Daily Horoscope: ಕಟಕ ರಾಶಿಗೆ ಶುಕ್ರನು ಪ್ರವೇಶಿಸುವ ಈ ದಿನ ಯಾವ ರಾಶಿಗೆಲ್ಲ ಉತ್ತಮ ಫಲವಿದೆ?
ವಿಶ್ವ ವಸು ನಾಮ ಸಂವತ್ಸರದ ದಕ್ಷಿಣಾಯನ ವರ್ಷ ಋತು ಶ್ರಾವಣ ಮಾಸದ ಕೃಷ್ಣ ಪಕ್ಷದ ದ್ವಾದಶಿ ತಿಥಿ, ಪುನರ್ವಸು ನಕ್ಷತ್ರದ ಈ ದಿನದಂದು ಕೂಡ ಕೆಲವಡೆ ಕೃಷ್ಣಾಷ್ಟಮಿಯ ಹಬ್ಬದ ಆಚರಣೆ ಮಾಡಲಾಗುತ್ತದೆ. ಇಂದು ಶುಕ್ರನು ಕಟಕ ರಾಶಿಯಲ್ಲಿ ಪ್ರವೇಶ ಮಾಡುತ್ತಿದ್ದು, ಈ ದಿನದ ಭವಿಷ್ಯ ಹೇಗಿದೆ ಎನ್ನುವ ವಿವರ ಇಲ್ಲಿದೆ.

Daily Horoscope

ಬೆಂಗಳೂರು: ವಿಶ್ವ ವಸು ನಾಮ ಸಂವತ್ಸರದ ದಕ್ಷಿಣಾಯನ ವರ್ಷ ಋತು ಶ್ರಾವಣ ಮಾಸದ ಕೃಷ್ಣ ಪಕ್ಷದ ದ್ವಾದಶಿ ತಿಥಿ, ಪುನರ್ವಸು ನಕ್ಷತ್ರದ ಈ ದಿನ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿ ಭವಿಷ್ಯದ (Daily Horoscope) ಬಗ್ಗೆ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ವಿವರಿಸಿದ್ದಾರೆ.
ಮೇಷ ರಾಶಿ: ಇಂದು ಕಟಕ ರಾಶಿಗೆ ಶುಕ್ರ ಪ್ರವೇಶಿಸುತ್ತಿದ್ದು, ಮೇಷ ರಾಶಿಯವರಿಗೆ ಮನಸ್ಸಿಗೆ ನೆಮ್ಮದಿ ಪ್ರಾಪ್ತಿಯಾಗಲಿದೆ. ಹೊಸ ವಾಹನ, ಮನೆ ಖರೀದಿಯ ಭಾಗ್ಯ ದೊರೆಯಲಿದೆ. ನಿಮ್ಮ ಮನೆಯಲ್ಲಿ, ಕೆಲಸದಲ್ಲಿ ನಿಮ್ಮ ಕ್ರಿಯಾತ್ಮಕತೆಗೆ ಬೆಂಬಲ ಸಿಗುವ ದಿನ ಇದಾಗಿದ್ದು ಸುಖ ಶಾಂತಿ ನೆಮ್ಮದಿ ಪ್ರಾಪ್ತಿಯಾಗಲಿದೆ.
ವೃಷಭ ರಾಶಿ: ಇಂದು ವೃಷಭ ರಾಶಿ ಅವರು ಬಹಳ ಯಶಸ್ಸು ಪ್ರಾಪ್ತಿಯಾಗಲಿದೆ. ಬರೆವಣಿಗೆ ಗಾರರಿಗೆ ಸಾಹಿತಿಗಳಿಗೆ ಹಾಗೂ ಮಾತುಗಾರರಿಗೆ ಈ ದಿನ ಬಹಳ ಉತ್ತಮವಾಗಿ ಇರಲಿದೆ. ತಾಯಿಯ ಆರೋಗ್ಯದ ಬಗ್ಗೆ ಗಮನ ಹರಿಸಬೇಕು. ಮಾಧ್ಯಮ ರಂಗದಲ್ಲಿ ರುವವರಿಗೆ, ಸಮೂಹ ಸಂವಹನ ಮಾಧ್ಯಮದಲ್ಲಿ ಇರುವವರಿಗೆ ಇತ್ಯಾದಿಯಲ್ಲಿ ಇರುವವರು ಕೆಲಸ ಚೆನ್ನಾಗಿ ಇರಲಿದೆ.
