Daily Horoscope: ದಿನ ಭವಿಷ್ಯ- ಉತ್ತರ ಫಲ್ಗುಣಿ ನಕ್ಷತ್ರದ ಯಶಸ್ಸು ಯಾವ ರಾಶಿಗೆ ಸಿಗಲಿದೆ?
ಇಂದು ವಿಶ್ವ ವಸು ನಾಮ ಸಂವತ್ಸರದ ದಕ್ಷಿಣಾಯನ ವರ್ಷ ಋತು ಶ್ರಾವಣ ಮಾಸದ ಶುಕ್ಲಪಕ್ಷದ ಪಂಚಮಿ ತಿಥಿ, ಉತ್ತರ ಫಲ್ಗುಣಿ ನಕ್ಷತ್ರದ ಈ ದಿನ ಜುಲೈ 29ನೇ ತಾರೀಖಿನ ಮಂಗಳವಾರದ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಅವರು ತಿಳಿಸಿದ ಇಂದಿನ ರಾಶಿ ಭವಿಷ್ಯ ಹೀಗಿದೆ..


ಬೆಂಗಳೂರು: ವಿಶ್ವ ವಸು ನಾಮ ಸಂವತ್ಸರದ ದಕ್ಷಿಣಾಯನ ವರ್ಷ ಋತು ಶ್ರಾವಣ ಮಾಸದ ಶುಕ್ಲ ಪಕ್ಷದ ಪಂಚಮಿ ತಿಥಿ, ಉತ್ತರ ಫಲ್ಗುಣಿ ನಕ್ಷತ್ರದ ಈ ದಿನ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಅವರು ತಿಳಿಸಿದಂತೆ ನಿಮ್ಮ ಭವಿಷ್ಯ ಹೇಗಿದೆ ಎಂದು ತಿಳಿಯಿರಿ.
ಮೇಷ ರಾಶಿ: ಮೇಷ ರಾಶಿ ಅವರಿಗೆ ಇಂದು ಮಧ್ಯಾಹ್ನವರೆಗೂ ಸ್ವಲ್ಪ ಕಿರಿ ಕಿರಿ ಉಂಟಾಗುವ ಸಾದ್ಯತೆ ಇರುತ್ತದೆ. ಮುಖ್ಯವಾದ ವಿಚಾರಗಳಲ್ಲಿ ಯಾವುದೇ ಅಭಿವೃದ್ಧಿ ಆಗುವುದಿಲ್ಲ ಎಂದು ಮನಸ್ಸಿಗೆ ಬೇಸರ ಉಂಟಾಗುವ ಸಾಧ್ಯತೆ ಇರುತ್ತದೆ. ಸ್ವಲ್ಪ ದಿನದಲ್ಲೆ ಬದಲಾವಣೆ ಕಂಡು ಬಂದು ಅಭಿವೃದ್ಧಿಯನ್ನು ಕಂಡು ಕೊಳ್ಳಲಿದ್ದಿರಿ.
ವೃಷಭ ರಾಶಿ: ಇಂದು ವೃಷಭ ರಾಶಿ ಅವರಿಗೆ ಸಂಸಾರದ ತಾಪತ್ರಯಗಳಿಂದ ಹಾಗೂ ತಾಯಿಯ ಜೊತೆ ಮಾತುಕತೆಯಿಂದ ಸ್ವಲ್ಪ ಬೇಸರ ಉಂಟಾಗುವ ಸಾಧ್ಯತೆ ಇರುತ್ತದೆ. ಆದರೆ ಮಧ್ಯಾಹ್ನ ಬಳಿಕ ನಿಮ್ಮ ಬೇಸರ ನಿವಾರಣೆಯಾಗಿ ನಿಮ್ಮ ಬುದ್ದಿ ಶಕ್ತಿಯಿಂದ ಎಲ್ಲ ಸಮಸ್ಯೆಗಳನ್ನು ಬಗೆಹರಿಸಿ ಕೊಳ್ಳುತ್ತೀರಿ.
ಮಿಥುನ ರಾಶಿ: ಮಿಥುನ ರಾಶಿಯಲ್ಲಿ ಇರುವವರಿಗೆ ಇಂದು ಉತ್ತಮ ದಿನವಾಗಲಿದ್ದು ಮಿತ್ರ ರೊಂದಿಗೆ ಕೂಡ ಬಹಳ ಚೆನ್ನಾಗಿ ಸಮಯ ಕಳೆಯಲಿದ್ದೀರಿ. ಆದರೆ ಸಂಸಾರದ ಜವಾಬ್ದಾರಿಗಳು ಜಾಸ್ತಿಯಾಗುವ ಸಂಭವ ಜಾಸ್ತಿ ಇರುತ್ತದೆ.
