ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Daily Horoscope: ಶುಕ್ರವಾರದ ಈ ದಿನ ಯಾವ ರಾಶಿಗೆ ಶುಭ ಫಲವಾಗಲಿದೆ?

ಇಂದು ವಿಶ್ವ ವಸು ನಾಮ ಸಂವತ್ಸರದ ದಕ್ಷಿಣಾಯನ ವರ್ಷ ಋತು ಭಾದ್ರಪದ ಮಾಸದ ಶುಕ್ಲ ಪಕ್ಷದ ಷಷ್ಠಿ ತಿಥಿ, ಸ್ವಾತಿ ನಕ್ಷತ್ರದ ಆಗಸ್ಟ್ 29 ನೇ ತಾರೀಖಿನ ಶುಕ್ರವಾರದ ಈ ದಿನದ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಅವರು ತಿಳಿಸಿದ ಇಂದಿನ ರಾಶಿ ಭವಿಷ್ಯ ಹೀಗಿದೆ..

ಬೆಂಗಳೂರು: ಇಂದು ವಿಶ್ವ ವಸು ನಾಮ ಸಂವತ್ಸರದ ದಕ್ಷಿಣಾಯನ ವರ್ಷ ಋತು ಭಾದ್ರಪದ ಮಾಸದ ಶುಕ್ಲ ಪಕ್ಷದ ಷಷ್ಠಿ ತಿಥಿ, ಸ್ವಾತಿ ನಕ್ಷತ್ರದ ಈ ದಿನ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಅವರು ತಿಳಿಸಿದಂತೆ ನಿಮ್ಮ ಭವಿಷ್ಯ ಹೇಗಿದೆ ಎಂದು ತಿಳಿಯಿರಿ.

ಮೇಷ ರಾಶಿ: ಇಂದು ಸ್ವಾತಿ ನಕ್ಷತ್ರ ಇದ್ದು ಇದರ ಅಧಿಪತಿ ರಾಹು ಆಗಿದ್ದಾನೆ.‌ ಈ ದಿನ ಮೇಷ ರಾಶಿ ಅವರಿಗೆ ಉತ್ತಮವಾದ ದಿನ ಆಗಲಿದೆ. ನಿಮ್ಮ ಮಿತ್ರರಿಂದ ನಿಮ್ಮ ಕುಟುಂಬದವರಿಂದ ಸೌಹಾರ್ದ ಪ್ರಾಪ್ತಿಯಾಗಲಿದೆ.‌ ದಾಂಪತ್ಯದಲ್ಲೂ ಅತೀ ಹೆಚ್ಚಿನ ಸಂತೋಷವನ್ನು ನೀವು ಕಾಣಲಿದ್ದೀರಿ.

ವೃಷಭ ರಾಶಿ: ಇಂದು ವೃಷಭ ರಾಶಿ ಅವರಿಗೂ ಅತ್ಯುತ್ತಮವಾದ ದಿನವಾಗಲಿದೆ. ನಿಮಗೆ ಶತ್ರು ಗಳಿದ್ದರೂ ಕೂಡ ಜಯ ಪ್ರಾಪ್ತಿಯಾಗಲಿದೆ. ‌ನೀವು ಅಂದು ಕೊಂಡ ಕೆಲಸ ಕಾರ್ಯಗಳು ಕೂಡ ನೆರವೇರಲಿದೆ.

ಮಿಥುನ ರಾಶಿ: ಮಿಥುನ ರಾಶಿಯಲ್ಲಿ ಇರುವವರಿಗೆ ಅತೀ ಆತ್ಮೀಯರಿಂದಲೇ ಸ್ವಲ್ಪ ಕಿನ್ನತೆ ಉಂಟಾಗಬಹುದು. ಪ್ರೇಮ, ದಾಂಪತ್ಯದಲ್ಲಿ ಅತೀ ಹೆಚ್ಚಿನ ಕಿರಿ ಕಿರಿ ನಿಮಗೆ ಇರಲಿದೆ. ಬಿಸ್ ನೆಸ್ ವ್ಯವಹಾರ ಗಳಿಗೆ ಇಂದು ಉತ್ತಮ ದಿನ ಅಲ್ಲ. ಆದರೆ ನಿಮ್ಮ ಬುದ್ಧಿವಂತಿಕೆಯ ಚಾಕ ಚಾಕ್ಯತೆ ಇರುವ ಕೆಲಸಗಳನ್ನು ಇಂದು ಮುಗಿಸಿಕೊಳ್ಳಬಹುದು.

