ಬೆಂಗಳೂರು: ವಿಶ್ವವಸುನಾಮ ಸಂವತ್ಸರದ ದಕ್ಷಿಣಾಯನ ವರ್ಷ ಋತು ಆಶ್ವಯುಜ ಮಾಸದ ಕೃಷ್ಣ ಪಕ್ಷದ, ದ್ವಾದಶಿ ತಿಥಿ, ಅಕ್ಟೋಬರ್ 18ನೇ ತಾರೀಖಿನ ಈ ದಿನ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿ ಭವಿಷ್ಯದ ಬಗ್ಗೆ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ತಿಳಿಸಿದ್ದಾರೆ.
ಮೇಷ ರಾಶಿ: ಮೇಷ ರಾಶಿಯವರ ಚರ್ತುಥ ಭಾವಕ್ಕೆ ಗುರು ಬರುತ್ತಿದ್ದಾನೆ. ಹಾಗಾಗಿ ಮನೆಯ ವಿಚಾರದಲ್ಲಿ ಹೆಚ್ಚಿನ ಗಮನ ನೀಡಬೇಕಾಗುತ್ತದೆ. ಇನ್ನು ಹೊಸ ಮನೆಯಲ್ಲಿ ನೀವು ವಾಸ ಮಾಡುವ ಸಾಧ್ಯತೆ ಕೂಡ ಇರಲಿದೆ. ಆದರೆ ಆಸ್ತಿ-ಪಾಸ್ತಿಗಳು ನಿಮ್ಮ ಕೈ ತಪ್ಪಿ ಹೋಗಬಹುದು. ವೈಯಕ್ತಿಕ ಹಾಗೂ ಕಾರ್ಯ ಕ್ಷೇತ್ರದ ಒತ್ತಡ ಕೂಡ ನಿಮಗೆ ಕಾಡಬಹುದು.
ವೃಷಭ ರಾಶಿ: ವೃಷಭ ರಾಶಿಯವರಿಗೆ ನಿಮ್ಮ ಪರಾಕ್ರಮ ಸ್ಥಾನಕ್ಕೆ ಉಚ್ಛ ಗುರು ಬರುವುದರಿಂದ ನೀವು ಇಂದು ಅಂದುಕೊಂಡ ಕೆಲಸಗಳನ್ನು ಪೂರೈಸುತ್ತೀರಿ. ಆದರೆ ಮಿತೃತ್ವದಲ್ಲಿ ನಿಮಗೆ ಒಡಕು ಉಂಟಾಗಬಹುದು. ಅದರ ಜತೆ ಶತ್ರುಗಳ ಭಾದೆ ಕೂಡ ಕಾಡಬಹುದು.
ಮಿಥುನ ರಾಶಿ: ಮಿಥುನ ರಾಶಿಯಲ್ಲಿರುವವರಿಗೆ ಅತ್ಯುತ್ತಮ ದಿನವಾಗಲಿದೆ. ಎರಡನೇ ಮನೆಗೆ ಗುರು ಬರುವುದರಿಂದ ಧನಾಗಮನ ಆಗಲಿದೆ. ಅದೇ ರೀತಿ ಮನೆಯಲ್ಲಿ ಶುಭ ಕಾರ್ಯಗಳು ಕೂಡ ನಡೆಯಲಿದೆ. ಕೆಲವರಿಗೆ ಮದುವೆ ಆಗಬಹುದು. ಹೊಸ ಮನೆಯನ್ನು ಖರೀದಿ ಮಾಡಬಹುದು. ಹೊಸ ವಾಹನವನ್ನು ಖರೀದಿ ಮಾಡುವ ಸಾಧ್ಯತೆ ಕೂಡ ಇರುತ್ತದೆ. ಮನಸ್ಸಿಗೆ ನೆಮ್ಮದಿ ಖಂಡಿತ ಪ್ರಾಪ್ತಿಯಾಗುತ್ತದೆ.
ಕಟಕ ರಾಶಿ: ಕಟಕ ರಾಶಿಯವರಿಗೆ ಗುರು ಬಂದಿರುವುದರಿಂದ ನಿಮ್ಮ ವ್ಯಕ್ತಿತ್ವದಲ್ಲಿ ಅನೇಕ ಬದಲಾವಣೆ ಮಾಡಿಕೊಳ್ಳಬೇಕಾಗಬಹುದು. ಹಾಗಾಗಿ ನೀವು ಮಾಡಿದ ತಪ್ಪುಗಳನ್ನು ಒಪ್ಪಿಕೊಳ್ಳಲೇ ಬೇಕಾಗುತ್ತದೆ.
ಇದನ್ನು ಓದಿ:Vastu Tips: ಆರ್ಥಿಕ ಸಮೃದ್ಧಿಗಾಗಿ ಸರಿಯಾದ ದಿಕ್ಕಿನಲ್ಲಿ ದೀಪ ಬೆಳಗಿಸಿ
ಸಿಂಹ ರಾಶಿ: ಸಿಂಹ ರಾಶಿಯವರಿಗೆ ವ್ಯಯ ಭಾವಕ್ಕೆ ಉಚ್ಛ ಗುರು ಬಂದಿರುವುದರಿಂದ ನಿಮಗೆ ಹೆಚ್ಚಿನ ತೊಂದರೆ ಉಂಟಾಗಬಹುದು. ಮುಂದಿನ ಐದು ವರ್ಷ ನಿಮಗೆ ಗುರು ಬಲ ಇರುವುದಿಲ್ಲ. ಈಗ ಸ್ವಲ್ಪ ನಿಮ್ಮ ವ್ಯಕ್ತಿತ್ವದಲ್ಲಿ ಬದಲಾವಣೆ ಮಾಡಿಕೊಳ್ಳಬೇಕಾಗುತ್ತದೆ. ಅದೇ ರೀತಿ ನಿಮಗೆ ಬೇಕಾದವರು ಕೂಡ ಇಂದು ದೂರವಾಗಬಹುದು.
