ಬೆಂಗಳೂರು: ಇಂದು ವಿಶ್ವ ವಸುನಾಮ ಸಂವತ್ಸರದ ದಕ್ಷಿಣಾಯನ ವರ್ಷ ಋತು ಆಶ್ವಯುಜ ಮಾಸದ ಶುಕ್ಷ ಪಕ್ಷದ, ತೃತೀಯ ತಿಥಿ, ಅಕ್ಟೋಬರ್ 9 ನೇ ತಾರೀಖಿನ ಗುರುವಾರದ ಈ ದಿನ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿ ಭವಿಷ್ಯದ ಬಗ್ಗೆ (Daily Horoscope) ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಅವರು ತಿಳಿಸಿದಂತೆ ನಿಮ್ಮ ಭವಿಷ್ಯ ಹೇಗಿದೆ ಎಂದು ತಿಳಿಯಿರಿ.
ಮೇಷ ರಾಶಿ: ಮೇಷ ರಾಶಿಯವರಿಗೆ ಗೋಚರ ಅಷ್ಟೊಂದು ಸುಖಕರವಾಗಿಲ್ಲ. ಶತ್ರು ಬಾಧೆ ನಿಮ್ಮನ್ನು ಕಾಡಬಹುದು. ಆದ್ದರಿಂದ ಈ ರಾಶಿಯ ಪುರುಷರು ಹೆಂಗಸರ ಜೊತೆ ಮಾತನಾಡುವಾಗ ಬಹಳ ಜಾಗೃತವಾಗಿ ಇರಬೇಕು. ಅದೇ ರೀತಿ ಎಲ್ಲರ ಜೊತೆ ಗೌರವದಿಂದ ನಡೆದು ಕೊಳ್ಳಬೇಕು.
ವೃಷಭ ರಾಶಿ: ವೃಷಭ ರಾಶಿ ಅವರಿಗೆ ಇಂದು ಉತ್ತಮವಾದ ಗೋಚರ ಪ್ರಾಪ್ತಿಯಾಗಲಿದೆ. ಹಣಕಾಸಿನ ವಿವಾರದಲ್ಲಿ ನೆಮ್ಮದಿ. ಮಿತ್ರರಿಂದ ಒಳ್ಳೆಯದಾಗಲಿದ್ದು ಸುಖಕರವಾದ ದಿನ ನಿಮ್ಮದು ಆಗುತ್ತದೆ.
ಮಿಥುನ ರಾಶಿ: ಮಿಥುನ ರಾಶಿಯಲ್ಲಿ ಇರುವವರಿಗೆ ಆತ್ಯುತ್ತವಾದ ದಿನ ಆಗಲಿದ್ದು ಇಷ್ಟಾರ್ಥ ಸಿದ್ದಿಯಾಗಲಿದೆ. ಮನಸ್ಸಿಗೆ ನೆಮ್ಮದಿ ಕೂಡ ಸಿಗಲಿದೆ.
ಕಟಕ ರಾಶಿ: ಕಟಕ ರಾಶಿ ಅವರಿಗೆ ಇಂದು ಉತ್ತಮವಾದ ದಿನವಾಗಿದೆ. ಸೋಷಿಯಲ್ ಮೀಡಿಯಾ, ಪತ್ರಿಕೋದ್ಯಮದಲ್ಲಿ ಇರುವವರಿಗೆ ಉತ್ತಮವಾದ ದಿನ. ಕಾರ್ಯ ಕ್ಷೇತ್ರದಲ್ಲಿ ಕೂಡ ಯಶಸ್ಸು ಅನ್ನು ಕಾಣುತ್ತೀರಿ.
ಸಿಂಹ ರಾಶಿ: ಸಿಂಹ ರಾಶಿ ಅವರಿಗೆ ಮನೆಯಲ್ಲಿ ಸಂಸಾರದಲ್ಲಿ ನೆಮ್ಮದಿ ಇರುತ್ತದೆ. ಆದರೆ ಸ್ನೇಹಿತ ರಿಂದ ಬೇಕಾದಷ್ಟು ಸಹಕಾರ ನಿಮಗೆ ಸಿಗುವುದಿಲ್ಲ. ಆದರೂ ಇಂದು ಒಳ್ಳೆಯ ದಿನ ಆಗಲಿದೆ.
ಕನ್ಯಾ ರಾಶಿ: ಕನ್ಯಾ ರಾಶಿ ಅವರಿಗೆ ಅತ್ಯುತ್ತಮವಾದ ದಿನವಾಗಿದ್ದು ಮನಸ್ಸಿಗೆ ನೆಮ್ಮದಿ ಇರುತ್ತದೆ. ಶತ್ರುಗಳನ್ನು ಹಿಮ್ಮೆಟ್ಟಿಸಿ ಯಶಸ್ಸು ಗಳಿಸುತ್ತೀರಿ. ಮುಂದಿನ ಯಾವುದೇ ಕೆಲಸದಲ್ಲಿ ಯಶಸ್ಸು ಗಳಿಸಬಹುದು ಎನ್ನುವ ಆತ್ಮವಿಶ್ವಾಸ ನಿಮ್ಮಲ್ಲಿ ಹೆಚ್ಚಾಗುತ್ತದೆ..