ಮಿಥುನ ರಾಶಿ: ಮಿಥುನ ರಾಶಿಯಲ್ಲಿ ಇರುವವರಿಗೆ ಈ ದಿನ ಅತ್ಯುತ್ತಮವಾಗಿರಲಿದೆ. ಮನಸ್ಸಿಗೆ ನೆಮ್ಮದಿ ಪ್ರಾಪ್ತಿಯಾಗಲಿದ್ದು, ಆತ್ಮವಿಶ್ವಾಸ ವೃದ್ಧಿಯಾಗಲಿದೆ. ಕಾರ್ಯಕ್ಷೇತ್ರದಲ್ಲಿ ಪ್ರಗತಿ ಸಾಧ್ಯವಾಗಲಿದೆ. ಕುಟುಂಬದಲ್ಲಿಯೂ ಕೂಡ ಗೌರವ ಸಿಗಲಿದೆ. ಧನಾಗಮವಾಗಲಿದೆ. ಅಂದುಕೊಂಡ ಕೆಲಸ ಕಾರ್ಯ ನಿರ್ವಿಘ್ನವಾಗಿ ಸಾಗಲಿದೆ.
ಕಟಕ ರಾಶಿ: ಕಟಕ ರಾಶಿಯವರಿಗೆ ಕೂಡ ಈ ದಿನ ಬಹಳ ಉತ್ತಮವಾಗಿ ಇರಲಿದೆ. ಧನಾಗಮನವಾಗಿ ಆರ್ಥಿಕ ಸದೃಢತೆ ಇರಲಿದೆ. ಎಲ್ಲ ಕೆಲಸ ಕಾರ್ಯಗಳು ಅಂದುಕೊಂಡಂತೆ ಸಾಗಲಿದೆ. ನಿಮ್ಮ ಶತ್ರುಗಳನ್ನು ನಿಧಾನವಾಗಿ ಹಿಮ್ಮೆಟ್ಟಿಸುವ ಕೆಲಸವನ್ನು ನೀವು ಈಗ ಮಾಡುತ್ತೀರಿ. ವ್ಯಾಪಾರ, ವ್ಯವಹಾರದಲ್ಲಿ ಪ್ರಗತಿ ಸಾಧ್ಯವಿದೆ. ವಿದ್ಯಾರ್ಥಿಗಳ ಜ್ಞಾನರ್ಜನೆಗೆ ಈ ದಿನ ಬಹಳ ಉತ್ತಮ.
ಸಿಂಹ ರಾಶಿ: ಸಿಂಹ ರಾಶಿಯವರಿಗೆ ಇಂದು ಉತ್ತಮ ದಿನವಲ್ಲ. ಕೆಲವೊಂದು ವಿಚಾರಕ್ಕೆ ನೀವು ಅವಮಾನಕ್ಕೆ ಒಳಗಾಗುವ ಸಾಧ್ಯತೆ ಇದೆ. ಅದರಲ್ಲೂ ಹೆಂಗಸಿನ ಶಾಪದಿಂದ ನಿಮಗೆ ಕೇಡು ಆಗುವ ಸಾಧ್ಯತೆ ಇದೆ. ಹೀಗಾಗಿ ಕಾರ್ಯ ಕ್ಷೇತ್ರ, ವ್ಯವಹಾರದಲ್ಲಿ ಅತ್ಯಂತ ಗೌರವಯುತವಾಗಿ ಇರುವುದು ಬಹಳ ಉತ್ತಮ ಎನ್ನಬಹುದು. ಆದಷ್ಟು ತಾಳ್ಮೆಯಿಂದ ಇದ್ದರೆ ಎಲ್ಲ ಸಮಸ್ಯೆ ಪರಿಹಾರವಾಗಲಿದೆ.
ಕನ್ಯಾ ರಾಶಿ: ಕನ್ಯಾ ರಾಶಿಯವರಿಗೆ ಇಂದು ಉತ್ತಮ ದಿನವಾಗಲಿದೆ. ಇಷ್ಟಾರ್ಥ ನೆರವೇರಿ ಮನಸ್ಸಿಗೆ ನೆಮ್ಮದಿ ಸಿಗಲಿದೆ. ಅದಾಗ್ಯೂ ಇಂದು ಕೆಲವು ಅನಿರೀಕ್ಷಿತ ಘಟನೆಗಳು ನಿಮ್ಮನ್ನು ಗೊಂದಲಕ್ಕೆ ದೂಡಲಿದೆ. ಮನೆಯ ಗುರು ಹಿರಿಯರ ಆಶೀರ್ವಾದ ಇದ್ದರೆ ಎಲ್ಲ ಕೆಲಸ ಕಾರ್ಯ ಬಹಳ ಸುಲಭಕ್ಕೆ ಈಡೇರಲಿದೆ.
