Vastu Tips: ಮನೆಯ ಸುಖ, ಶಾಂತಿ ಮೇಲೆ ಪ್ರಭಾವ ಬೀರುವ ಗಿಡಗಳ ಬಗ್ಗೆ ತಿಳಿದಿರಲಿ
ಪ್ರಕೃತಿಗೂ ಮಾನವನಿಗೂ ನೇರವಾದ ಸಂಬಂಧವಿದೆ. ಯಾಕೆಂದರೆ ನಮ್ಮ ಜೀವನದಲ್ಲಿ ಸಕಾರಾತ್ಮಕ ಶಕ್ತಿ ಮತ್ತು ಸಮತೋಲನವನ್ನು ತರುವಲ್ಲಿ ಪ್ರಕೃತಿ ಮಹತ್ವದ ಪಾತ್ರವಹಿಸುತ್ತದೆ. ಆದರೆ ಕೆಲವೊಂದು ಗಿಡಗಳು ನಮ್ಮ ಮೇಲೆ ನಕಾರಾತ್ಮಕ ಪರಿಣಾಮವನ್ನು ಬೀರುತ್ತದೆ. ಅಂತಹ ಗಿಡಗಳ ಕುರಿತು ಇಲ್ಲಿದೆ ಮಾಹಿತಿ.

-

ಬೆಂಗಳೂರು: ಮನೆಯ ಸುತ್ತಮುತ್ತ ಕೆಲವೊಂದು ಗಿಡಗಳನ್ನು (Vastu for plant) ನೆಡುವುದರಿಂದ ಮನೆಯ ವಾಸ್ತುವಿನ ಮೇಲೆ ಪರಿಣಾಮ ಬೀರುತ್ತದೆ ಎನ್ನುತ್ತಾರೆ ವಾಸ್ತು (Vastu shastra) ತಜ್ಞರು. ಮಾನವ ಜೀವನಕ್ಕೆ ಸಕಾರಾತ್ಮಕ ಶಕ್ತಿ ಮತ್ತು ಸಮತೋಲನವನ್ನು ನೀಡುವಲ್ಲಿ ಪ್ರಕೃತಿಯ ಕೊಡುಗೆ ಸಾಕಷ್ಟು ಇದೆ. ಹೀಗಾಗಿಯೇ ಮನೆಯಲ್ಲಿ (Vastu for home) ಕೆಲವೊಂದು ಗಿಡಗಳನ್ನು ನೆಡುವುದು ಶುಭ ಮತ್ತು ಆರೋಗ್ಯಕರವೆಂದು ಪರಿಗಣಿಸಲಾಗುತ್ತದೆ. ಆದರೆ ಕೆಲವು ಗಿಡಗಳು ನಕಾರಾತ್ಮಕ ಪರಿಣಾಮವನ್ನು ಬೀರುತ್ತದೆ ಎಂಬುದು ತಿಳಿದಿರಲಿ.
ಮನೆಗೆ ಪ್ರತಿಯೊಂದು ಗಿಡವೂ ಪ್ರಯೋಜನಕಾರಿಯಲ್ಲ. ಗುಲಾಬಿಗಳನ್ನು ಹೊರತುಪಡಿಸಿ ಮುಳ್ಳಿನ ಗಿಡಗಳು ಮನೆಯ ವಾತಾವರಣವನ್ನು ನಕಾರಾತ್ಮಕವಾಗಿಸಬಹುದು ಎನ್ನುತ್ತದೆ ವಾಸ್ತು ಶಾಸ್ತ್ರ ಮತ್ತು ಫೆಂಗ್ ಶೂಯಿ.
ಮುಳ್ಳಿನ ಗಿಡಗಳಿಂದ ಹೊರಹೊಮ್ಮುವ ಶಕ್ತಿಯು ಮನೆಯ ಜನರಲ್ಲಿ ಉದ್ವಿಗ್ನತೆ, ಜಗಳ ಮತ್ತು ಅಸ್ಥಿರತೆಯನ್ನು ಉತ್ತೇಜಿಸುತ್ತದೆ. ಅವುಗಳ ಮುಳ್ಳುಗಳು ಕೋಪ ಮತ್ತು ಭಿನ್ನಾಭಿಪ್ರಾಯಗಳ ಸಂಕೇತವೆಂದು ಪರಿಗಣಿಸಲಾಗುತ್ತದೆ. ಇದು ಮನೆಯಲ್ಲಿ ವಾಸಿಸುವವರ ನೈತಿಕತೆಯನ್ನು ದುರ್ಬಲಗೊಳಿಸಬಹುದು ಮತ್ತು ಸಂಬಂಧಗಳಲ್ಲಿ ಅಂತರವನ್ನು ಹೆಚ್ಚಿಸಬಹುದು.
