ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vastu Tips: ಮನೆಯ ಮುಖ್ಯ ದ್ವಾರದಲ್ಲಿ ಈ ಬಣ್ಣಗಳನ್ನು ಬಳಸಬಾರದು

ಮನೆ ಮತ್ತು ಮನೆಯ ಸುತ್ತಮುತ್ತ ಇರುವ ಪ್ರತಿಯೊಂದು ವಸ್ತುಗಳು, ಬಣ್ಣಗಳು ಗೃಹ ವಾಸ್ತುವಿನ ಮೇಲೆ ಪರಿಣಾಮ ಬೀರುತ್ತದೆ. ಅಂತಹ ಒಂದು ಮುಖ್ಯ ಅಂಶವೆಂದರೆ ನಾವು ಮನೆಯ ಪ್ರವೇಶ ದ್ವಾರದಲ್ಲಿ ಬಳಸುವ ಬಣ್ಣಗಳು. ಇವು ಮನೆಯ ಸುಖ, ಶಾಂತಿ, ಸಮೃದ್ಧಿಯ ಮೇಲೆ ಪರಿಣಾಮ ಬಿರುವುದರಿಂದ ಕೆಲವೊಂದು ಬಣ್ಣಗಳನ್ನು ಇಲ್ಲಿ ಬಳಸಲೇಬಾರದು.

ಮನೆಯ ಮುಖ್ಯ ದ್ವಾರಕ್ಕೆ ಯಾವ ಬಣ್ಣ ಸೂಕ್ತ?

-

ಬೆಂಗಳೂರು: ಮನೆಯ ಪ್ರವೇಶ ದ್ವಾರ (Vastu for home entrance) ಸ್ವಚ್ಛ, ಸುಂದರವಾಗಿದ್ದರೆ ಮಾತ್ರ ಸಾಲದು. ಇಲ್ಲಿ ಬಳಸುವ ಬಣ್ಣಗಳ (Vastu for colors) ಬಗ್ಗೆಯೂ ಎಚ್ಚರಿಕೆ ಇರಬೇಕು. ಯಾಕೆಂದರೆ ಇದು ಮನೆಯ ವಾಸ್ತುವಿನ (Vastu tips for home) ಮೇಲೆ ಪರಿಣಾಮ ಬೀರುತ್ತದೆ ಎನ್ನುತ್ತದೆ ವಾಸ್ತು ಶಾಸ್ತ್ರ. ಸಾಮಾನ್ಯವಾಗಿ ಮನೆಯ ಮುಖ್ಯ ದ್ವಾರದಲ್ಲಿ ಗಾಢ ಬಣ್ಣಗಳನ್ನು ಬಳಸಬಾರದು. ಯಾಕೆಂದರೆ ಇವು ನಕಾರಾತ್ಮಕ ಪರಿಣಾಮ ಬೀರುತ್ತದೆ ಎನ್ನುತ್ತಾರೆ ವಾಸ್ತು ತಜ್ಞ ಪಂಡಿತ್ ಶಂಕರ್. ಮನೆಯಲ್ಲಿ ಏನೇ ಬದಲಾವಣೆ ಮಾಡುವಾಗಲೂ ಕೆಲವೊಂದು ಅಂಶಗಳ ಬಗ್ಗೆ ಅದರಲ್ಲೂ ಮುಖ್ಯವಾಗಿ ಬಣ್ಣಗಳ ಬಗ್ಗೆ ವಿಶೇಷ ಗಮನ ಕೊಡಬೇಕು ಎನ್ನುತ್ತಾರೆ ಅವರು.

ಮನೆಯಲ್ಲಿ ಏನಾದರೂ ಬದಲಾವಣೆ ಮಾಡಲು ಬಯಸಿದರೆ ಮನೆಯ ಮುಖ್ಯ ದ್ವಾರದಲ್ಲಿ ಬಳಸುವ ಬಣ್ಣಗಳಿಗೆ ಹೆಚ್ಚಿನ ಆದ್ಯತೆ ಕೊಡಬೇಕು. ಯಾವುದೇ ಕಾರಣಕ್ಕೂ ಇಲ್ಲಿ ಗಾಢವಾದ ಬಣ್ಣಗಳನ್ನು ಬಳಸಬಾರದು. ಮನೆಯಲ್ಲಿ ಸಕಾರಾತ್ಮಕ ವಾತಾವರಣವನ್ನು ಉಂಟು ಮಾಡುವ ಬಣ್ಣಗಳಿಗೆ ಆದ್ಯತೆ ನೀಡಬೇಕು ಎನ್ನುತ್ತಾರೆ ಅವರು.

