ಬೆಂಗಳೂರು: ಇಂದು ವಿಶ್ವ ವಸು ನಾಮ ಸಂವತ್ಸರದ ದಕ್ಷಿಣಾಯನ ವರ್ಷ ಋತು ಭಾದ್ರಪದ ಮಾಸದ ಶುಕ್ಲ ಪಕ್ಷದ ಶತಾಭಿಷಾ ನಕ್ಷತ್ರದ ಈ ದಿನ ಚಂದ್ರ ಗ್ರಹಣ ಇರಲಿದೆ. ಇಂದು ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಅವರು ತಿಳಿಸಿದಂತೆ ನಿಮ್ಮ ಭವಿಷ್ಯ ಹೇಗಿದೆ ಎಂದು ತಿಳಿಯಿರಿ.
ಮೇಷ ರಾಶಿ: ಮೇಷ ರಾಶಿಯವರಿಗೆ ಚಂದ್ರ ಗ್ರಹಣದಿಂದ ಸ್ವಲ್ಪ ಕ್ಲೇಷ ಉಂಟಾಗಬಹುದು. ಆದರೂ ನಿಮ್ಮ ಮಿತ್ರರಿಂದರಿಂದ ಅಂದುಕೊಳ್ಳದ ಸಹಾಯ ನಿಮಗೆ ಒದಗಿ ಬರಲಿದೆ. ಆದ್ದರಿಂದ ಮೇಷ ರಾಶಿಯವರಿಗೆ ಈ ದಿನ ಶುಭ ಫಲವು ಉಂಟಾಗಲಿದೆ
ವೃಷಭ ರಾಶಿ: ವೃಷಭ ರಾಶಿ ಅವರಿಗೆ ಕಾರ್ಯ ಕ್ಷೇತ್ರದಲ್ಲಿ ಯಶಸ್ಸು ಪ್ರಾಪ್ತಿ ಯಾಗಲಿದೆ. ಆದರೆ ಒಂದು ದೊಡ್ಡದಾದ ಜವಾಬ್ದಾರಿ ನಿಮ್ಮ ಹೆಗಲಿನಲ್ಲಿ ಬರಬಹುದು. ಹಾಗಾಗಿ ಕಾರ್ಯ ಕ್ಷೇತ್ರದ ಜೊತೆಗೆ ನಿಮ್ಮ ಜವಾಬ್ದಾರಿಗಳನ್ನು ನಿಭಾಯಿಸಿಕೊಳ್ಳುವ ಪ್ರಯತ್ನ ಮಾಡಿ.
ಮಿಥುನ ರಾಶಿ: ಮಿಥುನ ರಾಶಿಯಲ್ಲಿ ಇರುವವರಿಗೆ ಈ ಗ್ರಹಣ ನಿಮ್ಮ ಭಾಗ್ಯ ಸ್ಥಾನದಲ್ಲಿ ಆಗಿರುವುದರಿಂದ ಒಂದು ತಿರುವು ನಿಮ್ಮ ಜೀವನದಲ್ಲಿ ಉಂಟಾಗುತ್ತದೆ. ಇದು ನಿಮಗೆ ಬಹಳ ಸಣ್ಣದಾಗಿ ಕಂಡರೂ ಮುಂದೆ ಬಹಳಷ್ಟು ಒಳಿತು ಆಗಲಿದೆ.
