ಸಿಡ್ನಿ: ದಕ್ಷಿಣ ಆಫ್ರಿಕಾ(AUS vs SA) ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಆಸ್ಟ್ರೇಲಿಯಾದ ತಂಡದ ಟಿಮ್ ಡೇವಿಡ್(Tim David) ಅವರು ಅಬ್ಬರದ ಬ್ಯಾಟಿಂಗ್ ನಡೆಸಿ ಡೇವಿಡ್ ವಾರ್ನರ್(David Warner) ಅವರ 6 ವರ್ಷಗಳ ಹಿಂದಿನ ದಾಖಲೆಯೊಂದನ್ನು ಮುರಿದಿದ್ದಾರೆ. 52 ಎಸೆತಗಳಲ್ಲಿ 83 ರನ್ ಗಳಿಸಿ ಎಂಟು ಸಿಕ್ಸರ್‌ಗಳನ್ನು ಬಾರಿಸಿದ ಟಿಮ್ ಡೇವಿಡ್ ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಪಂದ್ಯದ ಇನಿಂಗ್ಸ್ ಒಂದರಲ್ಲಿ ಅತ್ಯಧಿಕ ಸಿಕ್ಸರ್ ಬಾರಿಸಿದ ಆಸ್ಟ್ರೇಲಿಯಾದ ಮೊದಲ ಬ್ಯಾಟರ್ ಎನಿಸಿಕೊಂಡರು.
ಇದುವರೆಗೂ ಈ ದಾಖಲೆ ಮಾಜಿ ಆಟಗಾರ ಡೇವಿಡ್ ವಾರ್ನರ್ ಹೆಸರಿನಲ್ಲಿತ್ತು. ವಾರ್ನರ್ 2009 ರಲ್ಲಿ ಮೆಲ್ಬೋರ್ನ್‌ನಲ್ಲಿ ನಡೆದಿದ್ದ ಪಂದ್ಯದಲ್ಲಿ 6 ಸಿಕ್ಸರ್ ಬಾರಿಸಿದ್ದರು. ಪಂದ್ಯದಲ್ಲಿ 43 ಎಸೆತಗಳಿಂದ 89 ರನ್ ಬಾರಿಸಿದ್ದರು. ವಾರ್ನರ್ ಹೊರತುಪಡಿಸಿ ಟ್ರಾವಿಡ್ ಹೆಡ್ ಮತ್ತು ಮಿಚೆಲ್ ಮಾರ್ಷ್ ಕೂಡ ತಲಾ 6 ಸಿಕ್ಸರ್ ಬಾರಿಸಿದ್ದಾರೆ.
ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಆಸ್ಟ್ರೇಲಿಯಾ ನಿಗದಿತ 20 ಓವರ್‌ಗಳಲ್ಲಿ 178 ರನ್ ಗಳಿಸಿತು. ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ 9 ವಿಕೆಟ್ ನಷ್ಟಕ್ಕೆ 161 ರನ್ ಗಳಿಸಲಷ್ಟೇ ಶಕ್ತವಾಗಿ 17 ರನ್ ಅಂತರದ ಸೋಲು ಕಂಡಿತು.
ಇದನ್ನೂ ಓದಿ IPL 2025: ಕೊಹ್ಲಿ-ಎಬಿಡಿ ದಾಖಲೆ ಮುರಿಯುವ ಅವಕಾಶ ಕಳೆದುಕೊಂಡ ಗಿಲ್-ಸುದರ್ಶನ್!
ಚೇಸಿಂಗ್ ವೇಳೆ ರಯಾನ್ ರಿಕೆಲ್ಟನ್( 71) ಮತ್ತು ಟ್ರಿಸ್ಟಾನ್ ಸ್ಟಬ್ಸ್(37) ರನ್ ಗಳಿಸಿದರು. ಉಳಿದವರಿಂದ ಉತ್ತಮ ಸಾಥ್ ಸಿಗದ ಕಾರಣ ಪಂದ್ಯ ಸೋಲು ಕಂಡಿತು. ನಾಯಕ ಐಡೆನ್ ಮಾರ್ಕ್ರಮ್(12) ಗಳಿಸಿದರು. ಆಸೀಸ್ ಪರ ಘಾತಕ ಬೌಲಿಂಗ್ ದಾಳಿ ನಡೆಸಿದ ಜೋಶ್ ಹ್ಯಾಜಲ್‌ವುಡ್ ಮತ್ತು ಬೆನ್ ದ್ವಾರ್ಶುಯಿಸ್ ತಲಾ 3 ವಿಕೆಟ್ ಕಿತ್ತು ಮಿಂಚಿದರು. ಉಳಿದಂತೆ ಜಾಂಪ 2 ವಿಕೆಟ್ ಪಡೆದರು.