ಮನೆಯ ವಾತಾವರಣ ಸಕಾರಾತ್ಮಕವಾಗಿದ್ದರೆ ಅದು ನಮ್ಮ ಜೀವನದ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತದೆ. ಹೀಗಾಗಿ ಹೊಸ ಮನೆಯನ್ನು ನಿರ್ಮಿಸುವಾಗ ಬಣ್ಣಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ಮನೆಯ ಬಣ್ಣಗಳು ನಮ್ಮ ಜೀವನದ ಮೇಲೂ ಪರಿಣಾಮ ಬೀರುತ್ತದೆ. ಇದರಿಂದ ಸಾಕಷ್ಟು ಬದಲಾವಣೆಗಳು ಆಗುತ್ತವೆ. ಹೀಗಾಗಿ ಮನೆಯ ಮುಖ್ಯ ದ್ವಾರದಲ್ಲಿ ಬಳಸುವ ಬಣ್ಣಗಳ ಬಗ್ಗೆ ಎಚ್ಚರಿಕೆ ಇರಲಿ ಎನ್ನುತ್ತಾರೆ ಪಂಡಿತ್ ಶಂಕರ್.

ಯಾವ ಬಣ್ಣ ಬೇಡ ?

ಮನೆಯ ಮುಖ್ಯ ದ್ವಾರದಲ್ಲಿ ಯಾವುದೇ ಕಾರಣಕ್ಕೂ ಕಪ್ಪು ಮತ್ತು ಬೂದು ಬಣ್ಣಗಳಂತಹ ಗಾಢ ಬಣ್ಣಗಳನ್ನು ಬಳಸಬಾರದು. ಯಾಕೆಂದರೆ ಇವು ನಕಾರಾತ್ಮಕ ಶಕ್ತಿಯನ್ನು ಸೃಷ್ಟಿಸುತ್ತದೆ. ಇದರಿಂದ ಮನೆಯಲ್ಲಿರುವ ಸಕಾರಾತ್ಮಕ ಅಂಶಗಳ ಮೇಲೆ ಪರಿಣಾಮ ಉಂಟಾಗುತ್ತದೆ.

ಮನೆಯ ಮುಖ್ಯ ದ್ವಾರದಲ್ಲಿ ಕಪ್ಪು ಬಣ್ಣಗಳನ್ನು ಬಳಸಿದರೆ ಇದು ಮನೆಯಲ್ಲಿ ನಕಾರಾತ್ಮಕತೆ ಶಕ್ತಿಯನ್ನು ಹೆಚ್ಚಿಸುವಂತೆ ಮಾಡುತ್ತದೆ. ಇದರಿಂದ ಮನೆಯ ವಾಸ್ತುವಿಗೆ ಹಾನಿ ಉಂಟಾಗುತ್ತದೆ. ಕುಟುಂಬದಲ್ಲಿ ನಿರಂತರ ಒಂದಲ್ಲ ಒಂದು ರೀತಿಯ ಸಮಸ್ಯೆಗಳು ಎದುರಾಗುತ್ತವೆ. ಇದು ಯಾವುದೇ ಕೆಲಸ ಸರಿಯಾಗಿ ನಡೆಯದಂತೆ ತಡೆಯುತ್ತದೆ. ಜೀವನದಲ್ಲಿ ದುಃಖವೂ ಕಾಣಿಸಿಕೊಳ್ಳತೊಡಗುತ್ತದೆ.

ಇನ್ನು ಬೂದು ಬಣ್ಣವನ್ನು ಬಳಸುವುದರಿಂದ ಯಾವುದೇ ಕೆಲಸವನ್ನು ಸರಿಯಾಗಿ ಪೂರ್ಣಗೊಳ್ಳುವುದಿಲ್ಲ. ಮನೆಯಲ್ಲಿ ಅಶಾಂತಿಯ ವಾತಾವರಣ ಸೃಷ್ಟಿಯಾಗುತ್ತದೆ.

ಇದನ್ನೂ ಓದಿ: Vastu Tips: ಮನೆ ಸಮೀಪ ತಾಳೆ ಮರವಿದ್ದರೆ ಎದುರಾಗುವುದೇ ಸಮಸ್ಯೆ?

ಯಾವ ಬಣ್ಣ ಸೂಕ್ತ?

ಮನೆಯ ಮುಖ್ಯ ದ್ವಾರದಲ್ಲಿ ಬಿಳ, ತಿಳಿ ನೀಲಿ, ಹಳದಿ ಮತ್ತು ತಿಳಿ ಗುಲಾಬಿ ಬಣ್ಣವನ್ನು ಬಳಸಬೇಕು. ಈ ಬಣ್ಣಗಳು ಮನೆ ಮಂದಿಯಲ್ಲಿ ವಿಶೇಷ ಶಕ್ತಿಯನ್ನು ತುಂಬುತ್ತವೆ. ಮನಸ್ಸನ್ನು ಶಾಂತಗೊಳಿಸಲು ಸಹಾಯ ಮಾಡುತ್ತವೆ ಎನ್ನುತ್ತಾರೆ ವಾಸ್ತು ತಜ್ಞರು.