ಕಟಕ ರಾಶಿ: ಕಟಕ ರಾಶಿ ಅವರಿಗೆ ನಿಮ್ಮ ಅಷ್ಟಮದಲ್ಲಿ ಗ್ರಹಣ ಆಗ್ತ ಇರುವುದರಿಂದ ಮನಸ್ಸಿಗೆ ಅತೀ ಕ್ಷೇಷಕರವಾದ ಭಾವನೆ ಗಳು ಇರುತ್ತದೆ. ಈ ಗ್ರಹಣ ದಿಂದ ನಿಮ್ಮ ಜೀವನ ದಲ್ಲಿ ಬದಲಾವಣೆ ಆಗಲಿದ್ದು ಅದು ನಿಮಗೆ ಮುಂದಿನ ದಿನದಲ್ಲಿ ಗೋಚರ ಕೂಡ ಆಗಲಿದೆ
ಸಿಂಹ ರಾಶಿ: ಸಿಂಹ ರಾಶಿ ಅವರಿಗೆ ಸಪ್ತಮ ಸ್ಥಾನ ದಲ್ಲಿ ಚಂದ್ರ ಗ್ರಹಣ ಆಗುವುದರಿಂದ ಯಾವುದೋ ಮಿತ್ರತ್ವ ಅಥವಾ ಬಾಂಧವ್ಯ ಕಳೆದುಕೊಳ್ಳುವ ಸಾಧ್ಯತೆ ಬರುತ್ತದೆ. ಆದರೆ ಕೆಲ ವೊಂದು ವಿಚಾರದಲ್ಲಿ ಅತೀಯಾದ ಯೋಚನೆ ಕಾಡಬಹುದು. ಆದರೆ ಇದಕ್ಕೆಲ್ಲ ಮೊದಲೇ ಸಿದ್ದರಾಗಿರಿ.
ಕನ್ಯಾ ರಾಶಿ: ಕನ್ಯಾ ರಾಶಿ ಅವರಿಗೆ ಇಂದು ಉತ್ತಮವಾಗಲಿದ್ದು ಮನಸ್ಸಿಗೆ ನೆಮ್ಮದಿ ಪ್ರಾಪ್ತಿ ಯಾಗ ಲಿದ್ದು ನಿಮ್ಮ ಶತ್ರು ಗಳಿಂದ ಯಾವುದೇ ತೊಂದರೆ ಉಂಟಾಗುವುದಿಲ್ಲ..ನಿಮಗೆ ಅತ್ಯುತ್ತಮ ವಾದ ಫಲವನ್ನು ಕೊಡುವ ದಿನ ಆಗಲಿದೆ. ಈ ಗ್ರಹಣ ನಿಮಗೆ ಒಳಿತು ಮಾಡಲಿದೆ.
ತುಲಾ ರಾಶಿ: ತುಲಾ ರಾಶಿ ಅವರಿಗೆ ಪ್ರೇಮ, ಪ್ರಕರಣ ವಿಚಾರದಲ್ಲಿ ಇಂದು ದೊಡ್ಡದಾದ ನಿರ್ಧಾರ ವನ್ನು ನೀವು ಕೈಗೊಳ್ಳುತ್ತೀರಿ. ವೈಯಕ್ತಿಕ ವಿಚಾರದಲ್ಲಿ ಒಂದು ಬದಲಾವಣೆ ಆಗಬಹುದು..ಅದೇ ರೀತಿ ಹಣಕಾಸಿನ ವಿಚಾರದಲ್ಲೂ ಒಂದು ತಿರುವು ಉಂಟಾಗಲಿದೆ. ವಯಸ್ಕರಿಗೂ ಪ್ರೇಮ,ಪ್ರೀತಿ ವಿಚಾರದಲ್ಲಿ ಬಹಳ ನೋವು ಕಾಡಬಹುದು.
ವೃಶ್ಚಿಕ ರಾಶಿ: ವೃಶ್ಚಿಕ ರಾಶಿ ಅವರಿಗೆ ಆಸ್ತಿ ಪಾಸ್ತಿ ವಿಚಾರ ವಾಗಿ,ತಂದೆ ,ತಾಯಿಯ ಜೊತೆ ಸ್ವಲ್ಪ ಕಿರಿ ಕಿರಿ ಉಂಟಾಗಬಹುದು. ಆದ್ದರಿಂದ ಮನಸ್ಸಿಗೆ ಕ್ಷೇಷ ಹೆಚ್ಚಾಗಬಹುದು. ಮನೆಯವರಿಂದ ಕಿರಿ ಕಿರಿ ಉಂಟಾಗಬಹುದು. ಸ್ವಲ್ಪ ದಿನದಲ್ಲೇ ಎಲ್ಲದಕ್ಕೂ ಪರಿಹಾರ ಸಿಗಲಿದೆ.