ತುಲಾ ರಾಶಿ: ತುಲಾ ರಾಶಿಯವರಿಗೆ ಈ ದಿನ ಕಷ್ಟದಿಂದ ಕೂಡಿರಲಿದೆ. ಸ್ತ್ರೀಯರಿಂದ ನಿಮ್ಮ ಕೆಲಸ ಕಾರ್ಯದಲ್ಲಿ ಸಾಕಷ್ಟು ಅಡಚಣೆ ಉಂಟಾಗುವ ಸಾಧ್ಯತೆ ಇದೆ. ಮನಸ್ಸಿಗೆ ಕ್ಲೇಶ ಮತ್ತು ಗೌರವಕ್ಕೆ ಧಕ್ಕೆ ಉಂಟಾಗಲಿದೆ. ಹೀಗಾಗಿ ಇನ್ನು 20 ದಿನದ ತನಕ ತುಲಾ ರಾಶಿಯವರು ಸ್ತ್ರೀಯರ ಜತೆ ವೈಮನಸ್ಸು ಮಾಡಿಕೊಳ್ಳದಿದ್ದರೆ ಬಹಳ ಉತ್ತಮ ಎನ್ನಬಹುದು.
ವೃಶ್ಚಿಕ ರಾಶಿ: ವೃಶ್ಚಿಕ ರಾಶಿಯವರಿಗೆ ಈ ದಿನ ಬಹಳ ಉತ್ತಮವಾಗಿ ಇರಲಿದೆ. ಇಂದು ಈ ರಾಶಿಯವರಿಗೆ ಅದೃಷ್ಟ ಖಲಾಯಿಸುತ್ತದೆ. ಭಾಗ್ಯ ಸ್ಥಾನದಲ್ಲಿರುವ ಶುಕ್ರ ಬಹಳ ಒಳಿತಿನ ಫಲ ತರಲಿದ್ದು ಮಹತ್ವದ ಬದಲಾವಣೆ ನಿಮ್ಮ ಜೀವನದಲ್ಲಿ ಉಂಟಾಗಲಿದೆ. ನಿಮ್ಮ ಮನೆಯಲ್ಲಿ ಕೆಲವು ಕೆಲಸ ಕಾರ್ಯ ಅಂದುಕೊಂಡಂತೆ ನಡೆಯಲಿದ್ದು, ನಿಮಗೆ ಅದೃಷ್ಟದ ದಿನವಾಗಲಿದೆ. ಮನಸ್ಸಿಗೆ ನೆಮ್ಮದಿ ಸಿಗಲಿದೆ. ಆತ್ಮವಿಶ್ವಾಸ ಹೆಚ್ಚಾಗಲಿದ್ದು, ಕೆಲಸದಲ್ಲಿ ಗೌರವ ಪ್ರಾಪ್ತಿಯಾಗಲಿದೆ.
ಧನಸ್ಸು ರಾಶಿ: ಧನಸ್ಸು ರಾಶಿಯವರಿಗೆ ಇಂದು ಉತ್ತಮ ದಿನವಾಗಲಿದೆ. ಹಿಂದೆ ಇದ್ದ ಕ್ಲೇಶ, ವೈಮನಸ್ಸಿನ ಸಮಸ್ಯೆ ಬಹಳ ಸುಲಭಕ್ಕೆ ಪರಿಹಾರ ಆಗಲಿದೆ. ವೈಮನಸ್ಸು ದೂರಾಗಿ ಕುಟುಂಬದಲ್ಲಿ ನೆಮ್ಮದಿಯ ವಾತಾವರಣ ಸೃಷ್ಟಿಯಾಗಲಿದೆ. ನೀವು ನಿಮ್ಮ ಜೀವನವನ್ನು ನಿಮಗೆ ಬೇಕಾದಂತೆ ಮುನ್ನಡೆಸಲು ಬೇಕಾದ ಅಷ್ಟು ಸಹಕಾರಗಳು ಸಿಗಲಿದೆ.
