ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Gauribidanur News: ಧರ್ಮಸ್ಥಳ ಶ್ರದ್ಧಾ ಕೇಂದ್ರದ ಬಗ್ಗೆ ಅಪಪ್ರಚಾರ ಮಾಡುವವರ ವಿರುದ್ಧ ಕ್ರಮ ವಹಿಸಬೇಕು: ರವಿ ನಾರಾಯಣರೆಡ್ಡಿ

ಹಿಂದುಗಳ ಧಾರ್ಮಿಕ ಕೇಂದ್ರ ಗಳಾದ ಮಠ, ಮಂದಿರಗಳ ಮೇಲೆ ಇತ್ತೀಚಿನ ದಿನಗಳಲ್ಲಿ ವ್ಯವಸ್ಥಿತವಾಗಿ ಅಪಪ್ರಚಾರವನ್ನು ನಡೆಸುತ್ತಿದ್ದಾರೆ, ಇದರಿಂದಾಗಿ, ನಮ್ಮ ಧಾರ್ಮಿಕ ನಂಬಿಕೆಗಳಿಗೆ ಧಕ್ಕೆಯಾಗುತ್ತಿದೆ. ಇಂತಹ ಅಪ ಪ್ರಚಾರವನ್ನು ಇನ್ನಷ್ಟು ದಿನಗಳ ಕಾಲ ನಾವುಗಳು ಸಹಿಸಿಕೊಳ್ಳಬೇಕು ಎಂದು ಪ್ರಶ್ನಿಸಿದ ಅವರು ಇದಕ್ಕೆಲ್ಲಾ ಉತ್ತರ ನೀಡುವ ಕಾಲ ಬಂದಿದೆ. ಪ್ರತಿಯೊಬ್ಬ ಹಿಂದೂ ಜಾಗೃತನಾಗಿ ಸಿಡಿದೇಳ ಬೇಕೆಂದು ಕರೆ ನೀಡಿದರು.

ಅಪಪ್ರಚಾರ ಮಾಡುವವರ ವಿರುದ್ಧ ಕ್ರಮ ವಹಿಸಬೇಕು

Ashok Nayak Ashok Nayak Aug 26, 2025 12:34 AM

ಗೌರಿಬಿದನೂರು: ಕೋಟ್ಯಾಂತರ ಹಿಂದೂಗಳ ನಂಬಿಕೆ ಹಾಗೂ ಶ್ರದ್ಧಾ ಕೇಂದ್ರವಾದ ಧರ್ಮ ಸ್ಥಳದ ವಿರುದ್ದ ಷಡ್ಯಂತರ ನಡೆಸುತ್ತಿರುವವರ ವಿರುದ್ದ ಸರ್ಕಾರ ಸೂಕ್ತ ಕಾನೂನು ಕ್ರಮ ಜರುಗಿಸಿ ತಪಿತಸ್ಥರಿಗೆ ಶಿಕ್ಷೆಯಾಗುವಂತೆ ಮಾಡಬೇಕೆಂದು ಬಿಜೆಪಿ ಮುಖಂಡ ಎನ್ಎಂ.ರವಿನಾರಾಯಣರೆಡ್ಡಿ ಸರ್ಕಾರವನ್ನು ಆಗ್ರಹಿಸಿದರು.ಅವರು ನಗರದಲ್ಲಿ ವಿವಿಧ ಹಿಂದೂ ಪರ ಸಂಘಟನೆಗಳು ಹಮ್ಮಿ ಕೊಂಡಿದ್ದ"ಧರ್ಮಯುದ್ದ" ಜಾಥಾದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.

ಧರ್ಮಸ್ಥಳದವರ ಪ್ರಭಾವದಿಂದಾಗಿ ಇಡೀ ದಕ್ಷಿಣ ಕನ್ನಡದಲ್ಲಿ ಹಿಂದುಗಳ ಮತಾಂತರವನ್ನು ಸಂಪೂರ್ಣವಾಗಿ ತಡೆಯಲಾಗಿದೆ,ಗ್ರಾಮಗಳಲ್ಲಿ ಮದ್ಯದಂಗಡಿಗಳನ್ನು ಮುಚ್ಚಲಾಗುತ್ತಿದೆ, ಸಾವಿ ರಾರು ಕೆರೆಗಳನ್ನು ಧರ್ಮಸ್ಥಳ ಸಂಘದ ವತಿಯಿಂದ ಪುನಶ್ಚೇತನಗೊಳಿಸಲಾಗಿದೆ. ರಾಜ್ಯದೆಲ್ಲೆಡೆ ಪಾಳು ಬಿದ್ದಿದ್ದ ಸಾವಿರಾರು ದೇವಸ್ಥಾನಗಳನ್ನು ಜೀರ್ಣೋದ್ಧಾರ ಮಾಡಲಾಗಿದೆ.

