ಧ್ರುವ್‌ ಜುರೆಲ್‌ ಅವರು ಲಖನೌ ಸೂಪರ್‌ ಜಯಂಟ್ಸ್‌ ವಿರುದ್ಧದ ಪಂದ್ಯದಲ್ಲಿ 0-03 ಸೆಕೆಂಡ್‌ನಲ್ಲಿ ಪ್ರತಿಕ್ರಿಯಿಸಿ ಸ್ಟಂಪ್‌ಗಳ ಹಿಂದೆ ಕ್ಯಾಚ್‌ ಪಡೆಯುವಲ್ಲಿ ಯಶಸ್ವಿಯಾಗಿದ್ದರು.

4/5

ಶುಭಮನ್‌ ಗಿಲ್‌

ಗುಜರಾತ್‌ ಟೈಟನ್ಸ್‌ ತಂಡದ ನಾಯಕ ಶುಭಮನ್‌ ಗಿಲ್‌ ಅವರು ಮಿಡ್‌ನಿಂದ ಓಡಿ ಬಂದು ಜಿಂಕೆಯಂತೆ ಡೈವಿಂಗ್‌ ಕ್ಯಾಚ್‌ ಪಡೆಯುವಲ್ಲಿ ಸಫಲರಾದರು. ಆ ಮೂಲಕ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ಶಿವಂ ದುಬೇ ಅವರನ್ನು ಔಟ್‌ ಮಾಡಿದ್ದರು.

5/5

ಅನುಕುಲ್‌ ರಾಯ್‌

ಕೋಲ್ಕತಾ ನೈಟ್‌ ರೈಡರ್ಸ್‌ ತಂಡದ ಅನುಕುಲ್‌ ರಾಯ್‌ ಅವರು ಮುಂಬೈ ಇಂಡಿಯನ್ಸ್‌ ತಂಡದ ಮಾಜಿ ನಾಯಕ ರೋಹಿತ್‌ ಶರ್ಮಾ ಅವರ ಸ್ಟನಿಂಗ್‌ ಕ್ಯಾಚ್‌ ಪಡೆಯುವಲ್ಲಿ ಸಫಲರಾಗಿದ್ದರು. ಅವರು 18.6 ಕಿಮೀ ವೇಗದಲ್ಲಿ ಓಡಿ ಅನುಕುಲ್‌ ರಾಯ್‌ ಅವರ ಕ್ಯಾಚ್‌ ಅನ್ನು ಪಡೆಯುವಲ್ಲಿ ಸಫಲರಾಗಿದ್ದರು.