ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vishwavani Editorial: ಆಪ್ತಮಿತ್ರನ ಸಾಂಗತ್ಯ ಸಾಕು

‘ವಿಶ್ವದ ದೊಡ್ಡಣ್ಣ ಎನಿಸಿಕೊಂಡ ಅಮೆರಿಕದ ಕಣ್ಣ ಇಶಾರೆಗೆ ತಕ್ಕಂತೆಯೇ ನಡೆದುಕೊಳ್ಳಬೇಕು, ಅಮೆರಿಕ ಮುನಿದರೆ ಅಪಾಯ ಕಟ್ಟಿಟ್ಟಬುತ್ತಿ’ ಎಂಬುದು ತೀರಾ ಇತ್ತೀಚಿನ ವರ್ಷಗಳವರೆಗೆ ವಿಶ್ವದ ಕೆಲ ರಾಷ್ಟ್ರಗಳಲ್ಲಿ ಕಾಣಬರುತ್ತಿದ್ದ ಸ್ಥಾಯೀಭಾವ. ಇಂಥದೊಂದು ಗ್ರಹಿಕೆಯ ಗುಮ್ಮನನ್ನು ಮುಂದಿಟ್ಟು ಕೊಂಡೇ ಅಮೆರಿಕದ ಅಧ್ಯಕ್ಷರು ‘ವಿಶ್ವ ರಾಜಕೀಯ ರಂಗ’ದಲ್ಲಿ ಕಾಲಾನುಕಾಲಕ್ಕೆ ಜಗನ್ನಾಟಕವನ್ನು ಆಡಿದ್ದಿದೆ.

‘ವಿಶ್ವದ ದೊಡ್ಡಣ್ಣ ಎನಿಸಿಕೊಂಡ ಅಮೆರಿಕದ ಕಣ್ಣ ಇಶಾರೆಗೆ ತಕ್ಕಂತೆಯೇ ನಡೆದುಕೊಳ್ಳಬೇಕು, ಅಮೆರಿಕ ಮುನಿದರೆ ಅಪಾಯ ಕಟ್ಟಿಟ್ಟಬುತ್ತಿ’ ಎಂಬುದು ತೀರಾ ಇತ್ತೀಚಿನ ವರ್ಷಗಳವರೆಗೆ ವಿಶ್ವದ ಕೆಲ ರಾಷ್ಟ್ರಗಳಲ್ಲಿ ಕಾಣಬರುತ್ತಿದ್ದ ಸ್ಥಾಯೀಭಾವ. ಇಂಥದೊಂದು ಗ್ರಹಿಕೆಯ ಗುಮ್ಮನನ್ನು ಮುಂದಿಟ್ಟುಕೊಂಡೇ ಅಮೆರಿಕದ ಅಧ್ಯಕ್ಷರು ‘ವಿಶ್ವ ರಾಜಕೀಯ ರಂಗ’ದಲ್ಲಿ ಕಾಲಾನುಕಾಲಕ್ಕೆ ಜಗನ್ನಾಟಕವನ್ನು ಆಡಿದ್ದಿದೆ.

ಆದರೆ, ಬದಲಾದ ಕಾಲಘಟ್ಟದಲ್ಲಿ ಭಾರತವು ಮೈಕೊಡವಿಕೊಂಡು ಎದ್ದಿರುವುದನ್ನು ಸಹಿಸ ಲಾಗದ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾರತವನ್ನು ಕೆರಳಿಸಲು ಅಥವಾ ‘ಭೂ ರಾಜಕೀಯದ’ ಹಣೆಪಟ್ಟಿಯ ಕಾರ್ಯತಂತ್ರಗಳಡಿಯಲ್ಲಿ ಭಾರತಕ್ಕೆ ಸಂಕಷ್ಟವೊಡ್ಡಲು ಹರಸಾಹಸ ಪಡುತ್ತಿದ್ದಾರೆ. ಇದನ್ನು ತನ್ನದೇ ಆದ ರೀತಿಯಲ್ಲಿ ನಿರ್ಲಕ್ಷಿಸಿರುವ ಭಾರತವು ರಷ್ಯಾದ ಜತೆಗಿನ ತನ್ನ ಬಾಂಧವ್ಯಕ್ಕೆ ಮತ್ತಷ್ಟು ನೀರೆರೆದು ಪೋಷಿಸುತ್ತಿದೆ.

