ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Daily Horoscope: ಪುಷ್ಯ ನಕ್ಷತ್ರದ ಅಧಿಪತಿ ಶನಿ ಯಾವ ರಾಶಿಗೆ ಒಳಿತು ಮಾಡಲಿದೆ?

ಇಂದು ವಿಶ್ವ ವಸು ನಾಮ ಸಂವತ್ಸರದ ದಕ್ಷಿಣಾಯನ ವರ್ಷ ಋತು ಶ್ರಾವಣ ಮಾಸದ ಕೃಷ್ಣ ಪಕ್ಷದ ತ್ರಯೋದಶಿ ತಿಥಿ, ಪುಷ್ಯ ನಕ್ಷತ್ರದ ಆಗಸ್ಟ್ 21ನೇ ತಾರೀಖಿನ ಈ ದಿನದಂದು ಪುಷ್ಯ ನಕ್ಷತ್ರದ ಅಧಿಪತಿ ಶನಿ ಯಾಗಿದ್ದಾನೆ. ಅದ್ದರಿಂದ ಎಲ್ಲರೂ ಇಂದು ಕೆಲಸ ಕಾರ್ಯವನ್ನು ನಿಧಾನವಾಗಿ ತಾಳ್ಮೆಯುತವಾಗಿ ಮಾಡಬೇಕಾಗುತ್ತದೆ. ಈ ದಿನದ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಅವರು ತಿಳಿಸಿದ ಇಂದಿನ ರಾಶಿ ಭವಿಷ್ಯ ಹೀಗಿದೆ..

ಬೆಂಗಳೂರು: ವಿಶ್ವ ವಸು ನಾಮ ಸಂವತ್ಸರದ ದಕ್ಷಿಣಾಯನ ವರ್ಷ ಋತು ಶ್ರಾವಣ ಮಾಸದ ಕೃಷ್ಣ ಪಕ್ಷದ ತ್ರಯೋದಶಿ ತಿಥಿ, ಪುಷ್ಯ ನಕ್ಷತ್ರದ ಈ ದಿನ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಅವರು ತಿಳಿಸಿದಂತೆ ನಿಮ್ಮ ಭವಿಷ್ಯ(Daily Horoscope) ಹೇಗಿದೆ ಎಂದು ತಿಳಿಯಿರಿ.

ಮೇಷ ರಾಶಿ: ಮೇಷ ರಾಶಿ ಅವರು ತಮ್ಮ ಮನೆಯ ವಿಚಾರವಾಗಿ ಸಂಸಾರದ ಬಗ್ಗೆ ಹೆಚ್ಚಿನ ಗಮನ ಕೊಡಬೇಕಾದ ದಿನ ಇಂದು ಆಗಲಿದೆ. ಅದೇ ರೀತಿ ಆಸ್ತಿ ಪಾಸ್ತಿ ವಿಚಾರವಾಗಿಯೂ ಹೆಚ್ಚಿನ ಗಮನ ವನ್ನು ನೀಡಬೇಕಾಗಿ ಬರುತ್ತದೆ.‌ ಬಿಸಿನೆಸ್ ವ್ಯವಹಾರ ಮಾಡುವವರಿಗೆ ಉತ್ತಮ ಅವಕಾಶ ಒದಗಿ ಬಂದರೂ ಇದು ಕಾರ್ಯಗತವಾಗಲೂ ಸ್ವಲ್ಪ ದಿನಗಳು ಬೇಕಾಗಬಹುದು.

ವೃಷಭ ರಾಶಿ: ಇಂದು ವೃಷಭ ರಾಶಿ ಅವರು ಬಹಳ ಉತ್ತಮ ವಾದ ದಿನವಾಗಲಿದೆ. ಬರವಣಿಗೆ ಗಾರರು, ಸೋಷಿಯಲ್ ಮೀಡಿಯಾ ಬಳಕೆದಾರರು, ಮಾತುಗಾರರು ಇತ್ಯಾದಿ ಅವರಿಗೆ ಉತ್ತಮ ದಿನ ವಾಗಲಿದೆ. ಆತ್ಮವಿಶ್ವಾಸ ಬಹಳ ಚೆನ್ನಾಗಿ ಇದ್ದು ನೆರೆಹೊರೆಯವರಿಂದ ನಿಮಗೆ ಬಹಳಷ್ಟು ಒಳಿತು ಆಗಲಿದೆ

ಮಿಥುನ ರಾಶಿ: ಮಿಥುನ ರಾಶಿಯಲ್ಲಿ ಇರುವವರಿಗೆ ಈ ದಿನ ನೆಮ್ಮದಿ ಪ್ರಾಪ್ತಿ ಯಾಗಲಿದೆ. ನೀವು ಯಾರ ಜನರೊಡನೆ ವಾಸ ಮಾಡ್ತ ಇದ್ದೀರಿ ಅಂತವರಿಂದ ಖುಷಿ ಕಾಣಲಿದ್ದೀರಿ. ಮನೆಯಲ್ಲಿ ಶುಭ ಸಮಾರಂಭ ಕೂಡ ಆಗಲಿದೆ.