ಇದನ್ನು ಓದಿ:Daily Horoscope: ಶ್ರವಣ ನಕ್ಷತ್ರದ ಅಧಿಪತಿ ಚಂದ್ರನಿಂದ ಯಾವ ರಾಶಿಗೆಲ್ಲ ಇಂದು ಒಳಿತಾಗಲಿದೆ?
ಧನಸ್ಸು ರಾಶಿ: ಧನಸ್ಸು ರಾಶಿ ಅವರಿಗೆ ಉತ್ತಮವಾದ ದಿನ ಆಗಲಿದ್ದು ಮನಸ್ಸಿಗೆ ನೆಮ್ಮದಿ ಇರುತ್ತದೆ. ಒಂದು ದೊಡ್ಡ ಹೆಜ್ಜೆಯನ್ನು ಮುಂದಿಟ್ಟು ಮನಸ್ಸಿಗೆ ದೈರ್ಯವನ್ನು ತೆಗೆದು ಕೊಳ್ಳು ತ್ತೀರಿ. ಮಿತ್ರರು,ಬಂಧು ಬಾಂಧವರು ಎಲ್ಲ ರಿಂದಲೂ ನಿಮಗೆ ಸಹಕರ ಪ್ರಾಪ್ತಿ ಯಾಗಲಿದೆ
ಮಕರ ರಾಶಿ: ಮಕರ ರಾಶಿ ಅವರಿಗೆ ಸಂಸಾರದ ವಿಚಾರದಲ್ಲಿ, ಆರ್ಥಿಕ ವಿಚಾರದ ಬಗ್ಗೆ ತೊಂದರೆ ಕಾಡಲಿದೆ. ಆದರೆ ಇದಕ್ಕೆಲ್ಲ ಯೋಚನೆ ಮಾಡದೇ ತಾಳ್ಮೆಯಿಂದ ನಿಭಾಯಿಸಿ.
ಕುಂಭರಾಶಿ: ಕುಂಭ ರಾಶಿ ಅವರಿಗೆ ನಿಮ್ಮ ರಾಶಿಯಲ್ಲಿ ಗ್ರಹಣ ಹಿಡಿಯುವುದರಿಂದ ವೈಯಕ್ತಿಕವಾಗಿ ಬಹಳ ದೊಡ್ಡ ಬದಲಾವಣೆ ಆಗಲಿದೆ. ಆರು ತಿಂಗಳ ನಂತರ ಇದರ ಫಲ ಸಿಗಲಿದೆ.
ಮೀನ ರಾಶಿ: ಮೀನ ರಾಶಿ ಅವರಿಗೆ ವ್ಯಯ ಸ್ಥಾನದಲ್ಲಿ ಗ್ರಹಣ ವಾಗುವುದರಿಂದ ಆಧ್ಯಾತ್ಮಿಕ ಮೂಲಕ ಉತ್ತಮ ದಿನ ಕಳೆಯುತ್ತೀರಿ. ಹಣಕಾಸಿನ ವಿಚಾರ, ಪ್ರೀತಿ ಪ್ರೇಮ ವಿಚಾರದಲ್ಲಿ ಒಳ್ಳೆಯ ದಾಗಲಿದೆ. ಈ ಗ್ರಹಣ ಆಧ್ಯಾತ್ಮಿಕವಾಗಿ ಒಳಿತಗಾಲಿದೆ. ಗ್ರಹಣ ಕಾಲದಲ್ಲಿ ಭಗವಂತನ ಆರಾಧನೆ ಧ್ಯಾನ ಮಾಡುವ ಮೂಲಕ ಉತ್ತಮ ಫಲ ನೀವು ಪಡೆಯಬಹುದು. ಎಲ್ಲಾ ರಾಶಿಯವರು ನಿತ್ಯ ಶ್ಲೋಕ,ಪಠಣ ಅಭ್ಯಾಸ ಮಾಡುವ ಮೂಲಕ ಶುಭದಾಯಕ ದಿನವನ್ನು ಕಳೆಯಲಿದ್ದೀರಿ.