ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vishwavani Editorial: ಸುತ್ತಲು ಬೆಂಕಿ ಕಿಡಿ; ಮಧ್ಯೆ ಭಾರತ

ಇದೀಗ ನೇಪಾಳದಲ್ಲಿನ ಆಂತರಿಕ ದಂಗೆಗೆ ಸಾಮಾಜಿಕ ಜಾಲತಾಣಗಳ ನಿಷೇಧ, ಸ್ಥಳೀಯ ಸರಕಾರದ ಸ್ವಜನ ಪಕ್ಷಪಾತ, ಭ್ರಷ್ಟಾಚಾರ ಹಾಗೂ ಯುವಕರಿಗೆ ನಿರುದ್ಯೋಗ ಸಮಸ್ಯೆ ಕಾರಣವೆಂದು ಹೇಳಲಾಗು ತ್ತಿದೆ. ಆದರೆ ಸ್ಥಾಪಿತ ಸರಕಾರದ ವಿರುದ್ಧ ಹೋರಾಡುವಲ್ಲಿ ಬಾಹ್ಯ ಶಕ್ತಿಗಳ ಬೆಂಬಲವಿದೆ ಎನ್ನಲಾಗಿದೆ.

ಸದ್ಯ ಭಾರತದ ಸ್ಥಿತಿ ‘ಸೆರಗಿನಲ್ಲಿ ಕಟ್ಟಿಕೊಂಡಿರುವ ಕೆಂಡ’ದಂತಾಗಿದೆ. ಭಾರತ ನೆರೆ ರಾಷ್ಟ್ರಗಳಲ್ಲಿ ಪಾಕಿಸ್ತಾನ ಮೊದಲಿನಿಂದಲೂ ವೈರಿ ರಾಷ್ಟ್ರದ ಪಟ್ಟಿಯಲ್ಲಿತ್ತು. ಈ ಎರಡು ರಾಷ್ಟ್ರಗಳನ್ನು ಹೊರತುಪಡಿಸಿದರೆ ಇನ್ನುಳಿದ ಶ್ರೀಲಂಕಾ, ನೇಪಾಲ, ಭೂತಾನ್, ಮ್ಯಾನ್ಮಾರ್, ಬಾಂಗ್ಲಾದೇಶ, ಮಾಲ್ಡೀವ್ಸ್ ನಮ್ಮೊಂದಿಗೆ ಉತ್ತಮ ಬಾಂಧವ್ಯವನ್ನೇ ಹೊಂದಿದ್ದವು.

ಆದರೆ ಇತ್ತೀಚಿನ ವರ್ಷಗಳಲ್ಲಿ ಈ ನೆರೆ ರಾಷ್ಟ್ರಗಳಲ್ಲಿ ನಡೆಯುತ್ತಿರುವ ರಾಜಕೀಯ ಅಸ್ಥಿರತೆ, ಆಂತರಿಕ ದಂಗೆ ಸೇರಿದಂತೆ ಹಲವು ಕಾರಣಗಳಿಂದ ಈ ಎಲ್ಲ ರಾಷ್ಟ್ರಗಳಲ್ಲಿ ಅರಾಜಕತೆ ಸೃಷ್ಟಿ ಯಾಗಿದೆ. ಭಾರತದ ಮಿತ್ರ ರಾಷ್ಟ್ರಗಳ ಪಟ್ಟಿಯಲ್ಲಿದ್ದ ಬಹುತೇಕ ನೆರೆ ರಾಷ್ಟ್ರಗಳನ್ನು ಅಸ್ಥಿರಗೊಳಿ ಸುವ ಅಥವಾ ಭಾರತದೊಂದಿಗೆ ಅಂತರ ಕಾಯ್ದುಕೊಳ್ಳುವಂತೆ ಮಾಡುವ ಮೂಲಕ ಭಾರತದಲ್ಲಿ ಒಂಟಿಯನ್ನಾಗಿ ಮಾಡುವ ತಂತ್ರವನ್ನು ಅಮೆರಿಕ ಹಾಗೂ ಚೀನಾ ಮಾಡಿಕೊಂಡೇ ಬಂದಿವೆ.

ಇದನ್ನೂ ಓದಿ: Vishwavani Editorial: ಇದು ರಕ್ತಬೀಜಾಸುರರ ಸಂತತಿ

ಅರಾಜಕತೆ ಆಯಾ ದೇಶಗಳ ಆಂತರಿಕ ಸಮಸ್ಯೆಯಾಗಿದ್ದರೆ ಭಾರತಕ್ಕೆ ಬಹುದೊಡ್ಡ ತಲೆಬಿಸಿ ಯಾಗಿರುತ್ತಿರಲಿಲ್ಲ. ಆದರೆ, ಈ ಆಂತರಿಕ ದಂಗೆಯ ಹಿಂದೆ ವಿದೇಶಿ ಕೈವಾಡವಿರುವ ಹಾಗೂ ಹೋರಾಟಗಾರರಿಗೆ ಭಾರಿ ಪ್ರಮಾಣದಲ್ಲಿ ‘ಫಂಡಿಂಗ್’ ಆಗಿರುವ ಅನುಮಾನಗಳು ಅಂತಾ ರಾಷ್ಟ್ರೀಯ ಮಟ್ಟದಲ್ಲಿ ಹರಿದಾಡುತ್ತಿವೆ. ಬಾಂಗ್ಲಾದೇಶದಲ್ಲಿನ ಅಸ್ಥಿರತೆಯಲ್ಲಿ ಅಮೆರಿಕದ ನೇರ ಕೈವಾಡವಿದ್ದ ವಿಷಯ ಈಗ ಬಯಲಾಗಿದೆ.

ಇದೀಗ ನೇಪಾಳದಲ್ಲಿನ ಆಂತರಿಕ ದಂಗೆಗೆ ಸಾಮಾಜಿಕ ಜಾಲತಾಣಗಳ ನಿಷೇಧ, ಸ್ಥಳೀಯ ಸರಕಾರದ ಸ್ವಜನ ಪಕ್ಷಪಾತ, ಭ್ರಷ್ಟಾಚಾರ ಹಾಗೂ ಯುವಕರಿಗೆ ನಿರುದ್ಯೋಗ ಸಮಸ್ಯೆ ಕಾರಣ ವೆಂದು ಹೇಳಲಾಗುತ್ತಿದೆ. ಆದರೆ ಸ್ಥಾಪಿತ ಸರಕಾರದ ವಿರುದ್ಧ ಹೋರಾಡುವಲ್ಲಿ ಬಾಹ್ಯ ಶಕ್ತಿಗಳ ಬೆಂಬಲವಿದೆ ಎನ್ನಲಾಗಿದೆ. ಒಂದು ಕಾಲದ ಭಾರತದ ಆಪ್ತಮಿತ್ರ ದೇಶದಲ್ಲಿ ಸೃಷ್ಟಿಯಾಗಿರುವ ಅನಿಶ್ಚಿತತೆಯಿಂದ ಭಾರತದ ಹಿತಾಸಕ್ತಿಗೆ ಧಕ್ಕೆ ಬಾರದಂತೆ ನೋಡಿಕೊಳ್ಳಬೇಕಾಗಿದೆ.