ಬೆಂಗಳೂರು: ಇಂದು ವಿಶ್ವ ವಸು ನಾಮ ಸಂವತ್ಸರದ ದಕ್ಷಿಣಾಯನ ವರ್ಷ ಋತು ಭಾದ್ರಪದ ಮಾಸದ ಶುಕ್ಲ ಪಕ್ಷದ ಅಷ್ಟಮಿ ತಿಥಿ, ಅನುರಾಧಾ ನಕ್ಷತ್ರದ ಈ ದಿನ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಅವರು ತಿಳಿಸಿದಂತೆ ನಿಮ್ಮ ಭವಿಷ್ಯ ಹೇಗಿದೆ ಎಂದು ತಿಳಿಯಿರಿ.
ಮೇಷ ರಾಶಿ: ಇಂದು ಉತ್ತರ ಅನುರಾಧಾ ನಕ್ಷತ್ರದ ಅಧಿಪತಿ ಶನಿಯಾಗಿದ್ದ ಕಾರಣಕ್ಕೆ ಮೇಷ ರಾಶಿ ಅವರಿಗೆ ಈ ದಿನ ಬಹಳ ಕ್ಲಿಷ್ಟಕರವಾಗಿ ಇರಲಿದೆ. ಪ್ರೇಮ, ಪ್ರೀತಿ,ದಾಂಪತ್ಯದ ವಿಚಾರದಲ್ಲಿ ವೈಮನಸ್ಸು ಉಂಟಾಗಲಿದೆ. ಪ್ರೀತಿ ಪಾತ್ರರಿಂದಲೇ ಮನಸ್ಸಿಗೆ ನೋವು ಉಂಟಾಗುವ ಸಾಧ್ಯತೆ ಇದೆ. ಇಂದು ಯಾವುದೇ ಮುಖ್ಯ ನಿರ್ಧಾರ ಕೈಗೊಳ್ಳುವುದು ಅಷ್ಟು ಪ್ರಶಸ್ತವಲ್ಲ. ಯಾವುದೇ ಹೊಸ ಕ್ಷೇತ್ರ ಹೂಡಿಕೆ ಮಾಡುವ ಮುನ್ನ ಬಹಳ ಜಾಗೃತೆ ವಹಿಸಬೇಕು.
ವೃಷಭ ರಾಶಿ: ಇಂದು ವೃಷಭ ರಾಶಿ ಅವರಿಗೆ ಇಂದು ಅತ್ಯುತ್ತಮವಾದ ದಿನವಾಗಿದೆ. ಮನಸ್ಸಿಗೆ ನೆಮ್ಮದಿ ಕಾರ್ಯ ಕ್ಷೇತ್ರದಲ್ಲಿ ಯಶಸ್ಸು ನಿಮಗೆ ಸಿಗಲಿದೆ. ಹಾಗಿದ್ದರೂ ಹಣಕಾಸಿನ ವಿಚಾರದಲ್ಲಿ ಇಕ್ಕಟ್ಟಿಗೆ ಸಿಲುಕುವ ಸಾಧ್ಯತೆ ಇದೆ. ಆದಷ್ಟು ತಾಳ್ಮೆ ವಹಿಸಿದರೆ ನೀವು ಅಂದು ಕೊಂಡ ಸ್ಥಾನ ಮಾನ ನಿಮಗೆ ದೊರೆಯಲಿದೆ. ಬೇರೆ ಅವರ ಮಾತಿಗೆ ಪ್ರೇರೇಪಿತರಾಗದರಿ. ನಿಮಗೆ ಸರಿ ಅನಿಸಿದ್ದನ್ನು ಯೋಚನೆ ಮಾಡಿ ಮಾಡಿದರೆ ಒಳ್ಳೆಯದ್ದಾಗಲಿದೆ.
