ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Safest Countries: 3ನೇ ವಿಶ್ವ ಮಹಾಯುದ್ಧವಾದರೂ, ಅಣು ಬಾಂಬ್‌ ಬಿದ್ದರೂ ಈ ದೇಶಗಳಿಗೆ ಏನೂ ಆಗಲ್ಲ; ಜಗತ್ತಿನ ಸುರಕ್ಷಿತ ರಾಷ್ಟ್ರಗಳ ಪೈಕಿ ಭಾರತವೂ ಇದ್ಯಾ?

ಅಮೆರಿಕ, ಇಸ್ರೇಲ್‌ ಸೇರಿ ಇರಾನ್‌ ಮೇಲೆ ದಾಳಿ ನಡೆಸಿವ ಮೂಲಕ ಪಶ್ಚಿಮ ಏಷ್ಯಾದಲ್ಲಿ ಸಂಘರ್ಷ ಭುಗಿಲೆದ್ದಿದೆ. ಇದೀಗ ಯುದ್ಧ ಕೊಲ್ಲಿ ರಾಷ್ಟ್ರಗಳಿಗೂ ಹರಡಿದ್ದು, ವಾರ ಕಳೆದರೂ ಪರಿಸ್ಥಿತಿ ತಿಳಿಯಾಗಿಲ್ಲ. ದಿನ ಕಳೆದಂತೆ ಒಂದೊಂದೇ ದೇಶಗಳು ಯುದ್ಧದ ಭಾಗವಾಗುತ್ತಿವೆ. ಜಗತ್ತಿನ ಬಲಿಷ್ಠ ದೇಶಗಳು ಮಧ್ಯ ಪ್ರವೇಸಿಸಿದರೆ 3ನೇ ವಿಶ್ವ ಮಹಾಯು‍ದ್ಧ ನಡೆಯುವ ಸಾಧ್ಯತೆ ಇದೆ ಎಂದು ತಜ್ಞರು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಒಂದುವೇಳೆ 3ನೇ ವಿಶ್ವ ಮಹಾಯು‍ದ್ಧ ನಡೆದರೆ ಬಹುತೇಕ ಜಗತ್ತು ನಿರ್ನಾಮವಾಗಲಿದೆ. ಅದಾಗ್ಯೂ ಎಷ್ಟೇ ದೊಡ್ಡ ಪ್ರಮಾಣದ ಯುದ್ಧ ನಡೆದರೂ, ಅಣು ಬಾಂಬ್‌ ಬಳಕೆಯಾದರೂ ಕಿಂಚಿತ್ತೂ ಹಾನಿಗೊಳಗಾಗದ 10 ದೇಶಗಳಿವೆ (Safest Countries). ಇನ್‌ಸ್ಟಿಟ್ಯೂಟ್‌ ಫಾರ್‌ ಎಕಾನಾಮಿಕ್ಸ್‌ ಆ್ಯಂಡ್‌ ಪೀಸ್‌ (IEP) ಅಧ್ಯಯನ ನಡೆಸಿ ಈ ದೇಶಗಳಿಗೆ ಅಂಕ ನೀಡಿದೆ. ಆ ಟಾಪ್‌ 10 ಸುರಕ್ಷಿತ ದೇಶಗಳು ಯಾವುವು ಎನ್ನುವ ವಿವರ ಇಲ್ಲಿದೆ.

ನ್ಯೂಜಿಲೆಂಡ್ (ಸಂಗ್ರಹ ಚಿತ್ರ)
1/9

ಐಸ್‌ಲ್ಯಾಂಡ್‌

ಗ್ಲೋಬಲ್‌ ಪೀಸ್‌ ಇಂಡೆಕ್ಸ್‌ ಪ್ರಕಾರ ಐಸ್‌ಲ್ಯಾಂಡ್‌ ಜಗತ್ತಿನ ಅತ್ಯಂತ ಸುರಕ್ಷಿತ ದೇಶ ಎನಿಸಿಕೊಂಡಿದೆ. ಇದಕ್ಕೆ 1.095 ಸ್ಕೋರ್‌ ಸಿಕ್ಕಿದೆ.

