ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಏಷ್ಯನ್‌ ಚಾಂಪಿಯನ್‌ಷಿಪ್‌ ಶೂಟಿಂಗ್‌; ಚಿನ್ನ ಗೆದ್ದ ಭಾರತ ಪುರುಷರ ತಂಡ

ಗುರುವಾರ ಪುರುಷರ 25 ಮೀಟರ್ ಸ್ಟ್ಯಾಂಡರ್ಡ್ ಪಿಸ್ತೂಲ್ ವಿಭಾಗದಲ್ಲಿ ವೈಯಕ್ತಿಕ ಚಿನ್ನ ಗೆದ್ದ ಒಂದು ದಿನದ ನಂತರ ಗುರುಪ್ರೀತ್ ಸಿಂಗ್ ತಂಡ ವಿಭಾಗದಲ್ಲಿಯೂ ಚಿನ್ನ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದರು. 37 ವರ್ಷದ ಗುರುಪ್ರೀತ್, ರಾಜ್‌ಕನ್ವರ್ ಸಿಂಗ್ ಸಂಧು ಮತ್ತು ಅಂಕುರ್ ಗೋಯೆಲ್ ಅವರೊಂದಿಗೆ ಸೆಂಟರ್ ಫೈರ್‌ನಲ್ಲಿ 1733 ಅಂಕಗಳೊಂದಿಗೆ ಮತ್ತೊಂದು ದೊಡ್ಡ ಗೆಲುವು ಸಾಧಿಸಿದರು.

ಶಿಮ್ಯೆಟ್‌ (ಕಜಾಕಸ್ತಾನ): ಏಷ್ಯನ್‌ ಚಾಂಪಿಯನ್‌ಷಿಪ್‌ ಶೂಟಿಂಗ್‌(Asian Shooting Championships)ನ ಕೊನೆಯ ದಿನವಾದ ಶುಕ್ರವಾರ 25 ಮೀಟರ್ ಸೆಂಟರ್ ಫೈರ್ ಸ್ಪರ್ಧೆಯಲ್ಲಿ ಭಾರತ ತಂಡ ಚಿನ್ನದ ಪದಕ ಜಯಿಸಿದರೆ, ಭಾರತದ ಯುವ ಶೂಟರ್ ಮಾನಿನಿ ಕೌಶಿಕ್ ತಮ್ಮ ಚೊಚ್ಚಲ ವೈಯಕ್ತಿಕ ಅಂತರರಾಷ್ಟ್ರೀಯ ಪದಕವನ್ನು ಗೆದ್ದರು. ಮಹಿಳೆಯರ 50 ಮೀಟರ್ ರೈಫಲ್ ಪ್ರೋನ್ ಸ್ಪರ್ಧೆಯಲ್ಲಿ ಕಂಚಿನ ಪದಕವನ್ನು ಗೆದ್ದರು.

ಗುರುವಾರ ಪುರುಷರ 25 ಮೀಟರ್ ಸ್ಟ್ಯಾಂಡರ್ಡ್ ಪಿಸ್ತೂಲ್ ವಿಭಾಗದಲ್ಲಿ ವೈಯಕ್ತಿಕ ಚಿನ್ನ ಗೆದ್ದ ಒಂದು ದಿನದ ನಂತರ ಗುರುಪ್ರೀತ್ ಸಿಂಗ್ ತಂಡ ವಿಭಾಗದಲ್ಲಿಯೂ ಚಿನ್ನ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದರು. 37 ವರ್ಷದ ಗುರುಪ್ರೀತ್, ರಾಜ್‌ಕನ್ವರ್ ಸಿಂಗ್ ಸಂಧು ಮತ್ತು ಅಂಕುರ್ ಗೋಯೆಲ್ ಅವರೊಂದಿಗೆ ಸೆಂಟರ್ ಫೈರ್‌ನಲ್ಲಿ 1733 ಅಂಕಗಳೊಂದಿಗೆ ಮತ್ತೊಂದು ದೊಡ್ಡ ಗೆಲುವು ಸಾಧಿಸಿದರು.

