IPL 2025: ಕೊಹ್ಲಿ-ಎಬಿಡಿ ದಾಖಲೆ ಮುರಿಯುವ ಅವಕಾಶ ಕಳೆದುಕೊಂಡ ಗಿಲ್-ಸುದರ್ಶನ್!
ಮುಂಬೈ ಇಂಡಿಯನ್ಸ್ ವಿರುದ್ಧ 2025ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಎಲಿಮಿನೇಟರ್ ಪಂದ್ಯದಲ್ಲಿ 20 ರನ್ಗಳಿಂದ ಸೋಲು ಅನುಭವಿಸಿದ ಗುಜರಾತ್ ಟೈಟನ್ಸ್ ಟ್ರೋಫಿ ಗೆಲ್ಲುವ ಕನಸು ಭಗ್ನವಾಯಿತು. ಇದರ ಜೊತೆಗೆ ಟೂರ್ನಿಯಲ್ಲಿ 912 ರನ್ಗಳ ಜೊತೆಯಾಟವಾಡಿದ್ದ ಶುಭಮನ್ ಗಿಲ್ ಹಾಗೂ ಸಾಯಿ ಸುದರ್ಶನ್ ಕೂಡ ಕೇವಲ 28 ರನ್ಗಳಿಂದ ದೊಡ್ಡ ದಾಖಲೆಯ ವಂಚಿತರಾದರು.

ದೊಡ್ಡ ದಾಖಲೆ ಮುರಿಯುವ ಅವಕಾಶ ಕಳೆದುಕೊಂಡ ಶುಭಮನ್ ಗಿಲ್-ಸಾಯಿ ಸುದರ್ಶನ್.

ನವದೆಹಲಿ: ಹದಿನೆಂಟನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) ಟೂರ್ನಿಯ ಎಲಿಮಿನೇಟರ್ ಪಂದ್ಯದಲ್ಲಿ(MI vs GT) ಮುಂಬೈ ಇಂಡಿಯನ್ಸ್ ವಿರುದ್ಧ 20 ರನ್ಗಳಿಂದ ಗುಜರಾತ್ ಟೈಟನ್ಸ್ ಸೋಲು ಕಂಡು ಎರಡನೇ ಕ್ವಾಲಿಫೈಯರ್ ಅವಕಾಶವನ್ನು ಕೈಚೆಲ್ಲಿಕೊಂಡಿತು. ಹಾಗೆಯೇ ಇಡೀ ಟೂರ್ನಿಯಲ್ಲಿ ಯಶಸ್ವಿ ಆರಂಭಿಕ ಜೋಡಿಯಾಗಿ ಆರೆಂಜ್ ಕ್ಯಾಪ್ ರೇಸ್ನಲ್ಲಿದ್ದ ಸಾಯಿ ಸುದರ್ಶನ್ (Sai SUdarshan) ಹಾಗೂ ಶುಭಮನ್ ಗಿಲ್ (Shubman Gill) ಒಂದೇ ಆವೃತ್ತಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಜೋಡಿ ಎಂಬ ದಾಖಲೆಯನ್ನು ಕೇವಲ 28 ರನ್ಗಳಿಂದ ಕೈಚೆಲ್ಲಿಕೊಂಡಿದ್ದಾರೆ. ಆ ಮೂಲಕ ವಿರಾಟ್ ಕೊಹ್ಲಿ ಹಾಗೂ ಎಬಿ ಡಿವಿಲಿಯರ್ಸ್ ದಾಖಲೆಯನ್ನು ಮುರಿಯುವ ಅವಕಾಶವನ್ನು ಈ ಜೋಡಿ ಕಳೆದುಕೊಂಡಿದೆ.
ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಸಾಯಿ ಸುದರ್ಶನ್ 80 ರನ್ ಗಳಿಸುವ ಮೂಲಕ ತಂಡಕ್ಕೆ ಗೆಲ್ಲುವ ಭರವಸೆಯನ್ನು ಮೂಡಿಸಿದ್ಧರು. ಆದರೆ ಆರಂಭಿಕ ಓವರ್ನಲ್ಲೇ ನಾಯಕ ಶುಭಮನ್ ಗಿಲ್ ಒಂದು ರನ್ ಗಳಿಸಿ ಅನುಭವಿ ವೇಗಿ ಟ್ರೆಂಟ್ ಬೌಲ್ಟ್ಗೆ ವಿಕೆಟ್ ಒಪ್ಪಿಸಿದ್ದರು. ಪ್ರಸಕ್ತ ಟೂರ್ನಿಯಲ್ಲಿ 909 ರನ್ಗಳ ಜೊತೆಯಾಟವಾಡಿದ್ದ ಗಿಲ್ -ಸುದರ್ಶನ್ ಜೋಡಿ ಏಕೈಕ ಐಪಿಎಲ್ ಟೂರ್ನಿಯಲ್ಲಿ ಅತಿ ಹೆಚ್ಚು ರನ್ ಕಲೆಹಾಕಿದ ಜೋಡಿ ಎಂಬ ದಾಖಲೆಯನ್ನು ಬರೆಯುವ ಅವಕಾಶವನ್ನು ಕೈಚೆಲ್ಲಿಕೊಂಡಿದೆ.