ಮಿಥುನ ರಾಶಿ: ಮಿಥುನ ರಾಶಿಯಲ್ಲಿ ಇರುವವರಿಗೆ ಈ ದಿನ ಬಹಳ ಚೆನ್ನಾಗಿ ಇರಲಿದೆ. ಶತ್ರು ನಾಶ, ಶತ್ರುಗಳ ಶಕ್ತಿ ಕ್ಷೀಣಿಸುವ ಕೆಲಸ ನಿಮ್ಮಿಂದ ಆಗಲಿದೆ. ಯೋಗ ಧ್ಯಾನ ಮಾಡಿದರೆ ದೇಹದ ಆರೋಗ್ಯ ಸಮಸ್ಯೆ ಸುಧಾರಣೆ ಆಗಲಿದೆ. ತಾಯಿಯ ಆರೋಗ್ಯದ ಬಗ್ಗೆ ಅಧಿಕ ಕಾಳಜಿ ವಹಿಸಬೇಕು. ಇಂದು ಶನಿದೇವರ ನಾಮ ಪಠಣ ಮಾಡಿದರೆ ದಿನಾಂತ್ಯದಲ್ಲಿ ಶುಭ ಸುದ್ದಿ ಕೇಳಲಿದ್ದೀರಿ. ಅಡ್ವೆನ್ಚರ್ ಸ್ಪೋರ್ಟ್ಸ್, ಗೇಮ್ಸ್ ನಂತಹ ಹೋಟೆಲ್ ಇತರ ಉದ್ಯಮ ಮಾಡಿ ಕೊಂಡವರಿಗೆ ಈ ದಿನ ಬಹಳ ಉತ್ತಮವಾಗಿ ಇರಲಿದೆ.
ಕಟಕ ರಾಶಿ: ಕಟಕ ರಾಶಿ ಅವರಿಗೆ ಈ ದಿನ ಮನಸ್ಸಿಗೆ ಕ್ಲೇಶ ಉಂಟಾಗಲಿದೆ. ಸಂಸಾರ, ಪ್ರೀತಿ, ಪ್ರೇಮ ಇತ್ಯಾದಿ ವಿಚಾರದಲ್ಲಿ ಸಾಕಷ್ಟು ಕಿರಿ ಕಿರಿ ಅನುಭವಿಸುವಿರಿ. ಆರೋಗ್ಯ ಇತ್ಯಾದಿ ವಿಚಾರದಲ್ಲಿ ಹೆಚ್ಚಿನ ಗಮನವಹಿಸಬೇಕು. ಕೆಲವೊಂದು ಅನಿರೀಕ್ಷಿತ ಘಟನೆ ನಿಮಗೆ ತುಂಬಾ ನೋವು ಕೊಡ ಬಹುದು. ಹಾಗಾಗಿ ಏನೆ ಬಂದರೂ ತಾಳ್ಮೆ ವಹಿಸಿ ಮುನ್ನಡೆದರೆ ನಿಮ್ಮ ಬುದ್ಧಿ ವಂತಿಕೆಯಿಂದ ಉತ್ತಮ ಫಲ ಪಡೆಯುತ್ತೀರಿ. ಇದರಿಂದಾಗಿ ಬಳಿಕ ನಿಮ್ಮ ಆತ್ಮ ವಿಶ್ವಾಸ ಹೆಚ್ಚಾಗಲಿದೆ.
ಸಿಂಹ ರಾಶಿ: ಸಿಂಹ ರಾಶಿ ಅವರಿಗೆ ಇಂದು ಬಹಳ ಕ್ಲಿಷ್ಟಕರವಾದ ದಿನವಾಗಿದೆ. ಆಸ್ತಿ ಪಾಸ್ತಿ ವ್ಯವಹಾರ, ವಾಹನ ಇತ್ಯಾದಿ ಖರೀದಿ ಹಾಗೂ ಮಾರಾಟದಲ್ಲಿ ಸಮಸ್ಯೆ ಆಗಲಿದೆ. ಬೇರೆ ಇತರ ಸಮಸ್ಯೆ ಅಷ್ಟಾಗಿ ಇರದೇ ಇದ್ದರೂ ಕೆಲವು ಮಾನಸಿಕ ಸಮಸ್ಯೆ ನಿಮಗೆ ಬಹಳ ನೋವು ಉಂಟು ಮಾಡಲಿದೆ. ಕುಟುಂಬ, ಪ್ರೀತಿ ಪ್ರೇಮ, ಸ್ನೇಹಿತರ ಇತರ ಸಂಬಂಧದ ನಡುವೆ ವೈಮ ನಸ್ಸು ಉಂಟಾಗಲಿದೆ.
