ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vaishnavi Gowda Marriage: ʼಅಗ್ನಿಸಾಕ್ಷಿʼಯಾಗಿ ಅನುಕೂಲ್‌ ಮಿಶ್ರಾ ಕೈ ಹಿಡಿದ ವೈಷ್ಣವಿ ಗೌಡ; ಇಲ್ಲಿದೆ ಮದುವೆ ಫೋಟೊ

ಏ. 14ರಂದು ಅನುಕೂಲ್‌ ಮಿಶ್ರಾ ಜತೆ ಉಂಗುರ ಬದಲಾಯಿಸಿಕೊಂಡಿದ್ದ ಜನಪ್ರಿಯ ನಟಿ ವೈಷ್ಣವಿ ಗೌಡ ಇದೀಗ ಅದ್ಧೂರಿಯಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ʼಅಗ್ನಿಸಾಕ್ಷಿ, ʼಸೀತಾ ರಾಮʼ ಧಾರಾವಾಹಿಗಳ ಮೂಲಕ ಕನ್ನಡ ಕಿರುತೆರೆ ವೀಕ್ಷಕರ ಗಮನ ಸೆಳೆದ ವೈಷ್ಣವಿ ಗೌಡ ಇದೀಗ ಹಸೆಮಣೆ ಏರಿದ್ದಾರೆ. ಜೂ. 4ರಂದು ಬೆಂಗಳೂರಿನ ಖಾಸಗಿ ರೆಸಾರ್ಟ್‌ನಲ್ಲಿ ವೈಷ್ಣವಿ ಗೌಡ - ಅನುಕೂಲ್‌ ಮಿಶ್ರಾ ವಿವಾಹ ಮಹೋತ್ಸವ ಗ್ರ್ಯಾಂಡ್ ಆಗಿ ನೆರವೇರಿದ್ದು, ಹಲವು ಸೆಲೆಬ್ರಿಟಿಗಳು ಆಗಮಿಸಿ ನವದಂಪತಿಗೆ ಶುಭ ಹಾರೈಸಿದರು.

1/5

ಬೆಂಗಳೂರಿನ ಖಾಸಗಿ ರೆಸಾರ್ಟ್‌ನಲ್ಲಿ ನಡೆದ ನಟಿ ವೈಷ್ಣವಿ ಗೌಡ - ಅನುಕೂಲ್ ಮಿಶ್ರಾ ಅವರ ವಿವಾಹ ಮಹೋತ್ಸವಕ್ಕೆ ಅಮೂಲ್ಯ, ಮೇಘನಾ, ನಿವೇದಿತಾ ಗೌಡ, ವಿಜಯ್ ಸೂರ್ಯ, ಐಶ್ವರ್ಯಾ ಸಾಲಿಮಠ, ʼಸೀತಾ ರಾಮʼ ಧಾರಾವಾಹಿಯ ಇಡೀ ತಂಡ ಸೇರಿದಂತೆ ಹಲವು ಕಿರುತೆರೆ-ಹಿರಿತೆರೆ ಕಲಾವಿದರು ಆಗಮಿಸಿ ಶುಭ ಹಾರೈಸಿದರು. ವೈಷ್ಣವಿ ಕೆಂಪು ಬಣ್ಣದ ಮದುವೆ ದಿರಿಸಿನಲ್ಲಿ ಗಮನ ಸೆಳೆದರು.

2/5

ಭಾರತೀಯ ವಾಯುಸೇನೆಯಲ್ಲಿ ಇರುವ ಅನುಕೂಲ್ ಮಿಶ್ರಾ ಹಾಗೂ ವೈಷ್ಣವಿ ಅವರದ್ದು ಲವ್ ಕಮ್ ಎರೇಂಜ್ ಮ್ಯಾರೇಜ್. ಮ್ಯಾಟ್ರಿಮೋನಿ ಮೂಲಕ ಜಾತಕ ಶೇರ್ ಆದ ಬಳಿಕ ಪೋಷಕರು ಈ ಮದುವೆ ನಿಶ್ಚಯಿಸಿದರಂತೆ. ನಾವಿಬ್ಬರೂ ಒಬ್ಬರಿಗೊಬ್ಬರು ಅರ್ಥ ಮಾಡಿಕೊಳ್ಳಲು 1 ವರ್ಷ ಸಮಯ ತೆಗೆದುಕೊಂಡಿದ್ದೆವು ಎಂದು ಇತ್ತೀಚೆಗೆ ವೈಷ್ಣವಿ ಹೇಳಿದ್ದರು.

3/5

ವಿವಾಹ ಸಮಾರಂಭಕ್ಕೂ ಮುನ್ನ ವಿಷ್ಣವಿ ತಮ್ಮ ಗೆಳತಿಯರೊಂದಿಗೆ ಭರ್ಜರಿಯಾಗಿ ಡ್ಯಾನ್ಸ್‌ ಮಾಡಿದ್ದರು. ಈ ವೇಳೆ ಅವರಿಗೆ ನಟಿ ಅಮೂಲ್ಯ ಕೂಡ ಸಾಥ್‌ ನೀಡಿದ್ದರು. ಇವರ ಡ್ಯಾನ್ಸ್‌ ವಿಡಿಯೊ ಸದ್ಯ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

4/5

ಅನುಕೂಲ್‌ ಮಿಶ್ರಾ ಛತ್ತೀಸ್‌ಗಢ ಮೂಲದವರು. ಹೀಗಾಗಿ ವಿವಾಹ ಸಮಾರಂಭವನ್ನು ಉತ್ತರ ಭಾರತೀಯ ಶೈಲಿಯಲ್ಲಿಯೂ ನಡೆಸಲಾಗಿದೆ. ಮದುವೆ ಬಳಿಕವೂ ನಟನೆ ಮುಂದುವರಿಸುವುದಾಗಿ ವೈಷ್ಣವಿ ತಿಳಿಸಿದ್ದಾರೆ.

5/5

ಕಿರುತೆರೆಯಲ್ಲಿ ಸ್ಟಾರ್‌ ನಟಿಯಾಗಿ ಗುರುತಿಸಿಕೊಂಡಿರುವ ವೈಷ್ಣವಿ ಕೆಲವು ಕನ್ನಡ ಚಿತ್ರಗಳಲ್ಲಿಯೂ ಅಭಿನಯಿಸಿದ್ದಾರೆ. ‘ಗಿರ್‌ಗಿಟ್ಲೆ’, ‘ಬಹುಕೃತ ವೇಷಂ’ ಸಿನಿಮಾಗಳಲ್ಲೂ ಮಿಂಚಿರುವ ಅವರು ಕನ್ನಡ ಬಿಗ್‌ ಬಾಸ್ ರಿಯಾಲಿಟಿ ಶೋದಲ್ಲಿಯೂ ಕಾಣಿಸಿಕೊಂಡಿದ್ದರು.