ಬೆಂಗಳೂರು: ವಿಶ್ವ ವಸು ನಾಮ ಸಂವತ್ಸರದ ದಕ್ಷಿಣಾಯನ ವರ್ಷ ಋತು ಶ್ರಾವಣ ಮಾಸದ ಶುಕ್ಲ ಪಕ್ಷದ ದಶಮಿ ತಿಥಿ, ಅನುರಾಧಾ ನಕ್ಷತ್ರದ ಈ ದಿನ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ತಿಳಿಸಿದ್ದಾರೆ.
ಮೇಷ ರಾಶಿ: ಇಂದು ಅನುರಾಧಾ ನಕ್ಷತ್ರ ಇದ್ದು, ಮೇಷ ರಾಶಿಯವರಿಗೆ ಮನಸ್ಸಿಗೆ ಸ್ವಲ್ಪ ಕಿರಿ ಕಿರಿ ಇರಲಿದೆ. ಕೆಲವು ಮುಖ್ಯ ವಿಚಾರಗಳಲ್ಲಿ ಇಂದು ನಿರ್ಧಾರ ಮಾಡುವುದು ಒಳ್ಳೆಯದಲ್ಲ. ನಿಮ್ಮ ಪ್ರೀತಿ ಪಾತ್ರರಿಂದ ಬೇಡಿಕೆಗಳು ಪ್ರಾಪ್ತಿಯಾಗುವುದಿಲ್ಲ.
ವೃಷಭ ರಾಶಿ: ಇಂದು ವೃಷಭ ರಾಶಿಯವರಿಗೆ ಬಹಳ ಅತ್ಯುತ್ತಮವಾದ ದಿನ. ಮನಸ್ಸಿಗೆ ನೆಮ್ಮದಿ ದೊರೆಯಲಿದ್ದು, ದಾಂಪತ್ಯ ಹಾಗೂ ಮಿತ್ರತ್ವದಲ್ಲೂ ಒಳಿತಗಾಲಿದೆ. ಕಾರ್ಯಕ್ಷೇತ್ರದಲ್ಲಿಯೂ ಎಲ್ಲರಿಂದಲೂ ನಿಮಗೆ ಸಹಕಾರ ಪ್ರಾಪ್ತಿಯಾಗಲಿದೆ.
ಮಿಥುನ ರಾಶಿ: ಮಿಥುನ ರಾಶಿಯವರಿಗೆ ಇಂದು ಅತ್ಯುತ್ತಮ ದಿನ. ಸಾಮಾಜಿಕ ವ್ಯವಹಾರದಲ್ಲಿ ಪಾಲ್ಗೊಂಡು ಹೆಚ್ಚಿನ ಸಂವಹನವನ್ನು ಇಂದು ನಡೆಸುತ್ತೀರಿ. ಸೋಶಿಯಲ್ ಮೀಡಿಯಾ ಬಳಕೆದಾರರಿಗೂ ಉತ್ತಮ ದಿನವಾಗಲಿದೆ. ಇಂದು ನೀವು ಅಂದುಕೊಂಡಂತಹ ಕೆಲಸ ಕಾರ್ಯಗಳು ನಡೆಯಲಿದೆ.
ಕಟಕ ರಾಶಿ: ಕಟಕ ರಾಶಿಯವರ ಮಾನಸಿಕ ನೆಮ್ಮದಿ ಸ್ವಲ್ಪ ಕಡಿಮೆಯಾಗಲಿದ್ದು, ಹಣಕಾಸಿನ ವಿಚಾರ ಹಾಗೂ ಬಿಸಿನೆಸ್ ವ್ಯವಹಾರಗಳಲ್ಲಿ ಇಂದು ಮುಖ್ಯವಾದ ವಿಚಾರ ಬೇಡ. ಮಕ್ಕಳಿಂದ ನಿಮಗೆ ಸ್ವಲ್ಪ ಜವಾಬ್ದಾರಿಗಳು ಹೆಚ್ಚಾಗಬಹುದು. ನಿಮ್ಮ ಕೌಶಲ್ಯತೆ, ಜ್ಞಾನ ಹೆಚ್ಚಾಗಿ ಬಳಸಿಕೊಳ್ಳುವ ಮೂಲಕ ಕ್ರಿಯಾಶೀಲರಾಗಿರಿ.