ಕಟಕ ರಾಶಿ: ಕಟಕ ರಾಶಿ ಅವರಿಗೆ ಮನೆ ಸಂಸಾರದಲ್ಲಿ ಸ್ವಲ್ಪ ಕಿರಿ ಕಿರಿ ಉಂಟಾಗುವ ಸಾಧ್ಯತೆ ಇರುತ್ತದೆ. ತಾಯಿಯ ಆರೋಗ್ಯದ ಬಗ್ಗೆ ಗಮನ ವಹಿಸಿ. ಮನೆಯಿಂದ ದೂರ ಇರಬೇಕಾದ ಸಂದರ್ಭ ಬರಬಹುದು. ಕೋರ್ಟ್ ಕಛೇರಿ ವ್ಯವಹಾರ ಬಗ್ಗೆ ಇಂದು ಉತ್ತಮ ದಿನ ಅಲ್ಲ.

ಸಿಂಹ ರಾಶಿ: ಸಿಂಹ ರಾಶಿ ಅವರಿಗೆ ಇಂದು ಅತ್ಯುತ್ತಮವಾದ ದಿನವಾಗಲಿದೆ. ಸೋಷಿಯಲ್ ಮೀಡಿಯಾ ಬಳಕೆದಾರರು, ಭಾಷಣಕಾರರು, ಮಾತುಗಾರರು, ಪತ್ರಿಕೋದ್ಯಮದಲ್ಲಿ ಇರುವವರಿಗೆ ಅತೀ ಉತ್ತಮ ವಾದ ದಿನ ಆಗಲಿದೆ.‌ ಅತೀ ಉತ್ತಮ ವಾದ ಆತ್ಮವಿಶ್ವಾಸ ನಿಮಗೆ ಇರಲಿದೆ.‌

ಕನ್ಯಾ ರಾಶಿ: ಕನ್ಯಾ ರಾಶಿ ಅವರಿಗೆ ಈ ದಿನ ಸಂಸಾರದ ವಿಚಾರವಾಗಿ ಸ್ವಲ್ಪ ಕಿರಿ ಕಿರಿ ಉಂಟಾ ಗಲಿದೆ. ನೀವು ಅಂದು ಕೊಂಡ ಖುಷಿ ನಿಮಗೆ ಸಿಗದೇ ಇರಬಹುದು. ಈ ದಿನ ಸ್ವಲ್ಪ ಏರು ಪೇರು ಉಂಟಾಗುವ ಸಾಧ್ಯತೆ ಇದೆ. ಅದ್ದರಿಂದ ಸಮಾಧಾನ ರೀತಿಯಲ್ಲಿ ಇರಲು ಪ್ರಯತ್ನ ಮಾಡಿ. ಹಣಕಾಸಿನ ವಿಚಾರದಲ್ಲಿ ಮೋಸ ಹೋಗುವ ಸಾಧ್ಯತೆ ಕೂಡ ಇರಬಹುದು.

ತುಲಾ ರಾಶಿ: ತುಲಾ ರಾಶಿ ಅವರಿಗೆ ಈ ದಿನ ಉತ್ತಮ ವಾಗಲಿದ್ದು ಹಿಂದಿನ ಮೂರು ದಿನಗಳ ಸಮಸ್ಯೆ ಗಳು ಪರಿಹಾರ ವಾಗಬಹುದು. ಆದರೆ ನಿಮ್ಮ ಸ್ನೇಹಿತರಿಂದ ನಿಮಗೆ ತೊಡಕು ಉಂಟಾಗ ಬಹುದು. ಅವರ ಮಾತನ್ನು ಕೇಳಿ ನಿಮಗೆ ತೊಂದರೆ ಉಂಟಾಗುವ ಸಾಧ್ಯತೆ ಇರುತ್ತದೆ.

ಇದನ್ನು ಓದಿ:Daily Horoscope: ದಿನ ಭವಿಷ್ಯ- ಗಣೇಶ ಹಬ್ಬದ ದಿನ ಈ ರಾಶಿಗೆ ವಿನಾಯಕನ ಅನುಗ್ರಹ!

