ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Solar Eclipse: ನಾಳೆ ವರ್ಷದ ಕೊನೆಯ ಗ್ರಹಣ; ಯಾರ ಅದೃಷ್ಟ ಖುಲಾಯಿಸಲಿದೆ?

ಈ ವರ್ಷದ ಕೊನೆಯ ಸೂರ್ಯಗ್ರಹಣ ಸೆಪ್ಟೆಂಬರ್ 21ರಂದು ಸರ್ವಪಿತೃ ಅಮಾವಾಸ್ಯೆಯಂದು ಸಂಭವಿಸಲಿದೆ. ಈ ಗ್ರಹಣವು ಈ ಮೂರು ರಾಶಿಯವರಿಗೆ ಭಾಗ್ಯದ ಬಾಗಿಲು ತೆರೆಯಲಿದೆ. ಈ ಗ್ರಹಣದ ಬಳಿಕ ಶುಭಯೋಗವಾದ ಸರ್ವಾರ್ಥ ಸಿದ್ಧಿ ಯೋಗವನ್ನು ವೃಷಭ, ಸಿಂಹ ಮತ್ತು ಕುಂಭ ರಾಶಿಯವರು ಪಡೆಯಲಿದ್ದಾರೆ.

ಬೆಂಗಳೂರು: ಈ ವರ್ಷದ ಕೊನೆಯ ಸೂರ್ಯಗ್ರಹಣ (Solar Eclipse) ಸರ್ವಪಿತೃ ಅಮಾವಾಸ್ಯೆಯ (Sarvapitra Amavasya) ದಿನವಾದ ನಾಳೆ ಅಂದರೆ ಸೆಪ್ಟೆಂಬರ್ 21ರಂದು ಸಂಭವಿಸಲಿದೆ. ಈ ಗ್ರಹಣವು ಕನ್ಯಾರಾಶಿಯಲ್ಲಿ ನಡೆಯಲಿದ್ದು, ಇದರಿಂದ ಈ ಮೂರು ರಾಶಿಗಳಿಗೆ ಅದೃಷ್ಟ ಒಲಿಯಲಿದೆ. ಗ್ರಹಣದ ಬಳಿಕ ವೃಷಭ, ಸಿಂಹ ಮತ್ತು ಕುಂಭ ರಾಶಿಯವರು (Taurus, Leo and Aquarius) ಶುಭಯೋಗವಾದ ಸರ್ವಾರ್ಥ ಸಿದ್ಧಿ ಯೋಗವನ್ನು ಪಡೆಯಲಿದ್ದಾರೆ. ಇದರಿಂದ ಅವರ ಅದೃಷ್ಟ ಬದಲಾಗಲಿದೆ. ಭಾರತದಲ್ಲಿ ಈ ಗ್ರಹಣ ಕಾಣಿಸದೇ ಇದ್ದರೂ ಕೂಡ ಅದರ ಪ್ರಭಾವ ಎಲ್ಲ ರಾಶಿಗಳಿಗೆ ಇದೆ ಎನ್ನುತ್ತಾರೆ ಜ್ಯೋತಿಷ್ಯ ಶಾಸ್ತ್ರಜ್ಞರು.

ಸೂರ್ಯಗ್ರಹಣದ ವೇಳೆ ಅತ್ಯಂತ ಶುಭ ಯೋಗಗಳಲ್ಲಿ ಒಂದಾದ ಸರ್ವಾರ್ಥ ಸಿದ್ಧಿ ಯೋಗವು ರೂಪುಗೊಳ್ಳುತ್ತದೆ. ಇದು ಹಲವರ ಭಾಗ್ಯವನ್ನು ಬದಲಾಯಿಸಲಿದೆ. ಯಾವುದೇ ಕೆಲಸವನ್ನು ಕೈಗೊಂಡರೂ ಕೂಡ ಅದರಲ್ಲಿ ಯಶಸ್ಸು ದೊರೆಯುವುದು ಖಚಿತ ಎಂದೆನಿಸಲಿದೆ. ಇದರ ಪರಿಣಾಮ ಈ ಮೂರು ರಾಶಿಗಳಿಗೆ ಸ್ಪಷ್ಟವಾಗಿ ಗೋಚರವಾಗಲಿದೆ. ಇದರಿಂದ ಮುಂದಿನ ಒಂದು ತಿಂಗಳಲ್ಲಿ ವೃತ್ತಿಜೀವನದ ಏಳಿಗೆ ಮತ್ತು ಗಮನಾರ್ಹ ಯಶಸ್ಸನ್ನು ಪಡೆಯುತ್ತಾರೆ.