ಮೀಟರ್ ಬಡ್ಡಿ ದಂಧೆ ಸಂಪೂರ್ಣವಾಗಿ ತೊಲಗಿದೆ ಧರ್ಮಸ್ಥಳದ ಸಾಮಾಜಿಕ ಹಾಗೂ ಧಾರ್ಮಿಕ ಚಟುವಟಿಕೆಗಳನ್ನು ಸಹಿಸದ ಕೆಲ ಮತೀಯ ಶಕ್ತಿಗಳು ಹಲವಾರು ವರ್ಷಗಳಿಂದ ನಿರಂತರವಾಗಿ ಧರ್ಮಸ್ಥಳವನ್ನು ತೇಜೋವದೆ ಮಾಡಲು ಪ್ರಯತ್ರವನ್ನು ನಡೆಸುತ್ತಲೆ ಬರುತ್ತಿದ್ದರೆ,ಇವರ ವಿರುದ್ದ ಪ್ರತಿಯೊಬ್ಬ ಹಿಂದೂ ಧ್ವನಿ ಎತ್ತಿ ಪ್ರತಿಭಟನೆ ಮಾಡಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು
ಈಗಾಗಲೇ, ಇವರುಗಳ ಬುರುಡೆ ಪುರಾಣ ಜನರ ಮುಂದೆ ಬಟಾ ಬಯಲಾಗಿದೆ, ಪೊಲೀಸರು ಸೂಕ್ತ ತನಿಖೆ ನಡೆಸಿ ಇವರುಗಳಿಗೆ ಶಿಕ್ಷೆಯಾಗುವಂತೆ ಮಾಡಬೇಕು, ಇಲ್ಲದಿದ್ದರೆ ಜನರೆ ದಂಗೆ ಎದ್ದು ಇವರಿಗೆ ಬುದ್ದಿ ಕಲಿಸುತ್ತಾರೆ ಎಂದರು.

ಇದನ್ನೂ ಓದಿ: Chinthamani News: ಬಿಜೆಪಿಯಿಂದ ಧರ್ಮದ ಉಳಿವಿಗಾಗಿ ಧರ್ಮ ಯುದ್ಧ ಹೋರಾಟ ಬೃಹತ್ ಪ್ರತಿಭಟನೆ

ಮುಖಂಡರಾದ ಡಾ.ಎಚ್ಎಸ್ ಶಶಿಧರ್ ಅವರು ಮಾತನಾಡುತ್ತಾ ಹಿಂದುಗಳ ಧಾರ್ಮಿಕ ಕೇಂದ್ರ ಗಳಾದ ಮಠ, ಮಂದಿರಗಳ ಮೇಲೆ ಇತ್ತೀಚಿನ ದಿನಗಳಲ್ಲಿ ವ್ಯವಸ್ಥಿತವಾಗಿ ಅಪಪ್ರಚಾರವನ್ನು ನಡೆಸುತ್ತಿದ್ದಾರೆ, ಇದರಿಂದಾಗಿ, ನಮ್ಮ ಧಾರ್ಮಿಕ ನಂಬಿಕೆಗಳಿಗೆ ಧಕ್ಕೆಯಾಗುತ್ತಿದೆ. ಇಂತಹ ಅಪ ಪ್ರಚಾರವನ್ನು ಇನ್ನಷ್ಟು ದಿನಗಳ ಕಾಲ ನಾವುಗಳು ಸಹಿಸಿಕೊಳ್ಳಬೇಕು ಎಂದು ಪ್ರಶ್ನಿಸಿದ ಅವರು ಇದಕ್ಕೆಲ್ಲಾ ಉತ್ತರ ನೀಡುವ ಕಾಲ ಬಂದಿದೆ. ಪ್ರತಿಯೊಬ್ಬ ಹಿಂದೂ ಜಾಗೃತನಾಗಿ ಸಿಡಿದೇಳ ಬೇಕೆಂದು ಕರೆ ನೀಡಿದರು.

ಧರ್ಮ ಯುದ್ಧದ ಜಾಥಾ ನಗರದ ಮರಿಗಮ್ಮ ದೇವಸ್ಥಾನದ ಆವರಣದಿಂದ ಪ್ರಾರಂಭವಾಗಿ ಬಿಎಚ್ ರಸ್ತೆ ,ಬಜಾರ್ ರಸ್ತೆ ಮೂಲಕ ಸಾಗಿ ಎಂಜಿ ವೃತ್ತದಲ್ಲಿ ಸಮಾರೋಪಗೊಂಡಿತು ನಂತರ ನಗರಸಭೆ ಆಯುಕ್ತರಾದ ರಮೇಶ್ ಸ್ಥಳಕ್ಕೆ ಆಗಮಿಸಿ ಪ್ರತಿಭಟನಾಕಾರರಿಂದ ಮನವಿ ಪತ್ರವನ್ನು ಸ್ವೀಕರಿಸಿದರು.

ಧರ್ಮ ಯುದ್ಧದ ಜಾಥಾದಲ್ಲಿ ಜಿ.ಪಂ ಮಾಜಿ ಅಧ್ಯಕ್ಷ ಸಿಆರ್ ನರಸಿಂಹಮೂರ್ತಿ, ಬಿಜೆಪಿ ಮಂಡಲ ಅಧ್ಯಕ್ಷರಾದ ರಮೇಶ್ ರಾವ್, ಮಾರ್ಕೆಟ್ ಮೋಹನ್, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮುರುಳೀಧರ್, ಗೋಪಾಲಗೌಡ, ಹರೀಶ್, ಕೋಡ್ಲೀರಪ್ಪ, ನಾಗಭೂಷಣ್ ರಾವ್, ಜಯಣ್ಣ,
ಜೆಡಿಎಸ್ ಪಕ್ಷದ ತಾಲೂಕು ಅಧ್ಯಕ್ಷ ಮಂಜುನಾಥ್ ರೆಡ್ಡಿ, ಸಂಘ ಪರಿವಾರದ ವೇಣು ಜೀ, ಎಬಿವಿಪಿ ಚಂದ್ರಶೇಖರ್, ದಯಾನಂದ್, ಜಾಗರಣ ವೇದಿಕೆಯ ಬೈಪಾಸ್ ರವಿ, ಶಿವಾರೆಡ್ಡಿ, ವಿಶ್ವ ಹಿಂದು ಪರಿಷತ್ತಿನ ಸಾಗಾನಹಳ್ಳಿ ಶಿವಕುಮಾರ್, ರಮೇಶ್ ಬಾಬು, ನರಸಿಂಹರೆಡ್ಡಿ, ಶ್ರೀನಿವಾಸ್ ಗೌಡ, ಚಂದ್ರಶೇಖರ್, ಮುಖಂಡರಾದ ದೇವರಾಜ್, ಅಲ್ಲಂಪಲ್ಲಿ ರಾಜಣ್ಣ, ಬಾಲರಾಜು, ಪೋತೇನಹಳ್ಳಿ ರಾಮಣ್ಣ, ಎಸ್ ರಮೇಶ್, ಮುನಿಲಕ್ಷ್ಮಮ್ಮ, ಶೋಭಾ, ಪಾರ್ವತಿ, ಮಹೇಂದ್ರ, ನಾರಾಯಣಸ್ವಾಮಿ, ಶ್ರೀನಿವಾಸ್ ಗೌಡ, ನಾರಾಯಣರೆಡ್ಡಿ, ಮಂಜುನಾಥ್ ರಾವ್, ಮಾರುತಿ, ಮುದ್ದುಕೃಷ್ಣ ಹಾಗೂ ಸಾವಿರಾರು ಮಂದಿ ಹಿಂದೂ ಕಾರ್ಯಕರ್ತರು ಜಾಥಾದಲ್ಲಿ ಭಾಗವಹಿಸಿದ್ದರು.