ಎಸ್​ ಎಲ್​ ಭೈರಪ್ಪ ನಿಧನ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

BCCI complains: ಪಾಕ್ ಆಟಗಾರರ ವರ್ತನೆ ವಿರುದ್ಧ ಐಸಿಸಿಗೆ ಬಿಸಿಸಿಐ ದೂರು

BCCI complains Pak players: ಸೂರ್ಯಕುಮಾರ್‌ ಯಾದವ್‌ ಅವರ ಹೇಳಿಕೆಗಳು ರಾಜಕೀಯ ಎಂದು ಪಿಸಿಬಿ ಆರೋಪಿಸಿದೆ. ಆದರೆ ತಾಂತ್ರಿಕವಾಗಿ ಹೇಳಿಕೆ ನೀಡಿದ ಏಳು ದಿನಗಳಲ್ಲಿ ದೂರು ದಾಖಲಿಸಬೇಕಾಗಿದೆ. ಪಾಕ್‌ ಕ್ರಿಕೆಟ್‌ ಮಂಡಳಿ ಯಾವಾಗ ದೂರು ದಾಖಲಿಸಿದೆ ಎನ್ನುವುದು ತಿಳಿದುಬಂದಿಲ್ಲ.

ನವದೆಹಲಿ: ಕಳೆದ ಭಾನುವಾರ ನಡೆದಿದ್ದ ಏಷ್ಯಾ ಕಪ್ ಸೂಪರ್ 4(India vs Pakistan Super 4) ಪಂದ್ಯದ ವೇಳೆ ಉದ್ಧಟತನ ಮೆರೆದಿದ್ದ ಪಾಕಿಸ್ತಾನ ಕ್ರಿಕೆಟಿಗರಾದ ಸಾಹಿಬ್‌ಝಾದ ಫರ್ಹಾನ್‌ (Sahibzada Farhan) ಮತ್ತು ಹ್ಯಾರಿಸ್ ರೌಫ್(Haris Rauf) ಅವರ ಪ್ರಚೋದನಕಾರಿ ವರ್ತನೆಗಾಗಿ ಭಾರತ ಐಸಿಸಿಗೆ(BCCI complains) ಅಧಿಕೃತ ದೂರು ನೀಡಿದೆ. ಬಿಸಿಸಿಐ ಈ ಇಬ್ಬರ ವಿರುದ್ಧ ದೂರು ದಾಖಲಿಸಿದೆ ಮತ್ತು ಐಸಿಸಿಗೆ ಇ-ಮೇಲ್ ತಲುಪಿದೆ ಎಂದು ತಿಳಿದುಬಂದಿದೆ. ಸಾಹಿಬ್‌ಝಾದ ಮತ್ತು ರೌಫ್ ಈ ಆರೋಪಗಳನ್ನು ಲಿಖಿತವಾಗಿ ನಿರಾಕರಿಸಿದರೆ ಐಸಿಸಿ ವಿಚಾರಣೆ ನಡೆಸುವವ ನಿರೀಕ್ಷೆಯಿದೆ. ವಿಚಾರಣೆಗಾಗಿ ಅವರು ಐಸಿಸಿ ಎಲೈಟ್ ಪ್ಯಾನಲ್ ರೆಫರಿ ರಿಚಿ ರಿಚರ್ಡ್ಸನ್ ಮುಂದೆ ಹಾಜರಾಗಬೇಕಾಗಬಹುದು.