ಕನ್ಯಾ ರಾಶಿ: ಕನ್ಯಾ ರಾಶಿಯವರಿಗೆ ಅತ್ಯುತ್ತಮ ಸಮಯವಾಗಿದ್ದು ಇಷ್ಟಾರ್ಥ ಸಿದ್ಧಿಯಾಗಲಿದೆ. ಮನಸ್ಸಿಗೆ ನೆಮ್ಮದಿ ಇದ್ದು, ಹೇರಳ ಧನಾಗಮನ ಆಗಲಿದೆ. ಹಿಂದೆ ನೋಡದಷ್ಟು ಸಂತೋಷವನ್ನು ನೀವು ನೋಡಿತ್ತೀರಿ. ಆದರೆ ದಾಂಪತ್ಯ, ಪ್ರೇಮಪ್ರೀತಿ ವಿಚಾರದಲ್ಲಿ ಉತ್ತಮವಾಗಿರುವುದಿಲ್ಲ
ತುಲಾ ರಾಶಿ: ತುಲಾ ರಾಶಿಯಲ್ಲಿರುವವರಿಗೆ ದಶಮ ಸ್ಥಾನಕ್ಕೆ ಗುರು ಬರ್ತಾ ಇದ್ದಾನೆ. ಹಾಗಾಗಿ ನಿಮ್ಮ ತಪ್ಪುಗಳನ್ನು ನೀವು ತಿದ್ದಿಕೊಳ್ಳಲೇ ಬೇಕಾಗುತ್ತದೆ. ಕಾರ್ಯ ಕ್ಷೇತ್ರದಲ್ಲೂ ನಿಮಗೂ ಕಷ್ಟವಾಗಬಹುದು. ಕೆಲಸ ಕಾರ್ಯದಲ್ಲಿ ಸವಾಲು ಉಂಟಾಗಬಹುದು. ಆದರೆ ಶ್ರಮ ಪಟ್ಟರೆ ಯಶಸ್ಸು ಸಿಗಬಹುದು.
ವೃಶ್ಚಿಕ ರಾಶಿ: ವೃಶ್ಚಿಕ ರಾಶಿಯವರಿಗೆ ಅತೀ ಉತ್ತಮ ಗುರು ಬಲ. ಎಲ್ಲ ರೀತಿಯಿಂದಲೂ ನಿಮಗೆ ಒಳ್ಳೆಯದಾಗಲಿದೆ. ಮದುವೆ ಆಗದೆ ಇದ್ದವರಿಗೆ ಮದುವೆ, ಮಕ್ಕಳಾಗದೇ ಇರುವವರಿಗೆ ಸಂತಾನ ಪ್ರಾಪ್ತಿಯಾಗಲಿದೆ.
ಧನಸ್ಸು ರಾಶಿ: ಧನಸ್ಸು ರಾಶಿಯವರಿಗೆ ಕ್ಲಿಷ್ಟದ ದಿನವಾಗಲಿದೆ. ಇಂದು ಮನಸ್ಸಿಗೆ ಹಿಂಸೆ ಆಗಬಹುದು. ನಿಮಗೆ ಬೇಕಾದಂತಹ ಸಹಕಾರ ಸಿಗುವುದಿಲ್ಲ.
ಮಕರ ರಾಶಿ: ಮಕರ ರಾಶಿಯವರಿಗೆ ಉತ್ತಮ ದಿನವಾಗಲಿದೆ. ಮನಸ್ಸಿಗೆ ನೆಮ್ಮದಿ ಇದ್ದು ವಿವಾಹ ಬಲ ಕೂಡಿ ಬರಲಿದೆ. ಸಮಾಜದಲ್ಲಿ ಗೌರವ, ಯಶಸ್ಸು ಸಿಗಲಿದೆ. ಬಿಸೆನೆಸ್, ಪಾರ್ಟನರ್‌ಶಿಪ್ ವ್ಯವಹಾರದಲ್ಲೂ ಯಶಸ್ಸು ಸಿಗಲಿದೆ.
ಕುಂಭರಾಶಿ: ಕುಂಭ ರಾಶಿಯವರಿಗೆ ಮಿಶ್ರ ಗೋಚರ ಆಗಲಿದೆ. ಶತ್ರುಗಳನ್ಮು ನಿಮ್ಮನ್ನು ಹೆಮ್ಮೆಟ್ಟಬಹುದು. ಯಾರ ಜತೆಗೂ ಹೆಚ್ಚು ಮಾತನಾಡಲು ಹೋಗಬೇಡಿ. ಹಾಗಾಗಿ ವಿನಯತೆ ವರ್ತಿಸಿ
ಮೀನ ರಾಶಿ: ಮೀನ ರಾಶಿಯವರಿಗೆ ಉತ್ತಮ ದಿನ. 12 ವರ್ಷಗಳ ನಂತರ ಗುರು ಪಂಚಮ ಸ್ಥಾನಕ್ಕೆ ಬಂದು ಉತ್ತಮ ಫಲ ಸಿಗಲಿದೆ. ಮುಖ್ಯವಾದ ಕೆಲಸದಲ್ಲಿ ಜಯ ಪ್ರಾಪ್ತಿಯಾಗಲಿದೆ. ಮನೆ, ಕಾರ್ಯ ಕ್ಷೇತ್ರದಲ್ಲೂ ಕೂಡ ನೆಮ್ಮದಿ ಸಿಗಲಿದೆ.