ಕಟಕ ರಾಶಿ: ಕಟಕ ರಾಶಿ ಅವರಿಗೆ ಇಂದು ಸಂಸಾರದ ಕಡೆಯೇ ಹೆಚ್ಚಿನ ಗಮನ ಇರುತ್ತದೆ. ಬಹ ಳಷ್ಟು ಶ್ರಮ ಪಟ್ಟು ಕೆಲಸವನ್ನು ಮಾಡುತ್ತೀರಿ. ಅದೇ ರೀತಿ ಫ್ಯಾಮಿಲಿ, ಸ್ನೇಹಿತರ ಜೊತೆ ಪಿಕ್ ನಿಕ್ ಅಥವಾ ಟ್ರಿಪ್ ಹೋಗುವ ಅವಕಾಶ ನಿಮಗೆ ಒದಗಿ ಬರಬಹುದು.
ಸಿಂಹ ರಾಶಿ: ಸಿಂಹ ರಾಶಿ ಅವರಿಗೆ ಎರಡು ದಿನಗಳಿಂದ ಇದ್ದಂತಹ ತೊಂದರೆಗಳು ಬಗೆ ಹರಿಯುವ ಸಮಯ.ನಿಮ್ಮ ಮನಸ್ಸಿನ ಸಮಾಧಾನವನ್ನು ನಿಮ್ಮ ಮನೆಯವರೊಂದಿಗೂ ಹಂಚಿಕೊಂಡು ಖುಷಿ ಕಾಣುತ್ತೀರಿ. ಮುಖ್ಯವಾದ ಕೆಲಸ ಚಟುವಟಿಗಳನ್ನು ಮಾಡುವ ಅವಕಾಶ ಕೂಡ ನಿಮಗೆ ಸಿಗಬಹುದು.
ಕನ್ಯಾ ರಾಶಿ: ಈ ದಿನ ಕನ್ಯಾ ರಾಶಿಯವರು ಮಧ್ಯಾಹ್ನವರೆಗೂ ಸ್ವಲ್ಪ ಯೋಚನೆಯಲ್ಲೇ ಇರು ತ್ತೀರಾ. ಮುಖ್ಯವಾದ ಕೆಲವೊಂದು ವಿಚಾರಗಳಲ್ಲಿ ಯಾರು ಸಹಕಾರ ನೀಡುವುದಿಲ್ಲ. ಯಾಕೆ ಹೀಗಾ ಯಿತು ಎಂಬ ಬೇಸರ ನಿಮ್ಮನ್ನು ಬಹಳಷ್ಟು ಕಾಡಬಹುದು. ಆದರೆ ಮಧ್ಯಾಹ್ನ ನಂತರ ಕನ್ಯಾ ರಾಶಿಯಲ್ಲಿ ಚಂದ್ರ ಬರುವುದರಿಂದ ಹೊಸ ಹುರುಪು ನಿಮಗೆ ಸಿಗಬಹುದು. ಮನಸ್ಸಿಗೂ ನೆಮ್ಮದಿ ಸಿಗಲಿದೆ
ತುಲಾ ರಾಶಿ: ತುಲಾ ರಾಶಿ ಅವರಿಗೆ ಮಧ್ಯಾಹ್ನದವರೆಗೂ ನೀವು ಹೇಳಿದ್ದೆಲ್ಲಾ ನಡೆಯುತ್ತಿರುತ್ತದೆ. ಆದರೆ ಮಧ್ಯಾಹ್ನ ನಂತರ ಕೆಲವು ಬದಲಾವಣೆಗಳು ಉಂಟಾಗುತ್ತವೆ. ಹಾಗಾಗಿ ಯಾವ ಮುಖ್ಯವಾದ ನಿರ್ಧಾರಗಳನ್ನು ನೀವು ಕೈಗೊಳ್ಳಬೇಡಿ. ಹಾಗೆಯೇ ಬಹಳ ಜವಾಬ್ದಾರಿಯುತವಾಗಿ ಕೆಲಸವನ್ನು ನಿಭಾಯಿಸಬೇಕಾಗುತ್ತದೆ.
ಇದನ್ನು ಓದಿ:Daily Horoscope: ಕುಜ ಕನ್ಯಾ ರಾಶಿ ಪ್ರವೇಶ; ಇಂದು ಯಾವೆಲ್ಲ ರಾಶಿಯವರಿಗೆ ಅದೃಷ್ಟ?