ಕಟಕ ರಾಶಿ: ಕಟಕ ರಾಶಿ ಅವರಿಗೆ ಈ ದಿನ ಉತ್ತಮವಾದ ದಿನವಾಗಲಿದ್ದು ಹಿಂದಿನ ಮೂರು ದಿನಗಳ ಇದ್ದ ಸಮಸ್ಯೆಗಳು ನಿವಾರಣೆಯಾಗಲಿದೆ. ಮಿತ್ರತ್ವದಲ್ಲಿ ಇದ್ದಂತಹ ಒಡಕು ಕೂಡ ದೂರ ವಾಗಲಿದ್ದು ಮುಂದಿನ ಮುಖ್ಯ ನಿರ್ಧಾರಗಳಿಗೆ ನಿಮಗೆ ಮಾರ್ಗದರ್ಶನ ಸಿಗಲಿದೆ.

ಸಿಂಹ ರಾಶಿ: ಸಿಂಹ ರಾಶಿ ಅವರಿಗೆ ಸ್ವಲ್ಪ ಕಷ್ಟಕರವಾದ ದಿನ ವಾಗಲಿದೆ. ಮುಖ್ಯವಾದ ವ್ಯವಹಾರ ಗಳನ್ನು ಮಾಡಲು ಇಂದು ಒಳ್ಳೆಯ ದಿನ ಅಲ್ಲವಾಗಿದೆ. ಮಾತು ಕಡಿಮೆ ಮಾಡಿ ಇತರರಿಂದ ಸುಮ್ಮನೆ ಇರುವುದು ಉತ್ತಮ.

ಕನ್ಯಾ ರಾಶಿ: ಕನ್ಯಾ ರಾಶಿ ಅವರಿಗೆ ಇಂದು ಅತ್ಯುತ್ತಮ ವಾದ ದಿನವಾಗಲಿದೆ‌. ಇಷ್ಟಾರ್ಥ ಸಿದ್ಧಿ ಯಾಗಲಿದ್ದು ಮನಸ್ಸಿಗೆ ನೆಮ್ಮದಿ ಕೂಡ ಆಗಲಿದೆ‌. ಮಿತ್ರ ರಿಂದ ಧನ ಆಗಮನ ವಾಗಲಿದ್ದು ಸಂತೋಷ ಕೂಡ ಸಿಗಲಿದೆ.‌‌‌.

ತುಲಾ ರಾಶಿ: ತುಲಾ ರಾಶಿ ಅವರಿಗೆ ಕಾರ್ಯ ಕ್ಷೇತ್ರದಲ್ಲಿ ಇರುವ ಜವಾಬ್ದಾರಿಗಳು ಹೆಚ್ಚಾಗುತ್ತವೆ. ಮನೆಯವರ ಬಗ್ಗೆ ವೈಯಕ್ತಿಕ ಜೀವನದ ಬಗ್ಗೆ ಗಮನ ಕೊಡ ಬೇಕಾಗುತ್ತದೆ. ಆರ್ಥಿಕ ಸುಭದ್ರತೆಯ ಬಗ್ಗೆ ಮುಂದಿನ ಭವಿಷ್ಯದ ಬಗ್ಗೆ ಯೋಚನೆ ಮಾಡಬೇಕಾಗುತ್ತದೆ. ಆದರೆ ನಿಮ್ಮ ಯೋಚನೆ ಕೆಲಸದ ಕಡೆಯೇ ಇರುವತ್ತ ನೀವು ಗಮನ ಹರಿಸಬೇಕಾಗುತ್ತದೆ.

ಇದನ್ನು ಓದಿ:Daily Horoscope: ಕಟಕ ರಾಶಿಗೆ ಶುಕ್ರನು ಪ್ರವೇಶಿಸುವ ಈ ದಿನ ಯಾವ ರಾಶಿಗೆಲ್ಲ ಉತ್ತಮ ಫಲವಿದೆ?

