ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Honour Killings: ಮರ್ಯಾದೆ ಹತ್ಯೆ ಸಂಬಂಧಿಸಿ ವಿಶೇಷ ಕಾನೂನು: ಸುಪ್ರೀಂಗೆ ನಟ ವಿಜಯ್ ಪಕ್ಷದಿಂದ ಮನವಿ

ತಿರುನಲ್ವೇಲಿಯಲ್ಲಿ 27 ವರ್ಷದ ದಲಿತ ಟೆಕ್ಕಿ ಕವಿನ್ ಸೆಲ್ವಗಣೇಶ್ ಅವರ ಹತ್ಯೆಯ ಅನಂತರ ಇದೀಗ ಮರ್ಯಾದೆ ಹತ್ಯೆಗೆ ಸಂಬಂಧಿಸಿ ವಿಶೇಷ ಕಾನೂನು ರೂಪಿಸಬೇಕು ಎಂದು ನಟ ವಿಜಯ್ ಅವರ ತಮಿಳುಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷ ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಿದೆ. ಕವಿನ್ ಸೆಲ್ವಗಣೇಶ್ ಹತ್ಯೆಯಿಂದ ತಮಿಳುನಾಡಿನಾದ್ಯಂತ ವ್ಯಾಪಕ ಆಕ್ರೋಶ ಉಂಟಾಗಿದೆ.

ಚೆನ್ನೈ: ಮರ್ಯಾದಾ ಹತ್ಯೆಗೆ (honour killings) ಸಂಬಂಧಿಸಿ ವಿಶೇಷ ಕಾನೂನು ರೂಪಿಸುವಂತೆ ನಟ ವಿಜಯ್ (Actor Vijay) ಅವರ ತಮಿಳಗ ವೆಟ್ರಿ ಕಳಗಂ (Tamizhaga Vettri Kazhagam) ಪಕ್ಷ ಸುಪ್ರೀಂ ಕೋರ್ಟ್(Supreme Court) ಗೆ ಮನವಿ ಸಲ್ಲಿಸಿದೆ. ಈ ಕುರಿತು ಈಗ ಇರುವ ನಿಬಂಧನೆಗಳು ಅಸಮರ್ಪಕವಾಗಿವೆ ಎಂದಿರುವ ಟಿವಿಕೆ (TVK) ಇದಕ್ಕಾಗಿ ವಿಶೇಷ ಕಾನೂನು ರೂಪಿಸುವಂತೆ ಅರ್ಜಿ ಸಲ್ಲಿಸಿದೆ. ತಿರುನಲ್ವೇಲಿಯಲ್ಲಿ 27 ವರ್ಷದ ದಲಿತ ಟೆಕ್ಕಿ ಕವಿನ್ ಸೆಲ್ವಗಣೇಶ್ (Kavin Selvaganesh murder case) ಅವರ ಹತ್ಯೆಯ ಬಳಿಕ ತಮಿಳುನಾಡಿನಾದ್ಯಂತ ಆಕ್ರೋಶ ವ್ಯಕ್ತವಾಗಿದ್ದು, ಇದಕ್ಕೆ ಪ್ರತಿಕ್ರಿಯೆಯಾಗಿ ಟಿವಿಕೆ ಈ ನಿರ್ಣಯ ಕೈಗೊಂಡಿದೆ.

ಜಾತಿ ಸಂಬಂಧಿತ ಮರ್ಯಾದಾ ಹತ್ಯೆಗಳನ್ನು ನಿಭಾಯಿಸಲು ಪ್ರತ್ಯೇಕ ಕಾನೂನು ಜಾರಿಗೆ ತರಬೇಕೆಂದು ಒತ್ತಾಯಿಸಿರುವ ತಮಿಳುಳಗ ವೆಟ್ರಿ ಕಳಗಂ (ಟಿವಿಕೆ), ಅಂತಹ ಅಪರಾಧಗಳನ್ನು ತಡೆಯಲು ಅಸ್ತಿತ್ವದಲ್ಲಿರುವ ಕಾನೂನು ನಿಬಂಧನೆಗಳು ಸಾಕಾಗುವುದಿಲ್ಲ ಎಂದು ಹೇಳಿದೆ. 27 ವರ್ಷದ ದಲಿತ ಸಾಫ್ಟ್‌ವೇರ್ ಎಂಜಿನಿಯರ್ ಕವಿನ್ ಸೆಲ್ವಗಣೇಶ್ ಹತ್ಯೆಯ ಅನಂತರ ಟಿವಿಕೆ ಚುನಾವಣಾ ಕಾರ್ಯದರ್ಶಿ ಆಧವ್ ಅರ್ಜುನ ಅವರು ಪಕ್ಷದ ಪರವಾಗಿ ಈ ಅರ್ಜಿ ಸಲ್ಲಿಸಿದ್ದಾರೆ.

