ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Winter Fashion 2025: ಶ್ವಾನಕ್ಕೂ ಬಂತು ಬಗೆಬಗೆಯ ವಿಂಟರ್‌ವೇರ್ಸ್

Fashion Tips: ಈ ವಿಂಟರ್‌ ಸೀಸನ್‌ಗೆ ಬೆಚ್ಚಗಿಡುವಂತಹ ನಾನಾ ಬಗೆಯ ಕ್ಯೂಟ್‌ ವಿಂಟರ್‌ವೇರ್ಸ್‌ ಹಾಗೂ ಆಕ್ಸೆಸರೀಸ್‌ ಆಗಮಿಸಿವೆ. ಸಾಕು ಪ್ರಾಣಿಗಳ ಪ್ರಾಡಕ್ಟ್‌ಗಳ ಶಾಪ್‌ಗಳಲ್ಲಿ ಮಾತ್ರವಲ್ಲ, ಆನ್‌ಲೈನ್‌ನಲ್ಲೂ ಸಾಕಷ್ಟು ಇವು ಬೇಡಿಕೆ ಹೆಚ್ಚಿಸಿಕೊಂಡಿವೆ. ಈ ಕುರಿತಂತೆ ಇಲ್ಲಿದೆ ವರದಿ.

ಚಿತ್ರಕೃಪೆ: ಪಿಕ್ಸೆಲ್‌
1/5

ಈ ವಿಂಟರ್‌ ಸೀಸನ್‌ಗೆ ಬೆಚ್ಚಗಿಡುವಂತಹ ನಾನಾ ಬಗೆಯ ಕ್ಯೂಟ್‌ ವಿಂಟರ್‌ವೇರ್ಸ್‌ ಹಾಗೂ ಆಕ್ಸೆಸರೀಸ್‌ ಆಗಮಿಸಿವೆ.

2/5

ವಿಂಟರ್‌ ಸೀಸನ್‌ನಲ್ಲಿ ಮುದ್ದು ಶ್ವಾನಗಳನ್ನು ಬೆಚ್ಚಗಿಡುವಂತಹ ನಾನಾ ಬಗೆಯ ಕ್ಯೂಟ್‌ ವಿಂಟರ್‌ವೇರ್ಸ್‌ ಹಾಗೂ ಡೆಕೋರೇಟಿವ್‌ ಆಕ್ಸೆಸರೀಸ್‌ ಆಗಮಿಸಿವೆ. ಇವು ಕೇವಲ ಸಾಕು ಪ್ರಾಣಿಗಳ ಪ್ರಾಡಕ್ಟ್‌ಗಳ ಶಾಪ್‌ಗಳಲ್ಲಿ ಮಾತ್ರವಲ್ಲ, ಆನ್‌ಲೈನ್‌ನಲ್ಲೂ ದೊರೆಯುತ್ತಿದ್ದು, ಈಗಾಗಲೇ ಸಾಕಷ್ಟು ಬೇಡಿಕೆ ಹೆಚ್ಚಿಸಿಕೊಂಡಿವೆ.

3/5

ಮುದ್ದಾದ ಪಪ್ಪಿಗಳ ಅಲಂಕಾರ

ಮುದ್ದಿನ ನಾಯಿ ಮರಿಗಳನ್ನು ಶೃಂಗಾರಗೊಳಿಸುವ ಬಗೆಬಗೆಯ ವಿಂಟರ್‌ವೆರ್ಸ್ ಹಾಗೂ ಕ್ಯೂಟ್‌ ಆಕ್ಸೆಸರೀಸ್‌ಗಳು ಈ ಸೀಸನ್‌ನಲ್ಲಿ ಪೆಟ್‌ ಶಾಪ್‌ಗಳಲ್ಲಿ ಕಾಲಿಟ್ಟಿವೆ. ತಮ್ಮ ಮನೆಯ ಸದಸ್ಯನಂತಿರುವ ಇವುಗಳನ್ನು ಅಲಂಕಾರ ಮಾಡಲು ಬಯಸುವವರು, ಇವುಗಳ ಗ್ರಾಹಕರು. ಎಲ್ಲದಕ್ಕಿಂತ ಹೆಚ್ಚಾಗಿ ತಮ್ಮ ಶ್ವಾನಗಳನ್ನು ಡಿಫರೆಂಟ್‌ ಲುಕ್‌ನಲ್ಲಿ ಕಾಣಲು ಬಯಸುವವರು ಹಾಗೂ ಫೋಟೋ ಶೂಟ್‌ ಮಾಡುವವರು ಇಂತವುಗಳನ್ನು ಖರೀದಿಸಲು ಬಯಸುತ್ತಾರೆ. ಹಾಗಾಗಿ ಇವುಗಳ ಬೇಡಿಕೆ ಹೆಚ್ಚಾಗಿದೆ ಎನ್ನುತ್ತಾರೆ ಮಾರಾಟಗಾರರು.