ವೃಶ್ಚಿಕ ರಾಶಿ: ವೃಶ್ಚಿಕ ರಾಶಿ ಅವರಿಗೆ ಈ ದಿನ ಕ್ಷೇಷ ಕರವಾದ ದಿನ ಆಗಲಿದೆ. ನಿಮಗೆ ಪ್ರೀತಿ ಪಾತ್ರರಾದವರು ತುಂಬಾ ಬೇಕಾದವರೇ ಮನಸ್ಸಿಗೆ ಬೇಸರ ಉಂಟು ಮಾಡಬಹುದು. ಆಧ್ಯಾತ್ಮಿಕ ವಾಗಿ ಇರುವುದರಿಂದ ಪರಿಹಾರ ಪಡೆಯಬಹುದು.‌ಧ್ಯಾನ,ಶ್ಲೋಕ ಇತ್ಯಾದಿ ಮಾಡುವ ಅಭ್ಯಾಸ ಮಾಡಿಕೊಳ್ಳಿ.

ಧನಸ್ಸು ರಾಶಿ: ಧನಸ್ಸು ರಾಶಿ ಅವರಿಗೆ ಅತ್ಯುತ್ತಮ ವಾದ ದಿನ ಆಗಲಿದೆ.‌ ಧನಾ ಆಗಮನ ಉಂಟಾ ಗುವ ಸಾಧ್ಯತೆ ಇದೆ. ಪ್ರೀತಿ ಪ್ರೇಮದಲ್ಲಿ ಸಫಲತೆ ಉಂಟಾಗಲಿದೆ. ಮಿತ್ರರಿಂದಲೂ ಬಹಳ ಉತ್ತಮವಾದ ದಿನ ನಿಮಗೆ ಆಗಲಿದೆ.

ಮಕರ ರಾಶಿ: ಮಕರ ರಾಶಿ ಅವರಿಗೆ ಕಾರ್ಯ ಕ್ಷೇತ್ರದಲ್ಲಿ ಯಶಸ್ಸು ಸಿಗಲಿದ್ದು ಭಾಗ್ಯೋದಯ ವಾದ ದಿನವಾಗಲಿದೆ. ಆದರೆ ಕೆಲಸದಲ್ಲಿ ಹೆಚ್ಚಿನ ಜವಾಬ್ದಾರಿಗಳು ಇರುತ್ತವೆ. ಅದರ ಜೊತೆ ನಿಮ್ಮ ಸೀನಿ ಯರ್ ಹೆಡ್ ಗಳಿಂದ ನಿಮಗೆ ಗೌರವ ಪ್ರಾಪ್ತಿ ಯಾಗಲಿದ್ದು ನಿಮ್ಮ ಕೆಲಸ ಕಾರ್ಯಗಳನ್ನು ಹೋಗಳಲಿದ್ದಾರೆ.

ಕುಂಭರಾಶಿ: ಕುಂಭ ರಾಶಿ ಅವರಿಗೆ ಈ ದಿನ ಭಾಗ್ಯೋದಯವಾದ ದಿನವಾಗಲಿದ್ದು ಮನಸ್ಸಿಗೆ ನೆಮ್ಮದಿ ಸಿಗಲಿದೆ. ಆದರೆ ಹಿರಿಯರ ಆಶೀರ್ವಾದ ಇಲ್ಲದೆ ಯಾವುದೇ ಕೆಲಸ ಕಾರ್ಯದಲ್ಲಿ ಜಯ ಗಳಿಸಲು ಸಾಧ್ಯ ಆಗುವುದಿಲ್ಲ. ಹಾಗಾಗಿ ಈ ಕೆಲಸ ಮಾಡಿದರೆ ಪೂರ್ಣ ಫಲ ಪ್ರಾಪ್ತಿಯಾಗಲಿದೆ.‌

ಮೀನ ರಾಶಿ: ಮೀನ ರಾಶಿ ಅವರಿಗೆ ಸ್ಬಲ ಕಷ್ಟಕರವಾದ ದಿನ ಆಗಲಿದೆ. ನಿಮ್ಮ ಪ್ರೀತಿ ಪಾತ್ರರಿಂದ ನಿಮಗೆ ಉತ್ತಮ ಪ್ರತಿಕ್ರಿಯೆ ಸಿಗದೇ ಇರಬಹುದು. ಆದರೆ ಭಗವಂತನ ಧ್ಯಾನ ದಿಂದ ಶುಭವನ್ನು ಕಾಣುತ್ತೀರಿ. ನಿತ್ಯ ಶ್ಲೋಕ,ಪಠಣ ಅಭ್ಯಾಸ ಮಾಡುವ ಮೂಲಕ ಶುಭ ದಾಯಕ ದಿನವನ್ನು ಕಳೆಯಲಿದ್ದೀರಿ.