ಕನ್ಯಾ ರಾಶಿ: ಕನ್ಯಾ ರಾಶಿ ಅವರಿಗೆ ಈ ದಿನ ಬಹಳ ಉತ್ತಮ ಫಲವಿದೆ. ಈ ದಿನ ನಿಮ್ಮ ಕೆಲಸ ಕಾರ್ಯ ನಿರ್ವಿಘ್ನವಾಗಿ ಸಾಗಲಿದೆ. ಆತ್ಮವಿಶ್ವಾಸ ಹೆಚ್ಚಾಗಲಿದೆ. ಸಾಮಾಜಿಕ ರಂಗದಲ್ಲಿ ಗೌರವ ಪ್ರಾಪ್ತಿಯಾಗಲಿದೆ. ಅನೇಕ ದಿನದಿಂದ ನೀವು ಅಂದುಕೊಂಡ ಕೆಲವು ಯೋಜನೆ ಇಂದು ಕೈಗೂಡುವ ನಿರೀಕ್ಷೆ ನಿಮಗೆ ಬರಲಿದೆ. ವ್ಯಾಪಾರ ವ್ಯವಹಾರದಲ್ಲಿ ಅಧಿಕ ಮುತುವರ್ತಿ ವಹಿಸಬೇಕು.
ತುಲಾ ರಾಶಿ: ತುಲಾ ರಾಶಿ ಅವರಿಗೆ ಈ ದಿನ ಸಂಬಂಧ ಹಾಗೂ ಹಣಕಾಸಿನ ವಿಚಾರದಲ್ಲಿ ಸಾಕಷ್ಟು ಎಚ್ಚರಿಕೆಯಿಂದ ಮುನ್ನಡೆಯುವುದು ಬಹಳ ಅವಶ್ಯಕವಾಗಿದೆ. ಈ ದಿನ ನಿಮಗೆ ಬಹಳ ಮಿಶ್ರ ಫಲ ಇದೆ. ಸಂಸಾರ, ಸ್ನೇಹಯುತ ಸಂಬಂಧ ವ್ಯವಹಾರದಲ್ಲಿ ಅನಗತ್ಯ ಸಮಸ್ಯೆ ಉಂಟಾಗಬಹುದು ಯಾವುದಕ್ಕೂ ಆತುರ ಪಡದೆ ಯೋಚಿಸಿ ಮುನ್ನಡೆಯಬೇಕು ಆಗ ಎಲ್ಲ ಸಮಸ್ಯೆ ಬಗೆಹರಿಯಲಿದೆ.
ವೃಶ್ಚಿಕ ರಾಶಿ: ವೃಶ್ಚಿಕ ರಾಶಿ ಅವರಿಗೆ ಈ ದಿನ ಕಾರ್ಯಕ್ಷೇತ್ರದಲ್ಲಿ ಬಹಳ ಯಶಸ್ಸು ಸಿಗುವ ಮೂಲಕ ಬಹಳ ಉತ್ತಮವಾದ ದಿನ ಇದಾಗಲಿದೆ. ಹಿಂದಿನ ಮೂರು ದಿನಗಳಿಂದ ಅನುಭವಿಸಿದ್ದ ಸಮಸ್ಯೆ, ಗೊಂದಲ ಎಲ್ಲವೂ ಕೂಡ ಬಹಳ ಸುಲಭವಾಗಿ ಪರಿಹಾರ ಅಗಲಿದೆ. ಕಾರ್ಯಕ್ಷೇತ್ರದಲ್ಲಿ ನೀವು ಮುನ್ನಡೆದರು ಬೇಕಾದ ಸಹಕಾರ ನಿಮಗೆ ಕ್ಲಪ್ತ ಸಮಯದಲ್ಲಿ ಸಿಗುವುದು. ಶನಿ ದೇವರಿಗೆ ಹಾಗೂ ಹನುಮಂತನಿಗೆ ಪೂಜೆ ಸಲ್ಲಿಸಿದರೆ ಮನೋವೈಕಲ್ಯ ಸಮಸ್ಯೆ ಬಗೆಹರಿಯಲಿದೆ.
ಇದನ್ನು ಓದಿ:Daily Horoscope: ಕೊನೆಯ ಶ್ರಾವಣ ಶನಿವಾರ ಈ ದಿನ ಯಾವ ರಾಶಿಗೆ ಒಳಿತು ಆಗಲಿದೆ?
ಧನಸ್ಸು ರಾಶಿ: ಧನಸ್ಸು ರಾಶಿ ಅವರಿಗೆ ಈ ದಿನ ಬಹಳ ಅಶುಭವಾದ ದಿನವಾಗಿದೆ. ಮುಖ್ಯ ವಾದ ಕೆಲಸ ಕಾರ್ಯ ಈ ದಿನ ಮಾಡುವುದು ಬೇಡ. ವ್ಯಾಪಾರ, ವ್ಯವಹಾರ , ಕುಟುಂಬ ಸಂಬಂಧಗಳಿಂದ ಅನೇಕ ವಿಚಾರದಲ್ಲಿ ಒತ್ತಡ ಇತರ ಸಮಸ್ಯೆ ಇರಲಿದೆ.ಇತರರೊಡನೆ ವ್ಯವಹರಿಸುವಾಗ ಸಾಕಷ್ಟು ಜಾಗೃತಿ ವಹಿಸಿರಿ. ಇಂದು ಯಾವುದೇ ಮುಖ್ಯ ನಿರ್ಧಾರ ಕೈಗೊಳ್ಳುವುದು ಬೇಡ.
