Daily Horoscope: ಚಿತ್ತ ನಕ್ಷತ್ರದ ಈ ದಿನ ಯಾವ ರಾಶಿಗೆ ಉತ್ತಮ ಫಲವಿದೆ?
ವಿಶ್ವ ವಸು ನಾಮ ಸಂವತ್ಸರದ ದಕ್ಷಿಣಾಯನ ವರ್ಷ ಋತು ಶ್ರಾವಣ ಮಾಸದ ಶುಕ್ಲಪಕ್ಷದ ಸಪ್ತಮಿ ತಿಥಿ, ಚಿತ್ತ ನಕ್ಷತ್ರದ ಜುಲೈ 31ರಂದು ಯಾವ ರಾಶಿಯವರ ಭವಿಷು ಹೇಗಿದೆ ಎನ್ನುವುದನ್ನು ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ವಿವರಿಸಿದ್ದಾರೆ.

Horoscope

ಬೆಂಗಳೂರು: ವಿಶ್ವ ವಸು ನಾಮ ಸಂವತ್ಸರದ ದಕ್ಷಿಣಾಯನ ವರ್ಷ ಋತು ಶ್ರಾವಣ ಮಾಸದ ಶುಕ್ಲ ಪಕ್ಷದ ಸಪ್ತಮಿ ತಿಥಿ, ಚಿತ್ತ ನಕ್ಷತ್ರದ ಈ ದಿನ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿಯವರ ಭವಿಷ್ಯ ಹೇಗಿದೆ ಎನ್ನುವುದನ್ನು ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ವಿವರಿಸಿದ್ದಾರೆ.
ಮೇಷ ರಾಶಿ: ಇಂದು ಚಿತ್ತ ನಕ್ಷತ್ರ ಇದ್ದು ಇದರ ಅಧಿಪತಿ ಕುಜನಾಗಿದ್ದು ಯಾವುದೇ ಕಾರ್ಯ ಕ್ಷೇತ್ರದಲ್ಲಿ ತಾಳ್ಮೆಯಿಂದ ಇರುವುದು ಬಹಳ ಮುಖ್ಯ. ಮೇಷ ರಾಶಿಯವರಿಗೆ ಈ ದಿನ ಕಾರ್ಯ ಕ್ಷೇತ್ರದಲ್ಲಿ ಯಶಸ್ಸು ಸಿಗಲಿದ್ದು ಶುಭವನ್ನು ಕಾಣಲಿದ್ದೀರಿ. ಮನಸ್ಸಿಗೂ ನೆಮ್ಮದಿ ಪ್ರಾಪ್ತವಾಗಲಿದ್ದು ಮಾನಸಿಕ ನೆಮ್ಮದಿಯೂ ಸಿಗಲಿದೆ.
ವೃಷಭ ರಾಶಿ: ಇಂದು ವೃಷಭ ರಾಶಿಯವರಿಗೆ ಮಧ್ಯಾಹ್ನವರೆಗೂ ನಿಮ್ಮ ಬುದ್ದಿ, ಕೌಶಲ್ಯದಿಂದ ಮಾಡುವ ಕೆಲಸಗಳಿಗೆ ಯಶಸ್ಸು ಸಿಗಲಿದೆ. ಮಧ್ಯಾಹ್ನ ನಂತರ ಇದರ ಫಲವನ್ನು ನೀವು ಯಶಸ್ವಿಯಾಗಿ ಪಡೆಯಲಿದ್ದೀರಿ. ಇಂದು ಶುಭವಾದ ದಿನ ನಿಮ್ಮದಾಗಲಿದೆ.
ಮಿಥುನ ರಾಶಿ: ಮಿಥುನ ರಾಶಿಯಲ್ಲಿ ಇರುವವರಿಗೆ ಮಧ್ಯಾಹ್ನದವರೆಗೂ ಸಂಸಾರದ ಜಂಜಾಟಗಳು ಕಾಡುತ್ತಿರುತ್ತವೆ. ಮಾನಸಿಕ ನೆಮ್ಮದಿ ನಿಮ್ಮನ್ನು ಕೆಡಿಸುವ ಸಾಧ್ಯತೆ ಇದೆ. ಹಾಗಾಗಿ ಬಹಳಷ್ಟು ನೆಮ್ಮದಿಯಿಂದ ಯಾವುದೇ ಕೆಲಸವನ್ನು ಮಾಡಿ.