4/5

ಡಾಗ್ಗಿಯ ವಿಂಟರ್‌ವೇರ್ಸ್

ವಿಂಟರ್‌ವೇರ್ಸ್ ಕೆಟಗರಿಯಲ್ಲಿ, ಕಾಲರ್‌ ಜಾಕೆಟ್‌, ಫರ್‌ ಪಫರ್‌ ಜಾಕೆಟ್‌, ರಿವರ್ಸಿಬಲ್‌ ಡಾಗ್‌ ಜಾಕೆಟ್‌, ಪೆಟ್‌ ಸ್ವೆಟ್‌ ಶರ್ಟ್, ಕ್ವಿಲ್ಟೆಡ್‌ ಡಾಗ್‌ ಜಾಕೆಟ್‌, ನಿಟ್‌ ಡಾಗ್‌ ಸ್ವೆಟಡ್ಸ್, ವಿಂಟರ್‌ ಸ್ನಗ್ಮಲರ್ಸ್ ಡಾಗ್‌ ಜಾಕೆಡ್‌, ಕ್ರಿಸ್ಮಸ್‌ ಸ್ನೋ ಫ್ಲೇಕ್‌ ಡಾಗ್‌ ಸ್ವೆಟರ್‌, ಡಾಗ್‌ ಹೂಡಿ, ರೆಡ್‌ ಹಾಗೂ ಬ್ಲಾಕ್‌ ಸ್ಟ್ರೈಪ್ಸ್‌ ಬೆಲ್ಟ್‌, ರೆಡ್‌ ಬೋ ಸೇರಿದಂತೆ ನಾನಾ ಬಗೆಯ ಕ್ಯೂಟ್‌ ಆಕ್ಸೇಸರೀಸ್‌ಗಳು ಈಗಾಗಲೇ ಆನ್‌ಲೈನ್‌ ಹಾಗೂ ಆಫ್‌ಲೈನ್‌ ಪೆಟ್‌ ಶಾಪ್‌ಗಳಲ್ಲಿ ದೊರೆಯುತ್ತಿವೆ.

5/5

ಶ್ವಾನಕ್ಕೆ ವಿಂಟರ್‌ವೇರ್ಸ್ ಶಾಪಿಂಗ್‌ ಮಾಡುವವರ ಗಮನಕ್ಕೆ

  • ಕ್ಯೂಟ್ ಡಿಸೈನ್‌ವು ಚೆನ್ನಾಗಿ ಕಾಣಿಸುತ್ತವೆ.
  • ಶ್ವಾನಗಳ ಸೈಝ್‌ಗೆ ಹೊಂದುವ ಕಂಫರ್ಟಬಲ್ ವೇರ್ ಕೊಳ್ಳಿ.
  • ವಿಂಟರ್ ಸೀಸನ್ ಟ್ರೆಂಡ್‌ನಲ್ಲಿ ಇದೆಯೇ ಎಂಬುದನ್ನು ಗಮನಿಸಿ.
  • ಸೀಸನ್ ಆಫರ್ ಬಗ್ಗೆ ಚೆಕ್ ಮಾಡಿ.
  • ವಾಶಬಲ್ ಫ್ಯಾಬ್ರಿಕ್‌ನದ್ದಾ? ಎಂದು ತಿಳಿದುಕೊಳ್ಳಿ.
  • ಆದಷ್ಟೂ ಮರಬಳಕೆಯಂತವನ್ನು ಖರೀದಿಸಿ.
  • ಶ್ವಾನದ ಆಕಾರಕ್ಕೆ ತಕ್ಕಂತೆ ಡ್ರೆಸ್ ಆಯ್ಕೆ ಮಾಡಿ.
  • ಆದಷ್ಟೂ ವೈಬ್ರೆಂಟ್ ಕಲರ್ಸ್‌ನವನ್ನು ಚೂಸ್ ಮಾಡಿ.

ಶೀಲಾ ಸಿ ಶೆಟ್ಟಿ

View all posts by this author