ಮಕರ ರಾಶಿ: ಮಕರ ರಾಶಿ ಅವರಿಗೆ ಈ ದಿನ ಅತ್ಯುತ್ತಮ ದಿನವಾಗಿದೆ. ಇಷ್ಟಾರ್ಥ ಸಿದ್ಧಿ, ಮನಸ್ಸಿಗೆ ನೆಮ್ಮದಿ ಸಿಗಲಿದೆ. ಮಿತ್ರರ ಜೊತೆ ಇಂದು ಬಹಳ ಉತ್ತಮ ಸಮಯವನ್ನು ನೀವು ಕಳೆಯಲಿದ್ದೀರಿ. ಪ್ರೀತಿ ಪಾತ್ರ ರೊಂದಿಗೆ ವ್ಯವಹರಿಸಿದ್ದ ಕಾರಣ ಮನಸ್ಸಿಗೆ ನೆಮ್ಮದಿ ಸಿಗಲಿದೆ. ದಾಂಪತ್ಯ, ಸ್ನೇಹ ಸಂಬಂಧಗಳು ಇಂದು ಬಹಳ ಚೆನ್ನಾಗಿ ಇರಲಿದೆ. ಮುಖ್ಯವಾದ ಕೆಲವು ಕೆಲಸ ಕಾರ್ಯದಲ್ಲಿ ಕೆಲವು ಅಡೆ ತಡೆ ಕೂಡ ಬರುವ ಸಾಧ್ಯತೆ ಇದೆ.
ಕುಂಭರಾಶಿ: ಕುಂಭ ರಾಶಿ ಅವರಿಗೆ ಈ ದಿನ ಬಹಳ ಚೆನ್ನಾಗಿ ಇರಲಿದೆ. ನಿಮ್ಮ ಕುಟುಂಬ , ಸ್ಮೇಹಿತರಿಂದ ಉತ್ತಮ ಸಹಕಾರ ನಿಮಗೆ ಸಿಗಲಿದೆ. ಮನಸ್ಸಿಗೆ ನೆಮ್ಮದಿ ಕಾರ್ಯಕ್ಷೇತ್ರದಲ್ಲಿ ಯಶಸ್ಸು ಸಿಕ್ಕು ಹೆಗ್ಗಳಿಕೆ ಪ್ರಾಪ್ತಿಯಾಗಲಿದೆ. ಕೆಲಸದಲ್ಲಿ ಮುಳುಗಿ ಹೋಗದಿರಿ. ಮನೆಬಗ್ಗೆ ಕಾಳಜಿ ವಹಿಸಿ. ಕುಟುಂಬಕ್ಕೂ ಕೂಡ ಸಮಯ ನೀಡಿ. ಆತ್ಮವಿಶ್ವಾಸ ವೃದ್ಧಿಯಾಗಿ ಕಾರ್ಯಕ್ಷೇತ್ರದಲ್ಲಿ ಪ್ರಗತಿ ಕೂಡ ಸಿಗಲಿದೆ.
ಮೀನ ರಾಶಿ: ಮೀನ ರಾಶಿ ಅವರಿಗೆ ಈ ದಿನ ಬಹಳ ಉತ್ತಮವಾದ ಭಾಗ್ಯೋದಯದ ದಿನವಾಗಿದೆ. ಹಳೆ ಗೊಂದಲ,ಕ್ಲೇಶಗಳು ಇಂದು ಪರಿಹಾರವಾಗಲಿದೆ. ಸಾಮಾಜಿಕ ಕೆಲಸ ಕಾರ್ಯದಲ್ಲಿ ಬಹಳ ಸಕ್ರಿಯವಾಗಿದ್ದ ಕಾರಣ ನಿಮಗೆ ಗೌರವ ಪ್ರಾಪ್ತವಾಗಲಿದೆ. ಕುಟುಂಬದಿಂದ, ಸ್ನೇಹಿತರಿಂದ ನಿಮಗೆ ಎಲ್ಲ ಕೆಲಸ ಕಾರ್ಯಕ್ಕೂ ಕೂಡ ಸಹಕಾರ ಸಿಗಲಿದೆ.