2/9

ಐರ್ಲೆಂಡ್‌

ಈ ಪಟ್ಟಿಯಲ್ಲಿರುವ 2ನೇ ದೇಶ ಐರ್ಲೆಂಡ್‌. ಇದಕ್ಕೆ 1.26 ಅಂಕ ಲಭಿಸಿದೆ.

3/9

ನ್ಯೂಜಿಲೆಂಡ್‌

1.282 ಅಂಕಗಳೊಂದಿಗೆ ನ್ಯೂಜಿಲೆಂಡ್‌ 3ನೇ ಸ್ಥಾನದಲ್ಲಿದೆ.

4/9

ಆಸ್ಟ್ರಿಯಾ, ಸ್ವಿಟ್ಜರ್‌ಲ್ಯಾಂಡ್‌

ಈ ಪಟ್ಟಿಯಲ್ಲಿ 4 ಮತ್ತು 5ನೇ ಸ್ಥಾನದಲ್ಲಿರುವುದು ಆಸ್ಟ್ರಿಯಾ ಮತ್ತು ಸ್ವಿಟ್ಜರ್‌ಲ್ಯಾಂಡ್‌. ಸಿಕ್ಕ ಅಂಕ 1.294.

5/9

ಸಿಂಗಾಪುರ

1.357 ಅಂಕದ ಮೂಲಕ ಸಿಂಗಾಪುರ 6ನೇ ಸ್ಥಾನದಲ್ಲಿದೆ.

6/9

ಪೋರ್ಚುಗಲ್

ಈ ದೇಶಕ್ಕೆ 1.371 ಅಂಕ ಸಿಕ್ಕಿದ್ದು, ಆ ಮೂಲಕ 7ನೇ ರ‍್ಯಾಂಕ್‌ನಲ್ಲಿದೆ.

7/9

ಡೆನ್ಮಾರ್ಕ್‌

ಜಗತ್ತಿನ 8ನೇ ಸುರಕ್ಷಿತ ದೇಶ ಎನ್ನುವ ಹೆಗ್ಗಳಿಕೆ ಡೆನ್ಮಾರ್ಕ್‌ ಪಾತ್ರವಾಗಿದೆ. ಇದಕ್ಕೆ ದೊರೆತ ಅಂಕ 1.393.

8/9

ಸ್ಲೋವೇನಿಯಾ

1.409 ಅಂಕ ಗಳಿಸುವ ಮೂಲಕ ಸ್ಲೋವೇನಿಯಾ ಈ ಪಟ್ಟಿಯಲ್ಲಿ 9ನೇ ಸ್ಥಾನದಲ್ಲಿದೆ.

9/9

ಫಿನ್‌ಲ್ಯಾಂಡ್‌

ಫಿನ್‌ಲ್ಯಾಂಡ್‌ಗೆ ಸಿಕ್ಕ ಅಂಕ 1.42. ಆ ಮೂಲಕ 10ನೇ ಸ್ಥಾನದಲ್ಲಿದೆ. ಮುಖ್ಯ ಭೂಭಾಗದಿಂದ ದೂರದಲ್ಲಿರುವುದು, ಭೌಗೋಳಿಕ ವೈಶಿಷ್ಟ್ಯ, ರಾಜಕೀಯವಾಗಿ ತಟಸ್ಥ ನೀತಿ ಹೊಂದಿರುವುದು, ಕಡಿಮೆ ಜನಸಂಖ್ಯೆ ಇತ್ಯಾದಿ ಈ ಎಲ್ಲ ದೇಶಗಳನ್ನು ಯುದ್ಧ ಅಪಾಯದಿಂದ ದೂರ ಮಾಡುತ್ತದೆ.

Ramesh Ballamoole

View all posts by this author