ತುಲಾ ರಾಶಿ: ತುಲಾ ರಾಶಿಯಲ್ಲಿ ಇರುವವರಿಗೆ ಈ ಗೋಚರ ಅನುಕೂಲಕರ ವಾಗಿಲ್ಲ. ಮನಸ್ಸಿಗೆ ನೆಮ್ಮದಿ ಇರುವುದಿಲ್ಲ. ನಿಮ್ಮ ಮಿತೃತ್ವದಲ್ಲಿ ಕೂಡ ಒಡಕು ಉಂಟಾಗಬಹುದು. ಹಾಗೆಯೇ ಮುಖ್ಯವಾದ ಕೆಲಸದಲ್ಲೂ ತೊಂದರೆ ಆಗಬಹುದು. ಹಣಕಾಸಿನ ವಿಚಾರದಲ್ಲೂ ತೊಂದರೆ ಉಂಟಾಗಬಹುದು.
ಇದನ್ನು ಓದಿ:Vastu Tips: ಮನೆಯ ಮುಖ್ಯ ದ್ವಾರದಲ್ಲಿ ಈ ಬಣ್ಣಗಳನ್ನು ಬಳಸಬಾರದು
ವೃಶ್ಚಿಕ ರಾಶಿ: ವೃಶ್ಚಿಕ ರಾಶಿ ಅವರಿಗೆ ಉತ್ತಮವಾದ ದಿನವಾಗಿದ್ದು ಮನಸ್ಸಿಗೆ ನೆಮ್ಮದಿ ಇರುತ್ತದೆ. ನೀವು ಅಂದು ಕೊಂಡ ಕೆಲಸದಲ್ಲಿ ಇಷ್ಟಾರ್ಥ ಸಿದ್ದಿಯಾಗಲಿದೆ. ಗುಂಪು ಕೆಲಸ ಮಾಡುವವರಿಗೆ ಅತ್ಯುತ್ತಮವಾದ ದಿನ ಅಗಲಿದೆ.
ಧನಸ್ಸು ರಾಶಿ: ಧನಸ್ಸು ರಾಶಿ ಅವರಿಗೆ ಇಂದು ಕಷ್ಟಕರವಾದ ದಿನ ಆಗಲಿದ್ದು ಗೋಚರ ಉತ್ತಮ ವಾಗಿಲ್ಲ. ಕಾರ್ಯಕ್ಷೇತ್ರದಲ್ಲಿ ಕೆಲವು ತೊಂದರೆ ಅನುಭವಿಸ ಬೇಕಾಗುತ್ತದೆ. ಕೆಲವು ಹೆಂಗಸರಿಂದ ನಿಮಗೆ ತೊಂದರೆ ಆಗಬಹುದು.
ಮಕರ ರಾಶಿ: ಮಕರ ರಾಶಿ ಅವರಿಗೆ ಉತ್ತಮವಾದ ದಿನ ವಾಗಿದೆ. ಮನಸ್ಸಿಗೆ ನೆಮ್ಮದಿ ಇದ್ದು ಬಹಳನೇ ಮುನ್ನಡೆಯನ್ನು ಸಾಧಿಸುತ್ತೀರಿ. ಎಲ್ಲ ಕೆಲಸ ಕಾರ್ಯದಲ್ಲೂ ಯಶಸ್ಸು ಕಾಣಲಿದ್ದೀರಿ
ಕುಂಭರಾಶಿ: ಕುಂಭ ರಾಶಿ ಯವರಿಗೆ ಉತ್ತಮವಾದ ದಿನವಾಗಿದೆ. ಹಿಂದಿನ ದಿನಗಳಲ್ಲಿ ಇದ್ದಂತಹ ಸಮಸ್ಯೆ ನಿವಾರಣೆಯಾಗಲಿದೆ. ಮನೆಯಲ್ಲಿ ಉಂಟಾದ ಸಮಸ್ಯೆಗೆ ಕೂಡ ಪರಿಹಾರ ಸಿಗಲಿದೆ.
ಮೀನ ರಾಶಿ: ಮೀನ ರಾಶಿ ಅವರಿಗೆ ಸ್ವಲ್ಪ ಕಷ್ಟಕರವಾದ ದಿನವಾಗಿದೆ. ಹೆಂಗಸರಿಂದ ತೊಂದರೆ ಆಗಬಹುದು. ಆದರೂ ಗುರು ಗೋಚರ ಉತ್ತಮ ವಾಗಲಿದ್ದು ಸಮಸ್ಯೆ ಬಂದರೂ ಸುಲಭವಾಗಿ ಪರಿಹಾರ ಆಗಲಿದೆ