ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Daily Horoscope: ನವರಾತ್ರಿಯ ಎರಡನೇ ದಿನ ಯಾವ ರಾಶಿಗಳಿಗೆ ಒಳಿತಾಗಲಿದೆ?

ವಿಶ್ವ ವಸು ನಾಮ ಸಂವತ್ಸರದ ದಕ್ಷಿಣಾಯನ ವರ್ಷ ಋತು ಆಶ್ವಯುಜ ಮಾಸದ ಶುಕ್ಷ ಪಕ್ಷದ, ದ್ವೀತಿಯ ತಿಥಿ, ಹಸ್ತ ನಕ್ಷತ್ರದ ಸೆಪ್ಟೆಂಬರ್ 23ನೇ ತಾರೀಕಿನ ಈ ದಿನದ ಭವಿಷ್ಯದ ಬಗ್ಗೆ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ತಿಳಿಸಿದ್ದಾರೆ.

Horoscope

ಬೆಂಗಳೂರು: ವಿಶ್ವವಸು ನಾಮ ಸಂವತ್ಸರದ ದಕ್ಷಿಣಾಯನ ವರ್ಷ ಋತು ಆಶ್ವಯುಜ ಮಾಸದ ಶುಕ್ಷ ಪಕ್ಷದ, ದ್ವೀತಿಯ ತಿಥಿ, ಹಸ್ತ ನಕ್ಷತ್ರದ ಸೆಪ್ಟೆಂಬರ್ 23ನೇ ತಾರೀಕಿನ ಈ ದಿನ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿ ಭವಿಷ್ಯ ಹೇಗಿದೆ ಎನ್ನುವುದನ್ನು ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ತಿಳಿಸಿದ್ದಾರೆ.

ಮೇಷ ರಾಶಿ: ಇಂದು ಹಸ್ತ ನಕ್ಷತ್ರ ಇದ್ದು ಇದರ ಅಧಿಪತಿ ಚಂದ್ರನಾಗಿದ್ದಾನೆ. ಅದರಿಂದ ಎಲ್ಲ ರಾಶಿಯವರಿಗೂ ಭಾವುಕತೆ ಹೆಚ್ಚಾಗಿ ಇರುತ್ತದೆ. ಮೇಷ ರಾಶಿಯವರಿಗೆ ಸಾಮಾಜಿಕ ಕಾರ್ಯ ಚಟುವಟಿಕೆಯಲ್ಲಿ ಅದೇ ರೀತಿ ಮಿತ್ರರಿಂದ ಹೆಚ್ಚಿನ ಭಾವುಕತೆ ಮೂಡಬಹುದು. ಮಿತ್ರರಿಂದ ನಿಮಗೆ ಇಂದು ನೋವು ಉಂಟುಮಾಡುವ ಸಂದರ್ಭ ಕೂಡ ಬರಬಹುದು.

ವೃಷಭ ರಾಶಿ: ಇಂದು ವೃಷಭ ರಾಶಿಯವರಿಗೆ ಇಂದು ನಿಮ್ಮ ಪಂಚಮ ಸ್ಥಾನದಲ್ಲಿ ಚಂದ್ರ ಇರುವುದರಿಂದ ಮನಸ್ಸಿಗೆ ಅತೀ ಹತ್ತಿರವಾದ ವಿಚಾರದಲ್ಲಿ ಸ್ವಲ್ಪ ಭಾವುಕತೆ ಇರಬಹುದು. ಹಾಗಾಗಿ ಪ್ರೇಮ, ಪ್ರೀತಿ, ದಾಂಪತ್ಯ ವಿಚಾರದಲ್ಲಿ ಕ್ಷೇಷ ಉಂಟಾಗುವ ಸಾಧ್ಯತೆ ಇದೆ.‌ ಮಕ್ಕಳಿಗೆ ಸ್ವಲ್ಪ ಪೋಷಕರಿಗೆ ಬೇಸರ ಉಂಟಾಗುವ ಸಾಧ್ಯತೆ ಇದೆ.