ಇದನ್ನೂ ಓದಿ: Vishwavani Editorial: ಇಸ್ರೋ ಸಾಧನೆಗೆ ಇನ್ನೊಂದು ಗರಿ

ಅಮೆರಿಕ ಒಡ್ಡಿದ ‘ನಿರ್ಬಂಧದ ಗುಮ್ಮ’ನಿಗೆ ಹೆದರದೆ ರಷ್ಯಾದಿಂದ ಕಚ್ಚಾತೈಲವನ್ನು ತರಿಸಿ ಕೊಳ್ಳುವ ಪರಿಪಾಠವನ್ನು ಭಾರತ ಮುಂದುವರಿಸಿದೆ. ಈ ನಡೆಗೆ ಸಕಾರಾತ್ಮಕವಾಗಿ ಸ್ಪಂದಿಸಿರುವ ಆಪ್ತಮಿತ್ರ ರಷ್ಯಾ ಕೂಡ, ಭಾರತಕ್ಕೆ ತಾನು ಪೂರೈಸುತ್ತಿರುವ ತೈಲಕ್ಕೆ ಮತ್ತೆ ಶೇ.25ರಷ್ಟು ರಿಯಾ ಯಿತಿ ನೀಡಿದೆ.

ಇದು ನಿಜಕ್ಕೂ ಸಕಾರಾತ್ಮಕ ಬೆಳವಣಿಗೆಯೇ ಸರಿ. ಅಮೆರಿಕದ ಅಹಮಿಕೆಯನ್ನು ಮುರಿಯುವುದಕ್ಕೆ ಕಾಲಾನುಕಾಲಕ್ಕೆ ಇಂಥ ಬೆಳವಣಿಗೆಗಳಾಗುತ್ತಿರಬೇಕು. ವಿಶ್ವದ ಮಿಕ್ಕ ರಾಷ್ಟ್ರಗಳು ಇದನ್ನು ಇನ್ನಾ ದರೂ ಗಮನಿಸಬೇಕು. ‘ಹೆದರಿಕೊಳ್ಳುವವರು ಇರುವಷ್ಟು ಕಾಲವೂ ಹೆದರಿಸುವವರು ತಮ್ಮ ಚಾಳಿ ಯನ್ನು ಅಬಾಧಿತವಾಗಿ ಮುಂದುವರಿಸುತ್ತಾರೆ’ ಎಂಬುದಕ್ಕೆ ಅಮೆರಿಕದ ಬಹುಕಾಲದ ವರ್ತನೆಯೇ ಸಾಕ್ಷಿ.

ಆದರೆ ಇಂಥ ಚಾಳಿಯನ್ನು ಧಿಕ್ಕರಿಸುವ ಧೀಮಂತಿಕೆಯನ್ನು ಭಾರತ ಹೊಮ್ಮಿಸಿದೆ. ಇದು ‘ವಿಶ್ವ ಗುರು’ ಆಗುವಲ್ಲಿ ಭಾರತ ಏರಬೇಕಿರುವ ಮೆಟ್ಟಿಲುಗಳಲ್ಲೊಂದು ಎಂದೇ ಪ್ರಸಕ್ತ ಭೂ ರಾಜಕೀಯದ ವಾತಾವರಣದ ಹಿನ್ನೆಲೆಯಲ್ಲಿ ವ್ಯಾಖ್ಯಾನಿಸಬೇಕಾಗಿದೆ. ‘ವಸುಧೈವ ಕುಟುಂಬಕಂ’ ಎಂಬ ಸದಾ ಶಯದ ಮಂತ್ರವನ್ನು ಜಪಿಸಿದ್ದ ಭಾರತವು ತನ್ನ ಸ್ವಾಭಿಮಾನದ ರಕ್ಷಣೆಗೆ ಇಂಥ ಧೈರ್ಯ-ಧೀಮಂತಿಕೆಗಳನ್ನೂ ತೋರಬಲ್ಲದು ಎಂಬುದು ಈಗ ವಿಶ್ವಕ್ಕೆ ಅರಿವಾದಂತಿದೆ...