ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Winter Fashion 2025: 2025ರ ವಿಂಟರ್ ಫ್ಯಾಷನ್‌ಗೆ ಲಗ್ಗೆ ಇಟ್ಟ ಫ್ಯಾಷನ್‌ವೇರ್‌ಗಳಿವು!

Fashion News: ಈ ಸಾಲಿನ ಚಳಿಗಾಲ ಆರಂಭವಾಗಿದೆ. ಇದಕ್ಕೆ ಪೂರಕ ಎಂಬಂತೆ, ದೇಹವನ್ನು ಬೆಚ್ಚಗಿಡುವ ನಾನಾ ಬಗೆಯ ಯೂನಿಸೆಕ್ಸ್ ಫ್ಯಾಷವ್‌ವೇರ್ಸ್ ಹಾಗೂ ವೈಬ್ರೆಂಟ್ ಲೇಯರ್‌ವೇರ್‌ಗಳು ಫ್ಯಾಷನ್‌ಲೋಕಕ್ಕೆ ಕಾಲಿಟ್ಟಿವೆ. ಈ ಎಲ್ಲದರ ಕುರಿತಂತೆ ಇಲ್ಲಿದೆ ಸಂಕ್ಷಿಪ್ತ ವರದಿ.

ಚಿತ್ರಕೃಪೆ: ಪಿಕ್ಸೆಲ್
1/5

ಈ ವರ್ಷದ ವಿಂಟರ್ ಫ್ಯಾಷನ್‌ನಲ್ಲಿ ಯೂನಿಸೆಕ್ಸ್ ಫ್ಯಾಷನ್‌ವೇರ್ಸ್ ಹಾಗೂ ವೈಬ್ರೆಂಟ್ ಲೇಯರ್ ಲುಕ್ ನೀಡುವ ಮಿಕ್ಸ್ ಮ್ಯಾಚ್ ಔಟ್‌ಫಿಟ್‌ಗಳು ಲಗ್ಗೆ ಇಟ್ಟಿವೆ.

2/5

ಮಿಕ್ಸ್ - ಮ್ಯಾಚ್ ಫ್ಯಾಷನ್

ಹೌದು, ಈ ಚುಮು ಚುಮು ಚಳಿಯಲ್ಲಿ ಬೆಚ್ಚನೆಯ ಉಡುಪುಗಳು ಕೊಂಚ ಸ್ಟೈಲಾಗಿ ಧರಿಸುವ ಕಾನ್ಸೆಪ್ಟ್ನಲ್ಲಿ ಹಾಗೂ ಮಿಕ್ಸ್ ಅಂಡ್ ಮ್ಯಾಚ್ ಲೇಯರ್ ಕಾನ್ಸೆಪ್ಟ್‌ನಲ್ಲಿ ಲೆಕ್ಕವಿಲ್ಲದಷ್ಟು ಬಗೆಯ ಫ್ಯಾಷನ್‌ವೇರ್‌ಗಳು ಆಗಮಿಸಿವೆ.

3/5

ಹೊಸರೂಪದಲ್ಲಿ ವಿಂಟರ್ ಫ್ಯಾಷನ್‌ವೇರ್ಸ್

ಕಾಲರ್ಲೆಸ್ ಬ್ಲೇಜರ್ಸ್, ಒವರ್ಸೈಜ್ ಕೋಟ್ಸ್, ಯೂನಿಸೆಕ್ಸ್ ಟ್ರೆಂಚ್ ಕೋಟ್ಸ್ , ರಿವರ್ಸಿಬಲ್ ಜಾಕೆಟ್ಸ್, ಟರ್ಟಲ್ ನೆಕ್ ಕೋಟ್ ಡ್ರೆಸ್, ಬಣ್ಣಬಣ್ಣದ ಪುಲ್ಒವರ್ಸ್, ವಿಂಟರ್ ಶರ್ಟ್ಸ್, ವೂಲ್ ಸ್ವೆಟರ್ಸ್, ಲೆದರ್ ವಿಂಟೇಜ್ ಜಾಕೆಟ್ಸ್, ಪ್ರಿಂಟೆಡ್ ಕೋ ಆರ್ಡ್ ಸೂಟ್ಸ್, ಕಲರ್‌ಫುಲ್ ಹೂಡೀಸ್, ವೈಬ್ರೆಂಟ್ ಕ್ಯಾಶುವಲ್ಸ್ ಸೇರಿದಂತೆ ನಾನಾ ಬಗೆಯವು ಹೊಸ ಕಲರ್‌ ಕೋಡ್‌ನಲ್ಲಿ ಬಿಡುಗಡೆಗೊಂಡಿವೆ.