ವೃಶ್ಚಿಕ ರಾಶಿ: ವೃಶ್ಚಿಕ ರಾಶಿ ಅವರಿಗೆ ಭಾಗ್ಯೋದಯವಾದ ದಿನ ಆಗಲಿದೆ. ಹಿರಿಯರ,ದೇವರ ಆಶೀರ್ವಾದ ದೊಂದಿಗೆ ಬಹಳಷ್ಟು ಒಳಿತು ಕೂಡ ಆಗಲಿದೆ. ಕೆಲಸದಲ್ಲಿ ಗೌರವ ಪ್ರಾಪ್ತಿಯಾಗುವ ಜೊತೆಗೆ ಕಾರ್ಯ ಕ್ಷೇತ್ರದಲ್ಲಿ ಕೂಡ ಯಶಸ್ಸು ಸಿಗಲಿದೆ

ಧನಸ್ಸು ರಾಶಿ: ಧನಸ್ಸು ರಾಶಿ ಅವರಿಗೆ ಮನಸ್ಸಿಗೆ ಸ್ವಲ್ಪ ಕ್ಷೇಷಕರವಾದ ದಿನ ಆಗಲಿದೆ.‌ ಹಿಂದಿನ ಮೂರು ದಿನಗಳಲ್ಲಿ ಇದ್ದ ಜಯದ ವಾತಾವರಣ ಇಂದು ಸಿಗುವುದಿಲ್ಲ. ಮನಸ್ಸಿನಲ್ಲಿ ಬಹಳಷ್ಟು ಯೋಚನೆಗಳು ಕಾಡಬಹುದು. ಮುಖ್ಯ ನಿರ್ಧಾರಗಳು ಇಂದು ಬೇಡ. ಮುಖ್ಯ ಮಾತುಕತೆಗಳು ಕೂಡ ಇಂದು ಯಾರೊಂದಿಗೂ ಬೇಡ.

ಮಕರ ರಾಶಿ: ಮಕರ ರಾಶಿ ಅವರಿಗೆ ಈ ದಿನ ಬಹಳ ಉತ್ತಮವಾಗಿ ಇರಲಿದೆ. ಸ್ವಲ್ಪ ಕ್ಷೀಷ್ಟಕರ ವಾದ ಗೋಚರಗಳು ನಡೆಯುತ್ತಿದ್ದರೂ ಸಣ್ಣದಾದರೂ ಒಳಿತು ಆಗಲಿದೆ. ಬೇರೆಯವರಿಂದ ನಿಮಗೆ ಇಂದು ಒಳ್ಳೆಯದು ಆಗಲಿದೆ.

ಕುಂಭರಾಶಿ: ಕುಂಭ ರಾಶಿ ಅವರಿಗೆ ಸಾಮಾಜಿಕ ಕೆಲಸಗಳಲ್ಲಿ ಮನಸ್ಸಿಗೆ ನೆಮ್ಮದಿ ಸಿಗಲಿದೆ. ಅದರ ಜೊತೆ ಆತ್ಮವಿಶ್ವಾಸ ಕೂಡ ಹೆಚ್ಚಾಗಲಿದೆ. ಎಲ್ಲ ಕೆಲಸ ಕಾರ್ಯ ಗಳಲ್ಲಿ ಜಯ ಪ್ರಾಪ್ತಿ ಯಾಗಲಿದ್ದು ಇದ್ದ ಅಡಚಣೆಗಳು ಕೂಡ ಮಯವಾಗುತ್ತದೆ. ಆರೋಗ್ಯದಲ್ಲಿ ಸುಧಾರಣೆ ಕಂಡು ಬರಲಿದೆ.

ಮೀನ ರಾಶಿ: ಮೀನ ರಾಶಿ ಅವರಿಗೆ ಮುಖ್ಯವಾದ ವಿಚಾರಗಳಲ್ಲಿ ಯಾವುದೇ ನಿರ್ಧಾರ ಬೇಡ. ಹಣಕಾಸಿನ ವಿಚಾರಗಳಲ್ಲಿ ಬಹಳಷ್ಟು ಜಾಗೃತಿ ಅವಶ್ಯಕ ವಾಗಿರುತ್ತದೆ. ಹಣ ಕಳೆದುಕೊಳ್ಳುವ ಸಾಧ್ಯತೆ ಕೂಡ ನಿಮಗೆ ಇರಲಿದೆ. ಪೋಷಕರು ಮಕ್ಕಳ ಬಗ್ಗೆ ಹೆಚ್ಚಿನ ಗಮನ ಕೊಡುವ ದಿನ ಆಗಲಿದೆ. ದಿನ ನಿತ್ಯ ಶ್ಲೋಕ ಪಠಣ ಅಭ್ಯಾಸ ಮಾಡಿ ದೇವರ ಆರಾಧನೆ ಮಾಡಿದರೆ ನಿಮಗೆ ಉತ್ತಮ ಫಲ ಕೂಡ ಸಿಗಲಿದೆ.