ಸಿಂಹ ರಾಶಿ: ಸಿಂಹ ರಾಶಿಯವರಿಗೆ ಇಂದು ಮನೆಯ ಜವಾಬ್ದಾರಿ, ಆಸ್ತಿ ಪಾಸ್ತಿ ವಿಚಾರ ಹಾಗೂ ತಾಯಿಯ ಬಗ್ಗೆ ಇರುವ ಜವಾಬ್ದಾರಿ ಹೆಚ್ಚಾಗಬಹುದು. ವ್ಯವಹಾರಗಳಲ್ಲಿ ಇರುವವರಿಗೆ ಇಂದು ಹೆಚ್ಚಿನ ತಲೆ ನೋವು ಕಾಡಲಿದೆ. ನಾಳೆ ಎಲ್ಲವೂ ಪರಿಹಾರವಾಗಲಿದೆ.
ಕನ್ಯಾ ರಾಶಿ: ಕನ್ಯಾ ರಾಶಿಯವರಿಗೆ ಇಂದು ಅತ್ಯುತ್ತಮ ದಿನವಾಗಲಿದ್ದು, ನಿಮ್ಮ ಸಹೋದರರಿಂದ ಹಾಗೂ ಬಂಧು ವರ್ಗದಿಂದ ಎಲ್ಲರೀತಿಯ ಸಹಕಾರ ಪ್ರಾಪ್ತಿಯಾಗಲಿದೆ. ಆತ್ಮವಿಶ್ವಾಸ ಹೆಚ್ಚಾಗಲಿದ್ದು, ಇಂದಿನ ಕೆಲಸವನ್ನುಯಶಸ್ವಿಯಾಗಿ ನಿಭಾಯಿಸುತ್ತೀರಿ.
ತುಲಾ ರಾಶಿ: ತುಲಾ ರಾಶಿಯವರಿಗೆ ಹಣಕಾಸು ಹಾಗೂ ಸಂಸಾರದ ವಿಚಾರದಲ್ಲಿ ನೆಮ್ಮದಿ ಇರುವುದಿಲ್ಲ. ಮುಖ್ಯವಾದ ಕೆಲವು ವಿಚಾರಗಳಲ್ಲಿ ಹೇಗೆ ಇರಬೇಕು, ಏನು ಮಾಡಬೇಕು ಎಂಬುದು ತಿಳಿಯುವುದಿಲ್ಲ. ಸಂಸಾರದಲ್ಲಿ ನಿಮ್ಮ ಮನೆಯವರ ಜತೆಗೆ ನೆಮ್ಮದಿಯಿಂದ ದಿನ ಕಳೆಯಬಹುದು.
ವೃಶ್ಚಿಕ ರಾಶಿ: ವೃಶ್ಚಿಕ ರಾಶಿಯವರಿಗೆ ಈ ದಿನ ಬಹಳ ಉತ್ತಮವಾಗಿ ಇರಲಿದೆ. ಹಿಂದಿನ ದಿನಗಳಲ್ಲಿ ಇದ್ದ ಮನಸ್ಸಿನ ಬೇಸರ ಇತರ ಸಮಸ್ಯೆ ಇಂದು ಮಾಯವಾಗುತ್ತದೆ. ನಿಮ್ಮ ರಾಶಿಯಲ್ಲಿ ಚಂದ್ರ ಇರುವುದರಿಂದ ಶುಭವಾಗಲಿದೆ. ಮುಂದಿನ ದಿನಗಳಿಗೂ ಉತ್ತಮ ಮಾರ್ಗದರ್ಶನ ನಿಮಗೆ ಸಿಗಲಿದೆ.