ಪಹಲ್ಗಾಂ ಉಗ್ರ ದಾಳಿಗೆ ಪ್ರತ್ಯುತ್ತರವಾಗಿ ಭಾರತೀಯ ಸೇನೆಯು ಆಪರೇಷನ್‌ ಸಿಂದೂರ ಕಾರ್ಯಾಚರಣೆ ನಡೆಸಿ, ಪಾಕ್‌ಗೆ ತಕ್ಕ ಉತ್ತರ ನೀಡಿತ್ತು. ಆದರೆ ಕಾರ್ಯಾಚರಣೆ ವೇಳೆ ಭಾರತದ 6-0 ಫೈಟರ್‌ ವಿಮಾನಗಳನ್ನು ಹೊಡೆದುರುಳಿಸಿದ್ದೇವೆ ಎಂದು ಪಾಕ್‌ ಸೇನೆ ಸುಳ್ಳು ಹೇಳಿತ್ತು. ಇದೇ ಸುಳ್ಳನ್ನು ಈಗ ಪಾಕಿಸ್ತಾನ ಕ್ರಿಕೆಟಿಗರೂ ಪ್ರಚಾರ ಮಾಡುತ್ತ ಭಾರತ ಮೇಲೆ ಹಗೆ ತೀರಿಸಲು ಮುಂದಾಗಿದ್ದಾರೆ. ಅಲ್ಲದೆ, ಸ್ವತಃ ಪಾಕ್‌ ಸೇನೆಯೇ ಅಲ್ಲಿನ ಕ್ರಿಕೆಟ್‌ ತಂಡಗಳಿಗೆ ಈ ರೀತಿ ಸಂಭ್ರಮಿಸಲು ಸೂಚಿಸಿದೆ ಎಂದು ಹೇಳಲಾಗುತ್ತಿದೆ.

ಸೂರ್ಯಕುಮಾರ್‌ ವಿರುದ್ಧ ದೂರು ನೀಡಿದ ಪಿಸಿಬಿ

ಪಹಲ್ಗಾಮ್ ಭಯೋತ್ಪಾದಕ ದಾಳಿಯ ಬಲಿಪಶುಗಳಿಗೆ ತಮ್ಮ ಒಗ್ಗಟ್ಟನ್ನು ವ್ಯಕ್ತಪಡಿಸಿದ್ದಕ್ಕಾಗಿ ಮತ್ತು ಆಪರೇಷನ್ ಸಿಂಧೂರ್‌ನಲ್ಲಿ ಭಾಗಿಯಾಗಿರುವ ಭಾರತೀಯ ಸಶಸ್ತ್ರ ಪಡೆಗಳಿಗೆ ತಮ್ಮ ತಂಡದ ಗೆಲುವನ್ನು ಅರ್ಪಿಸಿದ್ದಕ್ಕಾಗಿ ಭಾರತೀಯ ನಾಯಕ ಸೂರ್ಯಕುಮಾರ್ ಯಾದವ್ ವಿರುದ್ಧ ಪ್ರತೀಕಾರದ ಸಂಕೇತವಾಗಿ ಪಾಕಿಸ್ತಾನ ಕ್ರಿಕೆಟ್ ಮಂಡಳಿಯು ಐಸಿಸಿಗೆ ಅಧಿಕೃತ ದೂರು ನೀಡಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ IND vs PAK: 'ಎಲ್' ಕೈ ಸನ್ನೆಯಿಂದ ಸಂಭ್ರಮಿಸಲು ಕಾರಣ ಬಹಿರಂಗಪಡಿಸಿದ ಅಭಿಷೇಕ್ ಶರ್ಮಾ!

ಸೂರ್ಯಕುಮಾರ್‌ ಯಾದವ್‌ ಅವರ ಹೇಳಿಕೆಗಳು ರಾಜಕೀಯ ಎಂದು ಪಿಸಿಬಿ ಆರೋಪಿಸಿದೆ. ಆದರೆ ತಾಂತ್ರಿಕವಾಗಿ ಹೇಳಿಕೆ ನೀಡಿದ ಏಳು ದಿನಗಳಲ್ಲಿ ದೂರು ದಾಖಲಿಸಬೇಕಾಗಿದೆ. ಪಾಕ್‌ ಕ್ರಿಕೆಟ್‌ ಮಂಡಳಿ ಯಾವಾಗ ದೂರು ದಾಖಲಿಸಿದೆ ಎನ್ನುವುದು ತಿಳಿದುಬಂದಿಲ್ಲ.