ತಿರುನಲ್ವೇಲಿಯ ಪಳಯಂಕೊಟ್ಟೈನಲ್ಲಿರುವ ಆಸ್ಪತ್ರೆಯ ಹೊರಗೆ ಜುಲೈ 27 ರಂದು ಕವಿನ್ ಅವರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಪ್ರಬಲ ತೇವರ್ ಸಮುದಾಯಕ್ಕೆ ಸೇರಿದ್ದ ಯುವತಿಯೊಂದಿಗೆ ಅವರು ಸಂಬಂಧ ಹೊಂದಿದ್ದರು. ಯುವತಿಯ ಸಹೋದರ ಸುರ್ಜಿತ್ ಅವರೇ ಈ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಲಾಗಿದೆ.

ರಾಜ್ಯ ಪೊಲೀಸ್ ಇಲಾಖೆಯಲ್ಲಿ ಸಬ್ ಇನ್ಸ್‌ಪೆಕ್ಟರ್‌ ಆಗಿದ್ದ ಸುರ್ಜಿತ್ ಅವರ ತಂದೆ ಸರವಣನ್ ಹೆಸರನ್ನು ಎಫ್‌ಐಆರ್‌ನಲ್ಲಿ ಹೆಸರಿಸಲಾಗಿದ್ದು, ಅನಂತರ ಅವರನ್ನು ಹುದ್ದೆಯಿಂದ ಅಮಾನತುಗೊಳಿಸಿ ಬಂಧಿಸಲಾಗಿದೆ. ಈ ನಿಟ್ಟಿನಲ್ಲಿ ತಮಿಳುಳಗ ವೆಟ್ರಿ ಕಳಗಂ (ಟಿವಿಕೆ) ಮಾತ್ರವಲ್ಲ ವಿದುತಲೈ ಚಿರುತೈಗಲ್ ಕಚ್ಚಿ (ವಿಸಿಕೆ), ಸಿಪಿಐ ಮತ್ತು ಸಿಪಿಐ(ಎಂ) ಅಲ್ಹಾದ್ ಸೇರಿದಂತೆ ಇತರ ಪಕ್ಷಗಳು ಕೂಡ ವಿಶೇಷ ಕಾನೂನು ಜಾರಿಗೊಳಿಸುವಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸಿದೆ. ರಾಜ್ಯದಲ್ಲಿ ಕವಿನ್ ಒಂದೇ ಪ್ರಕರಣವಲ್ಲ. 2015 ರಿಂದ ರಾಜ್ಯದಲ್ಲಿ ಕನಿಷ್ಠ 80 ಜಾತಿ ಆಧಾರಿತ ಮರ್ಯಾದಾ ಹತ್ಯೆಗಳಾಗಿವೆ ಎಂದು ಹೇಳಿದೆ.

ಇದನ್ನೂ ಓದಿ: Hockey Asia Cup: ಹರ್ಮನ್‌ಪ್ರೀತ್ ಹ್ಯಾಟ್ರಿಕ್‌ ಗೋಲು; ಏಷ್ಯಾ ಕಪ್‌ನಲ್ಲಿ ಭಾರತ ಶುಭಾರಂಭ

ಮಧುರೈ ಮೂಲದ ದಲಿತ ಹಕ್ಕುಗಳ ಸಂಘಟನೆ ಹೇಳಿದೆ. ಇದಕ್ಕೆ ಶಿಕ್ಷೆಯ ಪ್ರಮಾಣವು ತೀರಾ ಕಡಿಮೆಯಾಗಿದೆ ಎಂದು ತಿಳಿಸಿದೆ.

ವಿದ್ಯಾ ಇರ್ವತ್ತೂರು

View all posts by this author