ಇದನ್ನು ಓದಿ:Daily Horoscope: ಚಿತ್ತ ನಕ್ಷತ್ರದ ಈ ದಿನ ಯಾವ ರಾಶಿಗೆ ಉತ್ತಮ ಫಲವಿದೆ?
ಧನಸ್ಸು ರಾಶಿ: ಧನಸ್ಸು ರಾಶಿಯವರಿಗೆ ಈ ದಿನ ಅಷ್ಟು ಉತ್ತಮವಾಗಿಲ್ಲ. ಎರಡು-ಮೂರು ದಿನಗಳ ಹಿಂದೆ ಒಳ್ಳೆಯ ರೀತಿಯಲ್ಲಿ ಇದ್ದ ಮಿತ್ರರು ಇಂದು ದೂರವಾಗುತ್ತಾರೆ. ನಿಮಗೆ ಬೇಕಾದವರು ಇಂದು ಸರಿಯಾಗಿ ವರ್ತಿಸದೆ ಇರಬಹುದು. ಮುಖ್ಯವಾದ ವ್ಯವಹಾರದಲ್ಲೂ ಒಡಕು ಉಂಟಾಗುವ ಸಾಧ್ಯತೆ ಇರುತ್ತದೆ. ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ವಹಿಸಬೇಕಾಗುತ್ತದೆ.
ಮಕರ ರಾಶಿ: ಮಕರ ರಾಶಿಯವರಿಗೆ ಈ ದಿನ ಬಹಳ ಉತ್ತಮವಾಗಿರಲಿದೆ. ಮನಸ್ಸಿಗೆ ನೆಮ್ಮದಿ ಇದ್ದು, ಮಿತ್ರರಿಂದ ಧನಾಗಮನವಾಗಲಿದೆ. ಅದೇ ರೀತಿ ಮಿತ್ರರಿಂದ ಸೌಹಾರ್ದ ಮನೋಭಾವ ಹೆಚ್ಚಾಗಿ ಆತ್ಮವಿಶ್ವಾಸ ವೃದ್ಧಿಸಲಿದೆ.
ಕುಂಭರಾಶಿ: ಕುಂಭ ರಾಶಿಯವರಿಗೆ ಈ ದಿನ ಕಾರ್ಯ ಕ್ಷೇತ್ರದಲ್ಲಿ ಯಶಸ್ಸು ಸಿಗಲಿದೆ. ಆದರೆ ಕೆಲಸ ಮತ್ತು ಮನೆಯನ್ನು ಸರಿಯಾಗಿ ನಿಭಾಯಿಸುವುದು ಇಂದು ಕಷ್ಟವಾಗಬಹುದು. ಆದರೆ ನೀಡಿರುವ ಸಮಯಕ್ಕಿಂತ ಮುಂಚಿತವಾಗಿ ಯಾವುದೇ ಕೆಲಸಗಳನ್ನು ಪೂರ್ಣ ಮಾಡಿದರೆ ಒಳಿತು. ಮನೆಯಲ್ಲೂ ನೆಮ್ಮದಿ ಸಿಗಲಿದ್ದು, ಉತ್ತಮ ದಿನವಾಗಲಿದೆ.
ಮೀನ ರಾಶಿ: ಮೀನ ರಾಶಿಯವರಿಗೆ ಭಾಗ್ಯೋದಯದ ದಿನವಾಗಲಿದೆ. ಮನಸ್ಸಿಗೆ ನೆಮ್ಮದಿ ಇದ್ದು ಭಗವಂತನ ಅನುಗ್ರಹ ಹಾಗೂ ಹಿರಿಯರ ಅನುಗ್ರಹದಿಂದ ಇಂದು ಎಲ್ಲವೂ ಸಾಧ್ಯವಾಗಲಿದೆ. ದಿನ ನಿತ್ಯ ಭಗವಂತನ ಧ್ಯಾನ ಹಾಗೂ ಶ್ಲೋಕ ಪಠಣವನ್ನು ಓದುವ ಅಭ್ಯಾಸ ಮಾಡಿಕೊಳ್ಳಿ.