ಗುಲಾಬಿಯ ಗಿಡದ ವೈಶಿಷ್ಟ್ಯ
ಗುಲಾಬಿ ಗಿಡ ಭಿನ್ನವಾಗಿದೆ. ಯಾಕೆಂದರೆ ಅದರ ಮುಳ್ಳುಗಳನ್ನು ತೊಂದರೆಯ ಸಂಕೇತವೆಂದು ಪರಿಗಣಿಸಲಾಗುವುದಿಲ್ಲ. ಗುಲಾಬಿಯನ್ನು ಅದರ ಸೌಂದರ್ಯ, ಪರಿಮಳ ಮತ್ತು ಸಕಾರಾತ್ಮಕ ಶಕ್ತಿಯಿಂದಾಗಿ ಮನೆ ಮತ್ತು ಉದ್ಯಾನ ಎರಡರಲ್ಲೂ ಶುಭವೆಂದು ಪರಿಗಣಿಸಲಾಗುತ್ತದೆ. ಇದರ ಉಪಸ್ಥಿತಿಯು ಮನೆಯ ಸೌಂದರ್ಯವನ್ನು ಹೆಚ್ಚಿಸುವುದು ಮಾತ್ರವಲ್ಲ ಅದೃಷ್ಟ ಮತ್ತು ಪ್ರೀತಿಯನ್ನು ಆಹ್ವಾನಿಸುತ್ತದೆ.
ಆರೋಗ್ಯದ ಮೇಲೆ ಪರಿಣಾಮ
ವೈಜ್ಞಾನಿಕ ದೃಷ್ಟಿಕೋನದಿಂದ ಕೂಡ ಮುಳ್ಳಿನ ಗಿಡಗಳನ್ನು ಮನೆಯೊಳಗೆ ಇಡುವುದರಿಂದ ಹೆಚ್ಚಿನ ಆರೋಗ್ಯ ಸಮಸ್ಯೆಗಳನ್ನು ಎದುರಿಸುವಂತೆ ಮಾಡುತ್ತದೆ. ಇದು ಮಾನಸಿಕ ಒತ್ತಡವನ್ನು ಹೆಚ್ಚಿಸುತ್ತದೆ. ಅವುಗಳ ಉಪಸ್ಥಿತಿಯು ವ್ಯಕ್ತಿಯ ಮನಸ್ಸಿನ ಮೇಲೆ ಪರಿಣಾಮ ಬೀರುತ್ತದೆ. ಅನಗತ್ಯ ಚಡಪಡಿಕೆಯನ್ನು ಉಂಟು ಮಾಡುತ್ತದೆ. ಅದಕ್ಕಾಗಿಯೇ ಅವುಗಳನ್ನು ಕಚೇರಿ ಅಥವಾ ಮನೆಯ ಒಳಗೆ ನೆಡುವ ಬದಲು ತೋಟದಲ್ಲಿ ಅಥವಾ ಹೊರಗೆ ಇಡುವುದು ಉತ್ತಮ.
ಇದನ್ನೂ ಓದಿ: Vastu Tips: ಮಲಗುವ ಕೋಣೆಯಲ್ಲಿ ರಾಧಾಕೃಷ್ಣರ ಚಿತ್ರ ಇಡಬಹುದೇ? ಏನು ಹೇಳುತ್ತದೆ ವಾಸ್ತು?
ಯಾವುದು ಸೂಕ್ತ?
ತುಳಸಿ, ಮನಿ ಪ್ಲಾಂಟ್, ಬಿದಿರು ಅಥವಾ ಮಲ್ಲಿಗೆಯಂತಹ ಸಸ್ಯಗಳನ್ನು ಮನೆಯೊಳಗೆ ಇಡುವುದು ಸೂಕ್ತವೆಂದು ಪರಿಗಣಿಸಲಾಗುತ್ತದೆ. ಈ ಗಿಡಗಳು ಮನೆಯಲ್ಲಿ ಸಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತವೆ. ಮನೆಯಲ್ಲಿ ಶಾಂತಿ ಮತ್ತು ಸಮೃದ್ಧಿಯನ್ನು ವೃದ್ಧಿಸುತ್ತದೆ ಎನ್ನುತ್ತಾರೆ ವಾಸ್ತು ತಜ್ಞರು.