IPL 2025: ʻಈ ಒಂದು ಕಾರಣದಿಂದಲೇ ವಿರಾಟ್ ಕೊಹ್ಲಿಯ ಮೇಲೆ ನನಗೆ ಗೌರವ ಜಾಸ್ತಿʼ: ಎಬಿಡಿ!
ಏಕೈಕ ಐಪಿಎಲ್ ಟೂರ್ನಿಯಲ್ಲಿ ಅತಿ ಹೆಚ್ಚು ಜೊತೆಯಾಟವಾಡಿದ ಜೋಡಿಗಳು
* 939 ರನ್- ವಿರಾಟ್ ಕೊಹ್ಲಿ / ಫಾಫ್ ಡುಪ್ಲೆಸಿಸ್-2023
* 939 ರನ್- ವಿರಾಟ್ ಕೊಹ್ಲಿ/ ಎಬಿಡಿ ವಿಲಿಯರ್ಸ್ -2016
* 912 ರನ್- ಶುಭಮನ್ ಗಿಲ್/ ಸಾಯಿ ಸುದರ್ಶನ್ -2025
* 849 ರನ್- ಋತುರಾಜ್ ಗಾಯಕ್ವಾಡ್/ಡೇವೊನ್ ಕಾನ್ವೆ-2023
*791 ರನ್- ಡೇವಿಡ್ ವಾರ್ನರ್/ ಜಾನಿ ಬೈರ್ಸ್ಟೋವ್ - 2019
MI vs GT: ಗುಜರಾತ್ ಟೈಟನ್ಸ್ ಕನಸು ಭಗ್ನ, ಎರಡನೇ ಕ್ವಾಲಿಫೈಯರ್ಗೆ ಮುಂಬೈ ಇಂಡಿಯನ್ಸ್!
ಗುಜರಾತ್ ಟೈಟನ್ಸ್ 20 ರನ್ ಸೋಲು
ನವ ಚಂಡೀಗಢದಲ್ಲಿ ಶುಕ್ರವಾರ (ಮೇ 30) ನಡೆದಿದ್ದ ಎಲಿಮಿನೇಟರ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ್ದ ಮುಂಬೈ ಇಂಡಿಯನ್ಸ್, ಆರಂಭಿಕ ಆಟಗಾರರಾದ ರೋಹಿತ್ ಶರ್ಮಾ (81 ರನ್) ಹಾಗೂ ಜಾನಿ ಬೈರ್ಸ್ಟೋವ್ (47 ರನ್) ಅವರ ಸ್ಫೋಟಕ ಆಟದ ನೆರವಿನಿಂದ 20 ಓವರ್ಗಳಿಗೆ 5 ವಿಕೆಟ್ ನಷ್ಟಕ್ಕೆ 228 ರನ್ಗಳನ್ನು ಕಲೆ ಹಾಕಿತ್ತು. ಈ ಗುರಿ ಹಿಂಬಾಲಿಸಿದ ಗುಜರಾತ್ ಟೈಟನ್ಸ್ ಮೊದಲ ಓವರ್ನಲ್ಲೇ ಶುಭಮನ್ ಗಿಲ್ (1) ವಿಕೆಟ್ ಕಳೆದುಕೊಂಡರೂ ಸಾಯಿ ಸುದರ್ಶನ್ (80 ರನ್) ಹಾಗೂ ವಾಷಿಂಗ್ಟನ್ ಸುಂದರ್ (48 ರನ್) ಅವರ ಸ್ಫೋಟಕ ಆಟದ ನಡುವಿಯೂ 208 ರನ್ಗಳಿಗೆ ಸೀಮಿತವಾಯಿತು. ಗಳಿಸಲಷ್ಟೇ ಶಕ್ತವಾಗಿ 20 ರನ್ ಗಳ ಸೋಲು ಕಂಡಿತು. ಗೆಲುವಿನ ಇನಿಂಗ್ಸ್ ಆಡಿದ್ದ ಹಿಟ್ಮ್ಯಾನ್ ರೋಹಿತ್ ಶರ್ಮಾ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.