ಕಟಕ ರಾಶಿ: ಕಟಕ ರಾಶಿಯವರಿಗೆ ಇಂದು ಮಧ್ಯಾಹ್ನದವರೆಗೂ ಎಲ್ಲವೂ ಅಂದುಕೊಂಡಂತೆ ಆಗಲಿದೆ. ಆದರೆ ಹೊಸ ಸಮಸ್ಯೆಯೊಂದು ನಿಮ್ಮನ್ನು ಕಾಡುವ ಸಾದ್ಯತೆ ಇದೆ.
ಸಿಂಹ ರಾಶಿ: ಸಿಂಹ ರಾಶಿಯವರಿಗೆ ಇಂದು ಸಂಸಾರದ ತಾಪತ್ರಯಗಳು ಹೆಚ್ಚಾಗಿ ಕಾಡಬಹುದು. ಮನೆಯಲ್ಲಿ ಜಗಳ, ಕಿರಿಕಿರಿ ಉಂಟಾಗುವ ಸಾಧ್ಯತೆ ಇದೆ. ಆದರೆ ಮಿತ್ರರಿಂದ ನಿಮಗೆ ಖುಷಿ ಸಿಗಲಿದ್ದು ಉತ್ತಮ ಸಮಯ ಅವರೊಂದಿಗೆ ಕಳೆಯುತ್ತೀರಿ.
ಕನ್ಯಾ ರಾಶಿ: ಕನ್ಯಾ ರಾಶಿಯವರಿಗೆ ಮಧ್ಯಾಹ್ನದವರೆಗೂ ಬಹಳ ಚೆನ್ನಾಗಿದ್ದು ಬಹಳ ಉತ್ತಮವಾಗಿ ಕೆಲಸ ಕಾರ್ಯಗಳಲ್ಲಿ ಭಾಗಿಯಾಗುತ್ತೀರಿ. ಆದರೆ ಬೇರೆಯರಿಂದ ನಿಮಗೆ ಟೀಕೆಗಳು ಕೇಳಿ ಬರಬಹುದು. ಇದಕ್ಕೆ ಹೆಚ್ಚು ತಲೆಕೆಡಿಸಿಕೊಳ್ಳದೆ ಆರಾಮಾವಾಗಿ ಇರಲು ಪ್ರಯತ್ನ ಪಡಿ.
ತುಲಾ ರಾಶಿ: ತುಲಾ ರಾಶಿಯವರಿಗೆ ಈ ದಿನ ಸ್ವಲ್ಪ ಸಮಯ ಮನಸ್ಸಿಗೆ ಬಹಳಷ್ಟು ಕ್ಷೇಶ ಉಂಟಾಗಲಿದೆ. ಹಿಂದಿನ ದಿನ ಜಗಳ ಮನಸ್ತಾಪ ಕೂಡ ಆಗಿರಬಹುದು. ಇದಕ್ಕೆಲ್ಲ ಉತ್ತರ ಸಿಗಲಿದ್ದು, ಮನಸ್ಸಿಗೆ ಶಾಂತಿ ದೊರೆಯಲಿದೆ. ಇದ್ದಂತಹ ಸಮಸ್ಯೆ ಶೀಘ್ರವೇ ಪರಿಹಾರ ಆಗಲಿದೆ.
ಇದನ್ನು ಓದಿ:Daily Horoscope: ಸಿರಿಯಾಳ ಷಷ್ಠಿಯ ಈ ದಿನ ಯಾವ ರಾಶಿಗೆ ಉತ್ತಮ ಫಲವಿದೆ?