ವೃಶ್ಚಿಕ ರಾಶಿ: ವೃಶ್ಚಿಕ ರಾಶಿ ಅವರು ಇಂದು ಕಾರ್ಯ ಕ್ಷೇತ್ರದಲ್ಲಿ ಬಹಳಷ್ಟು ಬ್ಯುಸಿಯಾಗಿ ಇರುತ್ತೀರಾ. ಅದೇ ರೀತಿ ಮನಸ್ಸಿಗೆ ನೆಮ್ಮದಿ ಇದ್ದು ಮಿತ್ರರಿಂದ ಸಂತೋಷವು ಸಿಗಲಿದೆ. ಇಷ್ಟಾರ್ಥ ಸಿದ್ಧಿ ಯಾಗಲಿದ್ದು ಅಂದುಕೊಂಡದೆಲ್ಲಾ ಪ್ರಾಪ್ತಿಯಾಗಲಿದೆ.
ಧನಸ್ಸು ರಾಶಿ: ಧನಸ್ಸು ರಾಶಿ ಅವರಿಗೆ ಇಂದು ಜವಾಬ್ದಾರಿಗಳು ಹೆಚ್ಚು ಇರುತ್ತವೆ. ಮನಸ್ಸಿನಲ್ಲಿ ಸಾವಿರಾರು ಯೋಚನೆಗಳಿದ್ದರೂ ಕೆಲಸಗಳೇ ಆಗುವುದಿಲ್ಲ ಎನ್ನುವ ಯೋಚನೆ ನಿಮನ್ನು ಕಾಡ ಬಹುದು. ಆದರೆ ಕೆಲವೇ ದಿನಕ್ಕೆಲ್ಲ ಇದಕ್ಕೆಲ್ಲ ಪರಿಹಾರ ಸಿಗಲಿದ್ದು ಸ್ವಲ್ಪ ದಿನದಲ್ಲೇ ನೆಮ್ಮದಿ ಪ್ರಾಪ್ತಿ ಯಾಗಲಿದೆ.
ಮಕರ ರಾಶಿ: ಮಕರ ರಾಶಿ ಅವರಿಗೆ ಮಧ್ಯಾಹ್ನದ ವರೆಗೂ ಮನಸ್ಸಿಗೆ ಕ್ಷೇಷ ಇದ್ದು ಮಧ್ಯಾಹ್ನ ಬಳಿಕ ಬದಲಾವಣೆ ಯಾಗಲಿದೆ. ಭಗವಂತನ ಅನುಗ್ರಹ ಕೂಡ ಪ್ರಾಪ್ತಿಯಾಗಲಿದ್ದು ಹಿರಿಯರ ಆಶೀರ್ವಾದ ಕೂಡ ನಿಮಗೆ ಸಿಗಲಿದೆ. ಇನ್ನು ನಾಲ್ಕು ದಿನಗಳ ವರೆಗೂ ನಿಮಗೆ ಬಹಳ ಸಂತೋಷ ಕರವಾದ ಸಮಯ ಆಗಲಿದೆ.
ಕುಂಭ ರಾಶಿ: ಕುಂಭ ರಾಶಿ ಅವರಿಗೆ ಈ ದಿನ ಮಧ್ಯಾಹ್ನದವರೆಗೂ ಎಲ್ಲರಿಂದಲೂ ಬೆಂಬಲ, ಗೌರವ ಸಿಗುತ್ತದೆ. ಅದರೆ ಮಧ್ಯಾಹ್ನ ನಂತರ ಯಾವುದೇ ಮುಖ್ಯವಾದ ಪ್ರಮುಖ ನಿರ್ಧಾರ ಬೇಡ. ಆದರೆ ಯಾವುದರ ಬಗ್ಗೆಯೂ ತಲೆಕೆಡಿಸಿ ಕೊಳ್ಳುವ ಅಗತ್ಯ ಇಲ್ಲ
ಮೀನ ರಾಶಿ: ಮೀನ ರಾಶಿ ಅವರು ಸಾಮಾಜಿಕ ಚಟುವಟಿಗಳಲ್ಲಿ ಬ್ಯುಸಿ ಇರುತ್ತೀರಿ. ಹಾಗೆಯೇ ಸಂಸಾರದ ಜೊತೆ ನಿಮ್ಮ ಪ್ರೀತಿ ಪಾತ್ರರ ಜೊತೆ ಅತ್ಯುತ್ತಮ ಸಮಯ ಕಳೆಯಲಿದ್ದೀರಿ. ಇಂದಿನ ದಿನ ಸಂಪೂರ್ಣವಾಗಿ ಮೀನ ರಾಶಿಯಾವರಿಗೂ ಒಳ್ಳೆಯದು. ದಿನ ನಿತ್ಯ ಗೀತಾ ಶ್ಲೋಕ ಪಠಣ ಅಭ್ಯಾಸ ಮಾಡುವ ಮೂಲಕ ನಿಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಿ.