ಎಸ್​ ಎಲ್​ ಭೈರಪ್ಪ ನಿಧನ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Daily Horoscope: ದಿನ ಭವಿಷ್ಯ- ಇಂದು ಈ ರಾಶಿಗಳಿಗೆ ಶನಿಯ ಪ್ರಭಾವ! ಯಾರಿಗೆ ಒಳಿತು? ಯಾರಿಗೆ ಕೆಡುಕು?

ಇಂದು ವಿಶ್ವವಸು ನಾಮ ಸಂವತ್ಸರದ ದಕ್ಷಿಣಾಯನ ವರ್ಷ ಋತು ಆಶ್ವಯುಜ ಮಾಸದ ಶುಕ್ಷ ಪಕ್ಷದ, ಪಂಚಮಿ ತಿಥಿ, ಅನುರಾಧ ನಕ್ಷತ್ರದ ಸೆಪ್ಟೆಂಬರ್ 27ನೇ ತಾರೀಖಿನ ಶನಿವಾರ ಈ ದಿನ ನವರಾತ್ರಿಯ ಆರನೇ ದಿನವಾಗಿದೆ. ಈ ದಿನದ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಅವರು ತಿಳಿಸಿದ ಇಂದಿನ ರಾಶಿ ಭವಿಷ್ಯ ಹೀಗಿದೆ..

Horoscope

ಬೆಂಗಳೂರು: ಇಂದು ವಿಶ್ವ ವಸುನಾಮ ಸಂವತ್ಸರದ ದಕ್ಷಿಣಾಯನ ವರ್ಷ ಋತು ಆಶ್ವಯುಜ ಮಾಸದ ಶುಕ್ಷ ಪಕ್ಷದ, ಪಂಚಮಿ ತಿಥಿ, ಅನುರಾಧ (Daily Horoscope) ನಕ್ಷತ್ರದ ಸೆಪ್ಟೆಂಬರ್ 27ನೇ ತಾರೀಖಿನ ಶನಿ ವಾರದ ಈ ದಿನ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾ ಜಿತಾ ಜ್ಯೋತಿಷ್ಮತೀ ಅವರು ತಿಳಿಸಿದಂತೆ ನಿಮ್ಮ ಭವಿಷ್ಯ ಹೇಗಿದೆ ಎಂದು ತಿಳಿಯಿರಿ.

ಮೇಷ ರಾಶಿ: ಇಂದು ಅನುರಾಧ ನಕ್ಷತ್ರ ಇದ್ದು ಇದರ ಅಧಿಪತಿ ಶನಿ ಆಗಿದ್ದಾನೆ. ಆದ್ದರಿಂದ ಎಲ್ಲ ರಾಶಿಯವರಿಗೂ ಅತೀ ಹೆಚ್ಚಾಗಿ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ. ಹಾಗಾಗಿ ಶನೇಶ್ವರನ ಪೂಜೆ ಮಾಡಿದರೆ ಒಳಿತಾಗಲಿದೆ. ಮೇಷ ರಾಶಿಯವರಿಗೆ ಕಷ್ಟಕರವಾದ ದಿನವಾಗಿದೆ. ಮುಖ್ಯವಾದ ಯಾವುದೇ ನಿರ್ಧಾರ ವನ್ನು ಮಾಡಲು ಹೋಗಬೇಡಿ. ಮನಸ್ಸಿಗೆ ಬಹಳಷ್ಟು ಕ್ಲೇಷ ಉಂಟಾಗಲಿದ್ದು ಯಾರ ಸಹಕಾರ ಕೂಡ ನಿಮಗೆ ಪ್ರಾಪ್ತಿಯಾಗುವುದಿಲ್ಲ.

ವೃಷಭ ರಾಶಿ: ಇಂದು ವೃಷಭ ರಾಶಿ ಅವರಿಗೆ ಇಂದು ಅತ್ಯುತ್ತಮವಾದ ದಿನವಾಗಿದ್ದು ಎಲ್ಲ ರಿಂದಲೂ ನಿಮಗೆ ಸಹಕಾರ ಪ್ರಾಪ್ತಿಯಾಗುತ್ತದೆ. ಮನೆಯಲ್ಲಿ ಅಕ್ಕರೆ, ದಾಂಪತ್ಯ ಜೀವನದಲ್ಲೂ ನೆಮ್ಮದಿ ಸಿಗುತ್ತದೆ.‌ ಪಾರ್ಟ್ನರ್ ಶೀಪ್ ಬಿಸಿನೆಸ್ ವ್ಯವಹಾರದಲ್ಲೂ ಯಶಸ್ಸು ಸಿಗಲಿದೆ.

ಮಿಥುನ ರಾಶಿ: ಮಿಥುನ ರಾಶಿಯಲ್ಲಿ ಇರುವವರಿಗೆ ಸ್ವಲ್ಪ ಕಷ್ಟ ಕರವಾದ ದಿನ ಆಗುತ್ತದೆ.‌ ಆದರೂ ಕೂಡ ಸಾಮಾಜಿಕ ಕೆಲಸದಲ್ಲಿ ಜಯ ಕಾಣುತ್ತೀರಿ. ಶತ್ರು ಭಾದೆ ಸ್ವಲ್ಪ ಕಾಡಬಹುದು. ಆರೋಗ್ಯ ವಿಚಾರದಲ್ಲಿ ಗಮನ ಇರಲಿ.

ಇದನ್ನು ಓದಿ:Vastu Tips: ಮನೆಯ ಸುಖ, ಶಾಂತಿ ಮೇಲೆ ಪ್ರಭಾವ ಬೀರುವ ಗಿಡಗಳ ಬಗ್ಗೆ ತಿಳಿದಿರಲಿ

ಕಟಕ ರಾಶಿ: ಕಟಕ ರಾಶಿ ಅವರಿಗೆ ಇಂದು ನಿಮ್ಮ ಬುದ್ಧಿವಂತಿಕೆ ಬಹಳಷ್ಟು ಹೆಚ್ಚಾಗಿ ಇರುತ್ತದೆ. ಇದರಿಂದ ಬಹಳಷ್ಟು ಯಶಸ್ಸು, ಲಾಭವನ್ನು ನೀವು ನೋಡಬಹುದು. ಆದರೂ ಇಂದು ಮನಸ್ಸಿಗೆ ಕ್ಲೇಷ ಇರುತ್ತದೆ. ಪ್ರೀತಿ, ಪ್ರೇಮ, ದಾಂಪತ್ಯ ವಿಚಾರದಲ್ಲಿ ಮನಸ್ಸಿಗೆ ಬಹಳಷ್ಟು ಬೇಸರವಾಗುತ್ತದೆ.

ಸಿಂಹ ರಾಶಿ: ಸಿಂಹ ರಾಶಿ ಅವರಿಗೆ ನಾನಾ ರೀತಿಯ ಯೋಚನೆ ಗಳು ಇಂದು ಕಾಡುತ್ತವೆ. ಮುಖ್ಯ ವಾದ ನಿರ್ಧಾರದಲ್ಲಿ ಇಂದು ಒಳ್ಳೆಯ ದಿನ ಅಲ್ಲ.‌ ಯಾವುದೇ ರೀತಿಯ ಒಡನಾಟದಲ್ಲಿ ನೀವು ಜಾಗರೂಕತೆಯಿಂದ ಇರಬೇಕು. ಕೋರ್ಟ್, ಕಛೇರಿ ವ್ಯವಹಾರ ದಲ್ಲಿ ಜಾಗೃತಿಯಿಂದ ಕೆಲಸ ಮಾಡಬೇಕು.

ಕನ್ಯಾ ರಾಶಿ: ಕನ್ಯಾ ರಾಶಿ ಅವರಿಗೆ ಅತ್ಯುತ್ತಮವಾದ ದಿನ ವಾಗಿದೆ. ಎಲ್ಲ ಕಡೆಯಲ್ಲೂ ನೀವು ನೆಮ್ಮದಿಯನ್ನು ಕಾಣುತ್ತೀರಿ. ಬಂಧು ಮಿತ್ರರು ಎಲ್ಲರೂ ನಿಮ್ಮನ್ನು ಸಂತೋಷವಾಗಿ ನೋಡಿ ಕೊಳ್ಳುತ್ತಾರೆ. ಮುಖ್ಯವಾದ ಕೆಲಸ ಕಾರ್ಯದಲ್ಲಿ ಯಶಸ್ಸು ಸಿಗಲಿದ್ದು ಮುಖ್ಯವಾದುದ್ದನ್ನು ಇವತ್ತು ನೀವು ಮಾಡಬಹುದು.

ತುಲಾ ರಾಶಿ: ತುಲಾ ರಾಶಿಯವರಿಗೆ ಸಂಸಾರದ ವಿಚಾರದಲ್ಲಿ ನಾನಾ ರೀತಿಯ ಯೋಚನೆಗಳು ಇರುತ್ತದೆ.‌ ಆರ್ಥಿಕ ಸುಭ ದ್ರತೆಯ ಬಗ್ಗೆ ಯೋಚನೆಗಳು ಬರಬಹುದು. ಅದ್ದರಿಂದ ಇದೇ ಯೋಚನೆಯಲ್ಲಿ ನೀವು ಹೆಚ್ಚು ಕಳೆದು ಹೋಗುತ್ತೀರಿ.