ಮಿಥುನ ರಾಶಿ: ಮಿಥುನ ರಾಶಿಯಲ್ಲಿರುವವರಿಗೆ ನಿಮ್ಮ ಆಸ್ತಿ ಪಾಸ್ತಿ ವಿಚಾರದಲ್ಲಿ ಹೆಚ್ಚು ಭಾವುಕತೆ ಇರಬಹುದು.‌ ಅಮ್ಮನಿಂದ ದೂರ ಇದ್ದವರು ಅಮ್ಮನನ್ನು ನೆನಪಿಸಿಕೊಂಡು ಅಳ ಬಹುದು. ಅಮ್ಮನ ಬಗ್ಗೆ ಈ‌ ದಿನ ನಿಮಗೆ ಹೆಚ್ಚಿನ ಕಾಳಜಿ ಇರುತ್ತದೆ.

ಕಟಕ ರಾಶಿ: ಕಟಕ ರಾಶಿಯವರಿಗೆ ಇಂದು ಅತ್ಯುತ್ತಮ ದಿನ. ನಿಮ್ಮ ಬಂಧು- ಭಾಂಧವರು ಅಣ್ಣ- ತಮ್ಮಂದಿರ ಬಗ್ಗೆ ಬಹಳಷ್ಟು ಭಾವುಕತೆಯಿಂದ ನೀವು ಇರುತ್ತೀರಿ ಅಥವಾಅಣ್ಣ ತಮ್ಮಂದಿರ ಪ್ರೀತಿ ವಿಚಾರ ತಿಳಿದು ನೀವು ಹೆಚ್ಚು ಭಾವುಕರಾಗಬಹುದು.

ಸಿಂಹ ರಾಶಿ: ಸಿಂಹ ರಾಶಿಯವರಿಗೆ ಮನೆಯಲ್ಲಿ ಸ್ವಲ್ಪ ಬೇಸರ ಉಂಟಾಗುವ ಸಾಧ್ಯತೆ ಇದೆ. ನಿಮ್ಮ ಪ್ರೀತಿ ಪಾತ್ರರಿಂದ, ತಂದೆ ತಾಯಿಯ ಏನೋ ಒಂದು ಕಟುವಾದ ಮಾತುಗಳು ಕೇಳಿ ಬೇಸರವಾಗಬಹುದು.

ಕನ್ಯಾ ರಾಶಿ: ಕನ್ಯಾ ರಾಶಿಯವರಿಗೆ ನಿಮ್ಮ ರಾಶಿಯಲ್ಲೇ ಚಂದ್ರ ‌ಇರುವುದರಿಂದ ಬಹಳ ಉಪ ಯುಕ್ತವಾದ ಭಾವುಕತೆ ನಿಮಗೆ ಮೂಡಬಹುದು. ಎರಡು ದಿನಗಳ ಹಿಂದೆ ಮನಸ್ಸಿಗೆ ಅತೀ ಹೆಚ್ಚಿನ ಬೇಸರ ಇತ್ತು. ಇಂದು ಎಲ್ಲರೂ ತನ್ನ ಜತೆಗೆ ಇದ್ದಾರೆ ಎನ್ನುವ ಭಾವನೆ ನಿಮಗೆ ಮೂಡಬಹುದು.‌

ತುಲಾ ರಾಶಿ: ತುಲಾ ರಾಶಿಯವರು ಇಂದು ಖುಣಾತ್ಮಕವಾಗಿಯೇ ಹೆಚ್ಚು ಯೋಚನೆ ಮಾಡುವ ದಿನವಾಗಿರುತ್ತದೆ. ತಾನು ಈ ರೀತಿ ಮಾಡಿದ್ದು ತಪ್ಪು, ಅವರು ಹೇಳಿದ್ದು ತಪ್ಪು ಹೀಗೆ ನಾನಾ ರೀತಿಯ ಯೋಚನೆಯಲ್ಲೇ ನೀವು ಸಮಯ ಕಳೆಯುತ್ತೀರಿ. ಹಾಗಾಗಿ ಇಂದು ಧನಾತ್ಮಕವಾಗಿ ಇರಲು ಪ್ರಯತ್ನಿಸಿ.