ವೃಶ್ಚಿಕ ರಾಶಿ: ವೃಶ್ಚಿಕ ರಾಶಿಯವರಿಗೆ ಮಧ್ಯಾಹ್ನವರೆಗೆ ಬಹಳ ಉತ್ತಮವಾಗಿ ಇರಲಿದೆ. ಆದರೆ ಮಧ್ಯಾಹ್ನ ನಂತರ ಸ್ವಲ್ಪ ತೊಂದರೆ ಕಾಡುವ ಸಾಧ್ಯತೆ ಇದ್ದು ಮನಸ್ಸಿಗೆ ಕ್ಷೇಶ ಉಂಟಾಗಲಿದೆ. ಇತರರೊಂದಿಗೆ ಮನಸ್ತಾಪ ಕೂಡ ಉಂಟಾಗುವ ಸಾಧ್ಯತೆ ಇದ್ದು ಮನಸ್ಸಿಗೆ ನೋವಾಗುವ ಸಾದ್ಯತೆ ಇದೆ. ಯಾವುದೇ ಮುಖ್ಯ ನಿರ್ಧಾರ ಇಂದು ಬೇಡ.
ಧನಸ್ಸು ರಾಶಿ: ಧನಸ್ಸು ರಾಶಿ ಅವರಿಗೆ ಉತ್ತಮ ದಿನವಾಗಲಿದ್ದು, ಮನಸ್ಸಿಗೆ ಸಂತಸ ಇರಲಿದ್ದು ಎಲ್ಲವೂ ಅಂದುಕೊಂಡಂತೆ ನಡೆಯಲಿದೆ. ಧನಾಗಮನ ಕೂಡ ಆಗಲಿದ್ದು, ಬಹಳಷ್ಟು ಅಭಿವೃದ್ಧಿ ಕಾಣಲಿದ್ದೀರಿ. ಇಷ್ಟಾರ್ಥ ಸಿದ್ದಿ ಜತೆಗೆ ಮಿತ್ರರಿಂದಲೂ ನೆಮ್ಮದಿ ಸಿಗಲಿದೆ.
ಮಕರ ರಾಶಿ: ಮಕರ ರಾಶಿಯವರಿಗೆ ಈ ದಿನ ಉತ್ತಮವಾಗಲಿದ್ದು ಕಾರ್ಯಕ್ಷೇತ್ರದಲ್ಲಿ ಬಹಳಷ್ಟು ಬ್ಯುಸಿ ಇರುತ್ತೀರಿ. ಆದರೆ ಮಾಡಿದ ಕೆಲಸಕ್ಕೆ ಯಶಸ್ಸು ಸಿಗಲಿದ್ದು, ಪ್ರಶಂಸೆಯನ್ನು ಪಡೆಯಲಿದ್ದೀರಿ.
ಕುಂಭರಾಶಿ: ಕುಂಭ ರಾಶಿಯವರಿಗೆ ಈ ದಿನ ಮಾನಸಿಕ ಖಿನ್ನತೆ, ಕ್ಷೇಶ ಉಂಟಾಗಲಿದೆ. ಆದರೆ ಮಧ್ಯಾಹ್ನ ಬಳಿಕ ಎಲ್ಲವೂ ನಿವಾರಣೆಯಾಗಲಿದ್ದು ಬಹಳಷ್ಟು ಒಳಿತನ್ನು ಕಾಣಲಿದ್ದೀರಿ.
ಮೀನ ರಾಶಿ: ಮೀನ ರಾಶಿಯವರಿಗೆ ಈ ದಿನ ಮಧ್ಯಾಹ್ನವರೆಗೂ ಸುಗಮವಾದ ದಿನವಾಗಲಿದ್ದು, ಎಲ್ಲವೂ ಉತ್ತಮವಾಗಿದೆ. ಆದರೆ ಮಧ್ಯಾಹ್ನ ನಂತರ ಮನಸ್ಸಿಗೆ ಸ್ವಲ್ಪ ಕ್ಷೇಶ ಉಂಟಾಗಲಿದ್ದು ಇಂತಹ ಸಂದರ್ಭಗಳಲ್ಲಿ ತಾಳ್ಮೆಯಿಂದಿರಿ. ತಪ್ಪದೆ ಭಗವಂತನನ್ನು ಧ್ಯಾನಿಸಿ ಗೀತಾ ಶ್ಲೋಕ ಪಠಣ ಮಾಡಿ.