4/5

ವಿಂಟರ್ ಕಲರ್‌ಕೋಡ್

ಇನ್ನು ಈ ಬಾರಿಯ ವಿಂಟರ್ ಫ್ಯಾಷನ್‌ನಲ್ಲಿ ಟೊಮ್ಯಾಟೋ ಕ್ರೀಮ್, ಜ್ಯುವೆಲ್ ರುಬಿ ಕಲರ್, ಮೆಟಾಲಿಕ್ ಪ್ರಿಂಟ್ಸ್ , ಮ್ಯೂಟೆಡ್ ಬ್ರೌನ್ಸ್, ಟೆರ್ರಾಕೋಟಾ ಶೇಡ್, ಸ್ಟಾರ್ಲೆಟ್ ಬ್ಲ್ಯೂ, ಮಿಸ್ಟೆಡ್ ಯೆಲ್ಲೋ, ಆಲಿವ್ ಗ್ರೀನ್, ಲೆಮೆನ್ ಯೆಲ್ಲೋ, ಮ್ಯಾಗ್ನೆಟಾ ಸೇರಿದಂತೆ ನಾನಾ ಇಂಗ್ಲೀಷ್ ಕಲರ್‌ಗಳು ಸೀಸನ್ ಕಲರ್‌ಗಳಾಗಿ ಡಿಕ್ಲೇರ್ ಆಗಿವೆ. ಈಗಾಗಲೇ ಡಿಸೈನರ್‌ವೇರ್‌ಗಳ ಮೂಲಕ ಮಾರುಕಟ್ಟೆಗೆ ಲಗ್ಗೆ ಹಾಕಿವೆ ಎನ್ನುತ್ತಾರೆ ಫ್ಯಾಷನಿಸ್ಟಾ ರೀತು.

5/5

ಆಕರ್ಷಕ ಲೇಯರ್ ಲುಕ್‌ಗೆ ಸೈ ಎನ್ನಿ

ಫ್ಯಾಷನ್ ವಿನ್ಯಾಸಕಿ ಜೀನತ್ ಹೇಳುವಂತೆ, ಈ ಸೀಸನ್‌ನಲ್ಲಿ ಮಿನಿ, ಮಿಡಿ, ಬರ್ಮಾಡಾಸ್ ವಾರ್ಡ್ರೋಬ್‌ ಒಳಗೆ ಸೇರಲಿವೆಯಂತೆ. ಬೆಚ್ಚಗಿಡುವ ನಾನಾ ಬಗೆಯ ಟೋರ್ನ್, ಪ್ಯಾಚ್, ಎಂಬ್ರಾಯ್ಡರಿ ಕಟೌಟ್ ಡೆನೀಮ್ ಜೀನ್ಸ್, ಜೆಗ್ಗಿಂಗ್ಸ್, ಟ್ರೆಂಗ್ಗಿಂಗ್ಸ್, ಸ್ಕಿನ್ ಟೈಟ್ ಪ್ಯಾಂಟ್ಸ್‌ಗಳು ಬಂದಿವೆಯಂತೆ. ಕಲರ್‌ಫುಲ್ ಜಾಕೆಟ್‌ಗಳು, ಫುಲ್ ಆರ್ಮ್ ಡ್ರೆಸ್‌ಗಳು ಹೊಸ ರೂಪದಲ್ಲಿ ಸವಾರಿ ಮಾಡಲಿವೆಯಂತೆ.

ಇನ್ನು, ಎಥ್ನಿಕ್ ಫ್ಯಾಬ್ರಿಕ್‌ಗೆ ಮತ್ತೊಮ್ಮೆ ವೆಲ್ವೆಟ್ ಫ್ಯಾಬ್ರಿಕ್‌ನ ಸೆಲ್ವಾರ್, ಚೂಡಿದಾರ್, ಕುರ್ತಾ, ಶೆರ್ವಾನಿ, ಲೆಹೆಂಗಾ, ಗಾಗ್ರಾ ಕಮ್‌ ಬ್ಯಾಕ್‌ ಆಗಲಿವೆಯಂತೆ.

ಶೀಲಾ ಸಿ ಶೆಟ್ಟಿ

View all posts by this author