ವೃಷಭ ರಾಶಿ

ಸರ್ವಾರ್ಥ ಸಿದ್ಧಿಯೋಗ ಪ್ರಭಾವದಿಂದ ವೃಷಭ ರಾಶಿಯವರಲ್ಲಿ ಅತ್ಯಂತ ಸಕಾರಾತ್ಮಕ ಪರಿಣಾಮಗಳು ಗೋಚರವಾಗಲಿದೆ. ವೃಷಭ ರಾಶಿಯವರ ಧೈರ್ಯ ಹೆಚ್ಚಾಗಲಿದೆ. ಇದು ಜೀವನದಲ್ಲಿ ದೃಢ ನಿರ್ಧಾರ ಕೈಗೊಳ್ಳಲು ಸಹಾಯ ಮಾಡುತ್ತದೆ. ವೃತ್ತಿ ಬದುಕಿನಲ್ಲಿ ಬದಲಾವಣೆಯಾಗುವ ಸಾಧ್ಯತೆ ಇದೆ. ಈವರೆಗಿನ ಕಠಿಣ ಪರಿಶ್ರಮವು ಫಲ ಕೊಡಲಿದೆ. ಹೊಸ ಆದಾಯದ ಮೂಲ ಕಾಣಿಸಿಕೊಳ್ಳಲಿದೆ. ವಿದ್ಯಾರ್ಥಿಗಳು ಕೂಡ ಶುಭಫಲವನ್ನು ನಿರೀಕ್ಷಿಸಬಹುದು. ಕುಟುಂಬ ಸಮಸ್ಯೆಗಳು ದೂರವಾಗುವುದು.

ಸಿಂಹ ರಾಶಿ

ಈ ರಾಶಿಯವರ ಆದಾಯ ಹೆಚ್ಚಾಗಲಿದೆ. ಉದ್ಯೋಗದಲ್ಲಿ ಬದಲಾವಣೆ, ಬಡ್ತಿಯನ್ನು ನಿರೀಕ್ಷಿಸಬಹುದು. ಉದ್ಯಮಿಗಳು ಹೆಚ್ಚಿನ ಲಾಭ ಪಡೆಯುತ್ತಾರೆ. ಆರ್ಥಿಕ ಪರಿಸ್ಥಿತಿ ಗಣನೀಯ ಪ್ರಮಾಣದಲ್ಲಿ ಸುಧಾರಣೆಯಾಗಲಿದೆ. ಬಾಕಿ ಉಳಿದಿರುವ ಕೆಲಸ ಕಾರ್ಯಗಳು ಪೂರ್ಣಗೊಳ್ಳುವುದು. ಪೋಷಕರು, ಕುಟುಂಬದವರೊಂದಿಗಿನ ಸಂಬಂಧ ಬಲವಾಗುವುದು. ಆರೋಗ್ಯದಲ್ಲೂ ಚೇತರಿಕೆ ಕಾಣಲಿದೆ. ವೈವಾಹಿಕ ಜೀವನದ ಸಮಸ್ಯೆಗಳು ದೂರವಾಗುವುದು. ಆಸ್ತಿ ಖರೀದಿ, ಸಂಪತ್ತು ಹೆಚ್ಚಳ ಸಾಧ್ಯತೆಗಳೂ ಇವೆ.

ಇದನ್ನೂ ಓದಿ: Sagara News: ಸೆ.22ರಿಂದ ಸಾಗರದಲ್ಲಿ ಸಂಭ್ರಮದ 'ನವರಾತ್ರ ನಮಸ್ಯಾ'; ನಾಳೆ ರಾಘವೇಶ್ವರ ಶ್ರೀಗಳ ಅದ್ಧೂರಿ ಪುರಪ್ರವೇಶ

ಕುಂಭ ರಾಶಿ

ಈ ರಾಶಿಯವರಿಗೆ ಸರ್ವಾರ್ಥ ಸಿದ್ಧಿ ಯೋಗವು ಅದೃಷ್ಟ ತರಲಿದೆ. ವೃತ್ತಿ ಬದುಕಿನಲ್ಲಿ ಹೊಸ ಜವಾಬ್ದಾರಿಗಳು, ಸಹೋದ್ಯೋಗಿಗಳ ಬೆಂಬಲ ದೊರೆಯುತ್ತದೆ. ವೃತ್ತಿ ಬದುಕಿನಲ್ಲಿ ಹೊಸ ಬದಲಾವಣೆಗಳು ಆಗುವ ಸಾಧ್ಯತೆ ಇದೆ. ಉದ್ಯೋಗವನ್ನು ಹುಡುಕುತ್ತಿರುವವರು ಪ್ರಯತ್ನಿಸಬಹುದು. ಆಸ್ತಿಯನ್ನು ಖರೀದಿಸುವ ಸಾಧ್ಯತೆ ಇದೆ. ನಿಮ್ಮ ಮಾತು ಸುತ್ತಮುತ್ತಲಿನವರ ಮೇಲೆ ಸಕಾರಾತ್ಮಕ ಪ್ರಭಾವ ಬಿರುವುದು. ಆರೋಗ್ಯ ಸಮಸ್ಯೆಗಳು ದೂರವಾಗುತ್ತದೆ.

ವಿದ್ಯಾ ಇರ್ವತ್ತೂರು

View all posts by this author