ವೃಶ್ಚಿಕ ರಾಶಿ: ವೃಶ್ಚಿಕ ರಾಶಿ ಅವರಿಗೆ ಉತ್ತಮವಾದ ದಿನವಾಗಿದೆ. ಎರಡು ಮೂರು ದಿನಗಳಲ್ಲಿ ಇದ್ದ ಕ್ಲೇಷ ಎಲ್ಲವೂ ಮಾಯವಾಗಲಿದೆ. ಮನಸ್ಸಿಗೆ ನೆಮ್ಮದಿ ಸಿಗಲಿದ್ದು ಮುಂದೆ ಏನು ಮಾಡ ಬೇಕು ಎನ್ನುವ ಮಾರ್ಗ ದರ್ಶನ ಕೂಡ ಪ್ರಾಪ್ತಿ ಯಾಗುತ್ತದೆ.

ಧನಸ್ಸು ರಾಶಿ: ಧನಸ್ಸು ರಾಶಿ ಅವರಿಗೆ ಇಂದು ಅತ್ಯುತ್ತಮ ವಾದ ದಿನವಾಗಿದೆ. ಆದರೆ ಆಧ್ಯಾತ್ಮಿಕ ವಾಗಿ ಮುಂದಿಟ್ಟು ಹೋದಾಗ ಮಾತ್ರ ಒಳ್ಳೆಯ ಫಲಗಳು ಪ್ರಾಪ್ತಿ ಯಾಗುತ್ತದೆ. ಆದರೂ ಕೂಡ ಮುಖ್ಯವಾದ ಮಿತೃತ್ವದಲ್ಲಿ ಒಡಕು ಕಾಣಬಹುದು. ಮನಸ್ಸಿಗೆ ಸ್ವಲ್ಪ ಕ್ಲೇಷ ಉಂಟಾಗಬಹುದು.

ಮಕರ ರಾಶಿ: ಮಕರ ರಾಶಿ ಅವರಿಗೆ ಅತ್ಯುತ್ತಮವಾದ ದಿನ ವಾಗಿದೆ. ಕೆಲಸ ವ್ಯವಹಾರದಲ್ಲಿ ಯಶಸ್ಸು ಸಿಗಲಿದ್ದು ಇಷ್ಟಾರ್ಥ ಸಿದ್ದಿಯಾಗಲಿದೆ. ಧನ ಆಗಮನ ಕೂಡ ಆಗಲಿದೆ.

ಕುಂಭರಾಶಿ: ಕುಂಭ ರಾಶಿ ಯವರಿಗೆ ಕಾರ್ಯ ಕ್ಷೇತ್ರದಲ್ಲಿ ಅತೀ ಹೆಚ್ಚಿನ ಯಶಸ್ಸು ಸಿಗಲಿದೆ. ಮನೆಯ ಜವಾಬ್ದಾರಿ ಹಾಗೂ ಕೆಲಸ ಕಾರ್ಯದ ಜವಾಬ್ದಾರಿಯನ್ನು ಸಮತೋಲನದಲ್ಲಿ ಇಟ್ಟು ಕೊಳ್ಳಬೇಕಾಗುತ್ತದೆ.

ಮೀನ ರಾಶಿ: ಮೀನ ರಾಶಿ ಅವರಿಗೆ ಹಿಂದಿನ ಮೂರು ನಾಲ್ಕು ದಿನಗಳಲ್ಲಿ ಇದ್ದ ಮನಸ್ಸಿನ ಕ್ಲೇಷ ಇಂದು ಮಾಯವಾಗುತ್ತದೆ.‌ ಉತ್ತಮ ಮಾರ್ಗ ದರ್ಶನ ಪ್ರಾಪ್ತಿಯಾಗಿ ಮನಸ್ಸಿಗೆ ನೆಮ್ಮದಿ ಸಿಗುತ್ತದೆ. ಇಂದು ಭಾಗ್ಯೋದಯವಾದ ದಿನ ಆಗುತ್ತದೆ.‌ ನವರಾತ್ರಿ ಉತ್ಸವದ ಈ ದಿನ ಎಲ್ಲ ರಾಶಿಯವರು ದೇವಿಯ ಆರಾಧನೆ ಮಾಡಿ.