ಇದನ್ನು ಓದಿ:Daily Horoscope: ದಿನ ಭವಿಷ್ಯ- ಆರಿದ್ರಾ ನಕ್ಷತ್ರದ ಈ ದಿನ ಯಾವ ರಾಶಿಗೆ ಉತ್ತಮ ಫಲವಿದೆ ಗೊತ್ತಾ?
ಮಕರ ರಾಶಿ: ಮಕರ ರಾಶಿಯವರಿಗೆ ಈ ದಿನ ಬಹಳ ಕಷ್ಟದಿಂದ ಕೂಡಿರಲಿದೆ. ದಾಂಪತ್ಯ, ಸ್ನೇಹ ಸಂಬಂಧದಲ್ಲಿ ವೈಮನಸ್ಸು ಮೂಡಲಿದೆ. ಮುಖ್ಯವಾದ ಕೆಲವು ಕೆಲಸ ಕಾರ್ಯದಲ್ಲಿ ತೊಂದರೆ ಉಂಟಾಗಲಿದೆ. ಈಗಾಗಲೇ ಉದ್ಭವಿಸಿದ್ದ ಸಮಸ್ಯೆಗೆ ಈ ದಿನ ಪರಿಹಾರ ಕಂಡುಕೊಂಡರೆ ತೊಂದರೆ ಇಲ್ಲ. ಶುಕ್ರನ ಪ್ರವೇಶದಿಂದ ಅನಗತ್ಯ ಸಮಸ್ಯೆಗೆ ನೀವು ಗುರಿಯಾಗುವ ಸಾಧ್ಯತೆ ಇದೆ.
ಕುಂಭರಾಶಿ: ಕುಂಭ ರಾಶಿಯವರಿಗೆ ಈ ದಿನ ಶುಕ್ರನ ಪ್ರವೇಶದಿಂದಾಗಿ ಕಾರ್ಯಕ್ಷೇತ್ರದಲ್ಲಿ ಸಾಕಷ್ಟು ಸಮಸ್ಯೆ ಉಂಟಾಗಲಿದೆ. ನಿಮ್ಮ ದಾಂಪತ್ಯ ಜೀವನದಲ್ಲಿ ಕೆಲವೊಂದಿಷ್ಟು ಇರಿಸು ಮುರಿಸು ಆಗುವ ಸಾಧ್ಯತೆ ಇದೆ. ಕೆಲವೊಂದಿಷ್ಟು ಮನಸ್ಥಾಪ ಉಂಟಾಗಲಿದ್ದು ಎಲ್ಲವನ್ನು ಆಯಾ ಕಾಲಕ್ಕೆ ಬಗೆಹರಿಸಿಕೊಳ್ಳಬೇಕು. ಸ್ತ್ರೀಯರಿಂದ ಅವಮಾನಕ್ಕೆ ಒಳಗಾಗುವ ಸಾಧ್ಯತೆ ಇದ್ದು, ಕುಟುಂಬ ಹಾಗೂ ಕಚೇರಿ ಕೆಲಸದ ವೇಳೆ ಸ್ತ್ರೀಯರೊಂದಿಗೆ ವಿವೇಚನೆಯಿಂದ ವರ್ತಿಸಿದರೆ ಉತ್ತಮ.
ಮೀನ ರಾಶಿ: ಮೀನ ರಾಶಿಯವರಿಗೆ ಇಂದು ಬಹಳ ಅತ್ಯುತ್ತಮ ದಿನವಾಗಲಿದೆ. ಮನಸ್ಸಿಗೆ ನೆಮ್ಮದಿ, ಆತ್ಮವಿಶ್ವಾಸ ವೃದ್ಧಿ, ಧನಾಗಮವಾಗಲಿದೆ. ಅಂದುಕೊಂಡ ಕೆಲಸ ಕಾರ್ಯ ಉತ್ತಮವಾಗಿ ಸಾಗಲಿದೆ. ಹೂಡಿಕೆಯಲ್ಲಿ ನಿರೀಕ್ಷೆಗೂ ಮೀರಿ ಲಾಭ ಸಿಗಲಿದೆ. ಸಾಮಾಜಿಕ ರಂಗದಲ್ಲಿ ಕಚೇರಿ ಕೆಲಸದಲ್ಲಿ ಗೌರವ ಪ್ರಾಪ್ತಿಯಾಗಲಿದೆ. ಲಕ್ಷ್ಮೀ ದೇವಿಯ ಆರಾಧನೆ ಮಾಡಿದರೆ ನಿಮಗೆ ಉತ್ತಮ ಫಲ ಕೂಡ ಸಿಗಲಿದೆ.