2016ರ ರಿಯೊ ಕ್ರೀಡಾಕೂಟದಲ್ಲಿ ರ್ಯಾಪಿಡ್-ಫೈರ್ ಪಿಸ್ತೂಲ್ ಫೈನಲ್‌ ಪ್ರವೇಶಿಸಿದ್ದ ಒಲಿಂಪಿಯನ್, ಗುರುಪ್ರೀತ್ ಒಟ್ಟು 579 ಅಂಕಗಳಿಸಿದರೆ, ಸಂಧು ( 583) ಮತ್ತು ಅಂಕುರ್ ( 571 ) ಅಂಕಗಳಿಸಿರು,. ಈ ಮೂವರು ಶೂಟರ್‌ಗಳು ಒಟ್ಟು 1733 ಅಂಕಗಳನ್ನು ಕಲೆಹಾಕಿ ಚಿನ್ನಕ್ಕೆ ಕೊರಳೊಡ್ಡಿದರು. ವಿಯೆಟ್ನಾಂ (1720) ಮತ್ತು ಇರಾನ್ (1700) ಕ್ರಮವಾಗಿ ಬೆಳ್ಳಿ ಮತ್ತು ಕಂಚಿನ ಪದಕಗಳನ್ನು ಗೆದ್ದವು.

50 ಮೀಟರ್ ರೈಫಲ್ 3 ಪೊಸಿಷನ್‌ನಲ್ಲಿ ಜೈಪುರದ 24 ವರ್ಷದ ಮಾನಿನಿ 617.8 ಅಂಕಗಳನ್ನು ಗಳಿಸಿ ವೈಯಕ್ತಿಕ ವಿಭಾಗದಲ್ಲಿ ಕಂಚಿನ ಪದಕ ಗೆದ್ದರು. ದಕ್ಷಿಣ ಕೊರಿಯಾದ ಹನಾ ಇಮ್ (620.2) ಮತ್ತು ಯುನ್ಸಿಯೊ ಲೀ (620.2) ಅಂಕಗಳೊಂದಿಗೆ ಕ್ರಮವಾಗಿ ಚಿನ್ನ ಮತ್ತು ಬೆಳ್ಳಿ ಪದಕಗಳನ್ನು ಪಡೆದರು.

ಸ್ಪರ್ಧೆಯಲ್ಲಿ ಮಾನಿನಿ ಐದನೇ ಸ್ಥಾನ ಪಡೆದಿದ್ದರು. ಆದರೆ ಅವರಿಗಿಂತ ಮುಂದಿದ್ದ ಇಬ್ಬರು ಶೂಟರ್‌ಗಳಾದ ದಕ್ಷಿಣ ಕೊರಿಯಾದ ಯೆಲಿನ್ ಚೋಯ್ (620.1) ಮತ್ತು ಭಾರತದ ಸಿಫ್ಟ್ ಕೌರ್ ಸಮ್ರಾ (617.9) ‘ರ್ಯಾಂಕಿಂಗ್ ಪಾಯಿಂಟ್ಸ್ ಓನ್ಲಿ’ (ಆರ್‌ಪಿಒ) ವಿಭಾಗದಲ್ಲಿ ಸ್ಪರ್ಧಿಸುತ್ತಿದ್ದರಿಂದ, ಜೈಪುರ ಶೂಟರ್ ಕಂಚಿನ ಪದಕ ಪಡೆದರು. ಆರ್‌ಪಿಒ ಶೂಟರ್‌ಗಳು ಅಂತರರಾಷ್ಟ್ರೀಯ ಶ್ರೇಯಾಂಕ ಅಂಕಗಳಿಗಾಗಿ ಮಾತ್ರ ಸ್ಪರ್ಧಿಸುತ್ತಾರೆಯೇ ಹೊರತು ಪದಕಗಳಿಗಾಗಿ ಅಲ್ಲ.

ಜೂನಿಯರ್ ಮಹಿಳೆಯರ 50 ಮೀಟರ್ ರೈಫಲ್ ಪ್ರೋನ್ ವಿಭಾಗದಲ್ಲಿ ಭಾರತದ ಪ್ರಾಚಿ ಗಾಯಕ್ವಾಡ್ 616.6 ಅಂಕಗಳೊಂದಿಗೆ ಬೆಳ್ಳಿ ಪದಕ ಗೆದ್ದರು. ದಕ್ಷಿಣ ಕೊರಿಯಾದ ಸೆಹೀ ಓಹ್ (618.6) ಚಿನ್ನ ಗೆದ್ದರೆ, ಕಝಾಕಿಸ್ತಾನದ ಸೋಫಿಯಾ ಮಲ್ಕಿನಾ (616.3) ಕಂಚಿನ ಪದಕ ಗೆದ್ದರು.

ಇದನ್ನೂ ಓದಿ ಏಷ್ಯನ್ ಶೂಟಿಂಗ್: ಕಂಚು ಗೆದ್ದ ಮನು ಭಾಕರ್