ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Vaishnavi Gowda: ಮನಾಲಿಯಲ್ಲಿ ವೈಷ್ಣವಿ ಗೌಡ ಜಾಲಿ ಜಾಲಿ; ಕಲರ್‌ಫುಲ್‌ ಫೋಟೊಗಳಿಗೆ ಫ್ಯಾನ್ಸ್‌ ಫಿದಾ

ಅನುಕೂಲ್ ಮಿಶ್ರಾ ಜತೆ ಇತ್ತೀಚೆಗಷ್ಟೇ ಹಸೆಮಣೆಗೇರಿದ ಕಿರುತೆರೆ ನಟಿ ವೈಷ್ಣವಿ ಗೌಡ ಹನಿಮೂನ್‌ ಮೂಡ್‌ನಲ್ಲಿದ್ದಾರೆ. ಇದೀಗ ನವದಂಪತಿ ಉತ್ತರ ಭಾರತ ಪ್ರವಾಸ ಕೈಗೊಂಡಿದ್ದಾರೆ. ʼಅಗ್ನಿ ಸಾಕ್ಷಿʼ, ʼಸೀತಾ ರಾಮʼ ಧಾರಾವಾಹಿ, ಬಿಗ್‌ ಬಾಸ್‌ ರಿಯಾಲಿಟಿ ಶೋ ಮೂಲಕ ಗಮನ ಸೆಳೆದ ವೈಷ್ಣವಿ ಗೌಡ ಜೂ. 4ರಂದು ಛತ್ತೀಸ್‌ಗಢ ಮೂಲದ ಅನುಕೂಲ್ ಮಿಶ್ರಾ ಜತೆಗೆ ಅದ್ಧೂರಿಯಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.

ವೈಷ್ಣವಿ ಗೌಡ (ಇನ್‌ಸ್ಟಾಗ್ರಾಂ ಚಿತ್ರ).
1/5

ಇತ್ತೀಚೆಗಷ್ಟೇ ರಿಷಿಕೇಶ್‌ಗೆ ಭೇಟಿ ಕೊಟ್ಟು ಅತೀ ಎತ್ತರದ ಪ್ರದೇಶದಿಂದ ವೈಷ್ಣವಿ ಬಂಗೀ ಜಂಪ್‌ ಮಾಡಿದ್ದರು. ಇದೀಗ ವೈಷ್ಣವಿ ದಂಪತಿ ಮನಾಲಿಗೆ ತೆರಳಿದ್ದಾರೆ. ವೈಷ್ಣವಿ ಇಲ್ಲಿನ ಸಾಂಪ್ರದಾಯಿಕ ಉಡುಗೆ ತೊಟ್ಟು ಪೋಸ್‌ ನೀಡಿದ್ದಾರೆ.

2/5

ಮನಾಲಿಯಲ್ಲಿ ತಾವು ಕ್ಲಿಕ್ಕಿಸಿಕೊಂಡ ಫೋಟೊಗಳನ್ನು ನಟಿ ವೈಷ್ಣವಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದು ಅವರ ಅಭಿಮಾನಿಗಳ ಗಮನ ಸೆಳೆದಿದ್ದು, ಹಲವರು ಕಾಮೆಂಟ್‌ ಮೂಲಕ ಮೆಚ್ಚುಗೆ ಸೂಚಿಸಿದ್ದಾರೆ.

3/5

ಉತ್ತರಾಖಂಡ ಋಷಿಕೇಶ್ ಬಳಿ ಇರುವ ಶಿವಪುರಿಯಲ್ಲಿ ಬಂಗೀ ಜಂಪ್ ಮಾಡಿರುವ ವಿಡಿಯೊವನ್ನು ವೈಷ್ಣವಿ ಇತ್ತೀಚೆಗೆ ಹಂಚಿಕೊಂಡಿದ್ದರು. ಇದು ವೈರಲ್‌ ಆಗಿತ್ತು. ಅವರು ಪತಿ ಅನುಕೂಲ್​ ಮಿಶ್ರಾ ಜತೆ ಬರೋಬ್ಬರಿ 117 ಅಡಿ ಎತ್ತರದಿಂದ ಕೆಳಗೆ ಜಿಗಿದಿದ್ದಾರೆ.

4/5

ಇದು ಇಡೀ ಭಾರತದಲ್ಲೇ ಅತೀ ಎತ್ತರದ ಬಂಗೀ ಜಂಪ್ ಎನಿಸಿಕೊಂಡಿದೆ. ಈ ವಿಡಿಯೊ ಶೇರ್ ಮಾಡಿಕೊಂಡ ವೈಷ್ಣವಿ, ʼʼಇದು ನಂಬಿಕೆಯ ಜಿಗಿತ...117 ಮೀಟರ್‌ ಎತ್ತರದಿಂದ ಜಿಗಿದಿದ್ದೇವೆ. ಪ್ರತಿ ಸೆಕೆಂಡ್‌ ಕೂಡ ಯೋಗ್ಯವಾದದ್ದು. ಇದನ್ನ ನನ್ನಿಂದ ಮಾಡಿಸಿದ್ದು ನನ್ನ ಪತಿʼʼ ಎಂದು ಬರೆದುಕೊಂಡಿದ್ದರು.

5/5

ಸೀತಾ ಪಾತ್ರದಲ್ಲಿ ವೈಷ್ಣವಿ ಕಾಣಿಸಿಕೊಂಡಿಸಿಕೊಂಡಿದ್ದ, ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ʼಸೀತಾ ರಾಮʼ ಧಾರಾವಾಹಿ ಇತ್ತೀಚೆಗಷ್ಟೇ ಮುಕ್ತಾಯವಾಗಿದೆ. ಸದ್ಯ ಅವರು ನಟನೆಗೆ ಬ್ರೇಕ್‌ ಪಡೆದು ರಜೆಯನ್ನು ಎಂಜಾಯ್‌ ಮಾಡುತ್ತಿದ್ದಾರೆ. ಶೀಘ್ರದಲ್ಲೇ ಅವರು ಬಣ್ಣದ ಲೋಕಕ್ಕೆ ಮರಳಲಿ ಎನ್ನುವುದು ಅವರ ಅಭಿಮಾನಿಗಳ ಆಗ್ರಹ.

Ramesh Ballamoole

View all posts by this author