ಇದನ್ನು ಓದಿ:Vastu Tips: ಮನೆಯಲ್ಲಿ ಸಕಾರಾತ್ಮಕತೆಯನ್ನು ವೃದ್ಧಿಸಲಿ ನವರಾತ್ರಿ

ವೃಶ್ಚಿಕ ರಾಶಿ: ವೃಶ್ಚಿಕ ರಾಶಿಯವರಿಗೆ ಇಂದು ಅತ್ಯುತ್ತಮ ದಿನವಾಗುತ್ತದೆ. ನಿಮ್ಮ ಮಿತ್ರರಿಂದ ಭಾವುಕತೆ ಹೆಚ್ಚಾಗುತ್ತದೆ. ಉತ್ತಮವಾದ ರೀತಿಯಲ್ಲಿ ದಿನ ಕಳೆಯುತ್ತೀರಿ.

ಧನಸ್ಸು ರಾಶಿ: ಧನಸ್ಸು ರಾಶಿಯವರಿಗೆ ಕಾರ್ಯ ಕ್ಷೇತ್ರದಲ್ಲಿ ಒತ್ತಡ ಹೆಚ್ಚಾಗಬಹುದು. ಹೀಗಾಗಿ ತನಗೆ ಕೆಲಸದಲ್ಲಿ ಬ್ರೇಕ್ ಬೇಕು ಎನ್ನುವ ಫೀಲ್ ನಿಮ್ಮಲ್ಲಿ ಬರಬಹುದು.‌ ಒತ್ತಡ ಇರುವಂತಹ ಕೆಲಸಗಳಿಂದ ದೂರ ಇರುವುದು ಉತ್ತಮ.

ಮಕರ ರಾಶಿ: ಮಕರ ರಾಶಿಯವರಿಗೆ ಭಾಗ್ಯದ ದಿನವಾಗುತ್ತದೆ. ಮನಸ್ಸಿಗೆ ನೆಮ್ಮದಿ ಇದ್ದು ನಾಲ್ಕು ದಿನದಂದ ಅನುಭವಿಸುತ್ತಿದ್ದ ತೊಂದರೆಗಳಿಗೆ ಪರಿಹಾರ ಸಿಗಲಿದೆ.‌ ಎಲ್ಲ ಕೆಲಸದಲ್ಲೂ ಜಯ ಪ್ರಾಪ್ತಿಯಾಗುತ್ತದೆ.

ಕುಂಭರಾಶಿ: ಕುಂಭ ರಾಶಿಯವರಿಗೆ ಆತಂಕ ಆಲೋಚನೆಗಳು ಇಂದು ಹೆಚ್ಚಾಗಬಹುದು.‌ ಹಾಗಾಗಿ ಇಂದು ಧ್ಯಾನಾಧಿಗಳನ್ನು ಮಾಡುವ ಮೂಲಕ ಸಮಯ ಕಳೆದರೆ ಉತ್ತಮ.

ಮೀನ ರಾಶಿ: ಮೀನ ರಾಶಿಯವರಿಗೆ ಎಲ್ಲ ರೀತಿಯಲ್ಲಿ ನಿಮ್ಮ ಪರವಾಗಿಯೇ ಕೆಲಸ ಕಾರ್ಯಗಳು ನಡೆಯುತ್ತವೆ‌. ನಿಮ್ಮ ಪ್ರೀತಿ ಪಾತ್ರರಿಂದ ನೀವು ನೆಮ್ಮದಿಯನ್ನು ಕಾಣುತ್ತೀರಿ.‌ ನವರಾತ್ರಿ ಉತ್ಸವದ ಈ ದಿನ ದೇವಿಯ ಆರಾಧನೆ ಮಾಡಿ.